ನಿಮ್ಮಲ್ಲಿರುವ ಮನುಷ್ಯತ್ವ ಉಳಿಯಬೇಕು ಎಂದರೆ ಈ 4 ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ!

ನೀವು ನಿಮ್ಮ ಬಟ್ಟೆಯ ಮೂಲಕವೇ ನಿಮ್ಮ ಗುರುತು- ಗೌರವ ಕಾಪಾಡಿಕೊಳ್ಳಬೇಕು ಎಂಬ ಹಪಾಹಪಿಗೆ ಬೀಳಬೇಡಿ. ಅದರ ಬದಲಿಗೆ ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಿ. ನೀವು ಧರಿಸಿರುವ ಬಟ್ಟೆಯಿಂದ ನಿಮ್ಮನ್ನು ಯಾರೂ ಗುರುತು ಇಟ್ಟುಕೊಳ್ಳುವುದಿಲ್ಲ. ಆದರೆ ನಿಮ್ಮ ವ್ಯಕ್ತಿತ್ವವನ್ನು ಬಹುಕಾಲ ಜ್ಞಾಪಕದಲ್ಲಿಟ್ಟುಕೊಳ್ಳುತ್ತಾರೆ.

ನಿಮ್ಮಲ್ಲಿರುವ ಮನುಷ್ಯತ್ವ ಉಳಿಯಬೇಕು ಎಂದರೆ ಈ 4 ವಿಷಯಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ!
ಈ ನಾಲ್ಕು ವಿಧಗಳಲ್ಲಿ ಹಣ ಸಂಪಾದಿಸಿದರೆ.. ಅಂತಹವರ ಜೀವನ ಯಾವಾಗಲೂ ಕಷ್ಟಕರವಾಗಿರುತ್ತದೆ!
Follow us
TV9 Web
| Updated By: ಸಾಧು ಶ್ರೀನಾಥ್​

Updated on: May 21, 2022 | 6:06 AM

ಚಾಣಕ್ಯನ ನೀತಿ (Acharya Chanakya) ಮಾತುಗಳು ನಮ್ಮ ಜೀವನದ ಪ್ರಗತಿ, ಅಭ್ಯುದಯಕ್ಕೆ ತುಂಬಾ ಪ್ರಯೋಜನಕಾರಿ. ಚಾಣಕ್ಯ ನೀತಿ ತುಂಬಾ ಸರಳ, ಇಂದಿಗೂ-ಎಂದೆಂದಿಗೂ ಪ್ರಸ್ತುತ. ಜೀವನದಲ್ಲಿ ಎದುರಾಗುವ ಸರಳ ಸತ್ಯಗಳನ್ನೇ ಆಚಾರ್ಯ ಚಾಣಕ್ಯ ಹೇಳಿರುವುದು. ಚಾಣಕ್ಯ ತನ್ನ ನೀತಿ ಶಾಸ್ತ್ರದಲ್ಲಿ ಮಾನವತ್ವಕ್ಕೆ ಸಂಬಂಧಿಸಿದಂತೆ ಅನೇಕ ಮಹತ್ವದ ವಿಚಾರಗಳನ್ನು ಹೇಳಿದ್ದಾನೆ. ಅದರಲ್ಲಿಯೂ ಈ ನಾಲ್ಕು ಅಂಶಗಳ ಬಗ್ಗೆ ಪ್ರಧಾನವಾಗಿ ತಿಳಿಯಹೇಳಿದ್ದಾನೆ. ಆ ನಾಲ್ಕು ವಿಷಯಗಳಲ್ಲಿ ನೀವು ಸಹಜವಾಗಿದ್ದರೆ ನಿಮ್ಮಲ್ಲಿರುವ ಮಾನವತ್ವ ಸದಾ ಕಾಲ ಸಜೀವವಾಗಿ ಇರುತ್ತದೆ. ಈ ನಾಲ್ಕು ಅಂಶಗಳನ್ನು ಆಚರಣೆಯಲ್ಲಿಟ್ಟುಕೊಳ್ಳಬೇಕೆಂದರೆ ನಿಮಗೆ ಪರೀಕ್ಷೆಗಳು ಎದುರಾಗುವುದು ಸಹಜ. ಆದರೆ ನೀವು ದೃಢವಾಗಿದ್ದು, ಅವನ್ನು ಸಮಚಿತ್ತದಿಂದ ಸ್ವೀಕರಿಸಿ, ಸಾಧಿಸಿದರೆ ನೀವು ನಿಜಕ್ಕೂ ಮಾದರಿ ಮಾನವತಾವಾದಿಯಾಗಿರುತ್ತೀರಿ. ಹಳೆಯ ಬಟ್ಟೆಗಳು, ಬಡ ಬಾಳ ಸಂಗಾತಿ, ವೃದ್ಧ ತಂದೆ ತಾಯಿ ಮತ್ತು ಸಾಧಾರಣ ಜೀವನ – ಈ ನಾಲ್ಕು ಅಂಶಗಳಲ್ಲಿ ನೀವು ಸಮಾಜಸಿದ್ಧವಾಗಿ ಇರಬಯಸುವುದಾದರೆ ನಿಮ್ಮಲ್ಲಿ ಮಾನವತ್ವ ಎಂಬುದು ಸದಾ ಕಾಲ ಉಳಿಯುತ್ತದೆ. ಈ ಅಂಶಗಳ ಬಗ್ಗೆ ವಿವರವಾಗಿ ತಿಳಿಯೋಣ.

