ಗೃಹ ನಿರ್ಮಾಣದ ಮೊದಲು ಪಾಲಿಸಲೇಬೇಕಾದ ಏಳು ಸೂತ್ರಗಳು ಇಲ್ಲಿದೆ

ವಾಸ್ತು ಶಾಸ್ತ್ರದ ಪ್ರಕಾರ ಹೇಳಿದ ಗೃಹನಿರ್ಮಾಣ ಲಕ್ಷಣಗಳನ್ನು ಅನುಸರಿಸದೇ ಕಟ್ಟಿದ ಮನೆಗಳಲ್ಲಿ ವಾಸ ಮಾಡುವವರಿಗೆ ಅಶುಭಗಳೇ ಎದುರಾಗುತ್ತಿರುತ್ತವೆ. ಆದುದರಿಂದ ಮನೆಯ ನಿರ್ಮಾಣದ ಪೂರ್ವದಲ್ಲಿಯೇ ಎಲ್ಲಾ ವಿಧಾನಗಳನ್ನು ಪರಿಶೀಲಿಸಿಯೇ ಮನೆಯನ್ನು ನಿರ್ಮಿಸವಿದು ಉತ್ತಮ.

ಗೃಹ ನಿರ್ಮಾಣದ ಮೊದಲು ಪಾಲಿಸಲೇಬೇಕಾದ ಏಳು ಸೂತ್ರಗಳು ಇಲ್ಲಿದೆ
ಸಾಂದರ್ಭಿಕ ಚಿತ್ರ
Edited By:

Updated on: May 03, 2023 | 4:26 PM

ಮುಖ್ಯಾಂಶಗಳು

  • ಆ ಮನೆ ನಿರ್ಮಾಣದ ಸಡಗರ ಒತ್ತಡ ಜವಾಬ್ದಾರಿ ಅನುಭವಿಸಿದವರಿಗಷ್ಟೇ ಗೊತ್ತು ಅದರ ಮಧುರ ಬಾಂಧವ್ಯ. ಮನೆಯ -ಚಿತ್ರಣ ಗಾರೆಯ -ವಿನ್ಯಾಸ ಒಳ ಹೊರ ಹಾಸಿನ ವ್ಯವಸ್ಥೆ ಮನೆಯ ಬಣ್ಣ ಇದೇ ರೀತಿ ಇದರ ಕುರಿತಾದ ಹಲವಾರು ಅಂತರಂಗ ಬಹಿರಂಗದ ಒತ್ತಡಗಳನ್ನು ದಾಟಿ ಕೂಡಿಟ್ಟ ಎಲ್ಲಾ ಧನರಾಶಿಯನ್ನು ಧಾರೆಯೆರೆದು ಮನೆಯ ಪ್ರವೇಶದ ಸಂದರ್ಭದಲ್ಲಿ ಮನೆಯಾತ ಅನುಭವಿಸುವ ಸಂತೋಷ ಬಣ್ಣಿಸಲು ಸಾಧ್ಯವಿಲ್ಲ ಅಲ್ಲವೇ?
  • ವಾಸ್ತು ಶಾಸ್ತ್ರದ ಪ್ರಕಾರ ಹೇಳಿದ ಗೃಹನಿರ್ಮಾಣ ಲಕ್ಷಣಗಳನ್ನು ಅನುಸರಿಸದೇ ಕಟ್ಟಿದ ಮನೆಗಳಲ್ಲಿ ವಾಸ ಮಾಡುವವರಿಗೆ ಅಶುಭಗಳೇ ಎದುರಾಗುತ್ತಿರುತ್ತವೆ. ಆದುದರಿಂದ ಮನೆಯ ನಿರ್ಮಾಣದ ಪೂರ್ವದಲ್ಲಿಯೇ ಎಲ್ಲಾ ವಿಧಾನಗಳನ್ನು ಪರಿಶೀಲಿಸಿಯೇ ಮನೆಯನ್ನು ನಿರ್ಮಿಸವಿದು ಉತ್ತಮ.
  • ಇಷ್ಟೆಲ್ಲಾ ಮಾಡುವ ಅನುಭವಿಸುವ ನಾವು ಮನೆಯನ್ನು ಯಾಕೆ ನಿರ್ಮಿಸುತ್ತಿದ್ದೇವೆ ಎಂಬುದನ್ನು ಮರೆಯಬಾರದಲ್ಲವೇ? ಮನೆಯನ್ನು ಬಾಂಧವರೊಡಗೂಡಿ ಮಕ್ಕಳೊಂದಿಗೆ ನೆಮ್ಮದಿಯಿಂದ ವಾಸಮಾಡಬೇಕು ಎಂಬ ಕಾರಣಕ್ಕಾಗಿ ನಿರ್ಮಿಸಿರುತ್ತೇವೆ.

ಪ್ರತಿಯೊಬ್ಬ ವ್ಯಕ್ತಿಗೂ ತಲೆಯ ಮೇಲೊಂದು ಸೂರಿರಲೇಬೇಕು. ಅದು ಸ್ವಂತದ್ದಾಗಿರಬೇಕು ಎಂಬುದು ಪ್ರತೀ ವ್ಯಕ್ತಿಯ ಮನದಾಳದ ಅಭಿಲಾಷೆ. ಮನೆ ಕಟ್ಟಿ ನೋಡು ಎಂಬ ನುಡಿ ಮಾತಿನಂತೆ ಮನೆ ನಿರ್ಮಾಣ ಮಾಡಿಕೊಂಡು ಅದರಲ್ಲಿ ಸುಂದರ ಸಂಸಾರವನ್ನು ಅನುಭವಿಸಬೇಕು ಎನ್ನುವ ಆಸೆ ಯಾರಿಗಿರುವುದಿಲ್ಲ ಹೇಳಿ. ಆ ಮನೆ ನಿರ್ಮಾಣದ ಸಡಗರ ಒತ್ತಡ ಜವಾಬ್ದಾರಿ ಅನುಭವಿಸಿದವರಿಗಷ್ಟೇ ಗೊತ್ತು ಅದರ ಮಧುರ ಬಾಂಧವ್ಯ. ಮನೆಯ -ಚಿತ್ರಣ ಗಾರೆಯ -ವಿನ್ಯಾಸ ಒಳ ಹೊರ ಹಾಸಿನ ವ್ಯವಸ್ಥೆ ಮನೆಯ ಬಣ್ಣ ಇದೇ ರೀತಿ ಇದರ ಕುರಿತಾದ ಹಲವಾರು ಅಂತರಂಗ ಬಹಿರಂಗದ ಒತ್ತಡಗಳನ್ನು ದಾಟಿ ಕೂಡಿಟ್ಟ ಎಲ್ಲಾ ಧನರಾಶಿಯನ್ನು ಧಾರೆಯೆರೆದು ಮನೆಯ ಪ್ರವೇಶದ ಸಂದರ್ಭದಲ್ಲಿ ಮನೆಯಾತ ಅನುಭವಿಸುವ ಸಂತೋಷ ಬಣ್ಣಿಸಲು ಸಾಧ್ಯವಿಲ್ಲ ಅಲ್ಲವೇ?

ಇಷ್ಟೆಲ್ಲಾ ಮಾಡುವ ಅನುಭವಿಸುವ ನಾವು ಮನೆಯನ್ನು ಯಾಕೆ ನಿರ್ಮಿಸುತ್ತಿದ್ದೇವೆ ಎಂಬುದನ್ನು ಮರೆಯಬಾರದಲ್ಲವೇ? ಮನೆಯನ್ನು ಬಾಂಧವರೊಡಗೂಡಿ ಮಕ್ಕಳೊಂದಿಗೆ ನೆಮ್ಮದಿಯಿಂದ ವಾಸಮಾಡಬೇಕು ಎಂಬ ಕಾರಣಕ್ಕಾಗಿ ನಿರ್ಮಿಸಿರುತ್ತೇವೆ. ನಮ್ಮ ಮೂಲ ಉದ್ದೇಶವಾದ ನೆಮ್ಮದಿ ಎಂಬುದೇನಿದೆ ಅದರ ಪ್ರಾಪ್ತಿಗಾಗಿ ಕೇವಲ ಮನೆಯ ವಿನ್ಯಾಸ ಸುಂದರ ಮಾಡಿದರೆ ಸಾಲದು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆರೋಗ್ಯ ಭರಿತರಾಗಿ ನೆಮ್ಮದಿಯಿಂದ ಸುಖವಾಗಿ ಇರಬೇಕಾದರೆ ಈ ಏಳು ಸೂತ್ರಗಳನ್ನು ಅನುಸರಿಸಲೇ ಬೇಕು. ಅವುಗಳು ಹೇಗಿವೆ ನೋಡಿ –

