Deepavali 2021: ದೀಪ ಹಚ್ಚುವಾಗ ಮನೆಗೆ ತೋರಣ ಕಟ್ಟುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಲಕ್ಷ್ಮಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗಿ

ದೀಪಾವಳಿಯಂದು ಬಾಗಿಲಿಗೆ ಕಟ್ಟುವ ತೋರಣ ಮತ್ತು ಕತ್ತಲನ್ನು ಓಡಿಸಿ ಬೆಳಕನ್ನು ನೀಡುವ ದೀಪಗಳನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ, ಅವುಗಳಿಗೆ ತನ್ನದೇ ಆದ ವಿಶೇಷ ಮಹತ್ವವಿದೆ, ವಾಸ್ತು ನಿಯಮಗಳ ಪ್ರಕಾರ, ತೋರಣವು ಮನೆಯಲ್ಲಿ ಸಂತೋಷ, ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ.

Deepavali 2021: ದೀಪ ಹಚ್ಚುವಾಗ ಮನೆಗೆ ತೋರಣ ಕಟ್ಟುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ, ಲಕ್ಷ್ಮಿ ದೇವಿಯ ಆಶೀರ್ವಾದಕ್ಕೆ ಪಾತ್ರರಾಗಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: shruti hegde

Updated on: Nov 03, 2021 | 9:17 AM

ಬೆಳಕಿನ ಹಬ್ಬ ದೀಪಾವಳಿಯಂದು ಲಕ್ಷ್ಮಿ ಮತ್ತು ಗಣೇಶನನ್ನು ವಿಶೇಷವಾಗಿ ಪೂಜಿಸಲಾಗುತ್ತದೆ. ದೀಪಾವಳಿಯಂದು ಲಕ್ಷ್ಮಿ ದೇವಿಯು ಮನೆಗಳಿಗೆ ಬರುತ್ತಾಳೆ ಎಂದು ಹೇಳಲಾಗುತ್ತದೆ, ಅದಕ್ಕಾಗಿಯೇ ಜನರು ದೇವಿಯ ಕೃಪೆಗೆ ಪಾತ್ರರಾಗಲು ಹಲವು ದಿನಗಳ ಮುಂಚಿತವಾಗಿ ತಯಾರಿ ಪ್ರಾರಂಭಿಸುತ್ತಾರೆ. ಈ ಕಾರಣಕ್ಕಾಗಿ ಮನೆಯಲ್ಲಿ ಸ್ವಚ್ಛತೆ, ಸುಣ್ಣ-ಬಣ್ಣ ಇತ್ಯಾದಿಗಳಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಯಾವ ಮನೆಯಲ್ಲಿ ಶುಚಿತ್ವ, ಅಲಂಕಾರಗಳಿರುತ್ತವೆಯೋ ಅಲ್ಲಿ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಎಂದು ಹೇಳಲಾಗುತ್ತದೆ.

ಹಿಂದೂ ಧರ್ಮದಲ್ಲಿ ದೀಪಾವಳಿಗೆ ವಿಶೇಷ ಮಹತ್ವವಿದೆ. ಈ ಹಬ್ಬವನ್ನು ದೇಶದ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತದೆ. ದೀಪಾವಳಿಯಂದು ಬಾಗಿಲಿಗೆ ಕಟ್ಟುವ ತೋರಣ ಮತ್ತು ಕತ್ತಲನ್ನು ಓಡಿಸಿ ಬೆಳಕನ್ನು ನೀಡುವ ದೀಪಗಳನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ, ಅವುಗಳಿಗೆ ತನ್ನದೇ ಆದ ವಿಶೇಷ ಮಹತ್ವವಿದೆ, ವಾಸ್ತು ನಿಯಮಗಳ ಪ್ರಕಾರ, ತೋರಣವು ಮನೆಯಲ್ಲಿ ಸಂತೋಷ, ಯಶಸ್ಸು ಮತ್ತು ಸಮೃದ್ಧಿಯನ್ನು ತರುತ್ತದೆ. ನಮ್ಮ ಜೀವನದಲ್ಲಿ ನೆಮ್ಮದಿ ತರುತ್ತದೆ ಎಂದು ಹೇಳಲಾಗುತ್ತೆ.

