Sign In

By signing in or creating an account, you agree with Associated Broadcasting Company's Terms & Conditions and Privacy Policy.

Gupta Navratri 2025: ಗುಪ್ತ ನವರಾತ್ರಿಯ ಮೂರನೇ ದಿನ ತ್ರಿಪುರ ಸುಂದರಿ ದೇವಿಯ ಪೂಜೆ ಮತ್ತು ಮಹತ್ವ

ಗುಪ್ತ ನವರಾತ್ರಿಯ ಮೂರನೇ ದಿನ ತ್ರಿಪುರ ಸುಂದರಿ ದೇವಿಯ ಪೂಜೆಗೆ ಮಹತ್ವ ನೀಡಲಾಗಿದೆ. ಬಿಳಿ ಬಟ್ಟೆ ಧರಿಸಿ, ಗಂಗಾಜಲದಿಂದ ಪವಿತ್ರೀಕರಿಸಿ, ಪೂಜೆಯನ್ನು ನೆರವೇರಿಸುವುದು ಮುಖ್ಯ. ಕುಂಕುಮ, ಅಕ್ಷತೆ, ಹೂವು, ಹಣ್ಣು ಮತ್ತು ಸಿಹಿ ತಿಂಡಿಗಳನ್ನು ಅರ್ಪಿಸಿ, 108 ಮಂತ್ರಗಳನ್ನು ಜಪಿಸಿ. ತ್ರಿಪುರ ಸುಂದರಿಯ ಆಶೀರ್ವಾದದಿಂದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ.

Gupta Navratri 2025: ಗುಪ್ತ ನವರಾತ್ರಿಯ ಮೂರನೇ ದಿನ ತ್ರಿಪುರ ಸುಂದರಿ ದೇವಿಯ ಪೂಜೆ ಮತ್ತು ಮಹತ್ವ
Tripura Sundari Puja
Follow us
ಅಕ್ಷತಾ ವರ್ಕಾಡಿ
|

Updated on: Feb 01, 2025 | 8:17 AM

ಗುಪ್ತ ನವರಾತ್ರಿ ವರ್ಷಕ್ಕೆ ಎರಡು ಬಾರಿ ಬರುತ್ತದೆ. ಒಂದು ಮಾಘದ ಗುಪ್ತ ನವರಾತ್ರಿ ಮತ್ತು ಇನ್ನೊಂದು ಆಷಾಢ ಮಾಸದ ಗುಪ್ತ ನವರಾತ್ರಿ. ಮಾಘ ಮಾಸದ ಗುಪ್ತ ನವರಾತ್ರಿಯು ಜನವರಿ 30 ರಿಂದ ಪ್ರಾರಂಭವಾಗಿದೆ. ಗುಪ್ತ ನವರಾತ್ರಿಯ ಸಮಯದಲ್ಲಿ ಕೆಲವು ವಿಶೇಷ ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಗುಪ್ತ ನವರಾತ್ರಿಯ ಮೂರನೇ ದಿನವಾದ ಇಂದು ತ್ರಿಪುರ ಸುಂದರಿ ದೇವಿಯ ಪೂಜೆ ಮತ್ತು ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ.

ನವರಾತ್ರಿಯ ಮೂರನೇ ದಿನವನ್ನು ತಾಯಿ ತ್ರಿಪುರ ಸುಂದರಿಗೆ ಸಮರ್ಪಿಸಲಾಗುತ್ತದೆ. ಈ ದಿನದಂದು ವಿಧಿವಿಧಾನಗಳ ಪ್ರಕಾರ ಪೂಜೆ ಮತ್ತು ಉಪವಾಸವನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ತಾಯಿ ತ್ರಿಪುರ ಸುಂದರಿಯ ಆಶೀರ್ವಾದವನ್ನು ನೀವು ಪಡೆಯುತ್ತೀರಿ ಮತ್ತು ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ತ್ರಿಪುರ ಸುಂದರಿ ದೇವಿಯ ಪೂಜಾ ವಿಧಾನ:

