Kalashtami 2026: ಇಂದು ಕಾಲಾಷ್ಟಮಿ; ಭೈರವನ ಅನುಗ್ರಹಕ್ಕಾಗಿ ಮಾಡಬೇಕಾದ ಪ್ರಮುಖ ಕಾರ್ಯಗಳಿವು

ಕಾಲಾಷ್ಟಮಿಯು ಶಿವನ ಉಗ್ರ ರೂಪವಾದ ಕಾಲಭೈರವನಿಗೆ ಸಮರ್ಪಿತವಾದ ಪವಿತ್ರ ದಿನ. ಪ್ರತಿ ತಿಂಗಳು ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ. ಕಾಲಭೈರವ ಪೂಜೆಯಿಂದ ಕಾಲಭಯ, ನಕಾರಾತ್ಮಕ ಶಕ್ತಿಗಳು ದೂರವಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ. ಸಾಸಿವೆ ಎಣ್ಣೆಯ ದೀಪ ಹಚ್ಚಿ, ಶ್ವಾನ ಸೇವೆ ಮಾಡುವುದರಿಂದ ರಾಹು-ಕೇತು, ಶನಿ ದೋಷಗಳ ತೀವ್ರತೆ ಕಡಿಮೆಯಾಗಿ ಜೀವನದ ಕಷ್ಟಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

Kalashtami 2026: ಇಂದು ಕಾಲಾಷ್ಟಮಿ; ಭೈರವನ ಅನುಗ್ರಹಕ್ಕಾಗಿ ಮಾಡಬೇಕಾದ ಪ್ರಮುಖ ಕಾರ್ಯಗಳಿವು
ಇಂದು ಕಾಲಾಷ್ಟಮಿ
Image Credit source: shutterstock.com

Updated on: Jul 07, 2026 | 8:41 AM

ಮುಖ್ಯಾಂಶಗಳು

  • ಕಾಲಾಷ್ಟಮಿಯು ಶಿವನ ಉಗ್ರ ರೂಪವಾದ ಕಾಲಭೈರವನಿಗೆ ಸಮರ್ಪಿತವಾದ ಪವಿತ್ರ ದಿನ.
  • ಪ್ರತಿ ತಿಂಗಳು ಕೃಷ್ಣ ಪಕ್ಷದ ಅಷ್ಟಮಿಯಂದು ಆಚರಿಸಲಾಗುತ್ತದೆ.
  • ಕಾಲಭೈರವ ಪೂಜೆಯಿಂದ ಕಾಲಭಯ, ನಕಾರಾತ್ಮಕ ಶಕ್ತಿ ದೂರವಾಗಿ ಮನಸ್ಸಿಗೆ ಶಾಂತಿ ಲಭಿಸುತ್ತದೆ.

ಕಾಲಾಷ್ಟಮಿಯು ಹಿಂದೂ ಧರ್ಮದಲ್ಲಿ ಶಿವನ ಉಗ್ರ ರೂಪವಾದ ಕಾಲಭೈರವನಿಗೆ ಸಮರ್ಪಿತವಾದ ಅತ್ಯಂತ ಪವಿತ್ರ ದಿನವಾಗಿದೆ. ಪ್ರತಿ ತಿಂಗಳು ಹುಣ್ಣಿಮೆಯ ನಂತರದ ಕೃಷ್ಣ ಪಕ್ಷದ ಅಷ್ಟಮಿ ತಿಥಿಯಂದು ಇದನ್ನು ಆಚರಿಸಲಾಗುತ್ತದೆ. ನಮ್ಮ ಜೀವನದಲ್ಲಿರುವ ಕಾಲದ ಭಯ, ನಕಾರಾತ್ಮಕ ಶಕ್ತಿಗಳು ಮತ್ತು ಅಡೆತಡೆಗಳನ್ನು ನಿವಾರಿಸುವ ಶಕ್ತಿ ಕಾಲಭೈರವನಿಗಿದೆ ಎಂಬುದು ಸನಾತನ ಧರ್ಮದ ಗಾಢ ನಂಬಿಕೆಯಾಗಿದೆ.

ಸಂಜೆ ದೀಪಾರಾಧನೆ ಮತ್ತು ಭೈರವ ಪೂಜೆ:

ಸಾಮಾನ್ಯವಾಗಿ ಕಾಲಭೈರವನಿಗೆ ಸಂಜೆ ಅಥವಾ ರಾತ್ರಿಯ ಸಮಯದಲ್ಲಿ ಪೂಜೆ ಮಾಡುವುದು ವಿಶೇಷ ಫಲವನ್ನು ನೀಡುತ್ತದೆ. ಇಂದಿನ ದಿನ ಭೈರವನಿಗೆ ಸಾಸಿವೆ ಎಣ್ಣೆಯ (Mustard oil) ದೀಪವನ್ನು ಹಚ್ಚಿ, ಬಿಲ್ವಪತ್ರೆ ಹಾಗೂ ಸುಗಂಧಿತ ಹೂವುಗಳನ್ನು ಅರ್ಪಿಸುವುದರಿಂದ ಮನೆಯಲ್ಲಿನ ವಾಸ್ತುದೋಷ ಹಾಗೂ ನಕಾರಾತ್ಮಕ ಶಕ್ತಿಗಳು ನಿವಾರಣೆಯಾಗುತ್ತವೆ. ಪೂಜೆಯ ಸಮಯದಲ್ಲಿ ಒಳಿತನ್ನು ಕೋರುತ್ತಾ “ಓಂ ಕಾಲಭೈರವಾಯ ನಮಃ” ಎಂಬ ಶಕ್ತಿಶಾಲಿ ಮಂತ್ರವನ್ನು ಜಪಿಸುವುದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

ಇದನ್ನೂ ಓದಿ Panchamukhi Ganesha: ಪಂಚಮುಖಿ ಗಣೇಶ ಮನೆಯಲ್ಲಿದ್ದರೆ ಸಕಲ ಕಷ್ಟಗಳೂ ನಿವಾರಣೆ; ಐದು ಮುಖಗಳ ದಿವ್ಯ ರಹಸ್ಯವೇನು?

ಶ್ವಾನ ಸೇವೆ ಮತ್ತು ಗ್ರಹದೋಷ ನಿವಾರಣೆ:

ಕಾಲಭೈರವನ ಪರಮ ವಾಹನ ಶ್ವಾನ (ನಾಯಿ). ಅದರಲ್ಲೂ ಇಂದಿನ ದಿನ ಕಪ್ಪು ನಾಯಿಗೆ ಹಾಲು, ರೊಟ್ಟಿ ಅಥವಾ ಸಾತ್ವಿಕ ಆಹಾರವನ್ನು ನೀಡುವುದು ಅತ್ಯಂತ ಪುಣ್ಯದಾಯಕ ಕಾರ್ಯವಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಾಲಾಷ್ಟಮಿಯಂದು ಮೂಕಪ್ರಾಣಿಯಾದ ನಾಯಿಗೆ ಆಹಾರ ನೀಡುವುದರಿಂದ ಜಾತಕದಲ್ಲಿರುವ ರಾಹು-ಕೇತು ಮತ್ತು ಶನಿದೋಷಗಳ ತೀವ್ರತೆ ಕಡಿಮೆಯಾಗಿ, ಜೀವನದ ಕಷ್ಟಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:41 am, Tue, 7 July 26

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ಆರೋಗ್ಯ ಮತ್ತು ವೈರಲ್ ಸುದ್ದಿಗಳ ಬಗ್ಗೆ ಬರೆಯುವುದರಲ್ಲಿ ಆಸಕ್ತಿಹೊಂದಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us