Dasara 2021: ಕನ್ಯಕಾಪರಮೇಶ್ವರಿಗೆ 12.8 ಲಕ್ಷ ನೋಟಿನಲ್ಲಿ ಶೃಂಗಾರ

| Updated By: preethi shettigar

Updated on: Oct 15, 2021 | 3:02 PM

500 ರೂಪಾಯಿ ಮುಖಬೆಲೆಯ ತಲಾ ಒಂದು ಸಾವಿರ ನೋಟುಗಳು ಹಾಗೂ 2000 ಮುಖಬೆಲೆಯ 200 ನೋಟುಗಳನ್ನು ದೇವಿ ಶೃಂಗಾರಕ್ಕೆ ಬಳಕೆ ಮಾಡಲಾಗಿದೆ. ದಸರಾ ಹಬ್ಬದ ವಿಜಯ ದಸಮಿ ಪ್ರಯುಕ್ತ ದೇವಸ್ಥಾನ ಸಮಿತಿ ದೇವಿಗೆ ನೋಟಿನಿಂದ ವಿಶೇಷ ಅಲಂಕಾರ ಮಾಡಿದೆ.

ದಾವಣಗೆರೆ: ನಗರದ ಎಸ್​ಕೆಪಿ ರಸ್ತೆಯಲ್ಲಿರುವ ಕನ್ಯಕಾಪರಮೇಶ್ವರಿ ದೇವಸ್ಥಾನದಲ್ಲಿ ದಸರಾ ಪ್ರಯುಕ್ತ ದೇವಿಗೆ ವಿಶೇಷವಾಗಿ ಅಲಂಕಾರ ಮಾಡಲಾಗಿದೆ. ಕನ್ಯಕಾಪರಮೇಶ್ವರಿಗೆ 12.8 ಲಕ್ಷ ನೋಟಿನಲ್ಲಿ ಶೃಂಗಾರ ಮಾಡಲಾಗಿದೆ. ಕನ್ಯಕಾಪರಮೇಶ್ವರಿ ದೇವಿಗೆ 10, 20, 50, 100, 200, 500 ರೂಪಾಯಿ ಮುಖಬೆಲೆ ನೋಟುಗಳಿಂದ ಅಲಂಕಾರ ಮಾಡಲಾಗಿದೆ. ಬರೋಬರಿ 12.80 ಲಕ್ಷ ರೂಪಾಯಿಯ ವಿವಿಧ ನೋಟುಗಳಲ್ಲಿ ಶೃಂಗಾರ ಮಾಡಲಾಗಿದೆ. 500 ರೂಪಾಯಿ ಮುಖಬೆಲೆಯ ತಲಾ ಒಂದು ಸಾವಿರ ನೋಟುಗಳು ಹಾಗೂ 2000 ಮುಖಬೆಲೆಯ 200 ನೋಟುಗಳನ್ನು ದೇವಿ ಶೃಂಗಾರಕ್ಕೆ ಬಳಕೆ ಮಾಡಲಾಗಿದೆ. ದಸರಾ ಹಬ್ಬದ ವಿಜಯ ದಸಮಿ ಪ್ರಯುಕ್ತ ದೇವಸ್ಥಾನ ಸಮಿತಿ ದೇವಿಗೆ ನೋಟಿನಿಂದ ವಿಶೇಷ ಅಲಂಕಾರ ಮಾಡಿದೆ.

ಇದನ್ನೂ ಓದಿ:
Dasara 2021: ದಸರಾ ಪ್ರಯುಕ್ತ 5 ಕೋಟಿ ರೂ. ನೋಟುಗಳಿಂದಲೇ ನೆಲ್ಲೂರಿನ ದೇವಸ್ಥಾನದ ಅಲಂಕಾರ

Mysore Dasara 2021: ಜಂಬೂಸವಾರಿಯಲ್ಲಿ ಈ ಬಾರಿ ಯಾವೆಲ್ಲಾ ಸ್ತಬ್ಧಚಿತ್ರಗಳು ಭಾಗವಹಿಸಲಿವೆ?; ಇಲ್ಲಿದೆ ಸಂಪೂರ್ಣ ಮಾಹಿತಿ

Published on: Oct 15, 2021 03:00 PM