Krishna Janmashtami 2024: ಶ್ರೀಕೃಷ್ಣ ಜನ್ಮಾಷ್ಟಮಿಯ ವಿಶೇಷತೆ ಏನು?
ಶ್ರಾವಣ ಮಾಸದ ಸಡಗರದ ಹಬ್ಬಗಳಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯೂ ಒಂದು. ಉತ್ತರ ಭಾರತದ ಜನರು ಕೃಷ್ಣನನ್ನು ಬಹಳ ವೈಭವದಿಂದ ಆರಾಧಿಸುತ್ತಾರೆ, ಪ್ರೀತಿಸುತ್ತಾರೆ. ಈ ಕೃಷ್ಣ ಜನ್ಮಾಷ್ಟಮಿಯನ್ನು ಯಾಕೆ ಅಷ್ಟು ವಿಶೇಷವಾಗಿ ಆಚರಿಸಲಾಗುತ್ತದೆ?
ಧರ್ಮವನ್ನು ರಕ್ಷಿಸುವವನು ದೇವರು. ಧರ್ಮವನ್ನು ಸೃಷ್ಟಿಸಿದವನೂ ದೇವರೇ. ಲಯಗೊಳಿಸುವವನೂ ಅವನೇ. ಈ ಮೂರೂ ಸಾಮರ್ಥ್ಯವನ್ನು ಹೊಂದಿರುವವ ಆತ. ಯಾವಾಗ ಧರ್ಮದ ಹಾನಿಯಾಗುವುದೋ ಆಗ ತನಗೆ ಇಷ್ಟಬಂದ ರೂಪವನ್ನು ಧರಿಸಿ ಭುವಿಗೆ ಬರುತ್ತಾನೆ. ಅಸಮತೋಲನವಾಗಿದ್ದ ಧರ್ಮವನ್ನು ಸರಿ ಮಾಡಿ ಕತ್ತೆ ದಿವಿಯತ್ತ ತೆರಳುತ್ತಾನೆ.
ಬುವಿಗೆ ಬರುವುದನ್ನು ಅವತಾರ ಎನ್ನುವರು. ಭಗವಂತ ಯಾವಾಗ ಬೇಕಾದರೂ ಯಾವ ರೂಪದಲ್ಲಿಯೂ ಬರಬಹುದು. ಆದರೆ ಮುಖ್ಯವಾಗಿ ಗುರುತಿಸುವುದು ದಶಾವತಾರದಿಂದ. ಮತ್ಸ್ಯ, ಕೂರ್ಮ, ವರಾಹ, ನರಸಿಂಹ, ವಾಮನ, ಪರಶುರಾಮ, ರಾಮ, ಶ್ರೀಕೃಷ್ಣ, ಬುದ್ಧ, ಕಲ್ಕಿ ಎಂಬುದಾಗಿ.
ಈ ಎಲ್ಲ ಅವತಾರಗಳಲ್ಲಿ ಅತ್ಯಾಕರ್ಷಕ, ಸರ್ವಾಕರ್ಷವಾದ ಅವತಾರ ಶ್ರೀಕೃಷ್ಣ. ಈ ಅವತಾರ ಕಲಿಯುಗದ ಹಿಂದಿನ ಯುಗದಲ್ಲಿ ಆಗಿದ್ದು ಎಂಬ ಕಾರಣಕ್ಕೆ ಮಾತ್ರವಲ್ಲ, ಆತನ ಜೀವನವು ಮನುಷ್ಯನಂತೆ ಬದುಕಿ, ದೈವತ್ವವನ್ನು ತೋರಿಸಿದ ಮಹಿಮ. ಅತಿಮಾನುಷಶಕ್ತಿಯನ್ನು ಮನುಷ್ಯ ರೂಪದಲ್ಲಿ ತೋರಿಸಿದ.
ಇದನ್ನೂ ಓದಿ: Krishna Janmastami 2024 : ಶ್ರೀಕೃಷ್ಣ ಜನ್ಮಾಷ್ಟಮಿಗೆ ಮನೆಯ ಅಲಂಕಾರ ಹೀಗಿರಲಿ
ಇಂತಹ ಶ್ರೇಷ್ಠ ವ್ಯಕ್ತಿಯ, ಶಕ್ತಿಯ ಜನನವಾಗಿದ್ದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿಯಂದು. ಮಥುರೆಯ ಕಾರಾಗೃಹದಲ್ಲಿ ಜನಿಸಿದ ಈತ ಮೊದಲು ಮಾಡಿ ಬಂಧಮೋಕ್ಷ. ಅಂದರೆ ಮನುಷ್ಯನ ಸಂಸಾರವೆಂಬ ಬಂಧನದಲ್ಲಿ ಇರುವಾಗ ಕೃಷ್ಣ ಬಂಧನದಿಂದ ಬಿಡಿಸುವ ಶಕ್ತಿಯನ್ನು ಹೊಂದಿದವನು ಎನ್ನುವುದನ್ನು ತಿಳಿಸುತ್ತದೆ.
