AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ganesh Chaturthi 2025: ಗಣೇಶನ ಮೂರ್ತಿಯ ಪ್ರತಿಯೊಂದು ಭಂಗಿಯ ಅರ್ಥವನ್ನು ಇಲ್ಲಿ ತಿಳಿದುಕೊಳ್ಳಿ

ಗಣೇಶ ಚತುರ್ಥಿಯಲ್ಲಿ ವಿವಿಧ ಭಂಗಿಗಳಲ್ಲಿ ಗಣೇಶನನ್ನು ಪೂಜಿಸಲಾಗುತ್ತದೆ. ಕುಳಿತ ಗಣೇಶ ಶಾಂತಿಯನ್ನು, ನಿಂತ ಗಣೇಶ ಪ್ರಗತಿಯನ್ನು, ಮಲಗಿರುವ ಗಣೇಶ ವಿಶ್ರಾಂತಿಯನ್ನು ಸೂಚಿಸುತ್ತದೆ. ನೃತ್ಯ ಗಣೇಶ ಸಂತೋಷವನ್ನು, ಬಾಲ ಗಣೇಶ ಶುದ್ಧತೆಯನ್ನು, ಇಲಿಯ ಮೇಲೆ ಕುಳಿತ ಗಣೇಶ ನಿಯಂತ್ರಣವನ್ನು ಸೂಚಿಸುತ್ತದೆ. ಸೊಂಡಿಲಿನ ದಿಕ್ಕು ಮತ್ತು ಮುದ್ರೆಗಳು ಕೂಡ ವಿಶೇಷ ಅರ್ಥಗಳನ್ನು ಹೊಂದಿವೆ.

Ganesh Chaturthi 2025: ಗಣೇಶನ ಮೂರ್ತಿಯ ಪ್ರತಿಯೊಂದು ಭಂಗಿಯ ಅರ್ಥವನ್ನು ಇಲ್ಲಿ ತಿಳಿದುಕೊಳ್ಳಿ
ಗಣೇಶ ಚತುರ್ಥಿ
ಅಕ್ಷತಾ ವರ್ಕಾಡಿ
|

Updated on:Aug 27, 2025 | 12:28 PM

Share

ಪ್ರತಿ ವರ್ಷ ದೇಶದಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಬಹಳ ಉತ್ಸಾಹ ಮತ್ತು ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಬಾರಿ ಗಣೇಶ ಚತುರ್ಥಿ ಬುಧವಾರ, ಆಗಸ್ಟ್ 27 ಅಂದರೆ ಇಂದಿನಿಂದ ಪ್ರಾರಂಭವಾಗುತ್ತಿದೆ. ಕೆಲವೊಂದು ಜಾಗದಲ್ಲಿ ಒಂದುದಿನ, ಮೂರು ದಿನ ಅಥವಾ 10 ದಿನಗಳ ಕಾಲ ಅದ್ಧೂರಿಯಾಗಿ ನಡೆಯುತ್ತದೆ. ಗಣೇಶನನ್ನು ವಿಘ್ನಹರ್ತ ಮತ್ತು ಮಂಗಳಕರ್ತ ಎಂದು ಕರೆಯಲಾಗುತ್ತದೆ. ಗಣೇಶನ ವಿಗ್ರಹಗಳಲ್ಲಿ ಕಂಡುಬರುವ ಪ್ರತಿಯೊಂದು ಭಂಗಿಯು ವಿಭಿನ್ನ ಅರ್ಥವನ್ನು ಹೊಂದಿದೆ, ಜೀವನದ ಆಳವಾದ ಸಂದೇಶಗಳನ್ನು ನೀಡುತ್ತದೆ. ಗಣೇಶನ ಕೆಲವು ಪ್ರಮುಖ ಭಂಗಿಗಳು ಮತ್ತು ಅವುಗಳ ಅರ್ಥವನ್ನು ಇಲ್ಲಿ ತಿಳಿದುಕೊಳ್ಳಿ.

