AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹನುಮಾನ್ ಜಯಂತಿ 2023: ಇತಿಹಾಸ, ಮಹತ್ವ, ಹಬ್ಬದ ಆಚರಣೆ ಬಗ್ಗೆ ತಿಳಿಬೇಕಾ? ಇಲ್ಲಿದೆ ಮಾಹಿತಿ

ಹನುಮ ಜಯಂತಿಯನ್ನು ದೇಶದೆಲ್ಲೆಡೆ ಇಂದು (ಏಪ್ರಿಲ್ 6) ಆಚರಣೆ ಮಾಡಲಾಗುತ್ತದೆ. ಈ ಹಬ್ಬದ ಇತಿಹಾಸ, ಮಹತ್ವ, ಶುಭ ಮುಹೂರ್ತ, ಮಂತ್ರ ಮತ್ತು ಆಚರಣೆಯನ್ನು ತಿಳಿಯಲು ಇಲ್ಲಿದೆ ಮಾಹಿತಿ.

ಹನುಮಾನ್ ಜಯಂತಿ 2023: ಇತಿಹಾಸ, ಮಹತ್ವ, ಹಬ್ಬದ ಆಚರಣೆ ಬಗ್ಗೆ ತಿಳಿಬೇಕಾ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk|

Updated on:Apr 06, 2023 | 10:42 AM

Share

ಹಿಂದೂ ಧರ್ಮದಲ್ಲಿ ಹನುಮ ಜಯಂತಿಗೆ(Hanuman Jayanti) ಹೆಚ್ಚಿನ ಮಹತ್ವವಿದೆ. ಇದನ್ನು ಹನುಮಂತ ಜಯಂತಿ, ಹನುಮಾನ್ ಜನ್ಮೋತ್ಸವ, ಆಂಜನೇಯ ಜಯಂತಿ ಮತ್ತು ಬಜರಂಗಬಲಿ ಜಯಂತಿ ಎಂದೂ ಕರೆಯುತ್ತಾರೆ. ಹನುಮಾನ್ ಮಾತಾ ಅಂಜನಾ ಮತ್ತು ಕೇಸರಿಯ ಮಗ. ಅವನನ್ನು ವಾಯುದೇವನ (ಗಾಳಿ ದೇವರ) ಮಗ ಎಂದೂ ಕರೆಯಲಾಗಿದೆ. ಈ ದಿನದಂದು ಭಗವಾನ್ ಹನುಮಾನ್ ಭಕ್ತರು ಮಾರುತಿ ಜನ್ಮದಿನವನ್ನು ಬಹಳ ವಿಜೃಂಭಣೆಯಿಂದ ಆಚರಿಸುತ್ತಾರೆ. ದೇವಾಲಯಗಳಿಗೆ ಭೇಟಿ ನೀಡಿ ಪೂಜಿಸುತ್ತಾರೆ, ಪೂಜಾ ಸ್ಥಳಗಳನ್ನು ಅಲಂಕರಿಸುತ್ತಾರೆ, ಹೊಸ ಬಟ್ಟೆಗಳನ್ನು ಧರಿಸುತ್ತಾರೆ ಮತ್ತು ಉಪವಾಸ ಮಾಡುತ್ತಾರೆ. ಹಿಂದೂ ಕ್ಯಾಲೆಂಡರ್ ಪ್ರಕಾರ, ಹನುಮಾನ್ ಜಯಂತಿಯು ಚೈತ್ರ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯಂದು ಬರುತ್ತದೆ.

ಹನುಮ ಜಯಂತಿ 2023 ದಿನಾಂಕ

ದೃಕ್ ಪಂಚಾಂಗದ ಪ್ರಕಾರ, ಹನುಮಾನ್ ಜಯಂತಿ ಏಪ್ರಿಲ್ 6, ಗುರುವಾರ ಬರುತ್ತದೆ. ಆದರೆ, ಪೂರ್ಣಿಮಾ ತಿಥಿಯು ಏಪ್ರಿಲ್ 5 ರಂದು ಬೆಳಿಗ್ಗೆ 9:19 ಕ್ಕೆ ಪ್ರಾರಂಭವಾಗಿ ಏಪ್ರಿಲ್ 6 ರಂದು ಬೆಳಿಗ್ಗೆ 10:04 ಕ್ಕೆ ಕೊನೆಗೊಳ್ಳುತ್ತದೆ. ಹನುಮಾನ್ ಜಯಂತಿಯನ್ನು ಆಚರಿಸುವ ಭಕ್ತರು ಈ ಶುಭ ಮುಹೂರ್ತದ ಸಮಯವನ್ನು ಗಮನಿಸಬೇಕು. ಈ ಕೆಳಗೆ ಶುಭ ಮುಹೂರ್ತದ ಸಮಯ ನೀಡಲಾಗಿದ್ದು ಆ ಸಮಯ ಶುಭವಾಗಿದೆ.

