ಶ್ರೀ ರಾಘವೇಂದ್ರ ಗುರುಗಳ ‘ಸಪ್ತಾಹ ಸೇವೆ’ ಮಾಡುವುದು ಹೇಗೆ? ಇಲ್ಲಿದೆ ವಿವರಣೆ
ಮೊದಲ ಒಂದು ದಿನ ಸಂಕಲ್ಪ ಗೊತ್ತಿದ್ದರೆ ಮಾಡಿ, ಇಲ್ಲ ಮನಸ್ಸಿನ ಸಂಕಲ್ಪ ಮಾಡಿಕೊಂಡು, ನಿತ್ಯ ಪೂಜೆ ಮಾಡಿ ‘ಪೂಜ್ಯಾಯ ರಾಘವೇಂದ್ರಾಯ’ ಸ್ತೋತ್ರ ಹೇಳಿಕೊಂಡು, ರಾಘವೇಂದ್ರರ ಸ್ತೋತ್ರ, ಭಜನೆ ಹಾಡು ಹೇಳಿಕೊಳ್ಳುತ್ತಾ, ಗೆಜ್ಜೆ ವಸ್ತ್ರ ಹಾಕಿ, ಅಲಂಕಾರ ಮಾಡಿ, ಊದಿನ ಕಡ್ಡಿ ಹಚ್ಚಿಟ್ಟು, ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿ ಹೇಳಿ ಗುರುಗಳ ಮುಂದೆ ಒಂದು ಬಟ್ಟಲನ್ನು ಇಟ್ಟು, ತಾವರೆ ಬೀಜ , ಅಕ್ಷತೆ ಕಾಳು, ತುಳಸಿ ಅಥವಾ ಹೂವು 108 ಸಲ ಹಾಕಬೇಕು.
ಇದೇ ಆಗಸ್ಟ್ ತಿಂಗಳು 20 ರಿಂದ 22 ರ ವರೆಗೆ ಅಂದರೆ ಮೂರು ದಿನಗಳ ಕಾಲ ಶ್ರೀ ಗುರು ರಾಘವೇಂದ್ರರ 353ನೇ ಆರಾಧನೋತ್ಸವ ನಡೆಯುತ್ತದೆ. ಈ ಮೂರು ದಿನಗಳು ಭಕ್ತರನ್ನು ಕಾಣಲು ರಾಯರೇ ಸ್ವತ: ಬಂದು, ಹರಸುತ್ತಾರೆ ಎಂಬುದು ಅನೇಕ ಭಕ್ತರ ಅನುಭವಕ್ಕೆ ಬಂದಿರುವ ಮಾತು. ಭಕ್ತರು 48 ದಿನದ, 108 ದಿನದ ಮಂಡಲ ಪೂಜೆ, ಪ್ರದಕ್ಷಿಣೆ ನಮಸ್ಕಾರ, ಉಪವಾಸ, ಓಂ ಶ್ರೀ ರಾಘವೇಂದ್ರಾಯ ನಮಃ ಎಂಬ ನಾಮ ಜಪ, ಪುಸ್ತಕದಲ್ಲಿ ಬರೆಯುವುದು… ಇಂಥ ಸೇವೆಗಳನ್ನು ಸಂಕಲ್ಪ ದೊಂದಿಗೆ ಆರಂಭ ಮಾಡಿರುತ್ತಾರೆ. ಇನ್ನು ಕೆಲವರು ಮಂತ್ರಾಲಯಕ್ಕೆ ಹೋಗಲು ಮುಂಚಿತವಾಗಿಯೇ ತಯಾರಿ ಮಾಡಿಕೊಂಡಿರುತ್ತಾರೆ. ಹೀಗೆ ಅನೇಕ ಭಕ್ತರು ಅನೇಕ ರೀತಿಯ ಸೇವೆಗ ಳನ್ನು ಶ್ರದ್ಧೆಯಿಂದ ಮಾಡಿ ತಮ್ಮ ಇಷ್ಟಾರ್ಥ ನೆರವೇರಿಸಿಕೊಳ್ಳುತ್ತಾರೆ.
