AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ekadashi 2025: ಈ ವರ್ಷದ ಏಕಾದಶಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ

ಹಿಂದೂ ಪಂಚಾಂಗದ 12 ಮಾಸಗಳ ಶುಕ್ಲ ಪಕ್ಷದ ಮತ್ತು ಕೃಷ್ಣ ಪಕ್ಷದ ಹನ್ನೊಂದನೆಯ ದಿನವನ್ನು ಏಕಾದಶಿ ಎನ್ನಲಾಗುತ್ತದೆ. ಒಂದು ವರ್ಷದಲ್ಲಿ 24 ಏಕಾದಶಿಗಳಿವೆ, ಅಂದರೆ ಪ್ರತಿ ತಿಂಗಳು ಎರಡು ಏಕಾದಶಿ ಉಪವಾಸಗಳನ್ನು ಆಚರಿಸಲಾಗುತ್ತದೆ. 2025ರಲ್ಲಿ ಯಾವ ದಿನಾಂಕಗಳಲ್ಲಿ ಏಕಾದಶಿ ಆಚರಿಸಲಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

Ekadashi 2025: ಈ ವರ್ಷದ ಏಕಾದಶಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ
List Of Ekadashi Vrat Dates 2025
ಅಕ್ಷತಾ ವರ್ಕಾಡಿ
|

Updated on: Jan 10, 2025 | 10:44 AM

Share

ಒಂದು ವರ್ಷದಲ್ಲಿ 24 ಏಕಾದಶಿಗಳಿವೆ, ಪ್ರತಿ ತಿಂಗಳು ಎರಡು ಏಕಾದಶಿ ಉಪವಾಸಗಳನ್ನು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಈ ವ್ರತವು ಮೋಕ್ಷ ಪ್ರಾಪ್ತಿಗೆ ಕಾರಣವಾಗುತ್ತದೆ ಎಂದು ನಂಬಲಾಗಿದೆ. ಏಕಾದಶಿ ವ್ರತವು ಈ ಜನ್ಮದಲ್ಲಿನ ಪಾಪಗಳಿಂದ ಮಾತ್ರವಲ್ಲದೆ ಕಳೆದ ಏಳು ಜನ್ಮಗಳ ಪಾಪಗಳಿಂದಲೂ ಮುಕ್ತಗೊಳಿಸುತ್ತದೆ. 2025 ರ ಏಕಾದಶಿಗಳ ಸಂಪೂರ್ಣ ಪಟ್ಟಿ ಇಲ್ಲಿದೆ.

ಏಕಾದಶಿ 2025 ದಿನಾಂಕ ಪಟ್ಟಿ:

  • 10ನೇ ಜನವರಿ 2025, ಶುಕ್ರವಾರ – ಪುಷ್ಯ ಪುತ್ರದಾ ಏಕಾದಶಿ
  • 25 ಜನವರಿ, ಶನಿವಾರ – ಷಟ್ಟಿಲ ಏಕಾದಶಿ
  • 8ನೇ ಫೆಬ್ರವರಿ, ಶನಿವಾರ – ಜಯ ಏಕಾದಶಿ
  • 24 ಫೆಬ್ರವರಿ, ಸೋಮವಾರ – ವಿಜಯ ಏಕಾದಶಿ
  • 10ನೇ ಮಾರ್ಚ್, ಸೋಮವಾರ – ಅಮಲಕಿ ಏಕಾದಶಿ
  • 25ನೇ ಮಾರ್ಚ್ , ಮಂಗಳವಾರ – ಪಾಪಮೋಚನಿ ಏಕಾದಶಿ
  • 8ನೇ ಏಪ್ರಿಲ್ , ಮಂಗಳವಾರ – ಕಾಮದ ಏಕಾದಶಿ
  • 24ನೇ ಏಪ್ರಿಲ್, ಗುರುವಾರ – ವರೂಥಿನಿ ಏಕಾದಶಿ
  • 8ನೇ ಮೇ, ಗುರುವಾರ – ಮೋಹಿನಿ ಏಕಾದಶಿ
  • 23ನೇ ಮೇ, ಶುಕ್ರವಾರ – ಅಪರಾ ಏಕಾದಶಿ
  • 6ನೇ ಜೂನ್, ಶುಕ್ರವಾರ – ನಿರ್ಜಲಾ ಏಕಾದಶಿ
  • 21 ಜೂನ್ , ಶನಿವಾರ – ಯೋಗಿನಿ ಏಕಾದಶಿ
  • 6ನೇ ಜುಲೈ, ಭಾನುವಾರ – ದೇವಶಯನಿ ಏಕಾದಶಿ
  • 21 ಜುಲೈ , ಸೋಮವಾರ – ಕಾಮಿಕಾ ಏಕಾದಶಿ
  • 5ನೇ ಆಗಸ್ಟ್ , ಮಂಗಳವಾರ – ಶ್ರಾವಣ ಪುತ್ರದಾ ಏಕಾದಶಿ
  • 19 ಆಗಸ್ಟ್ , ಮಂಗಳವಾರ – ಅಜ ಏಕಾದಶಿ
  • 3ನೇ ಸೆಪ್ಟೆಂಬರ್, ಬುಧವಾರ – ಪರಿವರ್ತಿನಿ ಏಕಾದಶಿ
  • ಸೆಪ್ಟೆಂಬರ್ 17, ಬುಧವಾರ – ಇಂದಿರಾ ಏಕಾದಶಿ
  • 3ನೇ ಅಕ್ಟೋಬರ್, ಶುಕ್ರವಾರ – ಪಾಪಾಂಕುಶ ಏಕಾದಶಿ
  • 17ನೇ ಅಕ್ಟೋಬರ್, ಶುಕ್ರವಾರ – ರಾಮ ಏಕಾದಶಿ
  • 2ನೇ ನವೆಂಬರ್, ಭಾನುವಾರ – ದೇವುತ್ಥಾನ ಏಕಾದಶಿ
  • 15ನೇ ನವೆಂಬರ್, ಶನಿವಾರ – ಉತ್ಪನ್ನ ಏಕಾದಶಿ
  • 1 ಡಿಸೆಂಬರ್ , ಸೋಮವಾರ – ಮೋಕ್ಷದ ಏಕಾದಶಿ
  • 15ನೇ ಡಿಸೆಂಬರ್, ಸೋಮವಾರ – ಸಫಲ ಏಕಾದಶಿ
  • 30ನೇ ಡಿಸೆಂಬರ್, ಮಂಗಳವಾರ – ಪುಷ್ಯ ಪುತ್ರದಾ ಏಕಾದಶಿ

