AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Falgun Month 2024: ಫಾಲ್ಗುಣ ಮಾಸದಲ್ಲಿ ಏನು ಮಾಡಬೇಕು, ಮಾಡಬಾರದು ಇಲ್ಲಿದೆ

ಈ ತಿಂಗಳಲ್ಲಿ ಭಗವಾನ್ ಶ್ರೀ ಕೃಷ್ಣ ಮತ್ತು ಶಿವನನ್ನು ಪೂಜಿಸಲಾಗುತ್ತದೆ. ಅಲ್ಲದೆ ವಿಷ್ಣುವಿಗೆ ಸಂಬಂಧಿಸಿದ ಅಮಲಕಿ ಏಕಾದಶಿ ಉಪವಾಸವನ್ನು ಕೂಡ ಆಚರಿಸಲಾಗುತ್ತದೆ. ಮಾಘ ಮಾಸದಂತೆಯೇ ಈ ಮಾಸದಲ್ಲೂ ದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಹಾಗಾದರೆ ಫಾಲ್ಗುಣ ಮಾಸದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Falgun Month 2024: ಫಾಲ್ಗುಣ ಮಾಸದಲ್ಲಿ ಏನು ಮಾಡಬೇಕು, ಮಾಡಬಾರದು ಇಲ್ಲಿದೆ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 26, 2024 | 3:54 PM

Share

ಹಿಂದೂ ಪಂಚಾಂಗದ ಪ್ರಕಾರ ಫಾಲ್ಗುಣ ಮಾಸವು ಕೊನೆಯ ತಿಂಗಳಾಗಿದೆ. ಈ ತಿಂಗಳು ಹಿಂದೂ ಧರ್ಮದಲ್ಲಿ ವಿಶೇಷ ಮಹತ್ವವನ್ನು ಹೊಂದಿದೆ ಏಕೆಂದರೆ ಶಿವನ ವಿಶೇಷ ದಿನವಾದ ಮಹಾಶಿವರಾತ್ರಿ ಮತ್ತು ಬಣ್ಣಗಳ ಹಬ್ಬ ಹೋಳಿ ಕೂಡ ಈ ತಿಂಗಳಲ್ಲಿ ಬರುತ್ತದೆ. ಜೊತೆಗೆ ಈ ಮಾಸದಲ್ಲಿ ಶಿವ, ಶ್ರೀಕೃಷ್ಣ, ತಾಯಿ ಪಾರ್ವತಿ, ದೇವಿ ಲಕ್ಷ್ಮೀ ಮತ್ತು ಚಂದ್ರದೇವನನ್ನು ಪೂಜಿಸಲಾಗುತ್ತದೆ. ಏಕೆಂದರೆ ಫಾಲ್ಗುಣ ಮಾಸದಲ್ಲಿ ಈ ದೇವತೆಗಳನ್ನು ಪೂಜಿಸುವುದರಿಂದ ಒಬ್ಬ ವ್ಯಕ್ತಿ ಎಲ್ಲಾ ತೊಂದರೆಗಳಿಂದ ಪರಿಹಾರ ಪಡೆದುಕೊಳ್ಳುತ್ತಾನೆ ಜೊತೆಗೆ ಸಂತೋಷದಿಂದ ಜೀವನ ನಡೆಸುತ್ತಾನೆ ಎಂದು ನಂಬಲಾಗಿದೆ. ಸಾಮಾನ್ಯವಾಗಿ ಈ ತಿಂಗಳಿನಿಂದ ಶೀತ ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಶಾಖವು ಕ್ರಮೇಣ ಹೆಚ್ಚಾಗುತ್ತದೆ. ಅಲ್ಲದೆ ಫಾಲ್ಗುಣ ಮಾಸದಲ್ಲಿ, ವಿಷ್ಣುವಿಗೆ ಸಂಬಂಧಿಸಿದ ಅಮಲಕಿ ಏಕಾದಶಿ ಉಪವಾಸವನ್ನು ಕೂಡ ಆಚರಿಸಲಾಗುತ್ತದೆ. ಮಾಘ ಮಾಸದಂತೆಯೇ ಈ ಮಾಸದಲ್ಲೂ ದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ. ಹಾಗಾದರೆ ಫಾಲ್ಗುಣ ಮಾಸದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು? ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

2024 ರ ಫಾಲ್ಗುಣ ಮಾಸ ಯಾವಾಗ ಪ್ರಾರಂಭವಾಗುತ್ತದೆ?