ಕುಳಿತ ಗಣೇಶ (ಧ್ಯಾನ ಮತ್ತು ನಿಶ್ಚಲತೆ):

ಕುಳಿತಿರುವ ಗಣೇಶ ಎಂದರೆ ಮನಸ್ಸು ಮತ್ತು ಜೀವನದಲ್ಲಿ ಸ್ಥಿರತೆ ಎಂದರ್ಥ. ಕುಳಿತಿರುವ ಗಣಪತಿಯು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುವುದರಿಂದ ಇದನ್ನು “ಲಕ್ಷ್ಮಿ ಗಣೇಶ” ಎಂದೂ ಕರೆಯುತ್ತಾರೆ. ಗಣೇಶನ ಈ ಭಂಗಿಯು ಮನೆಯಲ್ಲಿ ಇಡಲು ಅತ್ಯಂತ ಮಂಗಳಕರವಾಗಿದೆ.

ನಿಂತ ಗಣೇಶ (ಪ್ರಗತಿ ಮತ್ತು ಸಾಧನೆ):

ನಿಂತಿರುವ ಗಣೇಶನು ಉತ್ಸಾಹ ಮತ್ತು ಪ್ರಗತಿಯ ಸಂಕೇತ. ಗಣೇಶನ ಈ ಭಂಗಿಯು ವ್ಯವಹಾರ ಮತ್ತು ಹೊಸ ಕೆಲಸವನ್ನು ಪ್ರಾರಂಭಿಸಲು ಶುಭವೆಂದು ಪರಿಗಣಿಸಲಾಗಿದೆ. ಈ ಭಂಗಿಯಲ್ಲಿರುವ ಗಣೇಶನ ಚಿತ್ರವನ್ನು ಕಚೇರಿಯಲ್ಲಿ ಇಡಬೇಕು.

ಮಲಗಿರುವ ಗಣೇಶ (ವಿಶ್ರಾಂತಿ ಮತ್ತು ತೃಪ್ತಿ):

ಗಣೇಶನ ಮಲಗಿರುವ ಭಂಗಿಯು ಜೀವನದಲ್ಲಿ ತೃಪ್ತಿ ಮತ್ತು ಮಾನಸಿಕ ಶಾಂತಿಯ ಸಂದೇಶವನ್ನು ನೀಡುತ್ತದೆ. ಕಠಿಣ ಪರಿಶ್ರಮದ ನಂತರ ವಿಶ್ರಾಂತಿಯೂ ಅಷ್ಟೇ ಮುಖ್ಯ ಎಂದು ಈ ಭಂಗಿಯು ಕಲಿಸುತ್ತದೆ.

ನೃತ್ಯ ಗಣೇಶ (ಸಂತೋಷ ಮತ್ತು ಶಕ್ತಿ):

ನಟರಾಜ ರೂಪದಲ್ಲಿ ನೃತ್ಯ ಮಾಡುವ ಗಣೇಶನು ಸಂತೋಷ ಮತ್ತು ಸಕಾರಾತ್ಮಕ ಶಕ್ತಿಯ ಸಂಕೇತವಾಗಿದೆ. ಈ ರೂಪವು ಜೀವನದಲ್ಲಿ ಸಂತೋಷ ಮತ್ತು ಆಚರಣೆಯ ಮಹತ್ವವನ್ನು ಸೂಚಿಸುತ್ತದೆ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಈ ಭಂಗಿಯಲ್ಲಿ ಗಣೇಶನ ಚಿತ್ರವನ್ನು ಹಾಕಬಹುದು.

ಬಾಲ ಗಣೇಶ (ಶುದ್ಧತೆ ಮತ್ತು ಮುಗ್ಧತೆ):

ಬಾಲರೂಪದಲ್ಲಿರುವ ಗಣಪತಿಯು ಮುಗ್ಧತೆ, ಸರಳತೆ ಮತ್ತು ಶುದ್ಧ ಭಕ್ತಿಯ ಸಂಕೇತ. ಮಕ್ಕಳು ಈ ರೂಪದೊಂದಿಗೆ ಹೆಚ್ಚು ಸಂಪರ್ಕ ಹೊಂದಿದ್ದಾರೆಂದು ಭಾವಿಸುತ್ತಾರೆ. ಈ ಭಂಗಿಯಲ್ಲಿರುವ ಗಣೇಶನ ಚಿತ್ರವನ್ನು ಮನೆಯಲ್ಲಿ ಮಕ್ಕಳ ಕೋಣೆಯಲ್ಲಿ ಇಡಬೇಕು.

