AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vasthu Tips: ಈ ವಸ್ತುಗಳನ್ನು ಎಂದಿಗೂ ಬೇರೆಯವರಿಂದ ಪಡೆದು ಬಳಸಬೇಡಿ

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆದು ಬಳಸುವುದು ಅಶುಭ. ಬಳಸಿದ ಬಟ್ಟೆ, ಉಂಗುರ, ಗಡಿಯಾರ, ಮತ್ತು ಪಾದರಕ್ಷೆಗಳನ್ನು ಎಂದಿಗೂ ಎರವಲು ಪಡೆಯಬಾರದು ಅಥವಾ ಹಂಚಿಕೊಳ್ಳಬಾರದು. ಇವುಗಳು ನಕಾರಾತ್ಮಕ ಶಕ್ತಿಯನ್ನು ಹರಡಬಹುದು ಮತ್ತು ಆರ್ಥಿಕ ಸಮಸ್ಯೆಗಳು, ಅನಾರೋಗ್ಯ, ಮತ್ತು ದುರದೃಷ್ಟವನ್ನು ಉಂಟುಮಾಡಬಹುದು ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

Vasthu Tips: ಈ ವಸ್ತುಗಳನ್ನು ಎಂದಿಗೂ ಬೇರೆಯವರಿಂದ ಪಡೆದು ಬಳಸಬೇಡಿ
Vasthu
ಅಕ್ಷತಾ ವರ್ಕಾಡಿ
|

Updated on: Aug 10, 2025 | 12:44 PM

Share

ಪರಸ್ಪರ ಹಂಚಿಕೊಳ್ಳುವುದು ಅಥವಾ ಅಗತ್ಯವಿದ್ದಾಗ ಸ್ನೇಹಿತರಲ್ಲಿ ಕೇಳುವುದು ಒಳ್ಳೆಯ ಅಭ್ಯಾಸ. ಆದರೆ ಕೆಲವೊಮ್ಮೆ ಅದು ನಿಮಗೆ ದೊಡ್ಡ ಸಮಸ್ಯೆಯಾಗಬಹುದು. ಏಕೆಂದರೆ ವಾಸ್ತು ಶಾಸ್ತ್ರವು ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆದು ಬಳಸುವುದು ಅಶುಭ ಎಂದು ಹೇಳಲಾಗುತ್ತದೆ. ಆದ್ದರಿಂದ ಬೇರೆಯವರು ಬಳಸಿದ ಯಾವೆಲ್ಲ ವಸ್ತುಗಳನ್ನು ನಾವು ಮತ್ತೆ ಬಳಸಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳು ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ನಕಾರಾತ್ಮಕತೆಯನ್ನು ಹರಡಬಹುದು ಮತ್ತು ವಾಸ್ತು ದೋಷಗಳನ್ನು ಹೆಚ್ಚಿಸಬಹುದು. ಅದೇ ರೀತಿ, ಕೆಲವು ವಸ್ತುಗಳನ್ನು ಎರವಲು ಪಡೆಯುವುದರಿಂದ ಆರ್ಥಿಕ ಸಮಸ್ಯೆಗಳು, ಅನಾರೋಗ್ಯ ಮತ್ತು ದುರದೃಷ್ಟ ಉಂಟಾಗಬಹುದು.

ಮತ್ತೊಬ್ಬರ ಬಟ್ಟೆಯನ್ನು ಧರಿಸಬೇಡಿ:

ಬಟ್ಟೆಗಳನ್ನು ವಿನಿಮಯ ಮಾಡಿಕೊಳ್ಳಬೇಡಿ. ಬಟ್ಟೆಗಳು ಬಹಳಷ್ಟು ನಕಾರಾತ್ಮಕ ಶಕ್ತಿಯನ್ನು ಹೊಂದಿರುತ್ತವೆ. ನೀವು ಬೇರೆಯವರಿಂದ ಬಟ್ಟೆಗಳನ್ನು ಪಡೆದು ಅಥವಾ ಪರಸ್ಪರ ಹಂಚಿಕೊಂಡು ಧರಿಸಿದರೆ, ಒಬ್ಬ ವ್ಯಕ್ತಿಯ ನಕಾರಾತ್ಮಕ ಶಕ್ತಿಯು ಇನ್ನೊಬ್ಬ ವ್ಯಕ್ತಿಗೆ ವರ್ಗಾಯಿಸಲ್ಪಡುತ್ತದೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಉಂಗುರಗಳನ್ನು ಕೇಳಬೇಡಿ:

ನಿಮ್ಮ ಸ್ನೇಹಿತರು ತೊಟ್ಟ ಉಂಗುರವನ್ನು ಮತ್ತೆ ನೀವು ಬಳಸುವುದು ಶುಭವಲ್ಲ. ಉಂಗುರವು ಯಾವುದೇ ಲೋಹ ಅಥವಾ ರತ್ನದಿಂದ ಮಾಡಲ್ಪಟ್ಟಿದ್ದರೂ, ಅವುಗಳ ಗ್ರಹ ದೋಷಗಳು ನಿಮ್ಮನ್ನು ತಲುಪುತ್ತವೆ. ಆದ್ದರಿಂದ ಯಾರಿಗೆ ಕೊಡಬೇಡಿ ಹಾಗೂ ಯಾರದನ್ನೂ ನೀವು ಧರಿಸಬೇಡಿ.

ಇದನ್ನೂ ಓದಿ: ದೇವರಿಗೆ ಆರತಿ ಮಾಡುವಾಗ ಕಣ್ಣು ಮುಚ್ಚಬಾರದು ಎಂದು ಹೇಳುವುದೇಕೆ? ಕಾರಣ ಇಲ್ಲಿದೆ

ವಾಚ್​​:

ಒಬ್ಬ ವ್ಯಕ್ತಿಯು ಧರಿಸುವ ವಾಚ್​​ ಸಮಯವನ್ನು ಮಾತ್ರವಲ್ಲದೆ ಅವನ ಒಳ್ಳೆಯ ಮತ್ತು ಕೆಟ್ಟ ಸಮಯಗಳನ್ನು ಸಹ ಸೂಚಿಸುತ್ತದೆ. ಅದಕ್ಕಾಗಿಯೇ ಒಬ್ಬ ಬಳಸಿರುವ ವಾಚ್​​​ ಅನ್ನು ಮತ್ತೊಬ್ಬ ಕೈಗೆ ಕಟ್ಟಿಕೊಳ್ಳುವುದು ಶುಭವಲ್ಲ. ಇಂತಹ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ.

ಚಪ್ಪಲಿ ಮತ್ತು ಶೂ:

ಪಾದರಕ್ಷೆ ಅಥವಾ ಶೂ ಬದಲಾಯಿಸುವುದು ಸಹಒಳ್ಳೆಯದಲ್ಲ. ನೀವು ಬೇರೆಯವರ ಶೂ, ಪಾದರಕ್ಷೆಗಳನ್ನು ಧರಿಸಿದರೆ, ಅವರ ಶನಿ ಮತ್ತು ತೊಂದರೆಗಳು ನಿಮ್ಮನ್ನು ಕಾಡುತ್ತವೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು