ಹಿಂದೂ ಪಂಚಾಂಗದ ಪ್ರಕಾರ ಫಾಲ್ಗುಣ ಮಾಸವು ಕೊನೆಯ ತಿಂಗಳಾಗಿದೆ. ಈ ತಿಂಗಳು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಏಕೆಂದರೆ ಶಿವನ ವಿಶೇಷ ದಿನವಾದ ಮಹಾಶಿವರಾತ್ರಿ ಮತ್ತು ಬಣ್ಣಗಳ ಹಬ್ಬ ಹೋಳಿ ಕೂಡ ಈ ತಿಂಗಳಲ್ಲಿ ಬರುತ್ತದೆ. ಜೊತೆಗೆ ಈ ಮಾಸದಲ್ಲಿ ಶಿವ, ಶ್ರೀಕೃಷ್ಣ, ತಾಯಿ ಪಾರ್ವತಿ, ದೇವಿ ಲಕ್ಷ್ಮೀ ಮತ್ತು ಚಂದ್ರದೇವನನ್ನು ಪೂಜಿಸಲಾಗುತ್ತದೆ. ಏಕೆಂದರೆ ಫಾಲ್ಗುಣ ಮಾಸದಲ್ಲಿ ಈ ದೇವತೆಗಳನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿ ಎಲ್ಲಾ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳುತ್ತಾನೆ ಜೊತೆಗೆ ಸಂತೋಷದಿಂದ ಜೀವನ ನಡೆಸುತ್ತಾನೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಈ ತಿಂಗಳಿನಿಂದ ಶೀತ ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಶಾಖವು ಕ್ರಮೇಣ ಹೆಚ್ಚಾಗುತ್ತದೆ. ಅಲ್ಲದೆ ಫಾಲ್ಗುಣ ಮಾಸದಲ್ಲಿ, ವಿಷ್ಣುವಿಗೆ ಸಂಬಂಧಿಸಿದ ಅಮಲಕಿ ಏಕಾದಶಿ ಉಪವಾಸವನ್ನು ಕೂಡ ಆಚರಿಸಲಾಗುತ್ತದೆ. ಮಾಘ ಮಾಸದಂತೆಯೇ ಈ ಮಾಸದಲ್ಲೂ ದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಹಾಗಾದರೆ ಫಾಲ್ಗುಣ ಮಾಸದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಫಾಲ್ಗುಣ ಮಾಸ ಫೆ. 25 ರಂದು ಆರಂಭವಾಗಿದ್ದು, ಮಾರ್ಚ್ 25 ರಂದು ಫಲ್ಗುಣಿ ನಕ್ಷತ್ರದಲ್ಲಿ ಹುಣ್ಣಿಮೆಯ ದಿನದಂದು ಕೊನೆಗೊಳ್ಳುತ್ತದೆ.
ಆಯುರ್ವೇದದ ಪ್ರಕಾರ, ಈ ತಿಂಗಳಲ್ಲಿ ಆಹಾರದಲ್ಲಿ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಫಾಲ್ಗುಣ ಮಾಸವು ಶ್ರೀ ಕೃಷ್ಣ ಮತ್ತು ಶಿವನ ಆರಾಧನೆಗೆ ಸಮರ್ಪಿತವಾಗಿದ್ದು. ಈ ತಿಂಗಳಲ್ಲಿ ಮಾಡಿದ ಪೂಜೆಯು ವಿಶೇಷವಾಗಿ ಫಲಪ್ರದವಾಗುತ್ತದೆ ಎಂಬ ನಂಬಿಕೆ ಇದೆ.
ಈ ಮಾಸದಲ್ಲಿ ಒಬ್ಬ ವ್ಯಕ್ತಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಶುದ್ಧ ತುಪ್ಪ, ಸಾಸಿವೆ ಎಣ್ಣೆ, ಕಾಲೋಚಿತ ಹಣ್ಣುಗಳು, ಧಾನ್ಯಗಳು ಮತ್ತು ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬಹುದು. ಇದನ್ನು ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಮತ್ತು ನೀವು ಅಂದುಕೊಂಡದ್ದು ನೆರವೇರುತ್ತದೆ. ಇದರೊಂದಿಗೆ ಈ ದಿನ ಪೂರ್ವಜರಿಗೆ ತರ್ಪಣ ನೀಡುವ ಮೂಲಕ ಶುಭ ಫಲಿತಾಂಶಗಳನ್ನು ಸಹ ಪಡೆಯಲಾಗುತ್ತದೆ.
ಇದನ್ನೂ ಓದಿ: ತಾಯಿ ಲಕ್ಷ್ಮೀ ದೇವಿಯ ಎಂಟು ರೂಪಗಳು, ಅವುಗಳ ಪ್ರಾಮುಖ್ಯತೆ ತಿಳಿದುಕೊಳ್ಳಿ!
ಚಂದ್ರನು ಫಾಲ್ಗುಣ ಮಾಸದಲ್ಲಿ ಜನಿಸಿದನು ಎಂಬ ಪ್ರತೀತಿ ಇದೆ. ಆದ್ದರಿಂದ ಈ ತಿಂಗಳು ಪ್ರತಿದಿನ ಚಂದ್ರ ದೇವರ ಆರಾಧನೆ ಮಾಡುವುದು ಒಳ್ಳೆಯದು. ಜಾತಕದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಚಂದ್ರ ದೇವನ ನೆನೆಯುವುದು ಒಳ್ಳೆಯದು. ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳುತ್ತಿರುವವರು, ಆರ್ಥಿಕ ನಷ್ಟದಿಂದ ಕಂಗೆಟ್ಟವರು ಈ ಮಾಸದಲ್ಲಿ ದಾನ ಮಾಡುವ ಮೂಲಕ ಚಂದ್ರ ದೇವನ ಆಶೀರ್ವಾದ ಪಡೆಯಿರಿ. ಜೀವನದಲ್ಲಿ ಸಂತೋಷ ಬಯಸುವವರು ಪ್ರತಿದಿನ ತಾಯಿಗೆ ನಮಸ್ಕರಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