Ganesh Chaturthi 2022: ಗಣಪತಿಗೆ ನಿಜವಾಗಲೂ ಮದುವೆಯಾಗಿತ್ತಾ?; ರಿದ್ಧಿ, ಸಿದ್ಧಿ ಬಗ್ಗೆ ನಿಮಗೆಷ್ಟು ಗೊತ್ತು?

| Updated By: ಸುಷ್ಮಾ ಚಕ್ರೆ

Updated on: Aug 30, 2022 | 9:56 AM

Ganesha Marriage Story: ಬಹುತೇಕ ಜನರು ಗಣೇಶ ಬ್ರಹ್ಮಚಾರಿ ಎಂದೇ ತಿಳಿದಿದ್ದಾರೆ. ಆದರೆ, ಗಣೇಶನಿಗೆ ಮದುವೆಯಾಗಿ ಇಬ್ಬರು ಹೆಂಡತಿಯರಿದ್ದರು ಎಂಬ ವಿಷಯ ತಿಳಿದವರು ಬಹಳ ಕಡಿಮೆ.

Ganesh Chaturthi 2022: ಗಣಪತಿಗೆ ನಿಜವಾಗಲೂ ಮದುವೆಯಾಗಿತ್ತಾ?; ರಿದ್ಧಿ, ಸಿದ್ಧಿ ಬಗ್ಗೆ ನಿಮಗೆಷ್ಟು ಗೊತ್ತು?
ಗಣೇಶನ ಜೊತೆ ಸಿದ್ಧಿ- ಬುದ್ಧಿ
Follow us on

ಗಣೇಶ ಚತುರ್ಥಿಯು (Ganesh Chaturthi) ಶಿವ ಮತ್ತು ಪಾರ್ವತಿಯ ಪುತ್ರನಾದ ಗಣೇಶನ ಜನ್ಮವನ್ನು ಆಚರಿಸುವ ಹಬ್ಬವಾಗಿದೆ. ಇಂದು ಗೌರಿ ಹಬ್ಬ. ಗೌರಿಯ ಪುತ್ರನಾದ ಗಣಪತಿಯ ಜನ್ಮದಿನವನ್ನು ನಾಳೆ (ಆ. 31) ದೇಶಾದ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ವಿಘ್ನವಿನಾಶಕ ಗಣಪತಿಯ ಅನುಗ್ರಹವು ತನ್ನ ಭಕ್ತರಿಗೆ ಸಂತೋಷ, ಬುದ್ಧಿವಂತಿಕೆ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಮನೆಗಳಲ್ಲಿ, ಬೀದಿಗಳಲ್ಲಿ, ದೇವಸ್ಥಾನದಲ್ಲಿ ಗಣಪತಿ (Ganesh Idol) ಮೂರ್ತಿಯನ್ನು ಪ್ರತಿಷ್ಠಾಪಿಸಿ, ಹಬ್ಬವನ್ನು ಆಚರಿಸಲಾಗುತ್ತದೆ.

ಈ ಶುಭ ಸಂದರ್ಭದಲ್ಲಿ ಮೊದಲ ದಿನ, ಗಣೇಶನ ವಿಗ್ರಹವನ್ನು ಮನೆಗಳಿಗೆ ತಂದು 10 ದಿನಗಳ ಕಾಲ ಪೂಜಿಸಲಾಗುತ್ತದೆ. ಕೊನೆಯ ದಿನದಂದು ಗಣೇಶನ ವಿಸರ್ಜನೆ ಮಾಡಲಾಗುತ್ತದೆ. ಗಣಪತಿಯ ಮೂರ್ತಿಯನ್ನು ಸುಂದರವಾದ ಮೆರವಣಿಗೆಯ ನಂತರ ನೀರಿನಲ್ಲಿ ಮುಳುಗಿಸಲಾಗುತ್ತದೆ. ಈ ಗಣಪತಿಯ ಬಗ್ಗೆ ಸಾಕಷ್ಟು ಸ್ವಾರಸ್ಯಕರವಾದ ಕತೆಗಳಿವೆ.