ಶ್ರೀಕೃಷ್ಣನ ಬದುಕು ಜಾಲಿಯಾಗಿ ಇರುವಂತೆ ತೋರುತ್ತದೆ. ಯಾವುದೇ ನಿಯಮ, ನೀತಿಗಳಿಗೆ ಅಂಟಿಕೊಳ್ಳದೇ ಗುರಿಯನ್ನು ಮಾತ್ರ ಮುಖ್ಯವಾಗಿ ಇರಿಸಿಕೊಂಡು ಹೋಗಿದ್ದಾನೆ ಎನ್ನುವುದು ಮೇಲ್ನೋಟಕ್ಕೆ ಗೊತ್ತಾಗುವುದು. ಆದರೆ ಆತನ ಆರಾಧನೆಯಿಂದ ಮನುಷ್ಯರ ಬದುಕಿನಲ್ಲಿ ನೆಮ್ಮದಿ ಸಿಗುತ್ತದೆ.
ಕೃಷ್ಣನನ್ನು ಹೊರಗಣ್ಣಿನಿಂದ ನೋಡಿದರೆ ಒಬ್ಬ ಆಗಿನ ಕಾಲಕ್ಕೆ ಬೇಕಾದ ಎಲ್ಲ ಅತಿಮಾನುಷ, ಅಮಾನುಷ ಶಕ್ತಿಗಳನ್ನು ಇರಿಸಿಕೊಂಡ ಒಬ್ಬ ಸಾಧಾರಣ ಮನುಷ್ಯ. ಆದರೆ, ಒಳಗಣ್ಣಿನಿಂದ ಕಂಡರೆ ಆತ ಮನುಷ್ಯನಲ್ಲ, ದೇವರು. ಸೂಕ್ಷ್ಮವಾಗಿ ಕಂಡರೆ ಆತ ಪರಮಾತ್ಮ. ಎಲ್ಲ ರೂಪಗಳನ್ನೂ ತನ್ನೊಬ್ಬನಲ್ಲೇ ಇರಿಸಿಕೊಂಡು ಬಂದ ದೇವಮಾನವ.
ಇದನ್ನೂ ಓದಿ: ಕೃಷ್ಣ ಜನ್ಮಾಷ್ಟಮಿಗೆ ಉಡುಪಿಗೆ ಹೋದರೆ ಈ 9 ಸ್ಥಳಗಳನ್ನು ನೋಡಲು ಮಿಸ್ ಮಾಡಬೇಡಿ
ಯಾವಾಗ ಆಚರಿಸುವುದು?:
ಕೃಷ್ಣ ಹುಟ್ಟಿದ್ದು ರಾತ್ರಿ 12 ಗಂಟೆಗೆ. ಅದೇ ಸಮಯಕ್ಕೆ ಸರಿಯಾದ ಶ್ರೀಕೃಷ್ಣ ಜನನೋತ್ಸವವನ್ನು ಆಚರಿಸಲಾಗುವುದು. ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯೇ ನೈವೇದ್ಯ. ಉಳಿದವು ನಮ್ಮ ಪ್ರೀತಿಯನ್ನು, ಭಕ್ತಿಯನ್ನು ಬಿಂಬಿಸಲು ಇರುವಂಥದ್ದು. ತೊಟ್ಟಿಲಿನಲ್ಲಿ ಹಾಕಿ ತೂಗಿ, ಜೋಲಿ ಹಾಡುತ್ತ ಕೃಷ್ಣನನ್ನು ನಿದ್ರಿಸುವಂತೆ ಮಾಡಬೇಕು.
ಸ್ತೋತ್ರ:
ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯ ಚ | ನಂದಗೋಪಕುಮಾರಾಯ ಗೋವಿಂದಾಯ ನಮೋ ನಮಃ ||
ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ | ದೇವಕೀಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ ||
ಲೋಹಿತ ಹೆಬ್ಬಾರ್ – 8762924271
ಇನ್ನಷ್ಟು ಅಧ್ಯಾತ್ಮ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