Sankashti Chaturthi: ಫಾಲ್ಗುಣ ಮಾಸದ ಸಂಕಷ್ಟ ಚತುರ್ಥಿ ಯಾವಾಗ? ಶುಭ ಸಮಯ, ಪೂಜಾ ಸಮಯ ಇಲ್ಲಿದೆ
ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ದ್ವಿಜಪ್ರಿಯ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಹಾಗಾದರೆ ಈ ಬಾರಿಯ ಸಂಕಷ್ಟ ಚತುರ್ಥಿ ಯಾವಾಗ? ಶುಭ ಸಮಯ ಮತ್ತು ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಹಿಂದೂ ಧರ್ಮದಲ್ಲಿ, ಯಾವುದೇ ಶುಭ ಕಾರ್ಯವನ್ನು ಪ್ರಾರಂಭಿಸುವ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಅದೇ ರೀತಿಯಲ್ಲಿ ಗಣಪನ ಆರಾಧನೆ ಮಾಡಲು ಮತ್ತು ಅವನ ಆಶೀರ್ವಾದ ಪಡೆಯಲು ವಿನಾಯಕ ಚತುರ್ಥಿ, ಸಂಕಷ್ಟ ಚತುರ್ಥಿಯಂತಹ ಅನೇಕ ವ್ರತಾಚರಣೆಗಳನ್ನು ಮಾಡಲಾಗುತ್ತದೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ಥಿಯಂದು ದ್ವಿಜಪ್ರಿಯ ಸಂಕಷ್ಟ ಚತುರ್ಥಿಯನ್ನು ಆಚರಿಸಲಾಗುತ್ತದೆ. ಈ ದಿನ ಗಣೇಶನನ್ನು ಪೂಜಿಸುವ ಸಂಪ್ರದಾಯವಿದೆ. ಹಾಗಾದರೆ ಈ ಬಾರಿಯ ಸಂಕಷ್ಟ ಚತುರ್ಥಿ ಯಾವಾಗ? ಶುಭ ಸಮಯ ಮತ್ತು ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.
ಸಂಕಷ್ಟ ಚತುರ್ಥಿ ಯಾವಾಗ?
ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಚತುರ್ಥಿ ತಿಥಿಯು ಫೆ. 28 ರಂದು ಮಧ್ಯಾಹ್ನ 1:53 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮರುದಿನ ಅಂದರೆ ಫೆ. 29 ರಂದು ಬೆಳಿಗ್ಗೆ 4:18 ಕ್ಕೆ ಕೊನೆಗೊಳ್ಳುತ್ತದೆ. ಆದ್ದರಿಂದ ಸಂಕಷ್ಟ ಚತುರ್ಥಿಯನ್ನು ಫೆ. 28 ರಂದು ಆಚರಿಸಲಾಗುತ್ತದೆ.
ಸಂಕಷ್ಟ ಚತುರ್ಥಿಯ ಶುಭ ಸಮಯ ಅಥವಾ ಪೂಜಾ ಸಮಯ;
ಫೆ. 28 ರಂದು ಗಣಪತಿಯ ಪೂಜೆಗೆ ಎರಡು ಶುಭ ಸಮಯಗಳಿವೆ. ಮೊದಲನೆಯದು ಬೆಳಿಗ್ಗೆ 6.48 ರಿಂದ 9.41 ರ ವರೆಗೆ. ಎರಡನೇ ಮುಹೂರ್ತವು 4:53 ರಿಂದ 6:20 ರವರೆಗೆ. ಈ ಎರಡು ಮುಹೂರ್ತಗಳಲ್ಲಿ, ನಿಮ್ಮ ಅನುಕೂಲಕ್ಕೆ ತಕ್ಕಂತೆ ಗಣೇಶನನ್ನು ಪೂಜಿಸಬಹುದು. ಫೆ. 28 ರಂದು ಚಂದ್ರೋದಯದ ಸಮಯ ರಾತ್ರಿ 9:42 ಕ್ಕೆ. ಈ ದಿನ ಗಣೇಶನ ಆಶೀರ್ವಾದ ಪಡೆಯಲು ಗಣೇಶ ದೇವನಿಗೆ ಸಂಬಂಧ ಪಟ್ಟ ಶ್ಲೋಕವನ್ನು ಪಠಿಸಿ.
ಇದನ್ನೂ ಓದಿ: ಫಾಲ್ಗುಣ ಮಾಸದಲ್ಲಿ ಏನು ಮಾಡಬೇಕು, ಮಾಡಬಾರದು ಇಲ್ಲಿದೆ
ಸಂಕಷ್ಟ ಚತುರ್ಥಿಯ ಮಹತ್ವವೇನು?
ಧಾರ್ಮಿಕ ನಂಬಿಕೆಗಳ ಪ್ರಕಾರ, ತಾಯಿ ಪಾರ್ವತಿ ಕೆಲವು ಕಾರಣಗಳಿಗಾಗಿ ಭಗವಾನ್ ಶಂಕರನ ಮೇಲೆ ಕೋಪಗೊಂಡಿದ್ದಳು. ತಾಯಿ ಪಾರ್ವತಿಯನ್ನು ಮೆಚ್ಚಿಸಲು ಶಿವನು ಈ ಉಪವಾಸವನ್ನು ಆಚರಿಸಿದ್ದನು, ಇದರಿಂದಾಗಿ ತಾಯಿ ಪಾರ್ವತಿ ಸಂತೋಷ ಪಟ್ಟು ಶಿವಲೋಕಕ್ಕೆ ಬಂದಳು ಎನ್ನುವ ನಂಬಿಕೆ ಇದೆ. ಈ ಉಪವಾಸವು ಪಾರ್ವತಿ ದೇವಿಗೆ ಮಾತ್ರವಲ್ಲದೆ ಗಣೇಶನಿಗೂ ಪ್ರಿಯವಾಗಿದೆ, ಆದ್ದರಿಂದ ಇದನ್ನು ದ್ವಿಜಪ್ರಿಯ ಚತುರ್ಥಿ ಎಂದೂ ಕರೆಯಲಾಗುತ್ತದೆ. ಈ ದಿನ ಯಾರು ಗೌರಿ- ಗಣೇಶನನ್ನು ಪೂಜಿಸುವರೋ, ಅವರ ಎಲ್ಲಾ ಆಸೆಗಳು ಈಡೇರುತ್ತವೆ ಮತ್ತು ಎಲ್ಲಾ ತೊಂದರೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಜೊತೆಗೆ ಗಣೇಶ ಪುರಾಣದ ಪ್ರಕಾರ, ಈ ಉಪವಾಸದ ಪರಿಣಾಮವು ಅದೃಷ್ಟ, ಸಮೃದ್ಧಿ ಮತ್ತು ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯವನ್ನು ನೀಡುತ್ತದೆ ಎನ್ನಲಾಗುತ್ತದೆ. ಹಾಗಾಗಿ ಈ ಉಪವಾಸವನ್ನು ಆಚರಣೆ ಮಾಡುವವರು ಸಾತ್ವಿಕ ಆಹಾರವನ್ನು ಮಾತ್ರ ಸೇವನೆ ಮಾಡಬೇಕು. ಯಾವುದೇ ಕಾರಣಕ್ಕೂ ಈ ದಿನ ಮಾಂಸಾಹಾರ ಸೇವನೆ ಮಾಡಬೇಡಿ. ಸಾದ್ಯವಾದರೆ ನಿಮ್ಮ ಹತ್ತಿರದ ಗಣಪತಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