ಗಣೇಶನಿಗೆ ಇಬ್ಬರು ಹೆಂಡತಿಯರು ಏಕೆ?:
ಬಹುತೇಕ ಜನರು ಗಣೇಶ ಬ್ರಹ್ಮಚಾರಿ ಎಂದೇ ತಿಳಿದಿದ್ದಾರೆ. ಆದರೆ, ಗಣೇಶನಿಗೆ ಮದುವೆಯಾಗಿ ಇಬ್ಬರು ಹೆಂಡತಿಯರಿದ್ದರು ಎಂಬ ವಿಷಯ ತಿಳಿದವರು ಬಹಳ ಕಡಿಮೆ. ದಂತಕಥೆಯ ಪ್ರಕಾರ, ತಪಸ್ಸಿನಲ್ಲಿ ಮುಳುಗಿದ ಗಣೇಶನನ್ನು ನೋಡಿದ ತಕ್ಷಣ, ತುಳಸಿ ಜೀ ಅವರಿಂದ ಆಕರ್ಷಿತರಾದರು. ತುಳಸಿ ಗಣಪತಿಯ ಮನೆಯ ಪ್ರವೇಶದ್ವಾರದಲ್ಲಿ ಮದುವೆಯ ಪ್ರಸ್ತಾಪವನ್ನು ಮಾಡಿದಳು. ಆದರೆ ಗಣೇಶನು ಆಕೆಯನ್ನು ಮದುವೆಯಾಗಲು ನಿರಾಕರಿಸಿ, ತಾನು ಬ್ರಹ್ಮಚಾರಿ ಎಂದು ಹೇಳಿಕೊಂಡನು. ತುಳಸಿ ಗಣಪತಿಯ ಮಾತನ್ನು ಕೇಳಿ ಮನನೊಂದಳು. ಆ ಕೋಪದಿಂದ ಆಕೆ ನೀನು ಎರಡು ಮದುವೆಯಾಗುವಂತಾಗಲಿ ಎಂದು ಗಣಪನಿಗೆ ಶಾಪ ನೀಡಿದಳು.

ಇದನ್ನೂ ಓದಿ: Ganesh Chaturthi 2022: ಮತ್ತ ಬರಾಕತಾರ ಹುಬ್ಬಳ್ಳಿ ಕಾ ರಾಜ; ನೋಡ ಬರಿ 21 ಅಡಿ ಗಣಪತಿನ

ಗಣೇಶನಿಗೆ ಮದುವೆಯಾಗಿದ್ದು ಹೇಗೆ?:
ದಂತಕಥೆಗಳ ಪ್ರಕಾರ, ಗಣಪತಿಯನ್ನು ಮದುವೆಯಾಗಲು ಯಾರೂ ಸಿದ್ಧರಿರಲಿಲ್ಲ, ಅದಕ್ಕೆ ಕಾರಣ ಆತನ ದೇಹ. ಇದರಿಂದಾಗಿ ಗಣಪತಿಯು ದೇವತೆಗಳ ವಿವಾಹದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದನು. ಗಣಪತಿಯ ಈ ನಡವಳಿಕೆಯಿಂದಾಗಿ ದೇವತೆಗಳು ತಮ್ಮ ಸಮಸ್ಯೆಗಳನ್ನು ಬ್ರಹ್ಮನೊಂದಿಗೆ ಹೇಳಿಕೊಂಡರು.