ತೋರಣ ಕಟ್ಟುವುದೇಕೆ? ಮುಖ್ಯ ದ್ವಾರದಲ್ಲಿ ಕಟ್ಟುವ ತೋರಣವು ಲಕ್ಷ್ಮಿ ದೇವಿಯನ್ನು ಸ್ವಾಗತಿಸಲು ಕಟ್ಟಲಾಗುತ್ತೆ ಎಂದು ಹೇಳುತ್ತಾರೆ. ಇದು ಲಕ್ಷ್ಮಿಯನ್ನು ಮೆಚ್ಚಿಸಲು ಬಾಗಿಲಿಗೆ ಕಟ್ಟುವುದು ಮಂಗಳಕರವೆಂದು ಪರಿಗಣಿಸಲಾಗಿದೆ.

ಮಾರುಕಟ್ಟೆಯಲ್ಲಿ ವಿಧ ವಿಧವಾದ ವಿಭಿನ್ನವಾದ ಬಣ್ಣ ಬಣ್ಣದ ತೋರಣಗಳು ಸಿಗುತ್ತವೆ. ತೋರಣವನ್ನು ಖರೀದಿಸುವಾಗ, ಅದರ ಬಣ್ಣಗಳು ಇತ್ಯಾದಿಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಮನೆಯ ಮುಖ್ಯ ಬಾಗಿಲು ಪೂರ್ವದಲ್ಲಿದ್ದರೆ, ಹಸಿರು ಹೂವುಗಳು ಮತ್ತು ಎಲೆಗಳ ಕಂಬವನ್ನು ಹಾಕಬೇಕು, ಅದು ಜೀವನದಲ್ಲಿ ಸಂತೋಷವನ್ನು ತರುತ್ತದೆ. ಉತ್ತರದ ಮುಖ್ಯ ದ್ವಾರಕ್ಕೆ ನೀಲಿ ಅಥವಾ ಆಕಾಶ ಬಣ್ಣದ ಹೂಗಳನ್ನು ಬಳಸಬೇಕು. ಮನೆಯ ಪ್ರವೇಶದ್ವಾರವು ದಕ್ಷಿಣ ದಿಕ್ಕಿನಲ್ಲಿದ್ದರೆ ತೋರಣವು ಕೆಂಪು, ಕಿತ್ತಳೆ ಬಣ್ಣಗಳಾಗಿದ್ದರೆ ಶುಭವಾಗುತ್ತೆ. ಪಶ್ಚಿಮ ದಿಕ್ಕಿನ ಬಾಗಿಲಿಗೆ ಹಳದಿ ಹೂವುಗಳ ತೋರಣ ಮಂಗಳಕರವೆಂದು ಹೇಳಲಾಗುತ್ತೆ. ಮತ್ತೊಂದೆಡೆ, ಮಾವಿನ ಎಲೆಗಳನ್ನು ಬಳಸಿ ಮಾಡುವ ತೋರಣವನ್ನೂ ಕೂಡ ಶ್ರೇಷ್ಠ ಎಂದು ಭಾವಿಸಲಾಗಿದೆ. ಇದು ತುಂಬಾ ಮಂಗಳಕರ ಮತ್ತು ಪ್ರಯೋಜನಕಾರಿಯಾಗಿದೆ.

