ಇಪ್ಪತ್ತೇಳು ನಕ್ಷತ್ರಗಳಲ್ಲಿ ಇದು ಹನ್ನೊಂದನೇ ನಕ್ಷತ್ರ. ಇದರ ದೇವತೆ ಭಗ. ಅಚ್ಚ ಕನ್ನಡದಲ್ಲಿ ಇದಕ್ಕೆ ಹುಬ್ಬ ಎಂದೂ ಕರೆಯುತ್ತಾರೆ. ಇದು ಉಗ್ರ ಸ್ವಭಾವದ ನಕ್ಷತ್ರ ಎಂಬುದಾಗಿ ಹೇಳುತ್ತಾರೆ. ಎರಡು ನಕ್ಷತ್ರಗಳಿಂದ ಕೂಡಿರುವ ಇದು ಭೂಮಿಯಿಂದ ನೋಡುವಾಗ ಮಲಗುವ ಮಂಚದಂತೆ ಕಾಣಿಸುತ್ತದೆ. ಫಾಲ್ಗುಣ ಮಾಸವಾಗುವುದು ಇದೇ ನಕ್ಷತ್ರದ ಕಾರಣಕ್ಕೆ. ಸಿಂಹ ರಾಶಿಯಲ್ಲಿ ಬರುವ ಮತ್ತೊಂದು ಪೂರ್ಣ ನಕ್ಷತ್ರವಿದಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರಿಗೆ ಮ ಮತ್ತು ಟ ಅಕ್ಷರದಿಂದ ನಕ್ಷತ್ರನಾಮವನ್ನು ಇಡುತ್ತಾರೆ. ಇದರಲ್ಲಿ ಜನಿಸದವರು ಎಂತಹವರಾಗಿರುತ್ತಾರೆ?
ಇವರು ಇನ್ನೊಬ್ಬರಿಗೆ ಪ್ರಿಯವಾಗುವಂತೆ ಮಾತನಾಡುತ್ತಾರೆ. ಸ್ಪಷ್ಟವಾಗಿ ದನಿಯ ಏರಿಳಿತದ ಜೊತೆ ಮಾತನಾಡುವುದರಿಂದ ಮನೋಹವಾಗಿ ಇರುತ್ತದೆ.
ತನ್ನ ಬಳಿ ಇರುವ ವಸ್ತು ಅಥವಾ ಸಂಪತ್ತನ್ನು ಇನ್ನೊಬ್ಬರಿಗೆ ದಾನವಾಗಿ ಕೊಡುವ ಮನಸ್ಸು ಇರುವವನು. ದಾನಶೀಲವು ಇವರಲ್ಲಿ ಅಧಿಕವಾಗಿ ಕಾಣಿಸುವುದು.
ಇವರ ಚರ್ಮದ ಕಾಂತಿ ಆಕರ್ಷಕವಾಗಿ ಇರುತ್ತದೆ. ಹೊಳಪಿನ ಶರೀರ ಇವರದ್ದು. ತೇಜಸ್ಸು ಉಳ್ಳವರಂತೆ ಕಾಣಿಸುವರು.
ಕುಳಿತಲ್ಲಿ ಕುಳಿತುಕೊಳ್ಳುವ ಸ್ವಭಾವ ಇರದು. ಕ್ರಿಯಾಶೀಲರಾಗಿ ಓಡಾಟ ಮಾಡುತ್ತಲೇ ಇರಬೇಕು. ಕೆಲಸವಿಲ್ಲದಿದ್ದರೂ ಓಡಾಟ ಮಾಡಲಿಕ್ಕಾಗಿಯಾದರೂ ಕೆಲಸವನ್ನು ಹುಡುಕುವರು.
ರಾಜನ ಅಥವಾ ರಾಜನಿಗೆ ಸಮಾನರಾದವರ ಬಳಿ ಯಾವುದಾದರೂ ಒಂದು ಸೇವಾವೃತ್ತಿಯನ್ನು ಮಾಡುವರು. ಅದರಲ್ಲಿ ರಕ್ತಿ ಅಧಿಕ.
