ಅಖಾ ತೀಜ್ ಎಂದು ಕರೆಯಲ್ಪಡುವ ಅಕ್ಷಯ ತೃತೀಯ ಹಬ್ಬವು ಹಿಂದೂ ಮತ್ತು ಜೈನರ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಶುಕ್ಷ ಪಕ್ಷ ತೃತೀಯದಂದು ಆಚರಿಸಲಾಗುತ್ತದೆ ಈ ಹಬ್ಬವನ್ನು ಹೊಸ ಆರಂಭಗಳಿಗೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ದೃಕ್ ಪಂಚಾಂಗದ ಪ್ರಕಾರ ಅಕ್ಷಯ ಎಂದರೆ ‘ಎಂದಿಗೂ ಕಡಿಮೆಯಾಗುವುದಿಲ್ಲ’ ಎಂದರ್ಥ. ಈ ದಿನದಂದು ಯಾವುದೇ ಹೊಸ ಉದ್ಯಮ, ವ್ಯಾಪಾರ ಮತ್ತು ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರೆ ಅದು ಸಮೃದ್ಧವಾಗುತ್ತದೆ ಹಾಗೂ ಈ ದಿನದಂದು ಚಿನ್ನ ಮತ್ತು ಆಸ್ತಿಯನ್ನು ಖರೀದಿಸುವುದು ಭವಿಷ್ಯದಲ್ಲಿ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.
ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22 ಕ್ಕೆ ಅಥವಾ 23 ರಂದು ನಡೆಯುತ್ತದೆಯೋ ಎಂಬ ಗೊಂದಲ ಅನೇಕರಲ್ಲಿ ಇದೆ. ದೃಕ್ ಪಂಚಾಂಗದ ಪ್ರಕಾರ, ಏಪ್ರಿಲ್ 22 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ತಿಥಿಯು ಏಪ್ರಿಲ್ 22 ರಂದು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ಬೆಳಗ್ಗೆ 7.47 ಕ್ಕೆ ಕೊನೆಗೊಳ್ಳುತ್ತದೆ.
ಅಕ್ಷಯ ತೃತೀಯ ಪೂಜೆಯ ಶುಭ ಮುಹೂರ್ತವು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12:20 ಕ್ಕೆ ಕೊನೆಗೊಳ್ಳುತ್ತದೆ. ಹೆಚ್ಚುವರಿಯಾಗಿ ಚೋಗಾಡಿಯಾ ಮುಹೂರ್ತವು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗಿ ಬೆಳಗ್ಗೆ 9:04 ಕ್ಕೆ ಕೊನೆಗೊಳ್ಳುತ್ತದೆ. ಏಪ್ರಿಲ್ 23 ರಂದು ಇದು ಬೆಳಗ್ಗೆ 7:26 ಕ್ಕೆ ಪ್ರಾರಂಭವಾಗಿ ಅದೇ ದಿನ ಬೆಳಗ್ಗೆ 7:47 ಕ್ಕೆ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: Akshaya Tritiya 2023: ಅಕ್ಷಯವಾಗಲಿ ಈ ಅಕ್ಷಯ ತೃತೀಯ, ಅಂದು ಬದರಿ ನಾರಾಯಣ ದೇವಾಲಯದ ದ್ವಾರ ತೆರೆಯುವುದು
ದೃಕ್ ಪಂಚಾಂಗದ ಪ್ರಕಾರ ಚಿನ್ನವನ್ನು ಖರೀದಿಸಲು ಶುಭ ಮುಹೂರ್ತವು ಏಪ್ರಿಲ್ 22 ರಂದು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ರಂದು ಬೆಳಗ್ಗೆ 5:48 ಕ್ಕೆ ಕೊನೆಗೊಳ್ಳುತ್ತದೆ.
ನವದೆಹಲಿ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:20 ರವರೆಗೆ, ಪುಣೆ – 7:49 ರಿಂದ 12:33 ರವರೆಗೆ, ಚೆನ್ನೈ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:08 ರವರೆಗೆ, ಕೋಲ್ಕತ್ತಾ – ಬೆಳಿಗ್ಗೆ 5:10 ರಿಂದ 07:47 ರವರೆಗೆ, ಹೈದರಾಬಾದ್ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:15 ರವರೆಗೆ, ಅಹಮದಾಬಾದ್ – 7:49 ರಿಂದ 12:38 ರವರೆಗೆ, ನೋಯ್ಡಾ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:19 ರವರೆಗೆ, ಜೈಪುರ – ಬೆಳಿಗ್ಗೆ 7:49 ರಿಂದ 12:26 ರವರೆಗೆ, ಮುಂಬೈ – 7:49 ರಿಂದ 12:37 ರವರೆಗೆ, ಬೆಂಗಳೂರು – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:18 ರವರೆಗೆ, ಚಂಡೀಗಢ – ಬೆಳಗ್ಗೆ 7:49 ರಿಂದ 12:22 ರವರೆಗೆ.
ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:22 pm, Thu, 20 April 23