AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Akshaya Tritiya 2023: ಅಕ್ಷಯವಾಗಲಿ ಈ ಅಕ್ಷಯ ತೃತೀಯ, ಅಂದು ಬದರಿ ನಾರಾಯಣ ದೇವಾಲಯದ ದ್ವಾರ ತೆರೆಯುವುದು

ಅಕ್ಷಯ ಎಂಬ ಪದವೇ ನಾಶವಿಲ್ಲದ್ದು ಎಂದರ್ಥ. ಯಾವ ಹಬ್ಬದ ಆಚರಣೆಯಿಂದ ನಮ್ಮ ಕರ್ಮಗಳು ಅಕ್ಷಯವಾಗುವುದೋ ಅದು ಅಕ್ಷಯ ತೃತೀಯಾ ಎನ್ನಿಸಿಕೊಳ್ಳುವುದು.

Akshaya Tritiya 2023: ಅಕ್ಷಯವಾಗಲಿ ಈ ಅಕ್ಷಯ ತೃತೀಯ, ಅಂದು ಬದರಿ ನಾರಾಯಣ ದೇವಾಲಯದ ದ್ವಾರ ತೆರೆಯುವುದು
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Apr 20, 2023 | 10:31 AM

Share

ಹಬ್ಬ-ಹರಿದಿನಗಳು ನಮ್ಮ ಜೀವನದುದ್ದಕ್ಕೂ ಹಾಸುಹೊಕ್ಕಾಗಿ ಸೇರಿಕೊಂಡಿರುವ ಒಂದು ಮುಖ್ಯವಾದ ವಿಷಯ. ಕೆಲವು ಹಬ್ಬಗಳನ್ನು ನಾವು ಅವುಗಳ ಮಹತ್ತ್ವ ತಿಳಿಯದೇ ಆಚರಿಸುತ್ತಿದ್ದೇವೆ. ಈಗಂತೂ ಆಚರಣೆಗಿಂತ ಆಡಂಬರವೇ ಹೆಚ್ಚಾಗಿದೆ. ತೋರಿಕೆಗಾಗಿ ಮಾಡುವ ಹಬ್ಬಕ್ಕೆ ಫಲವೆಲ್ಲಿದೆ ಹೇಳಿ? ಅವಿವೇಕದಿಂದ ನಾವು ಆಚರಿಸುತ್ತಿರುವ ಹಬ್ಬ-ಹರಿದಿನಗಳು ಇಂದು ನಮಗೆ ಯಾವ ಉದ್ದೇಶದಿಂದ ಆರಂಭವಾಯಿತೋ ಅದೇ ಉದ್ದೇಶವು ಉಳಿದಿಲ್ಲ. ಸದ್ಯ ಅಕ್ಷಯ ತೃತೀಯಾ ಹಬ್ಬ ಬಂದಿದೆ. ಈ ಹಬ್ಬದ ಮಹತ್ವವೇನು? ಅಕ್ಷಯ ತೃತೀಯ ಹಬ್ಬವನ್ನು ಯಾಕೆ ಆಚರಿಸುವುದು? ಎನ್ನುವ ಬಗ್ಗೆ ಸ್ವಲ್ಪ ತಿಳಿಯುವ ಪ್ರಯತ್ನ ಮಾಡೋಣ‌.

ಅಕ್ಷಯ ಎಂಬ ಪದವೇ ನಾಶವಿಲ್ಲದ್ದು ಎಂದರ್ಥ. ಯಾವ ಹಬ್ಬದ ಆಚರಣೆಯಿಂದ ನಮ್ಮ ಕರ್ಮಗಳು ಅಕ್ಷಯವಾಗುವುದೋ ಅದು ಅಕ್ಷಯ ತೃತೀಯಾ ಎನ್ನಿಸಿಕೊಳ್ಳುವುದು. ಈ ಹಬ್ಬವನ್ನು ನಾವು ವಸಂತ ಋತುವಿನ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯಾ ತಿಥಿಯಂದು ಆಚರಣೆ ಮಾಡುತ್ತೇವೆ.

ಏನು ಈ ದಿನದ ವಿಶೇಷ?

ಪುಣ್ಯನದಿ ಸ್ನಾನದಿಂದ ಪುಣ್ಯವಿದೆ. ಅದರಲ್ಲಿಯೂ ಗಂಗಾದಿ ನದಿ ಸ್ನಾನಕ್ಕೆ ಹೆಚ್ಚು ಪ್ರಾಶಸ್ತ್ಯ ಇದೆ. ಶ್ರೀಕೃಷ್ಣನನ್ನು ಷೋಡಶ ಉಪಚಾರಗಳಿಂದ ಪೂಜಿಸುವ ಸಂಪ್ರದಾಯವೂ ಬಂದಿದೆ.

