AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Spiritual Practices Before Bed: ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ

ನಿದ್ರೆ ಎಂಬುದು ನಿಮ್ಮ ಇಡೀ ದಿನದ ಆಯಾಸವನ್ನು ಮರೆಸಿ ದೇಹಕ್ಕೆ ಮರುಚೈತನ್ಯವನ್ನು ತುಂಬುವಂಥದ್ದು. ಹಾಗಾಗಿ ಬೆಳಗ್ಗೆ ಏಳುವಾಗ ನಿನ್ನೆ ರಾತ್ರಿ ಒಳ್ಳೆ ನಿದ್ದೆ ಆಯ್ತಪ್ಪಾ ಎಂದೇ ನಿಮ್ಮ ಬಾಯಿಂದ ಬರಬೇಕೆಂದರೆ ನೀವು ಒಂದು ನೀವು ಮಲಗುವ ಭಂಗಿಯನ್ನು ಬದಲಾಯಿಸಬೇಕು

Spiritual Practices Before Bed: ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ
ಧ್ಯಾನImage Credit source: Anahana Wellness
ನಯನಾ ರಾಜೀವ್
|

Updated on: Mar 20, 2023 | 1:00 PM

Share

ನಿದ್ರೆ ಎಂಬುದು ನಿಮ್ಮ ಇಡೀ ದಿನದ ಆಯಾಸವನ್ನು ಮರೆಸಿ ದೇಹಕ್ಕೆ ಮರುಚೈತನ್ಯವನ್ನು ತುಂಬುವಂಥದ್ದು. ಹಾಗಾಗಿ ಬೆಳಗ್ಗೆ ಏಳುವಾಗ ನಿನ್ನೆ ರಾತ್ರಿ ಒಳ್ಳೆ ನಿದ್ದೆ ಆಯ್ತಪ್ಪಾ ಎಂದೇ ನಿಮ್ಮ ಬಾಯಿಂದ ಬರಬೇಕೆಂದರೆ ನೀವು ಒಂದು ನೀವು ಮಲಗುವ ಭಂಗಿಯನ್ನು ಬದಲಾಯಿಸಬೇಕು ಹಾಗೂ ಮಲಗುವ ಮುನ್ನ ಕೆಲವು ಅಧ್ಯಾತ್ಮಿಕ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಮಗೆ ಎಷ್ಟೇ ಆಯಾಸವಿರಲಿ, ನೋವು, ದುಃಖವಿರಲಿ ಒಂದು ನಿದ್ರೆ ಅವುಗಳನ್ನೆಲ್ಲಾ ಮರೆಸುತ್ತದೆ.

ಈ ಅಭ್ಯಾಸಗಳು ನಿಮಗೆ ಸಹಾಯ ಮಾಡಬಹುದು ಬರೆಯುವುದನ್ನು ರೂಢಿಸಿಕೊಳ್ಳಿ ರಾತ್ರಿ ಮಲಗುವ ಮುನ್ನ ಏನಾದರೂ ಬರೆಯುವುದನ್ನು ರೂಢಿಸಿಕೊಳ್ಳಿ, ಬೆಳಗ್ಗೆ ಎದ್ದಾಗಿನಿಂದ ಸಂಜೆಯವರೆಗೆ ಏನೇನಾಗಿದೆ ಎಂಬುದನ್ನು ಬರೆಯಿರಿ.

ಇಡೀ ದಿನದಲ್ಲಿ ನಡೆದ ಉತ್ತಮ ಘಟನೆಗಳನ್ನು ಮೆಲುಕುಹಾಕಿ ಇಡೀ ದಿನ ನಿಮ್ಮೊಂದಿಗೆ ನಡೆದ ಉತ್ತಮ ಘಟನೆಗಳನ್ನು ಮೆಲುಕುಹಾಕಿ, ಕಹಿ ಘಟನೆಗಳನ್ನು ಮರೆಯಲು ಪ್ರಯತ್ನಿಸಿ.

ಸ್ವಲ್ಪ ವ್ಯಾಯಾಮ ಮಾಡಿ ನಿದ್ರೆಗೆ ಬೇಕಾಗುವಷ್ಟು ಸಣ್ಣ ಪ್ರಮಾಣದಲ್ಲಿ ವ್ಯಾಯಾಮವನ್ನು ಮಾಡಿ, ಮಲಗಿದಾಗ ದೇಹವು ಆರಾಮದಾಯಕವಾಗಿರುವಂತೆ ನೋಡಿಕೊಳ್ಳಿ.

ನಿದ್ರೆಯನ್ನು ಬರಮಾಡಿಕೊಳ್ಳಿ ನಿದ್ರಾದೇವತೆಯನ್ನು ಖುಷಿಯಿಂದ ಬರಮಾಡಿಕೊಳ್ಳಿ, ಅದಕ್ಕೂ ಮೊದಲು ಸ್ವಲ್ಪ ಧ್ಯಾನ ಮಾಡಿ.

ಮತ್ತಷ್ಟು ಓದಿ: ಮನುಷ್ಯನಲ್ಲಿನ ಈ ಲಕ್ಷಣಗಳು ಅವರ ಒಳ್ಳೆಯ ಮತ್ತು ಕೆಟ್ಟ ಗುಣಗಳನ್ನು ನಿರ್ಧರಿಸುತ್ತವೆ

ನೀವು ಮಲಗುವ ಕೋಣೆ ಕಂಫರ್ಟ್​ ಆಗಿದೆಯೇ ನೋಡಿಕೊಳ್ಳಿ ನೀವು ಮಲಗುವ ಕೋಣೆಯಲ್ಲಿ ತುಂಬಾ ಬೆಳಕಿರದಂತೆ, ಉತ್ತಮ ವೆಂಟಿಲೇಷನ್ ಇರುವಂತೆ ನೋಡಿಕೊಳ್ಳಿ ಆಗ ತನ್ನಿಂತಾನೆ ನಿದ್ರೆ ಆವರಿಸುತ್ತದೆ.

