Rakhi 2024: ಸಹೋದರಿ ಕಟ್ಟಿದ ರಾಖಿಯ ಬಗ್ಗೆ ಈ ತಪ್ಪುಗಳನ್ನು ಮಾಡಬೇಡಿ.. ರಾಖಿ ಬಿಚ್ಚಲು ಕೂಡ ನಿಯಮಗಳಿವೆ!

ರಕ್ಷಾಬಂಧನದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ರಾಖಿಯನ್ನು ತೆಗೆದು ಎಸೆಯಬಾರದು. ಕನಿಷ್ಠ 21 ದಿನಗಳ ಕಾಲ ರಾಖಿ ಕಟ್ಟಿರಬೇಕು. ಇಷ್ಟು ದಿನಗಳ ಕಾಲ ನಿಮ್ಮ ಕೈಯಲ್ಲಿ ರಾಖಿ ಇಡಲು ಸಾಧ್ಯವಾಗದಿದ್ದರೆ, ಕನಿಷ್ಟ ಶ್ರೀಕೃಷ್ಣ ಜನ್ಮಾಷ್ಟಮಿಯವರೆಗಾದರೂ ಸಹೋದರಿ ಕಟ್ಟಿರುವ ರಾಖಿ ನಿಮ್ಮ ಕೈಯಲ್ಲಿರಬೇಕು.

Rakhi 2024: ಸಹೋದರಿ ಕಟ್ಟಿದ ರಾಖಿಯ ಬಗ್ಗೆ ಈ ತಪ್ಪುಗಳನ್ನು ಮಾಡಬೇಡಿ.. ರಾಖಿ ಬಿಚ್ಚಲು ಕೂಡ ನಿಯಮಗಳಿವೆ!
ಸಹೋದರಿ ಕಟ್ಟಿದ ರಾಖಿಯ ಬಗ್ಗೆ ಈ ತಪ್ಪುಗಳನ್ನು ಮಾಡಬೇಡಿ
Follow us
|

Updated on: Aug 19, 2024 | 6:06 AM

ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಸಹೋದರ ಸಹೋದರಿಯರ ನಡುವಿನ ಪ್ರೀತಿಯ ಸಂಕೇತವಾಗಿದೆ. ಈ ದಿನದಂದು ತಮ್ಮ ಸಹೋದರರಿಗೆ ದೀರ್ಘಾಯುಷ್ಯ ಮತ್ತು ಸಂತೋಷದ ಜೀವನವನ್ನು ಹಾರೈಸಲು ಸಹೋದರರ ಮಣಿಕಟ್ಟಿನ ಮೇಲೆ ಸೋದರಿಯರು ರಾಖಿ ಕಟ್ಟುತ್ತಾರೆ. ಇದಕ್ಕೆ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರಿಗೆ ಉಡುಗೊರೆಗಳನ್ನು ನೀಡುತ್ತಾರೆ. ಕಷ್ಟಕಾಲದಲ್ಲಿ ಮತ್ತು ಕೆಟ್ಟ ಸಮಯದಲ್ಲಿ ತಮ್ಮ ಸಹೋದರಿಯರನ್ನು ಸದಾ ಬೆಂಬಲಿಸುವುದಾಗಿ ಅವರು ಭರವಸೆ ನೀಡುತ್ತಾರೆ. ರಾಖಿ ಹಬ್ಬದ ದಿನದಂದು ಸಹೋದರಿಯರು ಬಹಳ ಉತ್ಸಾಹದಿಂದ ರಾಖಿ ಕಟ್ಟುತ್ತಾರೆ. ಆದರೆ ಒಂದು ಅಥವಾ ಎರಡು ದಿನಗಳ ನಂತರ, ರಾಖಿ ತೆಗೆದು ಎಲ್ಲೋ ಎಸೆದುಬಿಡುವ ಸಂಪ್ರದಾಯ ಇತ್ತೀಚೆಗೆ ಬೆಳೆದುಬಂದಿದೆ. ಇದು ಅಕ್ಷಮ್ಯ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂದು ಅಥವಾ ಎರಡು ದಿನಗಳ ನಂತರ ರಾಖಿ ಕಟ್ಟುವುದು ತಪ್ಪು. ಹಾಗಾಗಿ ಈ ತಪ್ಪು ಮಾಡಬೇಡಿ. ಈ ರೀತಿ ಮಾಡುವುದು ಅಶುಭ. ರಕ್ಷಾಬಂಧನದ ನಂತರ ಎಷ್ಟು ದಿನ ರಾಖಿ ಕಟ್ಟಬೇಕು ಎಂಬುದನ್ನು ಮುಂದೆ ತಿಳಿಯೋಣ.

ರಾಖಿ ಹಬ್ಬದಂದು ರಾಖಿ ಕಟ್ಟಲು ಶುಭ ಸಮಯ (ರಕ್ಷಾ ಬಂಧನ 2024 ರಾಖಿ ಕಟ್ಟಲು ಶುಭ ಸಮಯ): ಹಿಂದೂ ಕ್ಯಾಲೆಂಡರ್ ಪ್ರಕಾರ ಈ ವರ್ಷದ ರಕ್ಷಾಬಂಧನವನ್ನು ಆಗಸ್ಟ್ 19 ಸೋಮವಾರದಂದು ಆಚರಿಸಲಾಗುತ್ತದೆ. ಈ ಬಾರಿಯೂ ರಾಖಿ ಹಬ್ಬದ ದಿನ ಭದ್ರ ಛಾಯೆ ಇದೆ. ಆದ್ದರಿಂದ ಈ ವರ್ಷ ರಕ್ಷಾಬಂಧನವನ್ನು ಮಧ್ಯಾಹ್ನ 1:30 ರ ನಂತರ ಆಚರಿಸಲು ಜ್ಯೋತಿಷಿಗಳು ಸೂಚಿಸುತ್ತಾರೆ.

