February Festival List 2025: ಫೆಬ್ರವರಿ ತಿಂಗಳಲ್ಲಿ ಆಚರಿಸುವ ಹಬ್ಬಗಳು ಯಾವುವು? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ
ಹಿಂದೂ ಧರ್ಮದಲ್ಲಿ ವರ್ಷವಿಡೀ ಹಲವಾರು ಧಾರ್ಮಿಕ ಆಚರಣೆ, ಹಬ್ಬ ಹರಿದಿನಗಳನ್ನು ಆಚರಿಸಲಾಗುತ್ತದೆ. ಪ್ರತಿ ತಿಂಗಳು ಕೂಡಾ ಒಂದಲ್ಲಾ ಒಂದು ವ್ರತಾಚರಣೆ ಅಥವಾ ಹಬ್ಬಗಳು ಇದ್ದೇ ಇರುತ್ತವೆ. ಅದರಂತೆ ವರ್ಷದ ಎರಡನೇ ತಿಂಗಳಾದ ಫೆಬ್ರವರಿಯಲ್ಲೂ ಕೆಲವೊಂದು ಹಬ್ಬಗಳನ್ನು ಆಚರಿಸಲಾಗುತ್ತದೆ. ವಸಂತ ಪಂಚಮಿಯಿಂದ ಹಿಡಿದು ಮಹಾಶಿವರಾತ್ರಿಯವರೆಗೆ ಫೆಬ್ರವರಿಯಲ್ಲಿ ಯಾವೆಲ್ಲಾ ಹಬ್ಬಗಳನ್ನು ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಜನವರಿ ಮಾಸ ಕಳೆದು, ನಾವೀಗ ವರ್ಷದ ಎರಡನೇ ತಿಂಗಳಿಗೆ ಕಾಲಿಡುತ್ತಿದ್ದೇವೆ. ಹಿಂದೂ ಪಂಚಾಂಗದಲ್ಲಿ ಈ ಫೆಬ್ರವರಿ ತಿಂಗಳು ಮಾಘ ಮಾಸವೆಂದು ಜನಪ್ರಿಯವಾಗಿದೆ. ಅಷ್ಟೇ ಅಲ್ಲದೆ ಹಿಂದೂ ಧರ್ಮದಲ್ಲಿ ಈ ಮಾಘ ಮಾಸವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗಿದೆ. 2025 ರ ಮಾಘ ಮಾಸವು ಜನವರಿ 30 ಅಂದರೆ ಇಂದಿನಿಂದ ಆರಂಭವಾಗಿ ಫೆಬ್ರವರಿ 28 ರ ವರೆಗೆ ಇರಲಿದೆ. ಈ ಅವಧಿಯಲ್ಲಿ ಪೂಜೆ ಪುನಸ್ಕಾರ, ದಾನ ಧರ್ಮ ಮತ್ತು ಗಂಗಾಸ್ನಾನ ಮಾಡುವುದರಿಂದ ದೀರ್ಘಕಾಲದ ಶುಭಫಲವನ್ನು ಪಡೆಯಬಹುದು ಎಂದು ಹೇಳಲಾಗುತ್ತದೆ. ಹೀಗಿರುವಾಗ ಈ ಪವಿತ್ರ ಮಾಸದಲ್ಲಿ ಯಾವೆಲ್ಲಾ ಹಬ್ಬ ಹರಿದಿನಗಳನ್ನು, ವ್ರತಾಚರಣೆಗಳನ್ನು ಆಚರಿಸಲಾಗುತ್ತದೆ ಎಂಬುದನ್ನು ನೋಡೋಣ ಬನ್ನಿ.
ಫೆಬ್ರವರಿ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ:
• 1 ಫೆಬ್ರವರಿ 2025 – ವಿನಾಯಕ ಚತುರ್ಥಿ
• 2 ಫೆಬ್ರವರಿ 2025 – ವಸಂತ ಪಂಚಮಿ
• 4 ಫೆಬ್ರವರಿ 2025 – ರಥ ಸಪ್ತಮಿ
• 4 ಫೆಬ್ರವರಿ 2025- ನರ್ಮದಾ ಜಯಂತಿ
• 5 ಫೆಬ್ರವರಿ 2025- ಭೀಷ್ಮಾಷ್ಟಮಿ
• 8 ಫೆಬ್ರವರಿ 2025 – ಜಯ ಏಕಾದಶಿ
• 9 ಫೆಬ್ರವರಿ 2025 – ಪ್ರದೋಷ ವ್ರತ
• 12 ಫೆಬ್ರವರಿ 2025 – ಮಾಘ ಪೂರ್ಣಿಮಾ ವ್ರತ
• 12 ಫೆಬ್ರವರಿ 2025 – ಕುಂಭ ಸಂಕ್ರಾಂತಿ
• 12 ಫೆಬ್ರವರಿ 2025 – ಗುರು ರವಿದಾಸ್ ಜಯಂತಿ
• 13 ಫೆಬ್ರವರಿ 2025 – ಫಾಲ್ಗುಣ ಮಾಸ ಆರಂಭ
• 16 ಫೆಬ್ರವರಿ 2025 – ದ್ವಿಜಪ್ರಿಯ ಸಂಕಷ್ಟ ಚತುರ್ಥಿ
• 20 ಫೆಬ್ರವರಿ 2025 – ಶಬರಿ ಜಯಂತಿ
• 21 ಫೆಬ್ರವರಿ 2025 – ಜಾನಕಿ ಜಯಂತಿ
• 24 ಫೆಬ್ರವರಿ 2025 – ಸರ್ವೈಕಾದಶಿ
• 25 ಫೆಬ್ರವರಿ 2025 – ಪ್ರದೋಷ ವ್ರತ
• 26 ಫೆಬ್ರವರಿ 2025 – ಮಹಾಶಿವರಾತ್ರಿ
• 27 ಫೆಬ್ರವರಿ 2025 – ಫಾಲ್ಗುಣ ಅಮವಾಸ್ಯೆ
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