AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pitru Paksha: ಪಿತೃ ಪಕ್ಷದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ಏನರ್ಥ? ಸ್ವಪ್ನಶಾಸ್ತ್ರ ಹೇಳುವುದೇನು?

ಸ್ವಪ್ನಶಾಸ್ತ್ರದ ಪ್ರಕಾರ ಕನಸಿನಲ್ಲಿ ಅದರಲ್ಲೂ ವಿಶೇಷವಾಗಿ ಪಿತೃ ಪಕ್ಷದ ಸಮಯದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ವಿಭಿನ್ನ ಅರ್ಥಗಳಿವೆ ಎಂದು ಹೇಳಲಾಗಿದೆ. ಹಾರುತ್ತಿರುವ ಕಾಗೆ ಶುಭ ಸಂಕೇತ, ಆದರೆ ತಿನ್ನುತ್ತಿರುವ ಕಾಗೆ ಅಶುಭ. ಕನಸಿನಲ್ಲಿ ಸತ್ತ ಕಾಗೆ ಕಂಡರೆ ಪೂರ್ವಜರ ಅಸಮಾಧಾನ ಅಥವಾ ನಷ್ಟದ ಸಂಕೇತ. ಕಾಗೆಗಳ ಗುಂಪು ಪೂರ್ವಜರ ತೃಪ್ತಿ ಮತ್ತು ಸಂಪತ್ತಿನ ಸಂಕೇತ. ಇಲ್ಲಿ ಪಿತೃ ಪಕ್ಷದಲ್ಲಿ ಕಾಗೆ ಕನಸಿನ ವಿವಿಧ ವ್ಯಾಖ್ಯಾನಗಳನ್ನು ವಿವರಿಸಲಾಗಿದೆ.

Pitru Paksha: ಪಿತೃ ಪಕ್ಷದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ಏನರ್ಥ? ಸ್ವಪ್ನಶಾಸ್ತ್ರ ಹೇಳುವುದೇನು?
ಕನಸಿನಲ್ಲಿ ಕಾಗೆ
ಅಕ್ಷತಾ ವರ್ಕಾಡಿ
|

Updated on:Sep 10, 2025 | 2:34 PM

Share

ಕನಸಿನಲ್ಲಿ ಕಾಗೆ ಕಂಡರೆ ಸಾಮಾನ್ಯ ಎಂದು ಪರಿಗಣಿಸಲಾಗುತ್ತದೆ. ಆದರೆ ಪಿತೃ ಪಕ್ಷದ ಸಮಯದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ಅದಕ್ಕೆ ವಿಭಿನ್ನ ಅರ್ಥಗಳಿವೆ ಎಂದು ಸ್ವಪ್ನಶಾಸ್ತ್ರ ಹೇಳುತ್ತದೆ. ಏಕೆಂದರೆ ಹಿಂದೂ ಧರ್ಮದಲ್ಲಿ ಕಾಗೆಗಳನ್ನು ಪೂರ್ವಜರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಪಿತೃ ಪಕ್ಷದ ಸಮಯದಲ್ಲಿ ಕನಸಿನಲ್ಲಿ ಕಾಗೆ ಕಂಡರೆ ಅರ್ಥವೇನು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಕನಸಿನಲ್ಲಿ ಕಾಗೆ ಹಾರುತ್ತಿರುವಂತೆ ಕಾಣುವುದು:

ಪಿತೃ ಪಕ್ಷದ ಸಮಯದಲ್ಲಿ ಕನಸಿನಲ್ಲಿ ಕಾಗೆ ಹಾರುತ್ತಿರುವಂತೆ ಕಂಡರೆ ಮನೆಯಲ್ಲಿ ಶುಭಕಾಲ ಮತ್ತು ಸಮೃದ್ಧಿಯ ಆರಂಭದ ಸಂಕೇತವೆಂದು ಪರಿಗಣಿಸಲಾಗುತ್ತದೆ. ನಿಮ್ಮ ಕನಸಿನಲ್ಲಿ ಕಾಗೆ ನಿಮ್ಮ ಮೇಲಿಂದ ಹಾರುತ್ತಿರುವುದನ್ನು ನೀವು ನೋಡಿದ್ದರೆ, ಅದು ಕೆಟ್ಟಕಾಲ ಕೊನೆಗೊಳ್ಳುವ ಮತ್ತು ಸಂತೋಷದ ಕಾಲ ಬರುವುದರ ಸಂಕೇತವಾಗಿದೆ.

