Hanuman Flag Vastu: ಮನೆಯ ಮೇಲೆ ಹಾರಾಡಲಿ ಹನುಮದ್ ಧ್ವಜ; ಇಲ್ಲಿದೆ ಅಸಲಿ ವಾಸ್ತು ರಹಸ್ಯ!

ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಮನೆಯ ಮೇಲ್ಛಾವಣಿಯ ಮೇಲೆ ಹನುಮಂತನ ಧ್ವಜವನ್ನು ಹಾರಿಸುವುದು ಅತ್ಯಂತ ಶುಭಕರ. ಇದು ನಕಾರಾತ್ಮಕ ಶಕ್ತಿಗಳನ್ನು ದೂರವಿಟ್ಟು, ದುಷ್ಟ ಶಕ್ತಿಗಳಿಂದ ರಕ್ಷಣೆ ನೀಡುತ್ತದೆ. ಧನಾತ್ಮಕ ಶಕ್ತಿ, ಮಾನಸಿಕ ಶಾಂತಿ, ಮತ್ತು ಆರ್ಥಿಕ ಅಭಿವೃದ್ಧಿಗೆ ಸಹಕಾರಿ. ವಾಸ್ತು ಪ್ರಕಾರ, ಈ ಧ್ವಜವನ್ನು ನೈಋತ್ಯ ದಿಕ್ಕಿನಲ್ಲಿ ಸ್ಥಾಪಿಸುವುದು ಅತಿ ಮುಖ್ಯ. ಇದು ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ತರುತ್ತದೆ.

Hanuman Flag Vastu: ಮನೆಯ ಮೇಲೆ ಹಾರಾಡಲಿ ಹನುಮದ್ ಧ್ವಜ; ಇಲ್ಲಿದೆ ಅಸಲಿ ವಾಸ್ತು ರಹಸ್ಯ!
ಮನೆಯ ಮೇಲ್ಛಾವಣಿಯ ಮೇಲೆ ಹನುಮದ್ ಧ್ವಜ
Image Credit source: Pinterest

Updated on: May 24, 2026 | 10:22 AM

ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ವಸ್ತುವಿಗೂ ವಿಶೇಷ ಪ್ರಾಮುಖ್ಯತೆ ಇರುತ್ತದೆ. ಸನಾತನ ಧರ್ಮದಲ್ಲಿ ಆಂಜನೇಯ ಸ್ವಾಮಿಯನ್ನು ಸಕಲ ಭಯ ನಿವಾರಕ, ಸಂಕಟಮೋಚನ ಎಂದು ಆರಾಧಿಸಲಾಗುತ್ತದೆ. ಸಾಮಾನ್ಯವಾಗಿ ಅನೇಕರು ತಮ್ಮ ಮನೆಯ ಮೇಲ್ಛಾವಣಿಯ (ಟೆರೇಸ್) ಮೇಲೆ ಹನುಮಂತನ ಚಿತ್ರವಿರುವ ಕೆಂಪು ಅಥವಾ ಕೇಸರಿ ಧ್ವಜವನ್ನು ಹಾರಿಸುವುದನ್ನು ನೀವು ನೋಡಿರಬಹುದು. ಕೆಲವರು ಇದನ್ನು ಕೇವಲ ಒಂದು ಧಾರ್ಮಿಕ ಪದ್ಧತಿ ಎಂದು ಭಾವಿಸುತ್ತಾರೆ. ಆದರೆ ಇದರ ಹಿಂದೆ ಅತ್ಯಂತ ಶಕ್ತಿಶಾಲಿ ವಾಸ್ತು ನಿಯಮಗಳು ಮತ್ತು ಧನಾತ್ಮಕ ಶಕ್ತಿ ಅಡಗಿದೆ ಎಂದು ತಜ್ಞರು ಹೇಳುತ್ತಾರೆ.

ಮನೆಯ ಮೇಲೆ ಹನುಮದ್ ಧ್ವಜವನ್ನು ಸ್ಥಾಪಿಸುವುದರಿಂದ ಸಿಗುವ ಲಾಭಗಳು ಮತ್ತು ವಾಸ್ತು ನಿಯಮಗಳು ಇಲ್ಲಿವೆ:

ನಕಾರಾತ್ಮಕ ಶಕ್ತಿಗಳ ನಾಶ (ದುಷ್ಟ ಶಕ್ತಿಗಳಿಂದ ರಕ್ಷಣೆ):

ಯಾವ ಮನೆಯ ಮೇಲೆ ಹನುಮಂತನ ಧ್ವಜವು ಸದಾ ಹಾರಾಡುತ್ತಿರುತ್ತದೆಯೋ, ಅಲ್ಲಿ ನಕಾರಾತ್ಮಕ ಶಕ್ತಿಗಳು (Negative Energy) ಪ್ರವೇಶಿಸಲು ಸಾಧ್ಯವಿಲ್ಲ. ಗಾಳಿಯಲ್ಲಿ ಧ್ವಜವು ಹಾರಾಡುವಾಗ ಉಂಟಾಗುವ ಕಂಪನಗಳು ಮನೆಯ ಸುತ್ತಮುತ್ತಲಿರುವ ಕೆಟ್ಟ ದೃಷ್ಟಿ, ಮಾಟ-ಮಂತ್ರದಂತಹ ಕೆಟ್ಟ ಪ್ರಭಾವಗಳು ಮತ್ತು ದುಷ್ಟ ಶಕ್ತಿಗಳನ್ನು ಸಂಪೂರ್ಣವಾಗಿ ದೂರವಿಡುತ್ತದೆ ಎಂದು ನಂಬಲಾಗಿದೆ.