ದೇವರ ಧ್ಯಾನ ಮಾಡಿ ಮಲಗುವ ಮುನ್ನ ನಿಮ್ಮ ಇಷ್ಟದೇವರನ್ನು ಪ್ರಾರ್ಥನೆಯನ್ನು ಮಾಡಿ

ಸಾಮಾನ್ಯ ವ್ಯಕ್ತಿಗೆ ಎಷ್ಟು ಗಂಟೆಗಳ ನಿದ್ದೆ ಅಗತ್ಯ ಎಂಬುದರ ಕುರಿತು ಹಲವು ರೀತಿಯ ಸಂಶೋಧನೆಗಳು ನಡೆದಿವೆ. ವಿಭಿನ್ನ ವ್ಯಕ್ತಿಯ ನಿದ್ರೆಯ ಅಗತ್ಯಗಳು ಹೆಚ್ಚು ಅಥವಾ ಕಡಿಮೆ ಆಗಿರುವುದರಿಂದ, ಕನಿಷ್ಠ 6 ಗಂಟೆಗಳ ಮತ್ತು ಗರಿಷ್ಠ 9 ಗಂಟೆಗಳ ನಿದ್ರೆಯನ್ನು ಸರಿಯಾಗಿ ಪರಿಗಣಿಸಲಾಗುತ್ತದೆ.

ಆರೋಗ್ಯಕರ ಜೀವನಕ್ಕೆ ಸಾಕಷ್ಟು ನಿದ್ದೆಯನ್ನು ಪಡೆಯುವುದು ಮಾತ್ರವಲ್ಲ, ನಿಮ್ಮ ಮಲಗುವ ಮಾದರಿಯೂ ಮುಖ್ಯವಾಗಿದೆ. ಅಂದರೆ, ನೀವು ಪ್ರತಿ ರಾತ್ರಿ ಯಾವ ಸಮಯದಲ್ಲಿ ಮಲಗುತ್ತೀರಿ ಮತ್ತು ಬೆಳಿಗ್ಗೆ ನೀವು ಯಾವ ಸಮಯದಲ್ಲಿ ಎಚ್ಚರಗೊಳ್ಳುತ್ತೀರಿ, ಇದು ನಿಮ್ಮ ಆರೋಗ್ಯ ಮತ್ತು ಕೆಲಸದ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

ನೀವು ಕಡಿಮೆ ನಿದ್ದೆ ಅಥವಾ ಅತಿಯಾಗಿ ತೆಗೆದುಕೊಂಡರೆ, ನಿದ್ರೆಯ ಸಮತೋಲನವು ತೊಂದರೆಗೊಳಗಾದರೆ, ಅದು ಅನೇಕ ಅನಾನುಕೂಲಗಳನ್ನು ಉಂಟುಮಾಡಬಹುದು. ಕಡಿಮೆ ನಿದ್ರೆಯಿಂದಾಗಿ, ಜನರ ಗಮನವು ಯಾವುದೇ ಒಂದು ಸ್ಥಳದಲ್ಲಿ ಉಳಿಯಲು ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವರ ದಕ್ಷತೆಯ ಮೇಲೆ ಪರಿಣಾಮ ಬೀರುತ್ತದೆ.

ನಿಮ್ಮ ದಿನಚರಿಯಲ್ಲಿ ಈ ಮುನ್ನೆಚ್ಚರಿಕೆಗಳಿಗೆ ನೀವು ಆದ್ಯತೆ ನೀಡುವುದು ಮುಖ್ಯ, ಇದರಿಂದ ನಿದ್ರೆಯ ವೇಳಾಪಟ್ಟಿ ಸರಿಯಾಗಿರುತ್ತದೆ ಮತ್ತು ನಿಮ್ಮ ದಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಮಲಗುವ ಮತ್ತು ಟಿವಿ ನೋಡುವ ನಡುವೆ 45 ನಿಮಿಷಗಳ ಅಂತರವನ್ನು ಇರಿಸಿ., ಟಿವಿ ನೋಡುವ ಅಥವಾ ಕಂಪ್ಯೂಟರ್‌ನಲ್ಲಿ ಹೆಚ್ಚು ಹೊತ್ತು ಕೆಲಸ ಮಾಡುವ ಅಭ್ಯಾಸವನ್ನು ನಿಯಂತ್ರಿಸಿ., ಮಲಗುವ ಮುನ್ನ ಪುಸ್ತಕ ಓದುವ ಅಥವಾ ಸಂಗೀತ ಕೇಳುವ ಅಭ್ಯಾಸ ಮಾಡಿಕೊಳ್ಳಿ., ಚಹಾ ಮತ್ತು ಕಾಫಿ ಸೇವನೆಯನ್ನು ಕಡಿಮೆ ಮಾಡಿ., ಮದ್ಯಪಾನದಿಂದ ಅಂತರ ಕಾಯ್ದುಕೊಳ್ಳಿ., ಮಲಗುವ ಮುನ್ನ ಸಮತೋಲಿತ ಆಹಾರವನ್ನು ಸೇವಿಸಿ..

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