Lalita Jayanti 2024: ಲಲಿತಾ ಜಯಂತಿ ಆಚರಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಲಲಿತಾ ದೇವಿಗೆ ಸಮರ್ಪಿತವಾದ ಈ ದಿನವನ್ನು ಮಾಘ ಮಾಸದ ಹುಣ್ಣಿಮೆಯಂದು ಆಚರಣೆ ಮಾಡಲಾಗುತ್ತದೆ. ದೇವಿಯ ಆರಾಧನೆ ಮಾಡುವವರು ಈ ದಿನ ಉಪವಾಸವನ್ನು ಆಚರಿಸುತ್ತಾರೆ. ಜೊತೆಗೆ ಎಲ್ಲಾ ಕಷ್ಟಗಳನ್ನು ದೂರ ಮಾಡಲು ಭಕ್ತರು ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ. ಹಾಗಾದರೆ ಈ ದಿನದ ಮಹತ್ವವೇನು? ಲಲಿತಾ ಜಯಂತಿಯನ್ನು ಹೇಗೆ ಆಚರಣೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

Lalita Jayanti 2024: ಲಲಿತಾ ಜಯಂತಿ ಆಚರಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 23, 2024 | 4:45 PM

ಹಿಂದೂ ಧರ್ಮದಲ್ಲಿ ಲಲಿತಾ ಜಯಂತಿಯನ್ನು ಶುಭ ದಿನವೆಂದು ಪರಿಗಣಿಸಲಾಗುತ್ತದೆ. ಅತ್ಯಂತ ಆಕರ್ಷಕ ಮತ್ತು ಶಕ್ತಿಯುತ ದೇವತೆಗಳಲ್ಲಿ ಒಬ್ಬಳಾದ ಆಕೆಯು ಸಂಪತ್ತು, ಸಮೃದ್ಧಿ, ಬುದ್ಧಿವಂತಿಕೆಯ ಸಾಕಾರರೂಪವಾಗಿದ್ದಾಳೆ. ಹಾಗಾಗಿ ಲಲಿತಾ ಜಯಂತಿಯ ದಿನ ಆಕೆಯ ಆಶೀರ್ವಾದ ಪಡೆಯಲು ದೇವಿಯ ಭಕ್ತರು ಉಪವಾಸವನ್ನು ಆಚರಿಸುತ್ತಾರೆ. ಮಾಘ ಮಾಸದ ಶುಕ್ಲ ಪಕ್ಷದ ಹುಣ್ಣಿಮೆಯ ದಿನದಂದು (ಪೂರ್ಣಿಮಾ ತಿಥಿ) ಲಲಿತಾ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ ಫೆ. 24 ರಂದು ಆಚರಿಸಲಾಗುವುದು. ಹಾಗಾದರೆ ಈ ದಿನದ ಮಹತ್ವವೇನು? ಹೇಗೆ ಆಚರಣೆ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಲಲಿತಾ ಜಯಂತಿ ಮಹತ್ವ;

ದುರ್ಗಾ ದೇವಿಯ ರೂಪಗಳಲ್ಲಿ ಒಬ್ಬಳಾದ ಲಲಿತಾ ದೇವಿಯನ್ನು ತ್ರಿಪುರ ಸುಂದರಿ ಎಂದೇ ಬಣ್ಣಿಸಲಾಗುತ್ತದೆ. ಲಲಿತಾ ಜಯಂತಿಯು ಆಕೆಯ ಜನ್ಮ ವಾರ್ಷಿಕೋತ್ಸವವಾಗಿದೆ. ಹಾಗಾಗಿ ಈ ದಿನವನ್ನು ಲಲಿತಾ ದೇವಿಗೆ ಅರ್ಪಿಸಲಾಗಿದೆ ಮತ್ತು ಭಕ್ತರು ಉಪವಾಸವನ್ನು ಆಚರಿಸುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ. ದೇವಿಯ ಆಶೀರ್ವಾದ ಪಡೆಯಲು ಬಯಸುವವರಿಗೆ ಈ ದಿನ ಉತ್ತಮವಾಗಿದೆ. ಅಲ್ಲದೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಿರುವವರು ಆಕೆಯನ್ನು ನಂಬಿ ಪೂಜೆ ಮಾಡಿದಲ್ಲಿ ಆ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದಾಗಿದೆ. ದೇವಿಗೆ ಪ್ರಾಮಾಣಿಕವಾಗಿ ಪ್ರಾರ್ಥನೆ ಸಲ್ಲಿಸುವವರು ಉತ್ತಮ ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ಪಡೆಯಬಹುದು ಎಂದು ನಂಬಲಾಗಿದೆ. ಮಾಘ ಮಾಸದ ಹುಣ್ಣಿಮೆಯ ದಿನದಂದು ಉಪವಾಸವನ್ನು ಆಚರಿಸುವವರು ಮತ್ತು ತ್ರಿಪುರ ಸುಂದರಿ ದೇವಿಯನ್ನು ಪೂಜಿಸುವವರು ದೇವಿಯ ಅನುಗ್ರಹ ಪಡೆಯುತ್ತಾರೆ.