ಇದನ್ನೂ ಓದಿ: ವೈಕುಂಠ ಏಕಾದಶಿಗೆ ಉಪವಾಸ ಮಾಡುವುದೇಕೆ? ಅದರ ಹಿಂದಿನ ಧಾರ್ಮಿಕ ಮಹತ್ವ ತಿಳಿಯಿರಿ

ಏಕಾದಶಿ ವ್ರತ ನಿಯಮಗಳು:

  • ಏಕಾದಶಿಯಂದು, ವಿಷ್ಣುವಿಗೆ ಪಂಚಾಮೃತ, ಹಳದಿ ಹೂವುಗಳು, ಬಾಳೆಹಣ್ಣು, ಋತುಮಾನದ ಹಣ್ಣುಗಳು, ಸಿಹಿತಿಂಡಿಗಳು ಮತ್ತು ತುಳಸಿಯನ್ನು ಅರ್ಪಿಸಿ.
  • ಏಕಾದಶಿಯಂದು ಬಡವರಿಗೆ ಅನ್ನ, ವಸ್ತ್ರ, ಧನ ದಾನ ಮಾಡಿದರೆ ಶ್ರೇಯಸ್ಕರ ಎಂಬ ನಂಬಿಕೆ ಇದೆ. ಹೀಗೆ ಮಾಡುವುದರಿಂದ ಪುಣ್ಯ ಫಲ ಸಿಗುತ್ತದೆ.
  • ಏಕಾದಶಿ ಉಪವಾಸವನ್ನು 24 ಗಂಟೆಗಳ ಕಾಲ ಆಚರಿಸಲಾಗುತ್ತದೆ. ಏಕಾದಶಿಯಂದು ಅನ್ನದಿಂದ ಮಾಡಿದ ಯಾವುದನ್ನಾದರೂ ಸೇವಿಸಬೇಡಿ. ಮರುದಿನ ದ್ವಾದಶಿ ತಿಥಿಯಂದು ಏಕಾದಶಿ ಉಪವಾಸ ಕೊನೆಗೊಳ್ಳುತ್ತದೆ.
  • ಏಕಾದಶಿಯ ಹಿಂದಿನ ದಿನ ಸಾತ್ವಿಕ ಆಹಾರವನ್ನು ಮಾತ್ರ ಸೇವಿಸಿ ಮತ್ತು ತಾಮಸಿಕ ಆಹಾರಗಳಿಂದ ದೂರವಿರಿ.
  • ಏಕಾದಶಿ ವ್ರತದ ಕಥೆಯನ್ನು ಓದಿ ಮತ್ತು “ಓಂ ನಮೋ ಭಗವತೇ ವಾಸುದೇವಾಯ” ಎಂಬ ಮಂತ್ರವನ್ನು ಪಠಿಸಿ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