ಉನ್ನತ ವರ್ಗಕ್ಕೆ ಸೇರಿದ ವ್ಯಕ್ತಿಗಳ ಶುಭಕಾರ್ಯಗಳು, ಇತರೆ ಕಾರ್ಯತಕ್ರಮಗಳಿಗೆ ಹೋದಾಗ ಬಹಳಷ್ಟು ಜನ ತಮ್ಮ ಡ್ರೆಸ್​ ಕ್ವಾಲಿಟಿ ಬಗ್ಗೆ ಗಮನವನ್ನೇ ಹರಿಸುವುದಿಲ್ಲ. ಹಳೆಯ ಬಟ್ಟೆಗಳು ಎಂದು ಇಚ್ಛಾನುಸಾರ ಹಾಕಿಕೊಂಡುಬಿಡುತ್ತಾರೆ. ತಮ್ಮಲ್ಲಿರುವುದು ಹಳೆಯ ಬಟ್ಟೆಗಳು ಎಂದು ನಾಚಿಕೆ ಪಟ್ಟುಕೊಳ್ಳುತ್ತಾರೆ. ಆದರೆ ನೀವು ನಿಮ್ಮ ಬಟ್ಟೆಯ ಮೂಲಕದಿಂದಲೇ ನಿಮ್ಮ ಗುರುತು- ಗೌರವ ಕಾಪಾಡಿಕೊಳ್ಳಬೇಕು ಎಂಬ ಹಪಾಹಪಿಗೆ ಬೀಳಬೇಡಿ. ಅದರ ಬದಲಿಗೆ ನಿಮ್ಮ ವ್ಯಕ್ತಿತ್ವವನ್ನು ಗಟ್ಟಿಗೊಳಿಸಿಕೊಳ್ಳಿ. ನೀವು ಧರಿಸಿರುವ ಬಟ್ಟೆಯಿಂದ ನಿಮ್ಮನ್ನು ಯಾರೂ ಗುರುತು ಇಟ್ಟುಕೊಳ್ಳುವುದಿಲ್ಲ. ಆದರೆ ನಿಮ್ಮ ವ್ಯಕ್ತಿತ್ವವನ್ನು ಬಹುಕಾಲ ಜ್ಞಾಪಕದಲ್ಲಿಟ್ಟುಕೊಳ್ಳುತ್ತಾರೆ. ಹಾಗಾಗಿ ಸದೃಢ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳಿ.