ಕಾಗೆಯನ್ನು ಹಿಡಿಯಲು ಪ್ರಯತ್ನಿಸುವಂತೆ ಕನಸು:

ಕನಸಿನಲ್ಲಿ ಕಾಗೆಯನ್ನು ಹಿಡಿಯಲು ಪ್ರಯತ್ನಿಸುವಂತೆ ಕಂಡರೆ, ಅದು ಶುಭ ಸಂಕೇತ. ಸ್ವಪ್ನ ಶಾಸ್ತ್ರದ ಪ್ರಕಾರ, ನಿಮ್ಮ ಕುಟುಂಬದ ನಿರೀಕ್ಷೆಗಳಿಗೆ ತಕ್ಕಂತೆ ಬದುಕುತ್ತೀರಿ ಎಂದರ್ಥ.

ಕಾಗೆ ಆಹಾರ ತಿನ್ನುತ್ತಿರುವಂತೆ ಕನಸು:

ಪಿತೃಪಕ್ಷದ ಸಮಯದಲ್ಲಿ ಕಾಗೆ ಏನನ್ನಾದರೂ ತಿನ್ನುತ್ತಿರುವಂತೆ ಕನಸು ಕಂಡರೆ ಅದು ಶುಭವಲ್ಲ. ಈ ಕನಸು ಭವಿಷ್ಯದಲ್ಲಿ ನಿಮಗೆ ಏನಾದರೂ ನಷ್ಟ ಅಥವಾ ಅಶುಭ ಘಟನೆಯ ಸೂಚನೆ ಇರಬಹುದು. ಪಿತೃಪಕ್ಷದ ಸಮಯದಲ್ಲಿ ಅಂತಹ ಕನಸನ್ನು ಕಾಣುವುದು ಪೂರ್ವಜರಿಗೆ ಆಹಾರದ ಬಯಕೆಯನ್ನು ಸಂಕೇತಿಸುತ್ತದೆ.

ಇದನ್ನೂ ಓದಿ: ಮಹಾಲಯ ಅಮಾವಾಸ್ಯೆಯಂದೇ ಸೂರ್ಯಗ್ರಹಣ; ಈ ದಿನ ಶ್ರಾದ್ಧಕಾರ್ಯ ಮಾಡಬಹುದೇ?

ಕನಸಿನಲ್ಲಿ ಸತ್ತ ಕಾಗೆಯನ್ನು ನೋಡುವುದು:

ಶ್ರಾದ್ಧ ಪಕ್ಷದ ಸಮಯದಲ್ಲಿ ಸತ್ತ ಕಾಗೆಯನ್ನು ಕನಸಿನಲ್ಲಿ ನೋಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಕನಸು ಪೂರ್ವಜರ ಅಸಮಾಧಾನ ಅಥವಾ ಶನಿದೇವನ ಕೋಪದ ಸಂಕೇತವಾಗಿದೆ. ಇದಲ್ಲದೆ, ಇದು ಮುಂಬರುವ ಕೆಟ್ಟ ದಿನ ಅಥವಾ ನಷ್ಟದ ಸಂಕೇತವೂ ಆಗಿರಬಹುದು.

ಕನಸಿನಲ್ಲಿ ಕಾಗೆಗಳ ಗುಂಪು:

ಸ್ವಪ್ನ ಶಾಸ್ತ್ರದ ಪ್ರಕಾರ, ಪಿತೃ ಪಕ್ಷದ ಸಮಯದಲ್ಲಿ ಕನಸಿನಲ್ಲಿ ಕಾಗೆಗಳ ಗುಂಪು ನೋಡುವುದು ಶುಭ ಸಂಕೇತವಾಗಿದೆ. ನಿಮ್ಮ ಪೂರ್ವಜರು ತೃಪ್ತರಾಗಿದ್ದಾರೆ ಎಂದರ್ಥ, ನೀವು ಶತ್ರುವನ್ನು ಗೆಲ್ಲುತ್ತೀರಿ ಮತ್ತು ನಿಮಗೆ ಸಂಪತ್ತು ಸಿಗುತ್ತದೆ ಎಂಬುದರ ಸೂಚನೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:34 pm, Wed, 10 September 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