AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Hanuman Chalisa: ದಾಖಲೆ ಬರೆದ ಹನುಮಾನ್ ಚಾಲೀಸಾ; ಯೂಟ್ಯೂಬ್‌ನಲ್ಲಿ ಬರೋಬ್ಬರೀ 500 ಕೋಟಿ ವೀಕ್ಷಣೆ

ಹನುಮಂತನ ಭಕ್ತಿಯ ಪ್ರತೀಕವಾದ ಹನುಮಾನ್ ಚಾಲೀಸಾ, ಯೂಟ್ಯೂಬ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಟಿ-ಸೀರೀಸ್‌ನಲ್ಲಿ 14 ವರ್ಷಗಳ ಹಿಂದೆ ಬಿಡುಗಡೆಗೊಂಡ 'ಶ್ರೀ ಹನುಮಾನ್ ಚಾಲೀಸಾ' ವಿಡಿಯೋ 5 ಬಿಲಿಯನ್ (500 ಕೋಟಿ) ವೀಕ್ಷಣೆಗಳನ್ನು ದಾಟಿ ಭಾರತದ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವಿಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಿವಂಗತ ಗುಲ್ಶನ್ ಕುಮಾರ್ ನಿರ್ಮಾಣದ, ಹರಿಹರನ್ ಗಾಯನದ ಈ ಭಕ್ತಿಗೀತೆ ಜಾಗತಿಕ ಮಟ್ಟದಲ್ಲಿ ಖ್ಯಾತಿ ಗಳಿಸುತ್ತಿರುವುದು ಹೆಮ್ಮೆಯ ಸಂಗತಿ.

Hanuman Chalisa: ದಾಖಲೆ ಬರೆದ ಹನುಮಾನ್ ಚಾಲೀಸಾ; ಯೂಟ್ಯೂಬ್‌ನಲ್ಲಿ ಬರೋಬ್ಬರೀ 500 ಕೋಟಿ ವೀಕ್ಷಣೆ
ಹನುಮಾನ್ ಚಾಲೀಸಾ
ಅಕ್ಷತಾ ವರ್ಕಾಡಿ
|

Updated on: Nov 27, 2025 | 1:00 PM

Share

ಕಲಿಯುಗದಲ್ಲೂ ಹನುಮಂತ ಜೀವಂತವಾಗಿದ್ದುಕೊಂಡು ಭಕ್ತರನ್ನು ಸಂಕಷ್ಟದಿಂದ ಪಾರು ಮಾಡುತ್ತಿದ್ದಾನೆ ಎನ್ನುವ ನಂಬಿಕೆಯಿಂದಲೇ ಈತನನ್ನು ‘ಕಲಿಯುಗದ ದೇವರು’ ಎಂದು ಕರೆಯಲಾಗುತ್ತದೆ. ಆದ್ದರಿಂದಲೇ ಪ್ರತಿನಿತ್ಯ ಲಕ್ಷಾಂತರ ಜನರು ಹನುಮಾನ್‌ ಚಾಲೀಸಾವನ್ನು ಪಠಿಸುತ್ತಾರೆ. 40 ಪದ್ಯಗಳ ಸ್ತೋತ್ರವಾದ ಹನುಮಂತ ಚಾಲೀಸಾ ಹನುಮನ ಜೀವನ, ಸಾಧನೆಗಳು, ಶಕ್ತಿ ಮತ್ತು ಬುದ್ಧಿವಂತಿಕೆಯ ಬಗ್ಗೆ ಎಲ್ಲವನ್ನೂ ಹೇಳುತ್ತದೆ. ತುಳಸಿದಾಸರು ಬರೆದಿರುವ ಈ ಮಂತ್ರ ಕೇವಲ ಭಾರತದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಪಸರಿಸಿದ್ದು, ಇದೀಗ ಯೂಟ್ಯೂಬ್‌ನಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸಿದೆ. ಟಿ-ಸೀರೀಸ್‌ ಯೂಟ್ಯೂಬ್‌ನಲ್ಲಿ ಚಾನೆಲ್​ನಲ್ಲಿ ಅಪ್ಲೋಡ್​​ ಮಾಡಲಾಗಿದ್ದ ಹನುಮಾನ್​ ಚಾಲೀಸಾ ಬರೋಬ್ಬರೀ 5 ಬಿಲಿಯನ್ ಅಂದರೆ 500 ಕೋಟಿ ವೀಕ್ಷಣೆ ಪಡೆದಿದೆ. ಈ ಮೂಲಕ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ ಮೊದಲ ವಿಡಿಯೋ ಎಂಬ ಖ್ಯಾತಿ ಗಳಿಸಿದೆ.

