Daily Devotional: ಮನೆಯಲ್ಲಿ ದೇವರಿಗೆ ದೀಪ ಹಚ್ಚುವಾಗ ಎಷ್ಟು ಬತ್ತಿ ಬಳಸುವುದು ಶುಭ?

ದೇವರ ದೀಪಾರಾಧನೆಯಲ್ಲಿ ಎಷ್ಟು ಬತ್ತಿಗಳನ್ನು ಬಳಸಬೇಕು ಎಂಬುದು ಸಾಕಷ್ಟು ಜನರಿಲ್ಲ ಗೊತ್ತಿಲ್ಲ. ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ್ ಗುರೂಜಿಯವರು ಈ ಕುರಿತು ಮಾಗಿತಿ ನೀಡಿದ್ದಾರೆ. ಮನೆಯಲ್ಲಿ ಒಂದೇ ಬತ್ತಿಯ ದೀಪ ಇಡುವುದು ಅಶುಭ. ಎರಡು ಬತ್ತಿಗಳ ದೀಪ ಕುಟುಂಬದ ಸೌಖ್ಯ ಮತ್ತು ಅನಾರೋಗ್ಯದಿಂದ ರಕ್ಷಣೆ ನೀಡುತ್ತದೆ. ಗರ್ಭಿಣಿಯರು ಏಳು ತಿಂಗಳ ನಂತರ ಮೂರು ಬತ್ತಿಗಳ ದೀಪವನ್ನು ಉಪಯೋಗಿಸುವುದು ಶುಭಕರ ಎಂದು ಅವರು ತಿಳಿಸಿದ್ದಾರೆ.

Daily Devotional: ಮನೆಯಲ್ಲಿ ದೇವರಿಗೆ ದೀಪ ಹಚ್ಚುವಾಗ ಎಷ್ಟು ಬತ್ತಿ ಬಳಸುವುದು ಶುಭ?
Home Diya

Updated on: May 29, 2025 | 9:31 AM

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ದೀಪದ ಆರಾಧನೆ ಹಿಂದೂ ಧರ್ಮದಲ್ಲಿ ಪ್ರಮುಖವಾದ ಪೂಜಾ ವಿಧಾನ. ಪ್ರತಿನಿತ್ಯದ ಪೂಜೆಯಿಂದ ಹಿಡಿದು ವಿಶೇಷ ಸಂದರ್ಭಗಳವರೆಗೆ ದೀಪವನ್ನು ಬಳಸಲಾಗುತ್ತದೆ. ಆದರೆ, ಈ ದೀಪದಲ್ಲಿ ಎಷ್ಟು ಬತ್ತಿಗಳನ್ನು ಬಳಸಬೇಕು ಎಂಬುದು ಅನೇಕರಿಗೆ ತಿಳಿದಿಲ್ಲ. ಈ ಕುರಿತು ಖ್ಯಾತ ಜ್ಯೋತಿಷಿಗಳಾದ ಡಾ. ಬಸವರಾಜ್ ಗುರೂಜಿಯವರು ವಿವರವಾದ ಮಾಹಿತಿ ನೀಡಿದ್ದಾರೆ.

ಗುರೂಜಿ ಹೇಳುವಂತೆ, ಮನೆಯಲ್ಲಿ ಒಂದೇ ಬತ್ತಿಯ ದೀಪ ಇಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಮನೆಗೆ ಕಂಟಕಗಳನ್ನು ತರುವ ಸಾಧ್ಯತೆಯಿದೆ. ಎರಡು ಬತ್ತಿಗಳ ದೀಪವು ಕುಟುಂಬದ ಸೌಖ್ಯ, ಅನಾರೋಗ್ಯದಿಂದ ರಕ್ಷಣೆ, ಅಪಮೃತ್ಯುವಿನಿಂದ ದೂರವಿರುವುದು ಮತ್ತು ಕೆಲಸಕಾರ್ಯಗಳಲ್ಲಿ ಯಶಸ್ಸನ್ನು ತರುತ್ತದೆ ಎಂದು ವಿವರಿಸಲಾಗಿದೆ. ಎರಡು ಬತ್ತಿಗಳ ಬಳಕೆಯು ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ ಎಂಬ ನಂಬಿಕೆಯಿದೆ.