ಲಲಿತಾ ಜಯಂತಿಯನ್ನು ಹೇಗೆ ಆಚರಿಸಲಾಗುತ್ತದೆ?

ಲಲಿತಾ ಜಯಂತಿಯನ್ನು ದೇಶಾದ್ಯಂತ ಎಲ್ಲಾ ಹಿಂದೂಗಳು ಬಹಳ ಉತ್ಸಾಹದಿಂದ ಆಚರಿಸುತ್ತಾರೆ. ಈ ದಿನ ವಿವಿಧ ನಿಯಮಗಳನ್ನು ಅನುಸರಿಸುವ ಮೂಲಕ ಪ್ರಾರ್ಥನೆ ಸಲ್ಲಿಸುತ್ತಾರೆ:-

1. ಪೂಜಾ ಆಚರಣೆಗಳನ್ನು ಪ್ರಾರಂಭಿಸುವ ಮೊದಲು ಮುಂಜಾನೆ ಸ್ನಾನ ಮಾಡಿ.

2. ಮನೆ ಅಥವಾ ದೇವಾಲಯವಾಗಲಿ, ದೇವಿಯ ಫೋಟೋ ಅಥವಾ ವಿಗ್ರಹಕ್ಕೆ ಹೂವುಗಳಿಂದ ಅಲಂಕರಿಸಿ.

3. ಮರದ ಹಲಗೆಯ ಮೇಲೆ ದೇವಿಯ ವಿಗ್ರಹ ಅಥವಾ ಫೋಟೋವನ್ನು ಇರಿಸಿ.

4. ನೈವೇದ್ಯಕ್ಕೆ ಸಾತ್ವಿಕ ಆಹಾರ ಮತ್ತು ಸಿಹಿ ತಿಂಡಿಗಳನ್ನು ತಯಾರಿಸಿ.

5. ತುಪ್ಪದಿಂದ ದೀಪವನ್ನು ಬೆಳಗಿಸಿ.

6. ದುರ್ಗಾ ದೇವಿಯ ವಿವಿಧ ಮಂತ್ರಗಳು ಮತ್ತು ಸ್ತೋತ್ರಗಳನ್ನು ಪಠಿಸಿ.

7. ಲಲಿತಾ ಸಹಸ್ರನಾಮವನ್ನು ಪಠಿಸಿ.

8. ಲಲಿತಾ ಜಯಂತಿಯಂದು ದಾನ ಮಾಡಿ ಏಕೆಂದರೆ ಇದರಿಂದ ಶುಭ ಫಲಗಳು ಪ್ರಾಪ್ತಿಯಾಗುತ್ತದೆ.

ಇದನ್ನೂ ಓದಿ: ಹೊಸ ಮನೆಗೆ ಹೋಗುವ ಮೊದಲು ಗೃಹಪ್ರವೇಶ ಮಾಡುವುದು ಏಕೆ? ಇಲ್ಲಿದೆ ಮಾಹಿತಿ

ಈ ದಿನ ಯಾವ ಮಂತ್ರಗಳನ್ನು ಪಠಿಸಬೇಕು?

-ಸರ್ವಮಂಗಲ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ|

ಶರಣ್ಯೇ ತ್ರ್ಯಂಬಕೇ ದೇವಿ ನಾರಾಯಣಿ ನಮೋಸ್ತುತೆ||

-ಓಂ ಜಯಂತಿ ಮಂಗಳ ಕಾಳಿ ಭದ್ರಾ ಕಾಳಿ ಕಪಾಲಿನಿ ದುರ್ಗಾ ಕ್ಷಮಾ ಶಿವಧಾತ್ರಿ ಸ್ವಾಹ ಸ್ವಧ ನಮಸ್ತು

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್