ಯಾವುದಾದರೂ ಯಾತ್ರೆ ಅಥವಾ ದೇವಸ್ಥಾನಕ್ಕೆ ಹೋದಾಗ ನಾವು ದೇವರ ದರ್ಶನ ಹೇಗೆ ಪಡೆಯಬೇಕು ಅನ್ನುವುದಕ್ಕೆ ನಮ್ಮ ಪೂರ್ವಜರು ಸರಿಯಾದ ಕ್ರಮವನ್ನು ತಿಳಿಸಿದ್ದಾರೆ. ಅದರಂತೆ ನಡೆದರೆ ನಮಗೆ ಖಂಡಿತ ದರ್ಶನ ಫಲ ಸಿಗುತ್ತೆ. ಯಾವುದೇ ಯಾತ್ರೆಗೆ ಹೋದಾಗ ಯಾತ್ರಾರ್ಥಿಯು ದೇವರ ಪ್ರಥಮ ದರ್ಶನ ಸಮಯದಲ್ಲಿ ಮೊದಲು ದೇವಸ್ಥಾನದ ಗೋಡೆಗೆ ಒರಗಿ ನಿಂತು ಕೈಮುಗಿದು ಹೀಗೆ ಹೇಳಬೇಕು.
‘ನೂರು ಕೋಟಿ ತೀರ್ಥಗಳ ಸ್ನಾನ ಮಾಡಿಸು, ವಿರಜಾ ನದಿಯ ಸ್ನಾನ ಮಾಡಿಸು, ತಾರಕ ಬ್ರಹ್ಮ ದೇವರಿಂದ ತತ್ವ ಉಪದೇಶ ಮಾಡಿಸು. ವೈಕುಂಠಕ್ಕೆ ಕರೆದೊಯ್ದು ನಿನ್ನ ದರುಶನ ಮಾಡಿಸು’ ಎಂದು ಪ್ರಾರ್ಥಿಸಿ ನಂತರ ಹೊರಗಿನಿಂದಲೇ ದೇವರ ದರ್ಶನ ಮಾಡಬೇಕು. ಅದಕ್ಕೆ ಧೂಳಿದರ್ಶನ ಅಂತಾರೆ ಧೂಳಿ ದರ್ಶನಂ ಪಾಪ ನಾಶನಂ. ಧೂಳಿದರ್ಶನ ದಿಂದ ಪಾಪ ನಾಶವಾಗುತ್ತೆ. ನಂತರ ತಲೆಯಲ್ಲಿರುವ ಚಿಂತೆಗಳನ್ನೇಲ್ಲ ಬಿಟ್ಟು ಶಿಖರ ದರ್ಶನ ಮಾಡಿ ಶಿಖರ ದರ್ಶನಂ ಚಿಂತಾನಾಶನಂ ನಂತರ ದೇವಸ್ಥಾನ ಒಳಗೆ ಹೋಗುವಾಗ ಕೈಕಾಲುಗಳನ್ನು ತೊಳೆದು ದೇವಸ್ಥಾನ ಒಳಗಡೆ ಪ್ರವೇಶಮಾಡಿ ತಕ್ಷಣ ದೇವರ ವಿಗ್ರಹವನ್ನು ನೋಡ ಬೇಡಿ ಅದಕ್ಕೂ ಒಂದು ಕ್ರಮವಿದೆ.
ದೇವರ ದರ್ಶನ ಮಾಡುವ ಕ್ರಮ
ಮೊದಲು ಪಾದ ದರ್ಶನ ಮಾಡಿ ಪಾದ ದರ್ಶನಂ ಪಾಪನಾಶನಂ.
ನಂತರ ಕಟಿ ದರ್ಶನ ಮಾಡಿ ಕಟಿ ದರ್ಶನಂ ಕಾಮನಾಶನಂ
ನಂತರ ನಾಭಿ ದರ್ಶನ ಮಾಡಿ ನಾಭಿ ದರ್ಶನಂ ನರಕ ನಾಶನಂ
ನಂತರ ಕಂಠ ದರ್ಶನ ಮಾಡಿ ಕಂಠ ದರ್ಶನಂ ವೈಕುಂಠ ಸಾಧನಂ
ನಂತರ ಮುಖ ದರ್ಶನ ಮಾಡಿ ಮುಖ ದರ್ಶನಂ ಮುಕ್ತಿ ಸಾಧನಂ
ನಂತರ ಕಿರೀಟ ದರ್ಶನ ಮಾಡಿ ಕೀರಿಟ ದರ್ಶನಂ ಪುನರ್ಜನ್ಮ ನಾಶನಂ
ನಂತರ ಸರ್ವ ದರ್ಶನ ಮಾಡಿ ಸರ್ವಾಂಗ ದರ್ಶನಂ ಸರ್ವ ಪಾಪ ನಾಶನಂ. ಸರ್ವಾಂಗ ದರ್ಶನ ಮಾಡಬೇಕು. ಈ ರೀತಿ ಕ್ರಮಬದ್ಧವಾಗಿ ದೇವರ ದರ್ಶನ ಮಾಡುವುದರಿಂದ ದರ್ಶನದ ಫಲ ಸಿಗುತ್ತೆ ಎಂದು ಪೂರ್ವಜರು ತಿಳಿಸಿದ್ದಾರೆ.
ದೇವಸ್ಥಾನದಲ್ಲಿ ಕುಳಿತು ಈ ಶ್ಲೋಕ ಪಠಿಸಿ
ದೇವಸ್ಥಾನಗಳಿಗೆ ಹೋದಾಗ ದೇವರ ದರುಶನ ಮುಗಿಸಿ ನಮಸ್ಕಾರ ಹಾಕಿದ ನಂತರ ದೇಗುಲದ ಹೊರಗೆ ಬಂದು ಸ್ವಲ್ಪಹೊತ್ತು ಹೊರಗಡೆ ಕಟ್ಟೆಯ ಮೇಲೋ ಅಥವಾ ದೇಗಿಲದ ಮೆಟ್ಟಿಲುಗಳ ಮೇಲೆಯೋ ಕುಳಿತು ಕೊಳ್ಳುವುದು ವಾಡಿಕೆ. ಆದರೆ ಕುಳಿತಾಗ ನಾವು ದರ್ಶನ ಮಾಡಿದ ದೇವರನ್ನು ನೆನಸಿಕೊಂಡು ಈ ಕೆಳಗಿನ ಶ್ಲೋಕ ಹೇಳಿಕೊಂಡು ಪ್ರಾರ್ಥಿಸಬೇಕು. ಇದನ್ನು ನಿರ್ದಿಷ್ಟ ಉದ್ದೇಶಕ್ಕಾಗಿ ಮಾಡಲಾಗಿದೆ.
ಶ್ಲೋಕ:
1. ಅನಾಯಾಸೇನ ಮರಣಂ
2. ವಿನಾ ದೈನೇನ ಜೀವನಂ
3. ದೇಹಾಂತ ತವ ಸಾನಿಧ್ಯಂ
4. ದೇಹಿಮೇ ಪರಮೇಶ್ವರಂ
ಇದನ್ನೂ ಓದಿ: ದೇವಸ್ಥಾನದಲ್ಲಿ ದೇವರ ದರ್ಶನ ಪಡೆದ ನಂತರ ಭಕ್ತರು ಹೊರಗಡೆ ಕಟ್ಟೆ ಮೇಲೆ ಕೆಲ ಹೊತ್ತು ಕುಳಿತುಕೊಳ್ಳಬೇಕು, ಏಕೆ?