ಮಕ್ಕಳಿಂದ ವೃದ್ಧರ ತನಕ ಎಲ್ಲಾ ಭಕ್ತರಿಗೂ ರಾಯರ ಸೇವೆ ಮಾಡುವ ಆಸೆ ಇರುತ್ತದೆ. ಆದರೆ ಎಲ್ಲರಿಗೂ ಮಂತ್ರಾಲಯಕ್ಕೆ ಹೋಗಿ ದರ್ಶನ ಪಡೆಯಲು ಅಥವಾ ಅವರಿವರ ಸ್ಥಳದಲ್ಲೇ ಇರುವ ರಾಯರ ಮಠಗಳಿಗೆ ಹೋಗಲು ಆಗದೇ ಇರಬಹುದು. ಆದರೆ ಥಟ್ ಅಂತ ಸ್ಮರಿಸಿ, ರಾಯರ ಸೇವೆ ಮಾಡಿ ಅನುಗ್ರಹಕ್ಕೆ ಪಾತ್ರರಾಗಬಹುದು.
ಸಪ್ತಾಹ ಸೇವೆ: ರಾಘವೇಂದ್ರ ಗುರುಗಳ ‘ಸಪ್ತಾಹ ಸೇವೆ’ ಅಂದರೆ ಏಳು ದಿನ ಸೇವೆ ಮಾಡುವುದಾಗಿ ಸಂಕಲ್ಪ ಮಾಡಿಕೊಳ್ಳಿ. ನಿಮ್ಮ ಸಮಯ, ಉದ್ಯೋಗ, ಮಕ್ಕಳು, ಇತರೆ ಕೆಲಸಗಳು, ಇವುಗಳನ್ನೆಲ್ಲ ಹೊಂದಿಸಿಕೊಂಡು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡು ಏಳು ದಿನ ಸೇವೆ ಮಾಡಬಹುದು. ರಾಯರ ಆರಾಧನೆ ನಡೆಯುವ ಮೂರು ದಿನವೂ ನಿಮ್ಮ ಸೇವೆ ರಾಯರಿಗೆ ಸಲ್ಲುತ್ತದೆ.
ಇದಕ್ಕೆ ಬೇಕಾದ ಸಲಕರಣೆ: ರಾಘವೇಂದ್ರ ಗುರುಗಳ ಫೋಟೋ ಅಥವಾ ಪುಟ್ಟ ವಿಗ್ರಹ, ತುಳಸಿ ವೃಂದಾವನ, ಯಾವುದಾದರೂ ಸರಿ. ಪೂಜೆಗೆ ಹೂ ಅಕ್ಷತೆ, ಗಂಧ, ಗೆಜ್ಜೆ ವಸ್ತ್ರ, (ಸಿಕ್ಕರೆ ಹೂವು, ಇಲ್ಲ ತುಳಸಿ ಹಾರ) ನೈವೇದ್ಯಕ್ಕೆ ಹಣ್ಣು ಅಥವಾ ಸಕ್ಕರೆ ಕಲ್ಲು, ಸಕ್ಕರೆ, ಒಣದ್ರಾಕ್ಷಿ ಯಾವುದಾದರೂ ಸರಿ. ಪೂಜೆಗೆ ಒಂದು ದಳ ತುಳಸಿ ಇದ್ದರೆ ಒಳ್ಳೆಯದು. ಬೆಳಿಗ್ಗೆ ಸ್ನಾನ ಮಾಡಿ ದೇವರ ಮನೆಯ ಒಂದು ಬದಿಯಲ್ಲಿ ರಾಘವೇಂದ್ರ ಗುರುಗಳ ಫೋಟೋ ಪೂಜೆಗೆ ಇಟ್ಟುಕೊಳ್ಳಿ.
