Lunar Eclipse 2023: ಮೇ ತಿಂಗಳಲ್ಲಿ ವರ್ಷದ ಮೊದಲ ಚಂದ್ರಗ್ರಹಣ, ಈ 3 ರಾಶಿಯವರಿಗೆ ಧನ-ಕನಕ ವೃಷ್ಟಿ.. ಸಕಲ ಯಶಸ್ಸು ಪ್ರಾಪ್ತಿ

| Updated By: ಸಾಧು ಶ್ರೀನಾಥ್​

Updated on: Apr 13, 2023 | 4:12 PM

ಈ ವರ್ಷ ಮೇ 5 ರಂದು ಚಂದ್ರಗ್ರಹಣವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಗ್ರಹಣದ ಸಮಯದಲ್ಲಿ, ಮೇಷ ರಾಶಿಯವರಿಗೆ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗಿಗಳಿಗೆ ಬಡ್ತಿ ಮತ್ತು ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಕಂಡುಬರುತ್ತವೆ.

Lunar Eclipse 2023: ಮೇ ತಿಂಗಳಲ್ಲಿ ವರ್ಷದ ಮೊದಲ ಚಂದ್ರಗ್ರಹಣ, ಈ 3 ರಾಶಿಯವರಿಗೆ ಧನ-ಕನಕ ವೃಷ್ಟಿ.. ಸಕಲ ಯಶಸ್ಸು ಪ್ರಾಪ್ತಿ
2023 ರಲ್ಲಿ ಸಂಭವಿಸುವ ಮೊದಲ ಚಂದ್ರಗ್ರಹಣ
Follow us on

ಚಂದ್ರಗ್ರಹಣ 2023: ಅನಾದಿ ಕಾಲದಿಂದಲೂ ನಡೆದು ಬಂದಿರುವಂತೆ ಈ ವರ್ಷವೂ ಸೂರ್ಯ ಮತ್ತು ಚಂದ್ರ ಗ್ರಹಣಗಳು ಸಂಭವಿಸಲಿವೆ. ಈ ಕ್ರಮದಲ್ಲಿ ಇದೇ ತಿಂಗಳ 20ರಂದು ಮೊದಲ ಸೂರ್ಯಗ್ರಹಣ ಸಂಭವಿಸಲಿದ್ದು, ಮುಂದಿನ ತಿಂಗಳು ಮೇ 5ರಂದು ಮೊದಲ ಚಂದ್ರಗ್ರಹಣ (Lunar Eclipse 2023) ಸಂಭವಿಸಲಿದೆ. ನಮ್ಮ ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಈ ಸೂರ್ಯ ಮತ್ತು ಚಂದ್ರ ಗ್ರಹಣಗಳು (Chandra Grahan 2023) ಜ್ಯೋತಿಷ್ಯ ವಿಚಾರವಾಗಿ ಬಹಳ ಮುಖ್ಯವಾಗಿದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಗ್ರಹಣಗಳು ರಾಶಿ ಚಕ್ರದ 12 ಚಿಹ್ನೆಗಳ ಮೇಲೂ ಪರಿಣಾಮ ಬೀರುತ್ತವೆ. ಅಲ್ಲದೆ ಇವು ಕೆಲವರ ಜೀವನದಲ್ಲಿ ದೊಡ್ಡ ಅಪಾಯಗಳು ಮತ್ತು ಹಠಾತ್ ಲಾಭಗಳನ್ನು ಉಂಟುಮಾಡಬಹುದು. ಈ ವರ್ಷದ ಮೊದಲ ಚಂದ್ರಗ್ರಹಣವು ಮೇ 5 ರಂದು (ಶುಕ್ರವಾರ) ಬೆಳಿಗ್ಗೆ 08.45 ಕ್ಕೆ ಪ್ರಾರಂಭವಾಗಲಿದೆ. ಮರುದಿನ ಅಂದರೆ ಮೇ 6 ರಂದು ಬೆಳಗಿನ ಜಾವ ಒಂದು ಗಂಟೆಗೆ ಮುಕ್ತಾಯವಾಗಲಿದೆ. ಮತ್ತೊಂದೆಡೆ, ಈ ವರ್ಷದ ಮೊದಲ ಚಂದ್ರಗ್ರಹಣವು ರಾಶಿ ಚಕ್ರದ ಪ್ರಕಾರ ಈ 3 ರಾಶಿಯವರಿಗೆ ಲಾಭದಾಯಕವಾಗಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ಈಗ ನೋಡೋಣ.