ಧನಾತ್ಮಕ ಶಕ್ತಿಯ ವೃದ್ಧಿ ಮತ್ತು ಮಾನಸಿಕ ಶಾಂತಿ:

ಮನೆಯ ಮೇಲಿರುವ ಧ್ವಜವು ಸದಾ ಧನಾತ್ಮಕ ಶಕ್ತಿಯನ್ನು (Positive Energy) ಆಕರ್ಷಿಸುತ್ತದೆ. ಇದು ಮನೆಯಲ್ಲಿ ವಾಸಿಸುವ ಸದಸ್ಯರಿಗೆ ನೆಮ್ಮದಿ, ಧೈರ್ಯ ಮತ್ತು ಮಾನಸಿಕ ಶಾಂತಿಯನ್ನು ನೀಡುತ್ತದೆ. ಕೌಟುಂಬಿಕ ಕಲಹಗಳು ದೂರವಾಗಿ, ಶಾಂತಿ-ಸಹಬಾಳ್ವೆ ನೆಲೆಸುತ್ತದೆ.

ಆರ್ಥಿಕ ಅಡಚಣೆಗಳ ನಿವಾರಣೆ:

ಮನೆಯ ಆರ್ಥಿಕ ಪರಿಸ್ಥಿತಿಯಲ್ಲಿ ಪದೇ ಪದೇ ಏರುಪೇರಾಗುತ್ತಿದ್ದರೆ ಅಥವಾ ಸಾಲದ ಬಾಧೆ ಕಾಡುತ್ತಿದ್ದರೆ ಹನುಮದ್ ಧ್ವಜವನ್ನು ಹಾರಿಸುವುದು ಒಳ್ಳೆಯದು. ಇದು ವ್ಯಾಪಾರ-ಉದ್ಯೋಗದಲ್ಲಿ ಎದುರಾಗುವ ಅಡೆತಡೆಗಳನ್ನು ನಿವಾರಿಸಿ, ಸಂಪತ್ತು ಮತ್ತು ಹೊಸ ಪ್ರಗತಿಯ ಅವಕಾಶಗಳು ಹುಡುಕಿಕೊಂಡು ಬರುವಂತೆ ಮಾಡುತ್ತದೆ.

ಇದನ್ನೂ ಓದಿ: ಜೂ.5 ಪಂಚಕ ಯೋಗ; ಈ 4 ರಾಶಿಯವರ ಅದೃಷ್ಟ ಬದಲಾಯಿಸಲಿದೆ ಗ್ರಹಗಳ ಅಪರೂಪದ ಸ್ಥಾನ!

ಧ್ವಜವನ್ನು ಸ್ಥಾಪಿಸಲು ವಾಸ್ತು ಪ್ರಕಾರ ಸರಿಯಾದ ದಿಕ್ಕು ಯಾವುದು?

ಮನೆಯ ಮೇಲೆ ಧ್ವಜವನ್ನು ಸ್ಥಾಪಿಸುವುದು ಎಷ್ಟು ಮುಖ್ಯವೋ, ಅದನ್ನು ಸರಿಯಾದ ದಿಕ್ಕಿನ ಆಯ್ಕೆ ಅಷ್ಟೇ ಮುಖ್ಯ. ತಪ್ಪು ದಿಕ್ಕಿನಲ್ಲಿ ಧ್ವಜವನ್ನು ಹಾಕುವುದರಿಂದ ಧನಾತ್ಮಕ ಫಲಿತಾಂಶಗಳ ಬದಲಿಗೆ ತೊಂದರೆಗಳು ಎದುರಾಗಬಹುದು.

ನೈಋತ್ಯ ಮೂಲೆ (South-West Corner):

ವಾಸ್ತು ಶಾಸ್ತ್ರದ ಪ್ರಕಾರ, ಹನುಮದ್ ಧ್ವಜವನ್ನು ಯಾವಾಗಲೂ ಮನೆಯ ನೈಋತ್ಯ (ದಕ್ಷಿಣ-ಪಶ್ಚಿಮ) ಮೂಲೆಯಲ್ಲಿ ಸ್ಥಾಪಿಸಬೇಕು. ಈ ದಿಕ್ಕು ಸ್ಥಿರತೆ ಮತ್ತು ರಕ್ಷಣೆಯನ್ನು ಸೂಚಿಸುತ್ತದೆ. ಈ ಮೂಲೆಯಲ್ಲಿ ಧ್ವಜವನ್ನು ಸ್ಥಾಪಿಸುವುದರಿಂದ ಮನೆಗೆ ಭದ್ರತೆ ದೊರೆಯುತ್ತದೆ ಮತ್ತು ರಾಹು-ಕೇತುಗಳ ದೋಷಗಳು ನಿವಾರಣೆಯಾಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us