ದೀಪ ಬೆಳಕಿಸುವ ಹಿಂದಿದೆ ವೈಜ್ಞಾನಿಕ ಕಾರಣ ದೀಪಾವಳಿಯ ಪೂಜೆಯಲ್ಲಿ, ಹಸುವಿನ ತುಪ್ಪದ ದೀಪವನ್ನು ಬೆಳಗಿಸುವುದರಿಂದ, ಧನಾತ್ಮಕ ಶಕ್ತಿಯು ಹರಡುತ್ತದೆ. ಅದು ಮನೆಯಲ್ಲಿ ಸಂತೋಷ, ಸಮೃದ್ಧಿಯನ್ನು ತರುತ್ತದೆ. ಆದರೆ ವಾಸ್ತು ನಿಯಮಗಳ ಪ್ರಕಾರ, ಪೂಜೆಯ ಮನೆಯಲ್ಲಿ ಅಖಂಡ ದೀಪವನ್ನು ಬೆಳಗಿಸಿದರೆ, ಜೀವನದಲ್ಲಿ ಸಂತೋಷ ಮತ್ತು ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗತ್ತೀರಿ.

ದೀಪಾವಳಿಯ ದಿನ ಲಕ್ಷ್ಮೀದೇವಿಯನ್ನು ಪೂಜಿಸುವುದರಿಂದ ಉತ್ತರ ದಿಕ್ಕಿಗೆ ದೀಪವನ್ನು ಹಚ್ಚುವುದರಿಂದ ಸಂಪತ್ತು ಮತ್ತು ಧಾನ್ಯ ಪ್ರಾಪ್ತಿಯಾಗುತ್ತದೆ. ದೀಪವನ್ನು ಬೆಳಗಿಸುವ ಮೂಲಕ, ನಕಾರಾತ್ಮಕ ಶಕ್ತಿ ದೂರವಾಗಿ ಧನಾತ್ಮಕ ಶಕ್ತಿಯೊಂದಿಗೆ, ಸಂತೋಷ ಮತ್ತು ಸಮೃದ್ಧಿ ಮನೆಗೆ ಆಗಮಿಸುತ್ತದೆ.

ಪೂಜೆಯಲ್ಲಿ ಮಣ್ಣಿನ ದೀಪವನ್ನು ಹಚ್ಚಿದರೆ ಅದನ್ನು ಒಡೆಯಬಾರದು. ಒಡೆದ ದೀಪವನ್ನು ಮನೆಯಲ್ಲಿ ಅಶುಭವೆಂದು ಪರಿಗಣಿಸಲಾಗುತ್ತದೆ. ಹಸುವಿನ ತುಪ್ಪದ ದೀಪವನ್ನು ಬೆಳಗಿಸುವುದರಿಂದ ಸುತ್ತಮುತ್ತಲಿನ ಪರಿಸರವು ರೋಗಾಣು ಮುಕ್ತವಾಗುತ್ತದೆ ಮತ್ತು ಪರಿಶುದ್ಧವಾಗುತ್ತದೆ.

ಇದನ್ನೂ ಓದಿ: Deepawali 2021: ಮನೆ ಮುಖ್ಯದ್ವಾರದಲ್ಲಿ ಈ 3 ವಸ್ತು ತೂಗುಹಾಕಿ, ಲಕ್ಷ್ಮಿ ದೇವಿ ಸೀದಾ ಮನೆಯೊಳಕ್ಕೆ ಪ್ರವೇಶಿಸುವುದು ಖಚಿತ

70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಚಿನ್ನ ವಂಚನೆ ಕೇಸ್​ನಲ್ಲಿ ಹೆಸರು: ಡಿಕೆ ಸುರೇಶ್ ಹೇಳಿದ್ದೇನು ನೋಡಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಮಾಜಿ ಪಿಎಂ ಮನಮೋಹನ್ ಸಿಂಗ್​ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಶತಕ ಪೂರೈಸುತ್ತಿದ್ದಂತೆ ಕಣ್ಣೀರಿಟ್ಟ ನಿತೀಶ್ ಕುಮಾರ್ ರೆಡ್ಡಿ ಅವರ ತಂದೆ..!
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅಂತಿಮಯಾತ್ರೆ ನೇರಪ್ರಸಾರ