Also Read: ನವ ದಂಪತಿ ಆರು ತಿಂಗಳವರೆಗೆ ತಿರುಪತಿಗೆ ಹೋಗಬಾರದು, ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಈ ನಾಲ್ಕಾರು ತಪ್ಪು ಮಾಡಬೇಡಿ
ಮೊದಲ ಒಂದು ದಿನ ಸಂಕಲ್ಪ ಗೊತ್ತಿದ್ದರೆ ಮಾಡಿ, ಇಲ್ಲ ಮನಸ್ಸಿನ ಸಂಕಲ್ಪ ಮಾಡಿಕೊಂಡು, ನಿತ್ಯ ಪೂಜೆ ಮಾಡಿ ‘ಪೂಜ್ಯಾಯ ರಾಘವೇಂದ್ರಾಯ’ ಸ್ತೋತ್ರ ಹೇಳಿಕೊಂಡು, ರಾಘವೇಂದ್ರರ ಸ್ತೋತ್ರ, ಭಜನೆ ಹಾಡು ಹೇಳಿಕೊಳ್ಳುತ್ತಾ, ಗೆಜ್ಜೆ ವಸ್ತ್ರ ಹಾಕಿ, ಅಲಂಕಾರ ಮಾಡಿ, ಊದಿನ ಕಡ್ಡಿ ಹಚ್ಚಿಟ್ಟು, ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಳಿ ಹೇಳಿ ಗುರುಗಳ ಮುಂದೆ ಒಂದು ಬಟ್ಟಲನ್ನು ಇಟ್ಟು, ತಾವರೆ ಬೀಜ , ಅಕ್ಷತೆ ಕಾಳು, ತುಳಸಿ ಅಥವಾ ಹೂವು (ಇದರಲ್ಲಿ ಯಾವುದಾದರೂ ಸರಿ) 108 ಸಲ ಹಾಕಬೇಕು. ಇನ್ನು ರಾಘವೇಂದ್ರರ ಅರ್ಚನೆ ಮಾಡುವುದು ಇಲ್ಲದಿದ್ದರೆ, ಶ್ರೀ ರಾಘವೇಂದ್ರ ಗುರು ಸ್ತೋತ್ರ : “ಶ್ರೀ ಪೂರ್ಣ ಬೋಧ ಗುರುತೀರ್ಥ ಪ್ರಯೋಬ್ಧಿ ಪಾರ ಕಾಮಾರಿ ಮಾಕ್ಷ ವಿಷಮಾಕ್ಷ ಶಿರ: ಸ್ಪೃಷಂತೀ ಈ ಸ್ತೋತ್ರವನ್ನು ಏಳು ದಿನ ಹೇಳಿಕೊಳ್ಳಬೇಕು.
ಅರ್ಚನೆ ಅಥವಾ ಸ್ತೋತ್ರ ಮುಗಿದ ನಂತರ ನೈವೇದ್ಯ, ಮಂಗಳಾರತಿ ಮಾಡಿ
ದೇವರಿಗೆ ನಮಸ್ಕರಿಸಿ, ನಂತರ ಒಂದು ತಟ್ಟೆಯಲ್ಲಿ ರಾಘವೇಂದ್ರರ ಫೋಟೋ ನಿಲ್ಲುವಂತೆ ಒರಗಿಸಿ ಅಥವಾ ವಿಗ್ರಹ ಇಟ್ಟುಕೊಂಡು ಸುತ್ತ ಪ್ರದಕ್ಷಿಣೆ ಬಂದು ನಮಸ್ಕಾರ ಮಾಡಬೇಕು. ಈ ನಮಸ್ಕಾರ 48, 108, ಅವರವರ ಅನುಕೂಲ, ಬಗ್ಗಲು ಆಗದಿದ್ದವರು ಸೊಂಟ ಬೆನ್ನು ನೋವು ಇರುವವರು, 13 , 7 ಪ್ರದಕ್ಷಿಣೆ ನಮಸ್ಕಾರ ಮಾಡಬಹುದು. ಬಗ್ಗಲು ಆಗದಿದ್ದರೆ ಪ್ರದಕ್ಷಿಣೆ ಬಂದು ನಿಂತು ಕೈಯ ಮುಗಿಯಬಹುದು. ಈ ರೀತಿ ಭಕ್ತಿಯಿಂದ ಸಪ್ತಾಹ ಅಂದರೆ ಏಳು ದಿನ ಅನನ್ಯ ವಾದ ನಂಬಿಕೆ ಇಟ್ಟು ಭಕ್ತಿಯಿಂದ ರಾಯರ ಸೇವೆ ಮಾಡಿದರೆ ಇದು ರಾಯರಿಗೆ ತಲುಪುತ್ತದೆ. (ಒಪ್ಪತ್ತು ಉಪವಾಸ ಮಾಡುವುದು ಎಲ್ಲ ಅವರವರ ಇಷ್ಟ) ರಾಯರು ಮನ ತುಂಬಿ ಆಶೀರ್ವದಿಸುತ್ತಾರೆ. ಮಾಡಿಕೊಂಡ ಸಂಕಲ್ಪದ ಇಷ್ಟಾರ್ಥ ಸಿದ್ಧಿಸುತ್ತದೆ ಇದು ನನ್ನ ನಂಬಿಕೆ. ಇಂದಿನಿಂದ ಶ್ರೀ ರಾಘವೇಂದ್ರರ ಪೂಜೆ, ಅಷ್ಟೋತ್ತರ ಮತ್ತು ನಮಸ್ಕಾರ ಶುರು ಮಾಡಿ. (ಲೇಖನ -ಆಶಾ ನಾಗಭೂಷಣ)
Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ
ಶ್ರೀ ರಾಘವೇಂದ್ರ ಅಷ್ಟೋತ್ತರ:
|| ಶ್ರೀ ರಾಘವೇಂದ್ರ ಅಷ್ಟೋತ್ತರ ಶತನಾಮಾವಲಿಃ || ಓಂ ಸ್ವವಾಗೇವತಾ ಸರಿಸದ್ಭಕ್ತವಿಮಲೀಕರ್ತೇ ನಮಃ | ಓಂ ಶ್ರೀ ರಾಘವೇಂದ್ರಾಯ ನಮಃ | ಓಂ ಸಕಲಪ್ರದಾತ್ರೇ ನಮಃ | ಓಂ ಭಕ್ತಾಘಸಂಭೇದನ ವೃಷ್ಟಿವಜ್ರಾಯ ನಮಃ | ಓಂ ಕ್ಷಮಾಸುರೇಂದ್ರಾಯ ನಮಃ | ಓಂ ಹರಿಪಾದ ಕಂಜನಿಷೇವಣಾಲ್ಲಬ್ಧ ಸಮಸ್ತ ಸಂಪದೇ ನಮಃ | ಓಂ ದೇವಸ್ವಭಾಯ ನಮಃ | ಓಂ ದಿವಿಜದ್ಭಮಾಯ ನಮಃ | ಓಂ ಇಷ್ಟಪ್ರದಾತ್ರೇ ನಮಃ | ಓಂ ಭವ್ಯಸ್ವರೂಪಾಯ ನಮಃ ||೧೦|| ಓಂ ಭವದುಃಖತೂಲ ಸಂಘಾಗ್ನಿಚರ್ಯಾಯ ನಮಃ | ಓಂ ಸುಖಧೈರ್ಯಶಾಲಿನೇ ನಮಃ | ಓಂ ಸಮಸ್ತದುಷ್ಟಗ್ರಹ ನಿಗ್ರಹೇಷಾಯ ನಮಃ | ಓಂ ದುರತ್ಯಯೋಪಪ್ಲವ ಸಿಂಧುಸೇತವೇ ನಮಃ | ಓಂ ನಿರಸ್ತದೋಷಾಯ ನಮಃ | ಓಂ ನಿರವದ್ಯವೇಶಾಯ ನಮಃ | ಓಂ ಪ್ರತ್ಯರ್ಥಮೂಕತ್ವನಿದಾನಭಾಷಾಯ ನಮಃ | ಓಂ ವಿದ್ವತ್ಪರಿಜ್ಞೆಯ ಮಹಾವಿಶೇಷಾಯ ನಮಃ | ಓಂ ವಾಗೈಖರೀ ನಿರ್ಜಿತಭವ್ಯ ಶೇಷಾಯ ನಮಃ | ಓಂ ಸಂತಾನಸಂಪತ್ಪರಿಶುದ್ಧ ಭಕ್ತಿ ವಿಜ್ಞಾನ ವಾಗೇಹ ಸುಪಾಟವಾದಿಧಾತ್ರೇ ನಮಃ ||೨೦|| ಓಂ ಶರೀರೋತ್ಥ ಸಮಸ್ತ ದೋಷಹಂತ್ರೇ ನಮಃ | ಓಂ ಶ್ರೀ ಗುರುರಾಘವೇಂದ್ರಾಯ ನಮಃ | ಓಂ ತಿರಸ್ಕೃತ ಸುರನದೀ ಜಲಪಾದೋದಕ ಮಹಿಮವತೇ ನಮಃ | ಓಂ ದುಸ್ತಾಪತ್ರಯ ನಾಶನಾಯ ನಮಃ | ಓಂ ಮಹಾವಂದ್ಯಾಸುಪುತ್ರದಾಯಕಾಯ ನಮಃ | ಓಂ ವ್ಯಂಗಸ್ವಂಗಸಮೃದ್ಧಿದಾಯ ನಮಃ | ಓಂ ಗ್ರಹಮಹಾಪಾಪಾಪಹಾಯ ನಮಃ | ಓಂ ದುರಿತಕಾನನದಾವಭೂತ ಸ್ವಭಕ್ತ ದರ್ಶನಾಯ ನಮಃ | ಓಂ ಸ್ವತಂತ್ರಸ್ವತಂತ್ರಾಯ ನಮಃ | ಓಂ ಶ್ರೀ ಮಧ್ವಮತ ವರ್ಧನಾಯ ನಮಃ ||೩೦|| ಓಂ ವಿಜಯೇಂದ್ರ ಕರಾಬೋತ್ಥ ಸುಧೀಂದ್ರ ವರಪುತ್ರಕಾಯ ನಮಃ | ಓಂ ಯತಿರಾಜೇ ನಮಃ | ಓಂ ಭಯಾಪಹಾಯ ನಮಃ | ಓಂ ಗುರವೇ ನಮಃ | ಓಂ ಜ್ಞಾನಭಕ್ತಿ ಸುಪುತ್ರಾಯುರ್ಯಶಃ ಶ್ರೀ ಪುಣ್ಯವರ್ಧನಾಯ ನಮಃ | ಓಂ ಪ್ರತಿವಾದಿ ಜಯಸ್ವಾಂತಭೇದಚಿಹ್ವಾದರಾಯ ನಮಃ | ಓಂ ಸರ್ವವಿದ್ಯಾಪ್ರವೀಣಾಯ ನಮಃ | ಓಂ ಸಮುಪೇಕ್ಷಿಕೃತಭಾವಜಾಯ ನಮಃ | ಓಂ ಅಪರೋಕ್ಷೀಕೃತ ಶ್ರೀಶಾಯ ನಮಃ | ಓಂ ದಯಾದಾಕ್ಷಿಣ್ಯ ವೈರಾಗ್ಯ ವಾಕ್ಷಾಟವಮುಖಾಂಕಿತಾಯ ನಮಃ ||೪೦|| ಓಂ ಶಾಪಾನುಗ್ರಹ ಶಕ್ತಾಯ ನಮಃ | ಓಂ ಅಜ್ಞಾನ ವಿಸ್ಕೃತಿ ಭ್ರಾಂತಿ ಸಂಶಯಾಪಸ್ಮೃತಿಕ್ಷಯಾದಿ ದೋಷನಾಶಕಾಯ ನಮಃ | ಓಂ ಅಷ್ಟಾಕ್ಷರ ಜಪೇಷ್ಟಾರ್ಥ ಪ್ರದಾತ್ರೇ ನಮಃ | ಓಂ ಆತ್ಮಾತ್ಮೀಯ ಸಮುದ್ಭವ ಕಾಯಜದೋಷಹಂತ್ರೇ ನಮಃ | ಓಂ ಸರ್ವಪುಮರ್ಥ ಪ್ರದಾತ್ರೇ ನಮಃ | ಓಂ ಕಾಲತ್ರಯ ಪ್ರಾರ್ಥನಾ ರ್ಕಹಿಕಾಮುಸ್ಮಿಕ ಸರ್ವೇಷ್ಟ ಪ್ರದಾತ್ರೇ ನಮಃ | ಓಂ ಅಗಮ್ಯ ಮಹಿಮ್ಮೇ ನಮಃ | ಓಂ ಮಹಾಯಶಸೇ ನಮಃ | ಓಂ ಶ್ರೀ ಮಾಧ್ವಮತ ದುಗ್ದಾಬ್ಬಿ ಚಂದ್ರಾಯ ನಮಃ | ಓಂ ಅನಘಾಯ ನಮಃ ||೫೦ ಓಂ ಯಥಾಶಕ್ತಿ ಪ್ರದಕ್ಷಿಣಕರ್ತ್ರೇ ಸರ್ವಯಾತ್ರಾ ಫಲದಾತ್ರೇ ನಮಃ | ಓಂ ಶಿರೋಧಾರಣ ಸರ್ವತೀರ್ಥ ಸ್ನಾನ ಫಲದಾತೃಸ್ವವೃಂದಾವನ ಗತಜಲಾಯ ನಮಃ | ಓಂ ಕರಣಸರ್ವಾಭೀಷ್ಟದಾತ್ರೇ ನಮಃ | ಓಂ ಸಂಕೀರ್ತನೇನ ವೇದಾದ್ಯರ್ಥ ಜ್ಞಾನದಾತ್ರೇ ನಮಃ | ಓಂ ಸಂಸಾರಮಗ್ನ ಜನೋದ್ದಾರ ಕರ್ತ್ರೇ ನಮಃ | ಓಂ ಕುಷ್ಪಾದಿರೋಗ ನಿವರ್ತಕಾಯ ನಮಃ | ಓಂ ಅಂಧದಿವ್ಯ ದೃಷ್ಟಿದಾತ್ರೇ ನಮಃ | ಓಂ ಏಡಮೂಕವಾಕ್ಷಟಿತ್ವ ಪ್ರದಾತ್ರೇ ನಮಃ | ಓಂ ಪೂರ್ಣಾಯುಃ ಪ್ರದಾತ್ರೇ ನಮಃ | ಓಂ ಪೂರ್ಣಸಂಪತ್ತಿದಾತ್ರೇ ನಮಃ ||೬೦|| ಓಂ ಕುಕ್ಷಿಗತ ಸರ್ವದೋಷಷ್ಟೇ ನಮಃ | ಓಂ ಪಂಗುಖಂಜ ಸಮೀಚಿನಾವಯುವದಾತ್ರೇ ನಮಃ | ಓಂ ಭೂತಪ್ರೇತಪಿಶಾಚಾದಿ ಪೀಡಾಫ್ಟ್ ನಮಃ | ಓಂ ದೀಪಸಂಯೋಜನಾದ್ ಜ್ಞಾನಪುತ್ರದಾತ್ರೇ ನಮಃ | ಓಂ ದಿವ್ಯಜ್ಞಾನ ಭಕ್ತಾದಿ ವರ್ಧನಾಯ ನಮಃ | ಓಂ ಸರ್ವಾಭೀಷ್ಟದಾಯ ನಮಃ | ಓಂ ರಾಜಚೋರಮಹಾವ್ಯಾಘ್ರ ಸರ್ಪನಕ್ರಾದಿ ಪೀಡಾಫ್ಟ್ ನಮಃ | ಓಂ ಸ್ವಸ್ತೋತ್ರ ಪಠನೇಷ್ಟಾರ್ಥ ಸಮೃದ್ಧಿದಾಯ ನಮಃ | ಓಂ ಉದ್ಯತ್ಪದ್ಯೋತನದ್ಯೋತ ಪ್ರತಾಪಾಯ ನಮಃ | ಓಂ ಧರ್ಮಕೂರ್ಮಾಸನ ಸ್ಥಿತಾಯ ನಮಃ ||೭೦|| ಓಂ ಖದ್ಯಖದ್ಯೋತನ ದ್ಯೋತ ಪ್ರತಾಪಾಯ ನಮಃ | ಓಂ ಶ್ರೀರಾಮ ಮಾನಸಾಯ ನಮಃ | ಓಂ ಧೃತಕಾಷಾಯವಸನಾಯ ನಮಃ | ಓಂ ತುಲಸೀಹಾರ ವಕ್ಷಸೇ ನಮಃ | ಓಂ ದೋರ್ದಂಡ ವಿಲಸದ್ದಂಡ ಕಮಂಡಲವಿರಾಜಿತಾಯ ನಮಃ | ಓಂ ಅಭಯಜ್ಞಾನ ಮುದ್ರಾಕ್ಷಮಾಲಾ ಶೀಲಕರಾಂಬುಜಾಯ ನಮಃ | ಓಂ ಪಾಪಾದ್ರಿ ಪಾಟನ ವಜ್ರಾಯ ನಮಃ | ಓಂ ಯೋಗೇಂದ್ರಮಧ್ಯ ಪಾದಾಬ್ಬಾಯ ನಮಃ | ಓಂ ಕ್ಷಮಾಸುರ ಗಣಾಧೀಶಾಯ ನಮಃ | ಓಂ ಹರಿಸೇವಾಲಬ್ಧ ಸರ್ವಸಂಪದೇ ನಮಃ ॥