ವಾಸ್ತು ಶಾಸ್ತ್ರದ ಪ್ರಕಾರ ಹೇಳಿದ ಗೃಹನಿರ್ಮಾಣ ಲಕ್ಷಣಗಳನ್ನು ಅನುಸರಿಸದೇ ಕಟ್ಟಿದ ಮನೆಗಳಲ್ಲಿ ವಾಸ ಮಾಡುವವರಿಗೆ ಅಶುಭಗಳೇ ಎದುರಾಗುತ್ತಿರುತ್ತವೆ. ಆದುದರಿಂದ ಮನೆಯ ನಿರ್ಮಾಣದ ಪೂರ್ವದಲ್ಲಿಯೇ ಎಲ್ಲಾ ವಿಧಾನಗಳನ್ನು ಪರಿಶೀಲಿಸಿಯೇ ಮನೆಯನ್ನು ನಿರ್ಮಿಸವಿದು ಉತ್ತಮ.

ಸೂತ್ರಗಳು

1.ಭೂ ಪ್ರರೀಕ್ಷೆ

ಭೂಮಿಯ ಪರೀಕ್ಷೆಯೆಂದರೆ ಮನೆ ನಿರ್ಮಿಸುವ ಜಾಗ ಸ್ಮಶಾಣ ಇತ್ಯಾದಿ ಅಮಂಗಲಕರವಾದ ವಾತಾವರಣದ್ದೇ ಅಥವಾ ಅದರ ಸಮೀದ್ದೇ ಎಂಬಿತ್ಯಾದಿ ಮತ್ತು ಮಣ್ಣಿನ ಬಣ್ಣ ನಮಗೆ ಅನುಕೂಲವಾಗಿದೆಯೇ ಎಂಬ ಚಿಂತನೆಯನ್ನು ಮಾಡಬೇಕು.

2. ದಿಕ್ ನಿರ್ಣಯ

ದಿಕ್ಕಿನ ನಿರ್ಣಯ ಅತ್ಯಂತ ಮುಖ್ಯವಾದ ಅಂಶ. ಇಲ್ಲಿ ಎಲ್ಲಾ ವ್ಯಕ್ತಿಗಳಿಗೂ ಒಂದೇ ದಿಕ್ಕು ಶುಭವಾಗುವುದಿಲ್ಲ. ಉದಾಹರಣೆಗೆ ದಕ್ಷಿಣ ದಿಕ್ಕು ಶುಭವಲ್ಲ ಎಂದು ಹಲವರು ಹೇಳುತ್ತಾರೆ. ಆದರೆ ಕೆಲವರಿಗೆ ದಕ್ಷಿಣ ದಿಕ್ಕು ಅನುಕೂಲವಾಗಿ ಪರಿಣಮಿಸುವುದೂ ಇದೆ. ಅದನ್ನು ಸರಿಯಾಗಿ ಬಲ್ಲವರ ಬಳಿ ವಿಮರ್ಶಿಸಿ ಮಾಡಬೇಕು.

3. ಶುಭವೀಥಿ ನಿರ್ಣಯ

ವೀಥಿ ಅಂದರೆ ಮಾರ್ಗ ಎಂದರ್ಥ. ಶುಭವೀಥಿ ಅಂದರೆ ಶುಭವಾದ ರಸ್ತೆ ಎಂದು ತಾತ್ಪರ್ಯ. ನಾವು ನಿರ್ಮಿಸುವ ಮನೆಯ ವಾತಾವರಣದಲ್ಲಿ ಅವಘಡ ಸಂಭವಿಸುವ ರಸ್ತೆ ಇರದಂತೆ ಗಮನಿಸಬೇಕು. ಉದಾಹರಣೆಗೆ ಮದ್ಯದ ಅಂಗಡಿ ಇತ್ಯಾದಿ ಇರುವಂತಹ ವಾತಾವರಣದಲ್ಲಿ ಮನೆ ಉತ್ತಮವಲ್ಲ.