2023 ರಲ್ಲಿ ಸಂಭವಿಸುವ ಮೊದಲ ಚಂದ್ರಗ್ರಹಣವು ಈ 3 ರಾಶಿಚಕ್ರ ಚಿಹ್ನೆಗಳಿಗೆ ಪ್ರಯೋಜನಕಾರಿಯಾಗಿದೆ:

ಮೇಷ ರಾಶಿ: ಈ ವರ್ಷ ಮೇ 5 ರಂದು ಚಂದ್ರಗ್ರಹಣವು ಮೇಷ ರಾಶಿಯವರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಈ ಗ್ರಹಣದ ಸಮಯದಲ್ಲಿ, ಮೇಷ ರಾಶಿಯವರಿಗೆ ವ್ಯವಹಾರದಲ್ಲಿ ಪ್ರಗತಿ, ಉದ್ಯೋಗಿಗಳಿಗೆ ಬಡ್ತಿ ಮತ್ತು ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು ಕಂಡುಬರುತ್ತವೆ. ಅಲ್ಲದೆ ವ್ಯಾಪಾರಸ್ಥರು ತಮ್ಮ ವೃತ್ತಿಯಲ್ಲಿ ಬೆಳವಣಿಗೆಯನ್ನು ಪಡೆಯುತ್ತಾರೆ.

ಇದನ್ನೂ ಓದಿ: Flute: ವಾಸ್ತು ಪ್ರಕಾರ ಮನೆಯಲ್ಲಿ ಕೊಳಲನ್ನು ಇಟ್ಟರೆ ಆ ಸಮಸ್ಯೆಗಳು ಇರುವುದಿಲ್ಲ!

ಸಿಂಹ ರಾಶಿ: ಈ ಚಂದ್ರಗ್ರಹಣವು ಸಿಂಹ ರಾಶಿಯೊಂದಿಗೂ ಸೇರಿಕೊಳ್ಳುತ್ತದೆ. ಈ ಗ್ರಹಣದ ಸಮಯದಲ್ಲಿ ಸಿಂಹ ರಾಶಿಯವರಿಗೆ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಅನುಕೂಲವಾಗುತ್ತದೆ. ಈ ರಾಶಿಚಕ್ರದ ಜಾತಕದವರು ನ್ಯಾಯಾಲಯದ ಪ್ರಕರಣಗಳಲ್ಲಿ ಯಶಸ್ಸು ಮತ್ತು ಹಠಾತ್ ಹಣದ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: IRCTC Tour: ತಿರುಪತಿ ತಿಮ್ಮಪ್ಪನ ಭಕ್ತರಿಗೆ ಗುಡ್ ನ್ಯೂಸ್, ಒಂದೇ ದಿನದಲ್ಲಿ ಸ್ವಾಮಿಯ ದರ್ಶನ! 

ಮಕರ ರಾಶಿ: ಮೇ 5 ರಂದು ಉಂಟಾಗುವ ಚಂದ್ರಗ್ರಹಣ ಮಕರ ರಾಶಿಯವರಿಗೆ ಕೂಡ ಶುಭಪ್ರದವೆಂದು ಹೇಳಬೇಕು. ಈ ಸಮಯದಲ್ಲಿ ಮಕರ ರಾಶಿಯವರಿಗೆ ಹೊಸ ಆಸ್ತಿ ಅಥವಾ ವಾಹನವನ್ನು ಖರೀದಿಸುವ ಅವಕಾಶವಿದೆ. ಇನ್ನು ಮಕರ ರಾಶಿಯವರು ಹೊಸ ವ್ಯಾಪಾರಗಳನ್ನು ಪ್ರಾರಂಭಿಸಲು ಇದೇ ಅನುಕೂಲಕರ ಸಮಯ. ಏಕೆಂದರೆ ಈ ಸಮಯದಲ್ಲಿ ನಿಮಗೆ ಎಲ್ಲಾ ಕಡೆಯಿಂದ ಕೂಡ ಸಹಾಯ, ಸಹಕಾರಗಳು ಸಿಗುತ್ತವೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 4:11 pm, Thu, 13 April 23