ನಿಮ್ಮ ಸ್ನೇಹಿತರೆಲ್ಲರೂ ಪ್ರಾಮಾಣಿಕರಾಗಿ ಇರಬೇಕು. ನಿಮ್ಮ ಕಷ್ಟದಲ್ಲಿ ಅವರು, ಅವರ ಕಷ್ಟದಲ್ಲಿ ನೀವು ಜೊತೆಯಾಗಿ ನಿಲ್ಲಬೇಕು. ನಿಮ್ಮ ಸ್ನೇಹಿತ ದೊಡ್ಡವರಾಗಿದ್ದರೆ ಅವರ ಬಗ್ಗೆ ಎಂದಿಗೂ ನಾಚಿಕೆ ಪಟ್ಟುಕೊಳ್ಳಬಾರದು. ಇತರೆ ಸ್ನೇಹಿತರಂತೆ ನೀವೂ ಅವರನ್ನು ಗೌರವಿಸಬೇಕು. ನಿಮ್ಮ ಸ್ನೇಹಿತರ ಬಗ್ಗೆ ಸದಾ ಆತನ ಗುಣಗಳನ್ನು ಪರಿಗಣಿಸಬೇಕು, ಆತನ ಸ್ಥಿತಿಯ ಬಗ್ಗೆ ಅಲ್ಲ.

ನಿಮ್ಮ ವೃದ್ಧ ತಂದೆ ತಾಯಿಯ ಬಗ್ಗೆ ನಾಚಿಕೆಪಡಬೇಡಿ. ಜೀವನ ಕಳೆಯುತ್ತಾ ಕಳೆಯುತ್ತಾ ಪ್ರತಿಯೊಬ್ಬರೂ ಮುದುಕರಾಗುತ್ತಾರೆ, ಪ್ರತಿಯೊಬ್ಬರೂ ವೃದ್ಧರಾಗುತ್ತಾರೆ. ಒಂದು ಸಮಯದಲ್ಲಿ ಇದು ನಿಮ್ಮ ಅನುಭವಕ್ಕೆ ಬರುತ್ತದೆ. ಹಾಗಾಗಿ ತೋರಿಕೆಗಾಗಿ ನಿಮ್ಮ ತಂದೆ ತಾಯಿಯನ್ನು ಮಾರ್ಪಡಿಸಲು ಆಲೋಚಿಸಬೇಡಿ. ಅವರ ಗೌರವಕ್ಕೆ ಚ್ಯುತಿ ಬಾರದಂತೆ ನೋಡಿಕೊಳ್ಳುವುದು ನಿಮ್ಮ ಆದ್ಯ ಕರ್ತವ್ಯವಾದೀತು.

ಒಬ್ಬರ ಜೀವನಶೈಲಿ ಮತ್ತೊಬ್ಬರ ಜೀವನಶೈಲಿಯಂತೆ ಇರುವುದಿಲ್ಲ. ಎದುರುಗಡೆಯಿರುವ ವ್ಯಕ್ತಿಯ ಸಾಮರ್ಥ್ಯ ಕಡಿಮೆಯಿದೆ ಎಂದು ಅವಮಾನಿಸುವುದು, ಅಥವಾ ನಿಮ್ಮ ಕೃತಕ ಪ್ರತಿಷ್ಠೆಯನ್ನು ಬೆಳಸಿಕೊಳ್ಳಲು ಆಡಂಬರದ ವ್ಯಕ್ತಿಗಳನ್ನು ನಿಮ್ಮ ಜೊತೆ ಉಳಿಸಿಕೊಳ್ಳುವುದಾಗಲಿ ಸರ್ವದಾ ಸಾಧುವಲ್ಲ. ಪ್ರತಿ ವ್ಯಕ್ತಿಗೂ ಅವರದ್ದೇ ಆದ ಜೀವನ ವಿಧಾನವಿರುತ್ತದೆ. ವ್ಯಕ್ತಿಯ ಲಕ್ಷಣಗಳು, ಅವರ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಸಂಬಂಧವನ್ನು ವೃದ್ಧಿಸಿಕೊಳ್ಳಿ.

Also Read in Telugu click the link here

ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