ಇದನ್ನೂ ಓದಿ: Spiritual Practices Before Bed: ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ

4. ಸ್ಥಳದ ವಿಸ್ತೀರ್ಣ

ಇದು ಅಷ್ಟೊಂದು ಪ್ರಾಮುಖ್ಯವಲ್ಲ. ಆದರೂ ಮನೆಯ ಆಯ (ವಿಸ್ತೀರ್ಣ) ನಮಗೆ ಹೊಂದಾಣಿಕೆ ಆಗುವಂತಿರಬೇಕು.

5. ಅಂಗಳ

ಮನೆಯ ಸುತ್ತ ಸಣ್ಣ ಪ್ರಮಾಣದಲ್ಲಾದರೂ ಹೂ ತೋಟ ಇತ್ಯಾದಿ ಮಾಡುವಷ್ಟು ಸ್ಥಳವಿರಬೇಕು. ಪಟ್ಟಣಗಳಲ್ಲಿ ಇತ್ತೀಚೆಗೆ ಇದು ಕಷ್ಟಸಾಧ್ಯ. ಆದರೂ ಮನೆಯ ಸಮೀಪದಲ್ಲಿ ಉದ್ಯಾನ (ಪಾರ್ಕ್) ಇರುವಂತೆ ನೋಡಿಕೊಳ್ಳಿ.

6. ತುಳಸೀ ಕಟ್ಟೆ ವಿನ್ಯಾಸ ಮತ್ತು ಎತ್ತರ

ತುಳಸಿಯಷ್ಟೇ ಪ್ರಾಧಾನ್ಯತೆ ತುಳಸಿಯ ಕಟ್ಟೆಯ ವಿನ್ಯಾಸಕ್ಕೂ ಇದೆ. ಅದು ನಮಗೆ ಸರಿಹೊಂದುತ್ತದೆಯೇ ಎಂದು ಗಮಸಿಕೊಳ್ಳುವುದು ಉತ್ತಮ.

7. ಪ್ರಾಕಾರ ವಿನ್ಯಾಸ ಮತ್ತು ಆಂತರಿಕ ವಿನ್ಯಾಸ

ದೇವರಮನೆ ಶಯ್ಯಾಕೋಣೆ ಇತ್ಯಾದಿಗಳ ಕುರಿತಾಗಿ ಮತ್ತು ಸುತ್ತಳತೆಯ ಕುರಿತಾಗಿ ನಿಮ್ಮ ಕುಂಡಲಿಗೆ ಹೊಂದುವ ಕುರಿತು ಸರಿಯಾಗಿ ವಿಮರ್ಶಿಸಿ ವಿನ್ಯಾಸ ಮಾಡಿಕೊಳ್ಳಿ.

ನಾವು ಕಷ್ಟಪಟ್ಟು ದುಡಿದು ಕೂಡಿಟ್ಟ ಧನವನ್ನು ನೆಮ್ಮದಿಯ ಬದುಕಿಗಾಗಿ ಒಂದು ಸೂರಿಗಾಗಿ ಧಾರೆಯೆರೆಯುವಾಗ ಸುಲಭವಾದ ಕೆಲವು ಅಂಶಗಳನ್ನು ಅಳವಡಿಸಿಕೊಂಡಳ್ಳಿ ಜೀವನವಿಡೀ ಆನಂದದಿಂದ ಇರಬಹುದೆಂದಾದರೆ ಈ ಸೂತ್ರವನ್ನು ಅಳವಡಿಸಿಕೊಳ್ಳಬಹುದಲ್ಲವೇ?

ಸುಂದರ ಮನೆ ನೆಮ್ಮದಿಯ ಬಾಳು ನೀಡಲಿ. ನೆಮ್ಮದಿಯ ಬಾಳು ಮನೆ ತುಂಬಲಿ, ತುಂಬಿದ ಮನೆ ಸದಾ ಬೆಳಗುತಿರಲಿ,” ಬೆಳಗುವ ಮನೆಯಲ್ಲಿ ಆನಂದವಿದ್ದೇ ಇರುವುದು ಆನಂದವಿದ್ದಲ್ಲಿ ಆರೋಗ್ಯ ನಿಶ್ಚಯವಾಗಿರುವುದು ಅಲ್ಲವೇ?

ಡಾ.ಗೌರಿ ಕೇಶವಕಿರಣ

ಧಾರ್ಮಿಕ ಚಿಂತಕರು

Published On - 11:21 am, Fri, 7 April 23

ಅಕ್ಷಯ್​ ಪಲ್ಲಮಜಲು​​

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Loading...
Unable to load recommendations.
Follow Us