  • ಗುಪ್ತ ನವರಾತ್ರಿಯ ಮೂರನೇ ದಿನದಂದು ತ್ರಿಪುರ ಸುಂದರಿ ದೇವಿಯನ್ನು ಪೂಜಿಸಲು, ಬೆಳಿಗ್ಗೆ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಮತ್ತು ಬಿಳಿ ಬಟ್ಟೆಗಳನ್ನು ಧರಿಸಿ.
  • ಇದರ ಬಳಿಕ ದೇವರನ್ನು ಪ್ರತಿಷ್ಠಾಪಿಸುವ ಜಾಗದಲ್ಲಿ ಗಂಗಾಜಲವನ್ನು ಸಿಂಪಡಿಸಿ ಮತ್ತು ಉತ್ತರಕ್ಕೆ ಮುಖ ಮಾಡಿ ಕುಳಿತುಕೊಳ್ಳಿ.
  • ಬಳಿಕ ಬಿಳಿ ಬಣ್ಣದ ಬಟ್ಟೆಯನ್ನು ಹರಡಿ ಮತ್ತು ಮಾ ತ್ರಿಪುರ ಸುಂದರಿಯ ಚಿತ್ರ ಅಥವಾ ವಿಗ್ರಹವನ್ನು ಸ್ಥಾಪಿಸಿ.
  • ಇದಾದ ನಂತರ ಮಾ ತ್ರಿಪುರ ಸುಂದರಿಗೆ ಕುಂಕುಮ ಹಚ್ಚಿ ಅಕ್ಷತೆ, ಹಣ್ಣು, ಹೂವುಗಳನ್ನು ಅರ್ಪಿಸಿ.
  • ಇದರ ನಂತರ, ತಾಯಿಗೆ ಸಿಹಿತಿಂಡಿ ಅಥವಾ ಹಾಲಿನಿಂದ ಮಾಡಿದ ಖೀರ್ ಅನ್ನು ಅರ್ಪಿಸಿ ಮತ್ತು ಮಾ ತ್ರಿಪುರ ಸುಂದರಿಯನ್ನು ಪೂಜಿಸಿ.
  • ಓಂ ಐಂ ಹ್ರೀಂ ಶ್ರೀ ತ್ರಿಪುರ ಸುಂದರಿಯೈ ನಮಃ ಮುಂತಾದ 108 ಮಂತ್ರಗಳನ್ನು ಜಪಿಸಿ ಮತ್ತು ಕಥೆಯನ್ನು ಓದಿದ ನಂತರ ಆರತಿ ಮಾಡಿ. ಪೂಜೆ ಮುಗಿದ ಪ್ರಸಾದ ವಿತರಿಸಿ.

ಇದನ್ನೂ ಓದಿ: ಮನೆಯ ಈ ದಿಕ್ಕಿನಲ್ಲಿ ತಾಮ್ರದ ಸೂರ್ಯ ಫಲಕ ಇಟ್ಟರೆ ಹಣಕ್ಕೆಂದೂ ಕೊರತೆಯಾಗದು!

ತಾಯಿ ತ್ರಿಪುರ ಸುಂದರಿಯ ಆರಾಧನೆಯ ಮಹತ್ವ:

ತಾಯಿ ತ್ರಿಪುರ ಸುಂದರಿಯನ್ನು ಹತ್ತು ಮಹಾವಿದ್ಯೆಗಳಲ್ಲಿ ಮೂರನೆಯ ವಿದ್ಯಾ ಎಂದು ಪರಿಗಣಿಸಲಾಗಿದೆ. ತಾಯಿ ತ್ರಿಪುರ ಸುಂದರಿ ಮೂರು ಲೋಕಗಳಲ್ಲಿ ಅತ್ಯಂತ ಸುಂದರಿ. ಧರ್ಮಗ್ರಂಥಗಳ ಪ್ರಕಾರ, ತಾಯಿ ಪಾರ್ವತಿಯನ್ನು ಪ್ರತಿನಿಧಿಸುವ ದೇವತೆ ಎಂದು ಪರಿಗಣಿಸಲಾಗಿದೆ. ತ್ರಿಪುರ ಸುಂದರಿ ಎಲ್ಲಾ ಕಾರ್ಯಗಳ ತ್ವರಿತ ಫಲಿತಾಂಶಗಳನ್ನು ಒದಗಿಸುವ ದೇವತೆ. ತ್ರಿಪುರ ಸುಂದರಿ ಹದಿನಾರು ಕಲೆಗಳಿಂದ ಆಶೀರ್ವದಿಸಲ್ಪಟ್ಟಿದ್ದಾಳೆ ಮತ್ತು ಅವಳನ್ನು ಆರಾಧಿಸುವುದರಿಂದ ಎಲ್ಲಾ ಕಾರ್ಯಗಳ ತ್ವರಿತ ಫಲಿತಾಂಶವನ್ನು ನೀಡುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