AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೂನ್ ತಿಂಗಳಲ್ಲಿ ಚತುರ್ಗ್ರಹ ಯೋಗ! ಯಾವ ರಾಶಿಗೆ ಏನು ಫಲ?

ಜೂನ್ ತಿಂಗಳಲ್ಲಿ ವೃಷಭ ರಾಶಿಯಲ್ಲಿ ನಾಲ್ಕು ಗ್ರಹಗಳ ಸಮಾಗಮವಾಗಲಿದೆ. ಸೂರ್ಯ, ಗುರು, ಶುಕ್ರ, ಬುಧ ವೃಷಭ ರಾಶಿಯಲ್ಲಿ ಜೂನ್ ನಿಂದ ಇರಲಿದ್ದಾರೆ. ಮೂರು ಶುಭಗ್ರಹ ಹಾಗೂ ಒಂದು ಅಶುಭಗ್ರಹರ ಸಂಯೋಗ ವೃಷಭ ರಾಶಿಯಲ್ಲಿ ಆಗಲಿದೆ.

ಜೂನ್ ತಿಂಗಳಲ್ಲಿ ಚತುರ್ಗ್ರಹ ಯೋಗ! ಯಾವ ರಾಶಿಗೆ ಏನು ಫಲ?
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​|

Updated on: May 28, 2024 | 12:07 PM

Share

ಕಾಲವನ್ನು ತಿಳಿಸುವ ಹೋರಾಶಾಸ್ತ್ರ ಅಥವಾ ಜ್ಯೋತಿಷ್ಯ ಶಾಸ್ತ್ರ ಮನುಷ್ಯನ ಆಗು ಹೋಗುಗಳ ಬಗ್ಗೆಯೂ ತಿಳಿಸುತ್ತದೆ. ಕರ್ಮಾರ್ಜಿತಂ ಪೂರ್ವ ಭವೇತ್ ಸದಾದಿ ಎಂದು ಹೇಳುತ್ತದೆ. ಹಿಂದೆ ಮಾಡಿದ್ದರ ಕರ್ಮದ ಆಧಾರದ ಮೇಲೆ ಈಗ ಏನಾಗಲಿದೆ, ಇನ್ನು ಮುಂದೆ ಏನಾಗುವುದು ಎಂಬ ಬಗ್ಗೆ ಕಲ್ಪನೆಯನ್ನು ಕೊಡುತ್ತದೆ.

ಜೂನ್ ತಿಂಗಳಲ್ಲಿ ವೃಷಭ ರಾಶಿಯಲ್ಲಿ ನಾಲ್ಕು ಗ್ರಹಗಳ ಸಮಾಗಮವಾಗಲಿದೆ. ಸೂರ್ಯ, ಗುರು, ಶುಕ್ರ, ಬುಧ ವೃಷಭ ರಾಶಿಯಲ್ಲಿ ಜೂನ್ ನಿಂದ ಇರಲಿದ್ದಾರೆ. ಮೂರು ಶುಭಗ್ರಹ ಹಾಗೂ ಒಂದು ಅಶುಭಗ್ರಹರ ಸಂಯೋಗ ವೃಷಭ ರಾಶಿಯಲ್ಲಿ ಆಗಲಿದೆ.

ಬುಧನಿಗೆ ಸಮರಾಶಿಯಾಗಿದೆ. ಸೂರ್ಯನಿಗೆ ಶತ್ರುವಿನ ರಾಶಿ. ಶುಕ್ರನಿಗೆ ಅದು ಸ್ವಕ್ಷೇತ್ರ. ಗುರುವಿಗೂ ಶತ್ರುವಿನ ಮನೆಯೇ ಆಗಿದೆ. ಇನ್ನು ಅಲ್ಲಿರುವ ಗ್ರಹಗಳ ಮಿತ್ರತ್ವವನ್ನು ಗಮನಿಸುವುದಾದರೆ, ಸೂರ್ಯನಿಗೆ ಶುಕ್ರ ಶತ್ರು, ಬುಧ ಸಮ ಹಾಗೂ ಗುರು ಮಿತ್ರ. ಬುಧನಿಗೆ ಸೂರ್ಯ ಹಾಗು ಶುಕ್ರರು ಮಿತ್ರರು, ಗುರು ಶತ್ರು. ಗುರವಿಗೆ ಸೂರ್ಯ ಮಿತ್ರ, ಶುಕ್ರ ಮತ್ತು ಬುಧರು ಶತ್ರುಗಳು. ಶುಕ್ರನಿಗೆ ಬುಧ ಮಿತ್ರ, ಗುರು ಸಮ ಹಾಗೂ ಸೂರ್ಯ ಶತ್ರು. ಹೀಗೆ ಈ ನಾಲ್ಕೂ ಗ್ರಹಗಳ ಪರಸ್ಪರ ಬಲವು ಇದೆ.

ವೃಷಭ ರಾಶಿ :

ಈ ರಾಶಿಯವರು ಹೆಚ್ಚು ವಿಲಾಸಿ ಜೀವನವನ್ನು ಈ ಸಂದರ್ಭದಲ್ಲಿ ಮಾಡುತ್ತಾರೆ. ವಾಹನ ಖರೀದಿ, ಸುತ್ತಾಟ, ಮುಂತಾದ ಹೆಚ್ಚು ಸುಖದ ಸಮಯವನ್ನು ಇವರು ಕಳೆಯುವರು. ಆಹಾರದಲ್ಲಿಯೂ ಅತಿಯಾದ ಚಾಪಲ್ಯ ಇರುವುದು. ಸ್ತ್ರೀಯರು ಹೆಚ್ಚು ಪುರುಷರ ಸಹವಾಸವನ್ನೂ ಪುರುಷರೂ ಸ್ತ್ರೀಯರ ಸಹವಾಸವನ್ನು ಮಾಡುತ್ತಾರೆ. ಆದರೂ ನಿಮ್ಮ ಬುದ್ಧಿ ಮನಸ್ಸು ನಿಮ್ಮ ಕೈ ಮೀರದು.