ಭಾರತದ ಪವಿತ್ರ ಕ್ಷೇತ್ರಗಳಲ್ಲೊಂದಾದ ಬದರಿ ನಾರಾಯಣ ದೇವಾಲಯದ ದ್ವಾರವನ್ನು ತೆರೆಯುವುದೂ ಅಕ್ಷಯ್ಯ ತೃತೀಯಾದಂದೇ ಎನ್ನುವುದು ವಿಶೇಷ.

ದಶಾವತಾರಗಳಲ್ಲಿ ‘ಬ್ರಾಹ್ಮ ಹಾಗೂ ಕ್ಷಾತ್ರ’ ಅಂಶಾವತಾರಿಯಾದ ಪರಶುರಾಮ ಜಯಂತಿಯೂ ಇರುವುದು ಇದೇ ದಿನ. ಭಗೀರಥನ ತಪಸ್ಸಿನ ಫಲವಾಗಿ ಗಂಗೆ ಭೂಮಿಗೆ ಶಿವನ ಜಟೆಯಿಂದ ಬಂದದ್ದು ಅಕ್ಷಯ ತೃತೀಯಾದಂದು ಎಂಬ ಪ್ರತೀತಿ ಇದೆ.

ಧನೇಶನಾದ ಕುಬೇರನಿಗೆ ಸಂಪತ್ತು ದೊರೆತದ್ದು ಅಕ್ಷಯ ತೃತೀಯಾ ದಿನದಂದೇ ಎಂಬ ಪುರಾಣಕಥೆಯೂ ಇದೆ. ಬಡವನಾಗಿದ್ದ ಕುಚೇಲನಿಗೆ ಶ್ರೀಕೃಷ್ಣನು ಅನುಗ್ರಹಿಸಿದ್ದು ಇದೇ ದಿನ ಎಂಬ ವಾಡಿಕೆ ಇದೆ. ಯುಗಗಳಲ್ಲಿ ಮೊದಲನೆಯದಾದ ಕೃತಯುಗ ಪ್ರಾರಂಭವಾದದ್ದು ಅಕ್ಷಯ ತೃತೀಯಾದಂದು.

ಇದನ್ನೂ ಓದಿ: Akshaya Tritiya 2023: ಅಕ್ಷಯ ತೃತೀಯ ಹಬ್ಬದ ಇತಿಹಾಸ, ಮಹತ್ವ ಮತ್ತು ಆಚರಣೆ

ಇಂದು ಮಾಡುವ ಶ್ರಾದ್ಧಕ್ಕೆ ಅಕ್ಷಯ ಫಲ. ಶುದ್ಧ ಮನಸ್ಸಿನಿಂದ ಇಂದು ಮಾಡುವ ದಾನಕ್ಕೂ ಅನಂತಫಲವಿದೆ. ಇಂದು ಮಾಡುವ ಸ್ನಾನ, ಜಪ, ತಪಸ್ಸು, ತರ್ಪಣ, ದಾನಗಳಿಗೆ ಅಕ್ಷಯಫಲವಿದೆ. ನೀಡುವುದರಿಂದ ಇದನ್ನು ಅಕ್ಷಯಫಲ ತೃತೀಯ ಎಂದು ಕೂಡ ಕರೆಯಲಾಗುತ್ತದೆ.

ಈ ದಿನ ಮದುವೆ, ಗೃಹಪ್ರವೇಶ ಮೊದಲಾದ ಮಂಗಲಕಾರ್ಯಗಳಿಗೆ ಪ್ರತ್ಯೇಕ ಮುಹೂರ್ತವನ್ನು ನೋಡಬೇಕಿಲ್ಲ. ಹೀಗೆ ಅಕ್ಷಯತೃತೀಯಾ ನಾನಾ ವಿಧವಾದ ಶುಭಫಲಕ್ಕೆ ಕಾರಣವಾದ ಹಬ್ಬ. ಆಡಂಬರವಿಲ್ಲದೇ ಅನಂತಫಲವನ್ನು ಕೊಡುವ ಹಬ್ಬವು ಜನಮಾನಸದಿಂದ ದೂರಾಗಿದೆ. ಹಿಂದಿನಿಂದ ಬಂದ ಹಬ್ಬ – ಹರಿದಿನಗಳು ಕೇವಲ ಆಡಂಬರಕ್ಕಾಗಿ ಎಂಬ ಭಾವನೆ ಇದೆ. ಇದಕ್ಕೆ ಕಾರಣ ಇಂದಿನವರ ಮತಿಕ್ಷಾಮ ಎಂದಷ್ಟೇ ಹೇಳಬಹುದು. ಹಬ್ಬಗಳ ಆಚರಣೆ ಮಾಡೋಣ… ಪ್ರಕೃತಿಯೇ ನಮಗೆ ಕೊಡುವ ಸದವಕಾಶವನ್ನು ಅನುಭವಿಸೋಣ…

ಲೇಖನ: ಲೋಹಿತಶರ್ಮಾ

Published On - 10:29 am, Thu, 20 April 23

ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