Dhanu Sankranti: ಧನು ಸಂಕ್ರಾಂತಿಯನ್ನು ಯಾವಾಗ ಆಚರಿಸಬೇಕು? ಈ ದಿನದ ಮಹತ್ವವೇನು?
ಪ್ರತಿ ತಿಂಗಳು ಸೂರ್ಯನು ಪ್ರವೇಶಿಸುವ ರಾಶಿಚಕ್ರದ ಚಿಹ್ನೆಯ ಹೆಸರಿನಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ವರ್ಷದ ಕೊನೆಯ ಸಂಕ್ರಾಂತಿಯನ್ನು ಧನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ವರ್ಷ ಡಿ. 15 ರಂದು ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಸಂಭವಿಸುವ ಮಾಸವನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ. ಅದರಲ್ಲಿಯೂ ಸೂರ್ಯ ದೇವರು ಧನು ರಾಶಿಯಲ್ಲಿ ಕುಳಿತಾಗ, ಅದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ ಜೊತೆಗೆ ಭಕ್ತರು ಇದನ್ನು ಭಕ್ತಿ, ಶ್ರದ್ದೆಯಿಂದ ಆಚರಿಸುತ್ತಾರೆ.
ಹಿಂದೂ ಧರ್ಮದಲ್ಲಿ ಸಂಕ್ರಾಂತಿಗೆ ವಿಶೇಷ ಪ್ರಾಮುಖ್ಯತೆ ಇದೆ, ಪ್ರತಿ ತಿಂಗಳು ಸೂರ್ಯನು ಪ್ರವೇಶಿಸುವ ರಾಶಿಚಕ್ರದ ಚಿಹ್ನೆಯ ಹೆಸರಿನಲ್ಲಿ ಸಂಕ್ರಾಂತಿಯನ್ನು ಆಚರಿಸಲಾಗುತ್ತದೆ. ವರ್ಷದ ಕೊನೆಯ ಸಂಕ್ರಾಂತಿಯನ್ನು ಧನು ಸಂಕ್ರಾಂತಿ ಎಂದು ಕರೆಯಲಾಗುತ್ತದೆ. ಈ ವರ್ಷ ಡಿ. 15 ರಂದು ಸೂರ್ಯ ದೇವನು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದು ಸಂಭವಿಸುವ ಮಾಸವನ್ನು ಧನುರ್ಮಾಸ ಎಂದು ಕರೆಯಲಾಗುತ್ತದೆ. ಅದರಲ್ಲಿಯೂ ಸೂರ್ಯ ದೇವರು ಧನು ರಾಶಿಯಲ್ಲಿ ಕುಳಿತಾಗ, ಅದನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ ಜೊತೆಗೆ ಭಕ್ತರು ಇದನ್ನು ಭಕ್ತಿ, ಶ್ರದ್ದೆಯಿಂದ ಆಚರಿಸುತ್ತಾರೆ. ಧನು ಸಂಕ್ರಾಂತಿಯ ದಿನದಂದು ಸೂರ್ಯ ದೇವರನ್ನು ಪೂಜಿಸಲಾಗುತ್ತದೆ ಮತ್ತು ಪೂರ್ವಜರಿಗೆ ನೈವೇದ್ಯವನ್ನು ಅರ್ಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಪಿತೃ ದೋಷ ಕಡಿಮೆಯಾಗಿ, ಪಾಪಗಳಿಂದ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ.
ಈ ದಿನದ ಮಹತ್ವವೇನು?