  • ಬೆಳಿಗ್ಗೆ 6:06 ರಿಂದ 7:40 ರವರೆಗೆ, 10:49 ರಿಂದ 12:23 ರವರೆಗೆ
  • ಮಧ್ಯಾಹ್ನ 12:23 ರಿಂದ 3:32 ರವರೆಗೆ
  • ಸಂಜೆ 5:07 ರಿಂದ 8:07 ರವರೆಗೆ

ಹನುಮಾನ್ ಜಯಂತಿ 2023 ಮಹತ್ವ

ಹನುಮಾನ್ ಜಯಂತಿಯನ್ನು ಭಗವಾನ್ ರಾಮನ ಕಟ್ಟಾ ಭಕ್ತ ಮತ್ತು ರಾಮಾಯಣದ ಕೇಂದ್ರ ವ್ಯಕ್ತಿಗಳಲ್ಲಿ ಒಬ್ಬರಾದ ಭಗವಾನ್ ಹನುಮಂತನ ಜನ್ಮ ವಾರ್ಷಿಕೋತ್ಸವವಾಗಿ ಆಚರಿಸಲಾಗುತ್ತದೆ. ಆದ್ದರಿಂದ, ಭಗವಾನ್ ಹನುಮಂತನ ಜನ್ಮದ ಮೂಲವು ಭಗವಾನ್ ರಾಮನ ಯುಗಕ್ಕೆ ಸಂಬಂಧಿಸಿದೆ. ದೃಕ್ ಪಂಚಾಂಗದ ಪ್ರಕಾರ, ಮಂಗಳವಾರದ ಸೂರ್ಯೋದಯದ ನಂತರ ಚೈತ್ರ ಪೂರ್ಣಿಮೆಯ ಸಮಯದಲ್ಲಿ ಭಗವಾನ್ ಹನುಮಂತನು ಜನಿಸಿದನೆಂದು. ಚಿತ್ರ ನಕ್ಷತ್ರ ಮತ್ತು ಮೇಷ ಲಗ್ನದಲ್ಲಿ ಹುಟ್ಟಿದನೆಂದು ನಂಬಲಾಗಿದೆ.

ಇದನ್ನೂ ಓದಿ: End of Kali Yug: ಈ ಕೇದಾರನಾಥ ದೇಗುಲ ಅನೇಕ ಪವಾಡಗಳ ಆಲಯ, ನಾಲ್ಕು ಸ್ತಂಭಗಳಲ್ಲಿ ಆ ಕೊನೆಯ ಕಂಬ ಮುರಿದರೆ ಕಲಿಯುಗ ಅಂತ್ಯವಾಗಲಿದೆ!

ಭಗವಾನ್ ಹನುಮಂತನು ಮಹಾದೇವನ ಅವತಾರ ಮತ್ತು ಅಷ್ಟ ಸಿದ್ಧಿ ಮತ್ತು ನವ ನಿಧಿಯನ್ನು ಹೊಂದಿರುವವನು ಎಂದು ಹೇಳಲಾಗುತ್ತದೆ. ಅವನು ಶಾಶ್ವತವಾದ ಶಕ್ತಿ, ನಿಷ್ಠೆ ಮತ್ತು ಭಕ್ತಿಯನ್ನು ಒಲಿಸಿಕೊಂಡವನು. ಹನುಮಂತನಿಗೆ ಪ್ರಾರ್ಥನೆಯು ಒಬ್ಬರ ಜೀವನದಲ್ಲಿ ಸಾಮರಸ್ಯ, ಶಕ್ತಿ ಮತ್ತು ಯಶಸ್ಸನ್ನು ತರಲು ಸಹಾಯ ಮಾಡುತ್ತದೆ.

ಹನುಮಾನ್ ಜಯಂತಿ ಆಚರಣೆಗಳು

ಭಕ್ತರು ಹನುಮಾನ್ ಜಯಂತಿಯಂದು ದಿನವಿಡೀ ಉಪವಾಸ ಆಚರಿಸುತ್ತಾರೆ, ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ, ಹನುಮಂತನಿಗೆ ಸಿಂಧೂರ (ಕೆಂಪು, ಕೇಸರಿ ಸಿಂಧೂರ) ಅರ್ಪಿಸುತ್ತಾರೆ, ಸುಂದರಕಾಂಡ ಮಂತ್ರವನ್ನು ಓದುತ್ತಾರೆ ಮತ್ತು ಭಗವಾನ್ ಹನುಮಂತನನ್ನು ಪ್ರಾರ್ಥಿಸುತ್ತಾರೆ.

ಹನುಮಾನ್ ಜಯಂತಿ ಮಂತ್ರ

ಭಗವಾನ್ ಹನುಮಂತನ ಮೂಲ ಮಂತ್ರ

ಓಂ ಶ್ರೀ ಹನುಮತೇ ನಮಃ ಅಷ್ಟ ಸಿದ್ಧಿ ನವ್ ನಿಧಿ ಕೆ ದಾತಾ ಆಸ್ ವರ್ ದೀನ್ ಜಾನಕಿ ಮಾತಾ. ಹೆಚ್ಚುವರಿಯಾಗಿ, ಹನುಮಾನ್ ಚಾಲೀಸಾ, ಸುಂದರ್‌ಕಾಂಡ್ ಮತ್ತು ಬಜರಂಗ್ ಬಾನ್ ಹನುಮಂತನ ಸ್ತುತಿ ಹನುಮಂತನ ಆಶೀರ್ವಾದವನ್ನು ಪಡೆಯಲು ಅತ್ಯಂತ ಜನಪ್ರಿಯ ಸ್ತೋತ್ರಗಳಾಗಿವೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 9:12 am, Thu, 6 April 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