Also Read: ನವ ದಂಪತಿ ಆರು ತಿಂಗಳವರೆಗೆ ತಿರುಪತಿಗೆ ಹೋಗಬಾರದು, ತಿಮ್ಮಪ್ಪನ ದರ್ಶನಕ್ಕೆ ಹೋದಾಗ ಈ ನಾಲ್ಕಾರು ತಪ್ಪು ಮಾಡಬೇಡಿ

ಮಧ್ಯಾಹ್ನ 1:46 ರಿಂದ 4:19 ರವರೆಗೆ ರಾಖಿ ಕಟ್ಟಲು ಶುಭ ಸಮಯ.

ಸಂಜೆ ಶುಭ ಮುಹೂರ್ತ: 6.56 ರಿಂದ 9.07 ರವರೆಗೆ.

ರಾಖಿ ಕಟ್ಟುವಾಗ ಈ ದಿಕ್ಕಿಗೆ ಮುಖ ಮಾಡಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಕ್ಷಾಬಂಧನ ದಿನದಂದು ರಾಖಿ ಕಟ್ಟಲು ಸಹೋದರ ಪೂರ್ವಾಭಿಮುಖವಾಗಿ ಕುಳಿತುಕೊಳ್ಳುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಸಹೋದರಿ ಪಶ್ಚಿಮಕ್ಕೆ ಮುಖ ಮಾಡುವುದು ಶುಭ. ರಾಖಿ ಕಟ್ಟುವ ಮೊದಲು ಸಹೋದರನಿಗೆ ಶ್ರೀಗಂಧದ ತಿಲಕ ಕುಂಕುಮವನ್ನು ಇಡಿ. ಇದಾದ ನಂತರ ರಾಖಿ ಕಟ್ಟಬೇಕು.

ರಕ್ಷಾಬಂಧನದ ನಂತರ ಎಷ್ಟು ದಿನ ರಾಖಿ ಕಟ್ಟಬೇಕು?

ರಕ್ಷಾಬಂಧನದ ನಂತರ ಒಂದು ಅಥವಾ ಎರಡು ದಿನಗಳಲ್ಲಿ ರಾಖಿಯನ್ನು ತೆಗೆದು ಎಸೆಯಬಾರದು. ಕನಿಷ್ಠ 21 ದಿನಗಳ ಕಾಲ ರಾಖಿ ಕಟ್ಟಿರಬೇಕು. ಇಷ್ಟು ದಿನಗಳ ಕಾಲ ನಿಮ್ಮ ಕೈಯಲ್ಲಿ ರಾಖಿ ಇಡಲು ಸಾಧ್ಯವಾಗದಿದ್ದರೆ, ಕನಿಷ್ಟ ಶ್ರೀಕೃಷ್ಣ ಜನ್ಮಾಷ್ಟಮಿಯವರೆಗಾದರೂ ಸಹೋದರಿ ಕಟ್ಟಿರುವ ರಾಖಿ ನಿಮ್ಮ ಕೈಯಲ್ಲಿರಬೇಕು.

Also Read: Oh my Dog ಸ್ವಾಮಿನಿಷ್ಠೆಯ ನಾಯಿಗಳಿಗಾಗಿ ಶತ ಶತಮಾನಗಳ ಹಿಂದೆಯೇ ದೇಗುಲಗಳನ್ನು ಕಟ್ಟಲಾಗಿದೆ! ರೋಚಕ ಕತೆಗಳು ಇಲ್ಲಿವೆ

ರಾಖಿಯನ್ನು ತೆಗೆದ ನಂತರ ಏನು ಮಾಡಬೇಕು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ರಾಖಿಯನ್ನು ತೆಗೆದ ನಂತರ ಅದನ್ನು ಎಲ್ಲಿಯಾದರೂ ಎಸೆಯುವ ಬದಲು, ರಾಖಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಮತ್ತು ಅದನ್ನು ಪವಿತ್ರ ಸ್ಥಳದಲ್ಲಿ ಅಥವಾ ನಿಮ್ಮ ಸಹೋದರಿಯ ವಸ್ತುಗಳೊಂದಿಗೆ ಇರಿಸಿ. ಮುಂದಿನ ರಾಖಿ ಹಬ್ಬದವರೆಗೂ ಜೋಪಾನ ಮಾಡಿಟ್ಟುಕೊಳ್ಳಿ. ಅಥವಾ ರಾಖಿಯನ್ನು ಹರಿಯುವ ನೀರಿನಲ್ಲಿ ಬಿಡಿ. ರಾಖಿ ಕಿತ್ತು ಬಂದರೆ ಅಥವಾ ಹರಿದರೆ, ಅದನ್ನು ಮರದ ಬೇರುಗಳ ಬಳಿ ಒಂದು ರೂಪಾಯಿ ನಾಣ್ಯದೊಂದಿಗೆ ಹೂತುಹಾಕಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

(ಗಮನಿಸಿ: ಈ ಲೇಖನವು ರೂಢಿಗತ, ಜನಪ್ರಿಯ ನಂಬಿಕೆಗಳನ್ನು ಆಧರಿಸಿದೆ. ಈ ಸುದ್ದಿಯಲ್ಲಿ ಒಳಗೊಂಡಿರುವ ಮಾಹಿತಿ ಮತ್ತು ಸತ್ಯಗಳ ನಿಖರತೆಗೆ ಟಿವಿ9 ಜವಾಬ್ದಾರರಾಗಿರುವುದಿಲ್ಲ)