೮oll ಓಂ ತತ್ತ್ವ ಪ್ರದರ್ಶಕಾಯ ನಮಃ | ಓಂ ಇಷ್ಟಪ್ರದಾನ ಕಲ್ಪದ್ರುಮಾಯ ನಮಃ | ಓಂ ಶುತರ್ಹ ಬೋದಕಾಯ ನಮಃ | ಓಂ ಇಷ್ಟಪ್ರದಾನ ಕಲ್ಪಧ್ರುಮಾಯ ನಮಃ | ಓಂ ಶ್ರುತ್ಯರ್ಥ ಬೋಧಕಾಯ ನಮಃ | ಓಂ ಭವ್ಯಕೃತೇ ನಮಃ | ಓಂ ಬಹುವಾದಿ ವಿಜಯಿನೇ ನಮಃ | ಓಂ ಪುಣ್ಯವರ್ಧನ ಪಾದಾಬ್ಬಾಭಿಷೇಕ ಜಲಸಂಚಯಾಯ ನಮಃ | ಓಂ ದ್ಯುನದೀತುಲ್ಯ ಸದ್ಗುಣಾಯ ನಮಃ | ಓಂ ಭಕ್ತಾಘವಿಧ್ವಂಸಕರ ನಿಜಮೂರ್ತಿಪ್ರದರ್ಶಕಾಯ ನಮಃ | ಓಂ ಜಗದ್ಗುರವೇ ನಮಃ | ಓಂ ಕೃಪಾನಿಧಯೇ ನಮಃ ||೯೦|| ಓಂ ಸರ್ವಶಾಸ್ತ್ರ ವಿಶಾರದಾಯ ನಮಃ | ಓಂ ನಿಖಿಲೇಂದ್ರಿಯ ದೋಷಷ್ಟೇ ನಮಃ | ಓಂ ಅಷ್ಟಾಕ್ಷರ ಮನೂದಿತಾಯ ನಮಃ | ಓಂ ಸರ್ವಸೌಖ್ಯ ಕೃತೇ ನಮಃ | ಓಂ ಮೃತಪೋತ ಪ್ರಾಣಧಾತ್ರೇ ನಮಃ | ಓಂ ವೇದಿಸ್ಥ ಪುರುಷೋಜೀವಿನೇ ನಮಃ । ಓಂ ವಕ್ಷಿಸ್ಥ ಮಾಲಿಕೋದ್ಧತೇ ನಮಃ | ಓಂ ಸಮಗ್ರ ಟೀಕಾ ವ್ಯಾಖ್ಯಾತ್ರೇ ನಮಃ | ಓಂ ಭಾಟ್ಟ ಸಂಗ್ರಹಕೃತೇ ನಮಃ | ಓಂ ಸುಧಾಪರಿಮಲೋದ್ಧರ್ತ್ರೇ ನಮಃ ।।೧೦೦|| ಓಂ ಅಪಸ್ಮಾರಾಪ ಹರ್ತೇ ನಮಃ | ಓಂ ಉಪನಿಷತ್ಥಂಡಾರ್ಥ ಕೃತೇ ನಮಃ | ಓಂ ಋಗ್ವಾಖ್ಯಾನ ಕೃದಾಚಾರ್ಯಾಯ ನಮಃ | ಓಂ ಮಂತ್ರಾಲಯ ನಿವಾಸಿನೇ ನಮಃ | ಓಂ ನ್ಯಾಯ ಮುಕ್ತಾವಲೀ ಕರ್ತೇ ನಮಃ | ಓಂ ಚಂದ್ರಿಕಾ ವ್ಯಾಖ್ಯಾ ಕರ್ತ್ರೇ ನಮಃ | ಓಂ ಸುತಂತ್ರದೀಪಿಕಾ ಕರ್ತ್ರೇ ನಮಃ | ಓಂ ಗೀತಾರ್ಥ ಸಂಗ್ರಹಕೃತೇ ನಮಃ ||೧೦೮|| ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನುವೇ ||
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)