ಮಿಥುನ ರಾಶಿ :

ಈ ರಾಶಿಯ ಅಧಿಪತಿಯು ದ್ವಾದಶದಲ್ಲಿ ಇದ್ದು ಜ್ಞಾನಾರ್ಜನೆಗೆ ಬೇಕಾದ ಸಂಪತ್ತಿನ ಹರಣ ಮಾಡಿಸುವನು ಅಥವಾ ಅಜ್ಞಾನದ ಕಾರಣದಿಂದ ಧನನಷ್ಟವೂ ಆಗವುದು. ಬಂಧುಗಳಿಂದಲೂ ಹಣಕ್ಕಾಗಿ ಒತ್ತಾಯ ಬರುವುದು.

ಸಿಂಹ ರಾಶಿ :

ಈ ರಾಶಿಯವರಿಗೆ ಉದ್ಯೋಗದಲ್ಲಿ ಕಿರಿಕಿರಿ ಆಗುವುದು. ವಿಶೇಷವಾಗಿ ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ಮಾನಸಿಕವಾದ ಒತ್ತಡ, ತೊಂದರೆಗಳನ್ನು ಎದುರಿಸಬೇಕಾಗುವುದು. ಜಾಣ್ತನವನ್ನು ಬಳಿಸಿಕೊಂಡರೆ ಉತ್ತಮ ದಾರಿ ಕಾಣಿಸುವುದು.

ಕನ್ಯಾ ರಾಶಿ :

ಬಂಧುಗಳಿಂದ ಅಪಮಾನವನ್ನು ಸಹಿಸಬೇಕಾಗುವುದು. ಉದ್ವೇಗಕ್ಕೆ ಎಡಮಾಡಿ ಕೊಡದೇ ತಾಳ್ಮೆಯಿಂದ ವರ್ತಿಸಿ. ವಿದ್ಯಾಭ್ಯಾಸದಲ್ಲಿ ಪ್ರಗತಿ ಇದ್ದರೂ ಪ್ರಯತ್ನಿಸಿದಷ್ಟು ಫಲ ಸಿಗದು. ಚಿಂತೆಯಿಂದ ಕಾರ್ಯವು ಆಗದು. ಚಿಂತನೆಯ ಕ್ರಮವಾದ ಬದಲಿಸಿ.

ತುಲಾ ರಾಶಿ :

ಈ ರಾಶಿಯವರಿಗೆ ಶುಕ್ರನು ಎಂಟನೇ ಮನೆಯಲ್ಲಿದ್ದು, ನಕಾರಾತ್ಮಕ ವಿಚಾರವೇ ನಿಮಗೆ ಎಲ್ಲ ಕಡೆಯಲ್ಲೂ ಕಾಣಿಸುವುದು. ಇದರಿಂದ ಮನಸ್ಸು ಕುಗ್ಗಿ ಆಸಕ್ತಿಯ ಕಾರ್ಯಕ್ಕೂ ಹಿನ್ನಡೆಯಾಗಲಿದೆ. ಸ್ತ್ರೀಯರು ಪುರುಷರಿಂದಲೂ ಪುರುಷರು ಸ್ತ್ರೀಯಿಂದಲು ಮನಸ್ತಾಪಕ್ಕೆ ಒಳಗಾಗುವರು.

ಧನು ರಾಶಿ :

ಈ ರಾಶಿಯವರಿಗೆ ಶತ್ರುಗಳ ಕಾಟವೇ ಅಧಿಕವಾಗಿ ಕಾಣಿಸುವುದು. ಅದರಲ್ಲೂ ಹಿತಶತ್ರುಗಳು ನಿಮ್ಮ ಸಂಪತ್ತನ್ನು ಹಾಳು ಮಾಡುವುದು, ಕಳ್ಳತನ ಮಾಡುವುದು ಮಾಡುವರು. ಸಮಯ ಕಳೆದ ಅನಂತರ ಎಲ್ಲವೂ ಹಿಂದಿರುಗುವುದಾದರೂ ಆ ಕ್ಷಣಕ್ಕೆ ನಿಮಗೆ ಯಾವುದೂ ಸೂಚಿಸದು.

ಇದನ್ನೂ ಓದಿ: ಗುರು ಹಾಗೂ ಸೂರ್ಯರ ಯೋಗದಿಂದ ಯಾವ ರಾಶಿಗೆ ಏನೇನು ಫಲ?

ಮೀನ ರಾಶಿ :

ಈ ರಾಶಿಯವರಿಗೆ ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೆ ನಂಬಿಕೆ ಇದ್ದರೂ ಅದನ್ನು ತೋರ್ಪಡಿಸುವಲ್ಲಿ ಎಡವುವಿರಿ. ನಿಮ್ಮವರೇ ನಿಮಗೆ ಅವಕಾಶವನ್ನು ಕೊಡದೇ ಹೋಗಬಹುದು. ಇದಕ್ಕೆ ಬೇಸರವಾಗುವುದು ಸಹಜವೇ. ಆದರೆ ಅಷ್ಟೇ ನಿಮ್ಮ ಉನ್ನತಿಗೆ ದಾರಿ ಮಾಡಿಕೊಡುವುದು.

ಲೋಹಿತ ಹೆಬ್ಬಾರ್ – 8762924271 (what’s app only)