ಪಂಚಾಂಗದ ಪ್ರಕಾರ ಡಿಸೆಂಬರ್ ತಿಂಗಳ ಮಾರ್ಗಶಿರ ಮಾಸದ ಕೃಷ್ಣ ಪಕ್ಷದಲ್ಲಿ ಬರುವ ಅಷ್ಟಮಿಯಂದು ಸೂರ್ಯನು ವೃಶ್ಚಿಕ ರಾಶಿಯನ್ನು ಬಿಟ್ಟು ಧನು ರಾಶಿಯನ್ನು ಪ್ರವೇಶಿಸುತ್ತಾನೆ. ಇದನ್ನು ಧನು ಸಂಕ್ರಾಂತಿಯೆಂದು ಕರೆಯಲಾಗುತ್ತದೆ. ಈ ದಿನ ಸೂರ್ಯನು ವೃಶ್ಚಿಕ ರಾಶಿಯಿಂದ ಹೊರಟು ಧನು ರಾಶಿಗೆ ಪ್ರವೇಶಿಸುತ್ತಾನೆ. ಸೂರ್ಯ ತನ್ನ ರಾಶಿಯನ್ನು ಬದಲಾಯಿಸಿದ ತಕ್ಷಣ ಪುಣ್ಯಕಾಲವು ಪ್ರಾರಂಭವಾಗಲಿದೆ, ಇದು ಸೂರ್ಯಾಸ್ತದ ವರೆಗೆ ಇರುತ್ತದೆ. ಈ ದಿನದಂದು ಪ್ರೀತಿ, ಆಯುಷ್ಮಾನ್, ಸಿದ್ಧಿ ಮತ್ತು ಶುಭ ಎಂಬ ಯೋಗಗಳು ದಿನವಿಡೀ ಇರುತ್ತವೆ. ಜೊತೆಗೆ ಮಾರ್ಗಶಿರ ಮತ್ತು ಪುಷ್ಯ ಈ ಎರಡೂ ತಿಂಗಳುಗಳು ಸೂರ್ಯನಿಗೆ ಸಮರ್ಪಿತವಾಗಿವೆ. ಇಂತಹ ಪರಿಸ್ಥಿತಿಯಲ್ಲಿ ವಿಶೇಷವಾಗಿ ಧನು ಸಂಕ್ರಾಂತಿಯಂದು ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸುವುದರಿಂದ ಉತ್ತಮ ಆರೋಗ್ಯದ ವರವನ್ನು ಪಡೆಯುತ್ತಾರೆ.
ಸೂರ್ಯನು ಯಾವುದೇ ರಾಶಿಯಲ್ಲಾಗಲಿ ಒಂದು ತಿಂಗಳು ಇರುತ್ತಾನೆ. ಧನು ರಾಶಿಯಲ್ಲಿ ಸೂರ್ಯನ ಸಂಕ್ರಮಣ ದಿನದಿಂದ ಕರ್ಮಗಳು ಪ್ರಾರಂಭವಾಗುತ್ತವೆ, ಆದ್ದರಿಂದ ಈ ಧನು ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಧನು ಸಂಕ್ರಾಂತಿಯ ದಿನದಂದು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳಿಂದ ಮುಕ್ತಿ ಸಿಗುತ್ತದೆ. ಈ ದಿನ, ಬೆಳಿಗ್ಗೆ ಬೇಗ ಎದ್ದು ಸೂರ್ಯ ದೇವನಿಗೆ ನೀರು, ಹೂವು ಮತ್ತು ಧೂಪದಿಂದ ಪೂಜಿಸಬೇಕು. ಸಾಮಾನ್ಯವಾಗಿ ಈ ದಿನದಂದು ಅಕ್ಕಿ ಪಾಯಸವನ್ನು ನೈವೇದ್ಯ ಮಾಡಲಾಗುತ್ತದೆ ಬಳಿಕ ಅದನ್ನು ಪ್ರಸಾದವಾಗಿ ಅರ್ಪಿಸಲಾಗುತ್ತದೆ.
ಇದನ್ನೂ ಓದಿ: Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಯಾವ ಬಣ್ಣ ಬಳಿಯಬೇಕು?
ಧನು ಸಂಕ್ರಾಂತಿಯ ದಿನ ಈ ರೀತಿ ಮಾಡಿ
ಜೀವನದಲ್ಲಿ ಬರುವ ಎಲ್ಲಾ ರೀತಿಯ ಅಡೆತಡೆಗಳನ್ನು ನಿವಾರಿಸಿಕೊಳ್ಳಲು, ಈ ದಿನ ಶಿವನನ್ನು ಆರಾಧಿಸಿ ಜೊತೆಗೆ ಗಂಗಾಜಲವನ್ನು ಅರ್ಪಿಸಿ. ಜೊತೆಗೆ ಈ ಶುಭ ದಿನದಂದು ಪೂರ್ವಜರ ಆತ್ಮ ಶಾಂತಿಗಾಗಿ ಗಾಯತ್ರಿ ಮಂತ್ರವನ್ನು ಪಠಿಸುವುದು ತುಂಬಾ ಉತ್ತಮ. ಇದನ್ನು ಮಾಡುವುದರಿಂದ ಸೂರ್ಯದೇವನು ಪ್ರಸನ್ನನಾಗುತ್ತಾನೆ ಮತ್ತು ನಿಮ್ಮ ಎಲ್ಲಾ ತೊಂದರೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