ಟಿ-ಸೀರೀಸ್‌ನ ದಿವಂಗತ ಗುಲ್ಶನ್ ಕುಮಾರ್ ಅವರನ್ನು ಒಳಗೊಂಡ ‘ಶ್ರೀ ಹನುಮಾನ್ ಚಾಲೀಸಾ’ ವಿಡಿಯೋವನ್ನು 2011ರ ಮೇ 10 ರಂದು ಬಿಡುಗಡೆ ಮಾಡಲಾಯಿತು ಮತ್ತು 14 ವರ್ಷಗಳಲ್ಲಿ 5,006,713,956 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿ ಮುನ್ನುಗ್ಗುತ್ತಿದೆ. ಹರಿಹರನ್ ಅವರ ಗಾಯನ ಮತ್ತು ಲಲಿತ್ ಸೇನ್ ಅವರ ಸಂಯೋಜನೆಯೊಂದಿಗೆ, ಇದು ಈಗ ಯೂಟ್ಯೂಬ್‌ನ ಜಾಗತಿಕವಾಗಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳಲ್ಲಿ ಒಂದಾಗಿದೆ. ಈ ವೀಡಿಯೊ ದಾಖಲೆ ನಿರ್ಮಿಸುತ್ತಿರುವುದು ಇದೇ ಮೊದಲಲ್ಲ. ಇದು 2023 ರಲ್ಲಿ 3 ಬಿಲಿಯನ್ ವೀಕ್ಷಣೆ ತಲುಪುವ ಮೂಲಕ ಇತಿಹಾಸ ನಿರ್ಮಿಸಿತ್ತು.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್​ ನ್ಯೂಸ್​; ಇಂದಿನಿಂದ ವೈಕುಂಠ ದ್ವಾರ ದರ್ಶನ ಟೋಕನ್ ನೋಂದಣಿ ಆರಂಭ

ಭಾರತವನ್ನು ಮೀರಿ, ವಿಶ್ವಾದ್ಯಂತ YouTube ನಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ವೀಡಿಯೊಗಳ ಪಟ್ಟಿಯಲ್ಲಿ 16.38 ಬಿಲಿಯನ್ ವೀಕ್ಷಣೆಗಳೊಂದಿಗೆ “ಬೇಬಿ ಶಾರ್ಕ್ ಡ್ಯಾನ್ಸ್”, 8.85 ಬಿಲಿಯನ್ ವೀಕ್ಷಣೆಗಳೊಂದಿಗೆ “ಡೆಸ್ಪಾಸಿಟೊ”, 8.16 ಬಿಲಿಯನ್ ವೀಕ್ಷಣೆಗಳೊಂದಿಗೆ “ವೀಲ್ಸ್ ಆನ್ ದಿ ಬಸ್”, 7.28 ಬಿಲಿಯನ್ ವೀಕ್ಷಣೆಗಳೊಂದಿಗೆ “ಬಾತ್ ಸಾಂಗ್” ಮತ್ತು 7.12 ಬಿಲಿಯನ್ ವೀಕ್ಷಣೆಗಳೊಂದಿಗೆ “ಜಾನಿ ಜಾನಿ ಯೆಸ್ ಪಾಪಾ” ಸೇರಿವೆ. ಇದರೊಂದಿಗೆ ಭಾರತದ ಭಕ್ತಿಗೀತೆಯೊಂದು ಜಾಗತಿಕ ಮಟ್ಟದಲ್ಲಿ ಖ್ಯಾತಿಗಳಿಸುತ್ತಿರುವುದು ಹೆಮ್ಮೆಯ ವಿಷಯ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