ಬ್ರಹ್ಮನು ಆಗ ತನ್ನ ಇಬ್ಬರು ಪುತ್ರಿಯರಾದ ರಿದ್ಧಿ ಮತ್ತು ಸಿದ್ಧಿಯನ್ನು ಗಣೇಶನ ಬಳಿಗೆ ಶಿಕ್ಷಣ ಪಡೆಯಲು ಕಳುಹಿಸಿದನು. ರಿದ್ಧಿ ಸಂಪತ್ತು ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಸಿದ್ಧಿ ಆಧ್ಯಾತ್ಮಿಕ ಪರಾಕ್ರಮವನ್ನು ಸೂಚಿಸುತ್ತದೆ. ರಿದ್ಧಿ ಮತ್ತು ಸಿದ್ಧಿ ಇಬ್ಬರನ್ನೂ ಗಣೇಶನ ಎರಡೂ ಬದಿಗಳಲ್ಲಿ ಕುಳಿತಿರುವಂತೆ ಚಿತ್ರಿಸಲಾಗಿದೆ. ಗಣಪತಿಯ ಅನೇಕ ಫೋಟೋಗಳಲ್ಲಿ ಆತ ರಿದ್ಧಿ ಮತ್ತು ಸಿದ್ಧಿಯೊಂದಿಗೆ ಕುಳಿತಿರುವುದನ್ನು ನೋಡಬಹುದು.

ಇದನ್ನೂ ಓದಿ: ಹುಬ್ಬಳ್ಳಿಯ ಈದ್ಗಾ‌ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸ್ವಾಗತ

ಯಾರದೋ ಮದುವೆಯ ಮಾಹಿತಿಯು ಗಣೇಶನ ಮುಂದೆ ಬಂದಾಗ, ರಿದ್ಧಿ ಮತ್ತು ಸಿದ್ಧಿ ಆತನ ಗಮನವನ್ನು ಬೇರೆಡೆಗೆ ಸೆಳೆಯುತ್ತಾರೆ. ಆಗ ಎಲ್ಲಾ ಮದುವೆಗಳು ಯಾವುದೇ ಅಡೆತಡೆಯಿಲ್ಲದೆ ಮುಗಿಯುತ್ತವೆ. ಆದರೆ ಈ ವಿಷಯ ತಿಳಿದ ಗಣಪತಿಯು ರಿದ್ಧಿ ಮತ್ತು ಸಿದ್ಧಿಯ ಮೇಲೆ ಕೋಪಗೊಂಡು ಅವರನ್ನು ಶಪಿಸಲು ಪ್ರಾರಂಭಿಸುತ್ತಾನೆ.

ಆಗ ಬ್ರಹ್ಮ ದೇವನು ಗಣಪತಿಯ ಮುಂದೆ ರಿದ್ಧಿ-ಸಿದ್ಧಿಯನ್ನು ಮದುವೆಯಾಗುವ ಪ್ರಸ್ತಾಪವನ್ನು ಮಾಡಿದನು. ಅದಕ್ಕೆ ಗಣೇಶ ಒಪ್ಪಿದನು. ಈ ರೀತಿಯಾಗಿ ಗಣಪತಿಗೆ ಇಬ್ಬರು ಹೆಂಡತಿಯರಾದರು. ಗಣಪತಿಗೆ ರಿದ್ಧಿ-ಸಿದ್ಧಿಯಿಂದ ಇಬ್ಬರು ಮಕ್ಕಳು ಕೂಡ ಜನಿಸಿದರು. ಅವರಿಗೆ ಶುಭ್ ಮತ್ತು ಲಾಭ್ ಎಂದು ಹೆಸರಿಡಲಾಯಿತು.

(ಇದು ಗಣೇಶನ ಬಗ್ಗೆ ಸಾರ್ವಜನಿಕವಾಗಿ ಚಾಲ್ತಿಯಲ್ಲಿರುವ ಕತೆಗಳಲ್ಲಿ ಒಂದಾಗಿದ್ದು, ಇದೇ ಸತ್ಯ ಎಂದು ಟಿವಿ9 ಪ್ರತಿಪಾದಿಸುವುದಿಲ್ಲ) 

ಇನ್ನಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:50 am, Tue, 30 August 22