ಫಾಲ್ಗುಣ ಮಾಸ ಫೆ. 25 ರಂದು ಆರಂಭವಾಗಿದ್ದು, ಮಾರ್ಚ್ 25 ರಂದು ಫಲ್ಗುಣಿ ನಕ್ಷತ್ರದಲ್ಲಿ ಹುಣ್ಣಿಮೆಯ ದಿನದಂದು ಕೊನೆಗೊಳ್ಳುತ್ತದೆ.

ಫಾಲ್ಗುಣ ಮಾಸದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು?

ಆಯುರ್ವೇದದ ಪ್ರಕಾರ, ಈ ತಿಂಗಳಲ್ಲಿ ಆಹಾರದಲ್ಲಿ ಧಾನ್ಯಗಳ ಬಳಕೆಯನ್ನು ಕಡಿಮೆ ಮಾಡಬೇಕು ಮತ್ತು ಹಣ್ಣುಗಳನ್ನು ಹೆಚ್ಚು ಸೇವಿಸಬೇಕು. ಫಾಲ್ಗುಣ ಮಾಸವು ಶ್ರೀ ಕೃಷ್ಣ ಮತ್ತು ಶಿವನ ಆರಾಧನೆಗೆ ಸಮರ್ಪಿತವಾಗಿದ್ದು. ಈ ತಿಂಗಳಲ್ಲಿ ಮಾಡಿದ ಪೂಜೆಯು ವಿಶೇಷವಾಗಿ ಫಲಪ್ರದವಾಗುತ್ತದೆ ಎಂಬ ನಂಬಿಕೆ ಇದೆ.

ಫಾಲ್ಗುಣ ಮಾಸದಲ್ಲಿ ಯಾವ ವಸ್ತುಗಳನ್ನು ದಾನ ಮಾಡಬೇಕು?

ಈ ಮಾಸದಲ್ಲಿ ಒಬ್ಬ ವ್ಯಕ್ತಿ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಶುದ್ಧ ತುಪ್ಪ, ಸಾಸಿವೆ ಎಣ್ಣೆ, ಕಾಲೋಚಿತ ಹಣ್ಣುಗಳು, ಧಾನ್ಯಗಳು ಮತ್ತು ಬಟ್ಟೆ ಇತ್ಯಾದಿಗಳನ್ನು ದಾನ ಮಾಡಬಹುದು. ಇದನ್ನು ಮಾಡುವುದರಿಂದ ಶುಭ ಫಲ ಪ್ರಾಪ್ತಿಯಾಗುತ್ತದೆ ಮತ್ತು ನೀವು ಅಂದುಕೊಂಡದ್ದು ನೆರವೇರುತ್ತದೆ. ಇದರೊಂದಿಗೆ ಈ ದಿನ ಪೂರ್ವಜರಿಗೆ ತರ್ಪಣ ನೀಡುವ ಮೂಲಕ ಶುಭ ಫಲಿತಾಂಶಗಳನ್ನು ಸಹ ಪಡೆಯಲಾಗುತ್ತದೆ.

ಇದನ್ನೂ ಓದಿ: ತಾಯಿ ಲಕ್ಷ್ಮೀ ದೇವಿಯ ಎಂಟು ರೂಪಗಳು, ಅವುಗಳ ಪ್ರಾಮುಖ್ಯತೆ ತಿಳಿದುಕೊಳ್ಳಿ!

ಫಾಲ್ಗುಣ ಮಾಸದಲ್ಲಿ ಯಾವ ದೇವರನ್ನು ಪೂಜಿಸಬೇಕು?

ಚಂದ್ರನು ಫಾಲ್ಗುಣ ಮಾಸದಲ್ಲಿ ಜನಿಸಿದನು ಎಂಬ ಪ್ರತೀತಿ ಇದೆ. ಆದ್ದರಿಂದ ಈ ತಿಂಗಳು ಪ್ರತಿದಿನ ಚಂದ್ರ ದೇವರ ಆರಾಧನೆ ಮಾಡುವುದು ಒಳ್ಳೆಯದು. ಜಾತಕದಲ್ಲಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಚಂದ್ರ ದೇವನ ನೆನೆಯುವುದು ಒಳ್ಳೆಯದು. ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳುತ್ತಿರುವವರು, ಆರ್ಥಿಕ ನಷ್ಟದಿಂದ ಕಂಗೆಟ್ಟವರು ಈ ಮಾಸದಲ್ಲಿ ದಾನ ಮಾಡುವ ಮೂಲಕ ಚಂದ್ರ ದೇವನ ಆಶೀರ್ವಾದ ಪಡೆಯಿರಿ. ಜೀವನದಲ್ಲಿ ಸಂತೋಷ ಬಯಸುವವರು ಪ್ರತಿದಿನ ತಾಯಿಗೆ ನಮಸ್ಕರಿಸಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