Laughing Buddha: ಆರ್ಥಿಕ ಸ್ಥಿತಿ ಸುಧಾರಿಸಲು ಲಾಫಿಂಗ್​​ ಬುದ್ಧನನ್ನು ಮನೆಯ ಯಾವ ಮೂಲೆಯಲ್ಲಿ ಇಡಬೇಕು?

ಲಾಫಿಂಗ್ ಬುದ್ಧನನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಲಾಫಿಂಗ್ ಬುದ್ಧನನ್ನು ಸರಿಯಾದ ದಿಕ್ಕಿನಲ್ಲಿ ಇರಿಸಿದರೆ, ಅದು ಮನೆಯ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ ಎಂಬ ನಂಬಿಕೆ ಇದೆ. ಆದ್ದರಿಂದ ಆರ್ಥಿಕ ಸ್ಥಿತಿ ಸುಧಾರಿಸಲು ಲಾಫಿಂಗ್​​ ಬುದ್ಧನನ್ನು ಮನೆಯ ಯಾವ ಮೂಲೆಯಲ್ಲಿ ಇಡಬೇಕು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

Laughing Buddha: ಆರ್ಥಿಕ ಸ್ಥಿತಿ ಸುಧಾರಿಸಲು ಲಾಫಿಂಗ್​​ ಬುದ್ಧನನ್ನು ಮನೆಯ  ಯಾವ ಮೂಲೆಯಲ್ಲಿ ಇಡಬೇಕು?
Laughing Buddha Vastu Tips
Follow us
ಅಕ್ಷತಾ ವರ್ಕಾಡಿ
|

Updated on: Nov 08, 2023 | 10:23 AM

ವಾಸ್ತು ಶಾಸ್ತ್ರದ ಪ್ರಕಾರ, ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಯಾವಾಗಲೂ ಹಣಕಾಸಿನ ಸಮಸ್ಯೆಗಳಿಂದ ಹೋರಾಡುತ್ತಿದ್ದರೆ ಅಥವಾ ಕುಟುಂಬದಲ್ಲಿ ಯಾರಾದರೂ ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ, ಮನೆಯಲ್ಲಿ ಲಾಫಿಂಗ್ ಬುದ್ಧವನ್ನು ಇಟ್ಟುಕೊಳ್ಳುವುದು ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ವಾಸ್ತು ತಜ್ಞರು ಸಲಹೆ ನೀಡುತ್ತಾರೆ. ಹಾಗಂತ ಮನೆಯಲ್ಲಿ ನಿಮಗೆ ಇಷ್ಟ ಬಂದ ಜಾಗದಲ್ಲಿ ಲಾಫಿಂಗ್ ಬುದ್ಧ ಇಡುವಂತಿಲ್ಲ. ಅದನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಮುಖ್ಯ. ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಎಲ್ಲಿ ಇಡಬಹುದು ಮತ್ತು ಎಲ್ಲಿ ಇಡಬಾರದು ಎಂದು ತಿಳಿಯೋಣ.

ಲಾಫಿಂಗ್ ಬುದ್ಧನನ್ನು ಇಡುವ ಸರಿಯಾದ ಸ್ಥಳ:

ವಿವಿಧ ರೀತಿಯ ಲಾಫಿಂಗ್ ಬುದ್ಧನ ಪ್ರತಿಮೆಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಆದರೆ, ಕೈಯಲ್ಲಿ ಹಣದ ಮೂಟೆಯಲ್ಲಿ ಹಿಡಿದುಕೊಂಡಿರುವ ಲಾಫಿಂಗ್ ಬುದ್ಧನ ಪ್ರತಿಮೆಗಳನ್ನು ಖರೀದಿಸುವುದು ಹೆಚ್ಚು ಲಾಭದಾಯಕ. ಇದರಿಂದ ಮನೆಯ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಪ್ರತಿಮೆ ಅಥವಾ ವಿಗ್ರಹವನ್ನು ಮನೆಯ ಮುಖ್ಯ ದ್ವಾರದ ಮುಂದೆ ಇಡಿ. ಪ್ರತಿಮೆಯನ್ನು ನೆಲಕ್ಕಿಂತ ಕನಿಷ್ಠ 30 ಇಂಚು ಎತ್ತರದಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ. ಇದರಿಂದ ಆರ್ಥಿಕ ಸ್ಥಿತಿ ಸುಧಾರಿಸುವುದರ ಜೊತೆಗೆ ನಕಾರಾತ್ಮಕ ಶಕ್ತಿಗಳು ಮನೆಯಲ್ಲಿ ನೆಲೆಸುವುದಿಲ್ಲ ಎಂದು ನಂಬಲಾಗಿದೆ.ಲಾಫಿಂಗ್ ಬುದ್ಧನನ್ನು ಚಿನ್ನದ ನಾಣ್ಯಗಳ ಬಟ್ಟಲು, ಹಣದ ಹೂದಾನಿ ಮುಂತಾದ ಮಂಗಳಕರ ವಸ್ತುಗಳೊಂದಿಗೆ ಇರಿಸಬಹುದು. ಈ ವಸ್ತುಗಳನ್ನು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ.