ಇಲಿಯ ಮೇಲೆ ಕುಳಿತ ಗಣೇಶ (ವಿನಮ್ರತೆ ಮತ್ತು ನಿಯಂತ್ರಣ):

ಗಣಪತಿಯ ವಾಹನ ಇಲಿ. ಗಣೇಶ ಇಲಿಯ ಮೇಲೆ ಸವಾರಿ ಮಾಡುವ ಭಂಗಿಯು ದೊಡ್ಡವರು ಅಥವಾ ಸಣ್ಣವರು ಎಲ್ಲರೂ ಮುಖ್ಯ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ, ಈ ಭಂಗಿಯು ಆಸೆಗಳ ಮೇಲಿನ ನಿಯಂತ್ರಣದ ಸಂಕೇತವಾಗಿದೆ.

ಬಲಭಾಗದಲ್ಲಿ ಸೊಂಡಿಲು ಹೊಂದಿರುವ ಗಣೇಶ:

ಬಲ ಸೊಂಡಿಲು ಹೊಂದಿರುವ ಗಣೇಶನನ್ನು “ಸಿದ್ಧಿ ವಿನಾಯಕ” ಎಂದು ಕರೆಯಲಾಗುತ್ತದೆ. ಈ ರೂಪವನ್ನು ಬಹಳ ಜಾಗೃತ ಎಂದು ಪರಿಗಣಿಸಲಾಗುತ್ತದೆ ಮತ್ತು ಕಟ್ಟುನಿಟ್ಟಾದ ನಿಯಮಗಳೊಂದಿಗೆ ಪೂಜಿಸಬೇಕು. ಇದು ಯಶಸ್ಸು ಮತ್ತು ಕೆಲಸದ ಸಾಧನೆಯ ಸಂಕೇತವಾಗಿದೆ.

ಇದನ್ನೂ ಓದಿ: ಗಣೇಶನನ್ನು ಪೂಜಿಸುವಾಗ ಈ ಶಕ್ತಿಶಾಲಿ ಮಂತ್ರಗಳನ್ನು ಪಠಿಸಿ

ಎಡಭಾಗದಲ್ಲಿ ಸೊಂಡಿಲು ಹೊಂದಿರುವ ಗಣೇಶ:

ಮನೆಯಲ್ಲಿ ಪ್ರತಿಷ್ಠಾಪಿಸಲು ಎಡಮುರಿ ಗಣೇಶ ಅತ್ಯಂತ ಸಾಮಾನ್ಯ ಮತ್ತು ಸೂಕ್ತವಾದ ರೂಪವಾಗಿದೆ. ಎಡಗಡೆಗೆ ಸೊಂಡಿಲು ಇರುವ ಗಣೇಶನ ಸೌಮ್ಯತೆ, ಶಾಂತಿ, ಸಂತೋಷ ಮತ್ತು ಸಮೃದ್ಧಿಯನ್ನು ಆಶೀರ್ವದಿಸುತ್ತಾನೆ ಎಂಬ ನಂಬಿಕೆಯಿದೆ.

ಜ್ಞಾನ ಮುದ್ರೆ (ಬುದ್ಧಿವಂತಿಕೆ ಮತ್ತು ವಿವೇಚನೆ):

ಗಣೇಶನ ಹೆಬ್ಬೆರಳು ಮತ್ತು ತೋರುಬೆರಳನ್ನು ಸೇರಿಸಿ ಮಾಡಿದ ಮುದ್ರೆಯನ್ನು ಧ್ಯಾನ, ಸಮತೋಲನ ಮತ್ತು ವಿವೇಚನೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:27 pm, Wed, 27 August 25

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!