ಪರಾಕ್ರಮವನ್ನು ತೋರಿಸಲು ಹಿಂಜರಿಯುವುದಿಲ್ಲ. ಸಿಂಹದಂತಹ ಶೌರ್ಯ ಇವರಲ್ಲಿ. ಯಾವುದನ್ನೂ ಮಾಡಬಲ್ಲ ಸಾಮರ್ಥ್ಯ ಇವರಲ್ಲಿರುವುದು.
ವೇಗವಾಗಿ ಕೆಲಸವನ್ನು ಮಾಡುತ್ತಾರೆ ಮತ್ತು ಪೂರ್ವಾಪರ ಯೋಚನೆ ಕಡಿಮೆ. ಏನನ್ನಾದರೂ ಮಾಡಬೇಕು ಎಂದುಕೊಂಡರೆ ಮಾಡಿ ಮುಗಿಸುವುದು. ಅನಂತರ ಬಂದಿದ್ದನ್ನು ಎದುರಿಸುವ ಮನೋಭಾವ.
ಜೀವನದಲ್ಲಿ ಹೆಚ್ಚು ಸಂಗಾತಿಗಳು ಬರಬಹುದು. ಪತ್ನಿಯನ್ನೋ ಪತಿಯನ್ನೋ ಕಲಹಗಳಿಂದ ಪ್ರೀತಿಯಿಂದ ಮರಣದಿಂದ ಹೀಗೆ ನಾನಾಪ್ರಕಾರಗಳಿಂದ ಒಂದಕ್ಕಿಂತ ಹೆಚ್ಚು ಪಡೆಯುವರು.
ಅಸೆ ಅತಿಯಾಗಿರುವ ನಕ್ಷತ್ರ ಇದು. ಕಾಮವನ್ನು ಪೂರೈಸಿಕೊಳ್ಳದೇ ದುಃಖಿಸುವ ಸಂದರ್ಭವೂ ಬರಲಿದೆ. ಅತಿ ಆಸೆ ಅತಿ ದುಃಖವನ್ನು ತರುವುದು. ಶುಕ್ರನು ಈ ನಕ್ಷತ್ರದ ಗ್ರಹವಾದ ಕಾರಣ ಭೋಗದಲ್ಲಿ ರಕ್ತಿ ಹೆಚ್ಚು.
ಇದನ್ನೂ ಓದಿ: Vaikuntha Ekadashi 2025: ವೈಕುಂಠ ಏಕಾದಶಿಯಂದು ಈ ತಪ್ಪುಗಳನ್ನು ಮಾಡಬೇಡಿ
ವಾಸ್ತವಿಕವಾಗಿ ಇವರು ಕ್ರೂರಸ್ವಭಾವ ಉಳ್ಳವರು. ಸಿಟ್ಟು, ಇನ್ನೊಬ್ಬರ ಸಂತೋಷವನ್ನು ಹಾಳು ಮಾಡುವರು, ಅಸಹನೆ, ಅಸೂಯೆ ಇವುಗಳು ಹೆಚ್ಚಾಗಿ ಇರುತ್ತದೆ. ಅತಿಯಾದ ಹಾಗೂ ಅನವಶ್ಯಕವಾದ ಅಸೆ. ಅಹಂಕಾರಗಳಿಂದ ಕೂಡಿದವರು ಇವರು. ಏಕೆಂದರೆ ಇದು ಉಗ್ರ ನಕ್ಷತ್ರ. ಆದ್ದರಿಂದ ಇವರ ಸ್ವಭಾವವೂ ಉಗ್ರವೇ.
ವಿಲಾಸಿ ಜೀವನಕ್ಕೆ ಬೇಕಾದ ಕಾರ್ಯಗಳನ್ನು ಈ ನಕ್ಷತ್ರದಲ್ಲಿ ಆರಂಭಿಸಿದರೆ ಶುಭ. ಆದಾಯಗಳು ಹೆಚ್ಚು ಬರುತ್ತವೆ. ಆರ್ಥಿಕತೆಯ ಎತ್ತರಕ್ಕೆ ಏರಲು ಸಾಧ್ಯವಾಗುವುದು. ಇಂತಹ ವಿಶೇಷತೆಯುಳ್ಳ ಅಪರೂಪದ ನಕ್ಷತ್ರ.
ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:32 am, Wed, 8 January 25