ಇದನ್ನೂ ಓದಿ: ಧನತ್ರಯೋದಶಿಯ ಈ ಶುಭ ಮುಹೂರ್ತದಲ್ಲಿ ಚಿನ್ನ, ಬೆಳ್ಳಿ ಅಥವಾ ಯಾವುದೇ ಗೃಹೋಪಯೋಗಿ ವಸ್ತು ಖರೀದಿಸುವುದು ಮಂಗಳಕರ

ಲಾಫಿಂಗ್ ಬುದ್ಧನನ್ನು ಎಲ್ಲಿ ಇಡಬಾರದು?

ಲಾಫಿಂಗ್ ಬುದ್ಧನ ಪ್ರತಿಮೆಯನ್ನು ಮಲಗುವ ಕೋಣೆ ಅಥವಾ ಅಡುಗೆಮನೆಯಲ್ಲಿ ಇಡಬಾರದು. ಇದಲ್ಲದೇ ನಿಮ್ಮ ಕಾಲಿಗೆ ತಾಗುವಂತೆ ಎಲ್ಲಿಯೂ ಇಡಬೇಡಿ. ಜೊತೆಗೆ ಲಾಫಿಂಗ್ ಬುದ್ಧನ ಪ್ರತಿಮೆಯು ಸ್ವಚ್ಛವಾಗಿಟ್ಟುಕೊಳ್ಳಿ.

ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
ಮೋಕ್ಷಿತಾ ಬಗ್ಗೆ ಉಗ್ರಂ ಮಂಜು ಗೇಲಿ, ಥೂ ಎಂದ ‘ಮಹರಾಣಿ’
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
‘ಮಂಜು ರೋಗಿಷ್ಟ ರಾಜ’: ಬಿಗ್ ಬಾಸ್ ಮನೆಯಲ್ಲಿ ಮತ್ತೆ ನಾಲಿಗೆ ಹರಿಬಿಟ್ಟ ರಜತ್
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
ಲಂಚ ಕೇಳಿದ ಅಧಿಕಾರಿಯನ್ನು ಟ್ರಾನ್ಸ್​ಫರ್ ಮಾಡೋದೇ ದೊಡ್ಡ ಶಿಕ್ಷೆ!
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
IND vs AUS: ಆಸ್ಟ್ರೇಲಿಯಾ ಪ್ರಧಾನಿಯನ್ನ ಭೇಟಿಯಾದ ಟೀಮ್ ಇಂಡಿಯಾ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಗುಂಪುಗಾರಿಕೆ 2 ತಿಂಗಳು ಮುಂದುವರಿಯಲಿದೆ, ಪತ್ರ ಚಳುವಳಿ ಅಗತ್ಯವಿಲ್ಲ: ಶಾಸಕ
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ಯತ್ನಾಳ್ ತಂಡದ ವಿರುದ್ದ 2 ಪತ್ರ ಬರೆದರೂ ವರಿಷ್ಠರಿಂದ ಕ್ರಮವಿಲ್ಲ: ಡಿವಿಎಸ್
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ನನ್ನ ಹಾಗೂ ನನ್ನ ಮಗನ ವಿರುದ್ಧ ಒಂದೇ ಒಂದು ದೂರು ದಾಖಲಾಗಿಲ್ಲ: ದೇವೇಗೌಡ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
ತೆಂಗಿನಕಾಯಿ ವ್ಯಾಪಾರಿಯ ಮದುವೆ ಊಟದ ವ್ಯವಸ್ಥೆ ಕಂಡು ನೆಟ್ಟಿಗರು ಫಿದಾ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
Video: ಮಹಿಳೆಯ ಜಡೆ ಹಿಡಿದು ಎಳೆದೊಯ್ದ ಪೊಲೀಸ್​ ಅಧಿಕಾರಿ
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್
ಬೇರೆ ಖಾತೆ ನೀಡಿದರೂ ಚಿಂತೆಯಿಲ್ಲ, ನಿಷ್ಠೆಯಿಂದ ಕೆಲಸ ಮಾಡುವೆ: ಪರಮೇಶ್ವರ್