Akshaya Tritiya 2023: ಅಕ್ಷಯ ತೃತೀಯ ಹಬ್ಬವು ಏ. 22 ಅಥವಾ 23 ಯಾವಾಗ? ಹಬ್ಬದ ಶುಭ ಮುಹೂರ್ತ, ಚಿನ್ನ ಖರೀದಿಸಲು ಮಂಗಳಕರ ಸಮಯ

Akshaya Tritiya: ಅಕ್ಷಯ ತೃತೀಯ ದಿನದಂದು ಪ್ರಾರಂಭಗೊಳ್ಳುವ ಯಾವುದೇ ಕಾರ್ಯವು ಯಾವಾಗಲು ಯಶಸ್ವಿಯಾಗುತ್ತದೆ ಎಂಬ ನಂಬಿಕೆಯಿದೆ. ಮತ್ತು ಈ ದಿನ ಚಿನ್ನ ಮತ್ತು ಆಸ್ತಿಯನ್ನು ಖರೀದಿಸುವುದು ಭವಿಷ್ಯದಲ್ಲಿ ಅದು ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಹಾಗಾದರೆ ಈ ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಲು ಮಂಗಳಕರ ಸಮಯ ಯಾವುದು, ಶುಭ ಮುಹೂರ್ತ ಯಾವಾಗ ಎಂಬೆಲ್ಲ ವಿಚಾರಗಳನ್ನು ತಿಳಿಯಿರಿ.

Akshaya Tritiya 2023: ಅಕ್ಷಯ ತೃತೀಯ ಹಬ್ಬವು ಏ. 22 ಅಥವಾ 23 ಯಾವಾಗ? ಹಬ್ಬದ ಶುಭ ಮುಹೂರ್ತ, ಚಿನ್ನ ಖರೀದಿಸಲು ಮಂಗಳಕರ ಸಮಯ
ಸಾಂದರ್ಭಿಕ ಚಿತ್ರ
Follow us
ಮಾಲಾಶ್ರೀ ಅಂಚನ್​
| Updated By: Digi Tech Desk

Updated on:Apr 20, 2023 | 3:39 PM

ಅಖಾ ತೀಜ್ ಎಂದು ಕರೆಯಲ್ಪಡುವ ಅಕ್ಷಯ ತೃತೀಯ ಹಬ್ಬವು ಹಿಂದೂ ಮತ್ತು ಜೈನರ ಪವಿತ್ರ ಹಬ್ಬಗಳಲ್ಲಿ ಒಂದಾಗಿದೆ. ಇದನ್ನು ಶುಕ್ಷ ಪಕ್ಷ ತೃತೀಯದಂದು ಆಚರಿಸಲಾಗುತ್ತದೆ ಈ ಹಬ್ಬವನ್ನು ಹೊಸ ಆರಂಭಗಳಿಗೆ ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ದೃಕ್ ಪಂಚಾಂಗದ ಪ್ರಕಾರ ಅಕ್ಷಯ ಎಂದರೆ ‘ಎಂದಿಗೂ ಕಡಿಮೆಯಾಗುವುದಿಲ್ಲ’ ಎಂದರ್ಥ. ಈ ದಿನದಂದು ಯಾವುದೇ ಹೊಸ ಉದ್ಯಮ, ವ್ಯಾಪಾರ ಮತ್ತು ಕಟ್ಟಡ ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಿದರೆ ಅದು ಸಮೃದ್ಧವಾಗುತ್ತದೆ ಹಾಗೂ ಈ ದಿನದಂದು ಚಿನ್ನ ಮತ್ತು ಆಸ್ತಿಯನ್ನು ಖರೀದಿಸುವುದು ಭವಿಷ್ಯದಲ್ಲಿ ಸಮೃದ್ಧಿ ಮತ್ತು ಸಂಪತ್ತನ್ನು ತರುತ್ತದೆ ಎಂದು ನಂಬಲಾಗಿದೆ. ಈ ದಿನದಂದು ಭಗವಾನ್ ವಿಷ್ಣುವನ್ನು ಪೂಜಿಸುವುದು ಪ್ರಮುಖ ಆಚರಣೆಗಳಲ್ಲಿ ಒಂದಾಗಿದೆ.

ಅಕ್ಷಯ ತೃತೀಯ ಹಬ್ಬ ಏಪ್ರಿಲ್ 22 ಅಥವಾ 23 ಯಾವಾಗ?

ಈ ವರ್ಷ ಅಕ್ಷಯ ತೃತೀಯ ಏಪ್ರಿಲ್ 22 ಕ್ಕೆ ಅಥವಾ 23 ರಂದು ನಡೆಯುತ್ತದೆಯೋ ಎಂಬ ಗೊಂದಲ ಅನೇಕರಲ್ಲಿ ಇದೆ. ದೃಕ್ ಪಂಚಾಂಗದ ಪ್ರಕಾರ, ಏಪ್ರಿಲ್ 22 ರಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಅಕ್ಷಯ ತೃತೀಯ ತಿಥಿಯು ಏಪ್ರಿಲ್ 22 ರಂದು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ಬೆಳಗ್ಗೆ 7.47 ಕ್ಕೆ ಕೊನೆಗೊಳ್ಳುತ್ತದೆ.

ಅಕ್ಷಯ ತೃತೀಯ ಶುಭ ಮುಹೂರ್ತ:

ಅಕ್ಷಯ ತೃತೀಯ ಪೂಜೆಯ ಶುಭ ಮುಹೂರ್ತವು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗುತ್ತದೆ ಮತ್ತು ಮಧ್ಯಾಹ್ನ 12:20 ಕ್ಕೆ ಕೊನೆಗೊಳ್ಳುತ್ತದೆ. ಹೆಚ್ಚುವರಿಯಾಗಿ ಚೋಗಾಡಿಯಾ ಮುಹೂರ್ತವು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗಿ ಬೆಳಗ್ಗೆ 9:04 ಕ್ಕೆ ಕೊನೆಗೊಳ್ಳುತ್ತದೆ. ಏಪ್ರಿಲ್ 23 ರಂದು ಇದು ಬೆಳಗ್ಗೆ 7:26 ಕ್ಕೆ ಪ್ರಾರಂಭವಾಗಿ ಅದೇ ದಿನ ಬೆಳಗ್ಗೆ 7:47 ಕ್ಕೆ ಕೊನೆಗೊಳ್ಳುತ್ತದೆ.

ಇದನ್ನೂ ಓದಿ: Akshaya Tritiya 2023: ಅಕ್ಷಯವಾಗಲಿ ಈ ಅಕ್ಷಯ ತೃತೀಯ, ಅಂದು ಬದರಿ ನಾರಾಯಣ ದೇವಾಲಯದ ದ್ವಾರ ತೆರೆಯುವುದು

ಅಕ್ಷಯ ತೃತೀಯದಲ್ಲಿ ಚಿನ್ನ ಖರೀದಿಸಲು ಶುಭ ಸಮಯ:

ದೃಕ್ ಪಂಚಾಂಗದ ಪ್ರಕಾರ ಚಿನ್ನವನ್ನು ಖರೀದಿಸಲು ಶುಭ ಮುಹೂರ್ತವು ಏಪ್ರಿಲ್ 22 ರಂದು ಬೆಳಗ್ಗೆ 7:49 ಕ್ಕೆ ಪ್ರಾರಂಭವಾಗಿ ಏಪ್ರಿಲ್ 23 ರಂದು ಬೆಳಗ್ಗೆ 5:48 ಕ್ಕೆ ಕೊನೆಗೊಳ್ಳುತ್ತದೆ.

ಅಕ್ಷಯ ತೃತೀಯ ಹಬ್ಬದ ನಗರವಾರು ಪೂಜೆಯ ಸಮಯ:

ನವದೆಹಲಿ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:20 ರವರೆಗೆ, ಪುಣೆ – 7:49 ರಿಂದ 12:33 ರವರೆಗೆ, ಚೆನ್ನೈ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:08 ರವರೆಗೆ, ಕೋಲ್ಕತ್ತಾ – ಬೆಳಿಗ್ಗೆ 5:10 ರಿಂದ 07:47 ರವರೆಗೆ, ಹೈದರಾಬಾದ್ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:15 ರವರೆಗೆ, ಅಹಮದಾಬಾದ್ – 7:49 ರಿಂದ 12:38 ರವರೆಗೆ, ನೋಯ್ಡಾ – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:19 ರವರೆಗೆ, ಜೈಪುರ – ಬೆಳಿಗ್ಗೆ 7:49 ರಿಂದ 12:26 ರವರೆಗೆ, ಮುಂಬೈ – 7:49 ರಿಂದ 12:37 ರವರೆಗೆ, ಬೆಂಗಳೂರು – ಬೆಳಿಗ್ಗೆ 7:49 ರಿಂದ ಮಧ್ಯಾಹ್ನ 12:18 ರವರೆಗೆ, ಚಂಡೀಗಢ – ಬೆಳಗ್ಗೆ 7:49 ರಿಂದ 12:22 ರವರೆಗೆ.

ಆಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 3:22 pm, Thu, 20 April 23

ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಕೊಟ್ಟ ಮಾತು ಉಳಿಸಿಕೊಂಡ ಸುರೇಶ್, ಧನರಾಜ್ ಮಗಳಿಗೆ ಉಡುಗೊರೆ
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಿಗ್​ಬಾಸ್: ಫ್ಯಾಮಿಲಿ ವಿಸಿಟ್ ಬಳಿಕ ಗೆಳೆತನಗಳೆಲ್ಲ ಪೀಸ್-ಪೀಸ್
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಬಳ್ಳಾರಿಯ ಕಂಪ್ಲಿಯಿಂದ ವಕ್ಫ್ ವಿರುದ್ಧ ಹೋರಾಟ ಪುನರಾರಂಭಿಸಿದ ಯತ್ನಾಳ್ ತಂಡ
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಕುಟುಂಬದ ಅರಣ್ಯರೋದನೆ; ಗೋಗರೆದರೂ ಕಿವಿಗೆ ಹಾಕಿಕೊಳ್ಳದ ಪೊಲೀಸರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ಹಿರಿಯ ನಾಯಕರನ್ನು ಪೊಲೀಸ್ ವಶಕ್ಕೆ ಪಡೆದರೂ ಎದೆಗುಂದದ ಕಾರ್ಯಕರ್ತರು
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