ವಿಡಿಯೋ ಇಲ್ಲಿದೆ ನೋಡಿ:

YouTube video player

ಇದನ್ನೂ ಓದಿ
ಈ ದೇವಾಲಯಕ್ಕೆ ಗಂಡ ಹೆಂಡತಿ ಒಟ್ಟಿಗೆ ಹೋಗುವಂತಿಲ್ಲ, ಯಾಕೆ ಗೊತ್ತಾ?
ಈ ಪ್ರಾಣಿಗಳು ನಿಮ್ಮ ಕನಸಿನಲ್ಲಿ ಪದೇ ಪದೇ ಕಾಣಿಸಿಕೊಂಡರೆ ಅದೃಷ್ಟದ ಸೂಚನೆ
ಕೇದಾರನಾಥ ಯಾತ್ರೆಯ ಸಮಯದಲ್ಲಿ ಈ ವಸ್ತುಗಳನ್ನು ತೆಗೆದುಕೊಂಡು ಹೋಗಲೇಬಾರದು
ವಾರದಲ್ಲಿ ಈ ಎರಡು ದಿನ ಬಟ್ಟೆ ಒಗೆಯಲೇಬೇಡಿ; ಕಷ್ಟಗಳು ತಪ್ಪಿದಲ್ಲ!

ಗರ್ಭಿಣಿಯರಿಗೆ ಏಳು ತಿಂಗಳ ನಂತರ ಮೂರು ಬತ್ತಿಗಳ ದೀಪವನ್ನು ಉಪಯೋಗಿಸುವುದು ಶುಭಕರ ಎಂದು ಗುರುಜಿ ಅವರು ಹೇಳುತ್ತಾರೆ. ಇದು ತಾಯಿ ಮತ್ತು ಮಗುವಿನ ಕ್ಷೇಮಕ್ಕೆ ಒಳ್ಳೆಯದು ಎಂದು ನಂಬಲಾಗಿದೆ. ಆದರೆ, ಯಾವಾಗಲೂ ಮೂರು ಬತ್ತಿಗಳನ್ನು ಬಳಸಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನೂ ಓದಿ: ಸೂರ್ಯ ಮೃಗಶಿರ ನಕ್ಷತ್ರಕ್ಕೆ ಪ್ರವೇಶ; ಈ ಮೂರು ರಾಶಿಗೆ ಅದೃಷ್ಟದ ಸುರಿಮಳೆ

ನಾಲ್ಕು ಬತ್ತಿಗಳ ದೀಪವನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಇದು ಅಪಮೃತ್ಯು ಮತ್ತು ಆಸ್ತಿ ನಷ್ಟಕ್ಕೆ ಕಾರಣವಾಗಬಹುದು ಎಂದು ಎಚ್ಚರಿಸಲಾಗಿದೆ. ಐದು ಬತ್ತಿಗಳ ದೀಪವನ್ನು ಪಂಚಾರತಿ ಎಂದು ಕರೆಯಲಾಗುತ್ತದೆ. ಇದು ಪಂಚಭೂತಗಳನ್ನು ಪ್ರತಿನಿಧಿಸುತ್ತದೆ ಮತ್ತು ಧನ, ಧಾನ್ಯ, ಸುಖ, ಆರೋಗ್ಯ ಮತ್ತು ಆಯುಷ್ಯವನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಆದ್ದರಿಂದ ಮನೆಯಲ್ಲಿ ದೀಪಗಳನ್ನು ಇಡುವಾಗ ಎರಡೆರಡು ಬತ್ತಿಗಳನ್ನು ಬಳಸುವುದು ಶ್ರೇಷ್ಠ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:30 am, Thu, 29 May 25