Mahashivratri 2024: ನಿಮ್ಮ ಇಷ್ಟಾರ್ಥ ಸಿದ್ಧಿಸಲು ಮಹಾಶಿವರಾತ್ರಿಯಂದು ಈ ರೀತಿ ಮಾಡಿ

ಮಹಾಶಿವರಾತ್ರಿಯಂದು ಭಕ್ತರು ಪೂರ್ಣ ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ ಮತ್ತು ಶಿವನ ದೇವಾಲಯಗಳಿಗೆ ಹೋಗಿ ಆತನ ಪ್ರೀಯ ವಸ್ತುಗಳನ್ನು ಅರ್ಪಿಸಿ ಬರುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಇರುವ ಶಿವಲಿಂಗಕ್ಕೆ ಪೂಜೆ ಮಾಡುತ್ತಾರೆ. ಅದರಲ್ಲಿಯೂ ಮಹಾಶಿವರಾತ್ರಿಯಂದು ರುದ್ರಾಭಿಷೇಕ ಮತ್ತು ಬಿಲ್ವಪತ್ರೆಯ ಅರ್ಪಣೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ರುದ್ರಾಭಿಷೇಕ ಮಾಡುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

Mahashivratri 2024: ನಿಮ್ಮ ಇಷ್ಟಾರ್ಥ ಸಿದ್ಧಿಸಲು ಮಹಾಶಿವರಾತ್ರಿಯಂದು ಈ ರೀತಿ ಮಾಡಿ
Mahashivratri 2024
Edited By:

Updated on: Mar 07, 2024 | 10:11 AM

ಮಹಾಶಿವರಾತ್ರಿಯ (Mahashivratri) ಹಬ್ಬವು (Festival) ಶಿವನಿಗೆ ಸಮರ್ಪಿತವಾಗಿದ್ದು ಈ ದಿನ, ಭಕ್ತರು ಪೂರ್ಣ ಭಕ್ತಿಯಿಂದ ಶಿವನನ್ನು ಪೂಜಿಸುತ್ತಾರೆ ಮತ್ತು ಶಿವನ ದೇವಾಲಯಗಳಿಗೆ ಹೋಗಿ ಆತನ ಪ್ರೀಯ ವಸ್ತುಗಳನ್ನು ಅರ್ಪಿಸಿ ಬರುತ್ತಾರೆ. ಇನ್ನು ಕೆಲವರು ಮನೆಯಲ್ಲಿ ಇರುವ ಶಿವಲಿಂಗಕ್ಕೆ ಪೂಜೆ (Puja) ಮಾಡುತ್ತಾರೆ. ಅದರಲ್ಲಿಯೂ ಮಹಾಶಿವರಾತ್ರಿಯಂದು ರುದ್ರಾಭಿಷೇಕ (Rudrabhishek) ಮತ್ತು ಬಿಲ್ವಪತ್ರೆಯ ಅರ್ಪಣೆ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ರುದ್ರಾಭಿಷೇಕ ಮಾಡುವುದರಿಂದ ಭಕ್ತರ ಎಲ್ಲಾ ಆಸೆಗಳು ಈಡೇರುತ್ತವೆ ಎಂದು ನಂಬಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಯಾವ ಯಾವ ಪದಾರ್ಥಗಳಿಂದ ಅಭಿಷೇಕ ಮಾಡಲಾಗುತ್ತದೆ?

ಈ ದಿನ ಶಿವನ ಅಭಿಷೇಕಕ್ಕೆ ಕೆಲವು ವಸ್ತುಗಳನ್ನು ಬಳಸಿಕೊಳ್ಳಲಾಗುತ್ತದೆ. ಇದು ಕೆಲವು ಪ್ರದೇಶ ಮತ್ತು ಜನಾಂಗಗಳಿಗೆ ಅನುಸಾರವಾಗಿ ಭಿನ್ನವಾಗಿರುತ್ತದೆ. ನೀರಿನ ಅಭಿಷೇಕ ಎಲ್ಲದಕ್ಕಿಂತ ಮುಖ್ಯ ಎನ್ನಲಾಗುತ್ತದೆ ಏಕೆಂದರೆ ಶಿವ ಉಗ್ರ ರೂಪಿ ಹಾಗಾಗಿ ಅವನನ್ನು ತಂಪು ಮಾಡಲು ನೀರಿನ ಅಭಿಷೇಕ ಮಾಡಲಾಗುತ್ತದೆ. ಇದರ ಹೊರತಾಗಿ, ಶಿವನ ಅಭಿಷೇಕಕ್ಕೆ ಹಸುವಿನ ತುಪ್ಪ, ಗಂಧದ ನೀರು, ಹೂವು, ಬಿಲ್ವಪತ್ರೆಯ ನೀರು, ಜೇನುತುಪ್ಪ, ಮೊಸರು, ಹಾಲು, ಪಂಚಾಮೃತ, ಕಬ್ಬಿನ ರಸ, ಎಳನೀರು, ಚಂದನದ ನೀರು ಇತ್ಯಾದಿ ವಸ್ತುಗಳನ್ನು ಅಭಿಷೇಕಕ್ಕೆ ಬಳಸಿಕೊಳ್ಳಬಹುದು.

ಮಹಾಶಿವರಾತ್ರಿಯಂದು ಮನೆಯಲ್ಲಿಯೇ ರುದ್ರಾಭಿಷೇಕ ಮಾಡಿ:

ಈ ದಿನ ಶಿವನಿಗೆ ರುದ್ರಾಭಿಷೇಕ ಮಾಡುವುದರಿಂದ ಎಲ್ಲಾ ರೋಗಗಳಿಂದ ಮುಕ್ತಿ ಪಡೆಯಬಹುದಾಗಿದೆ. ಮನೆಯಲ್ಲಿ ರುದ್ರಾಭಿಷೇಕ ಮಾಡಲು, ಶಿವಲಿಂಗವನ್ನು ಉತ್ತರ ದಿಕ್ಕಿನಲ್ಲಿ ಇರಿಸಿ ಮತ್ತು ರುದ್ರಾಭಿಷೇಕ ಮಾಡುವವರ ಮುಖವು ಪೂರ್ವ ದಿಕ್ಕಿನಲ್ಲಿರುವಂತೆ ನೋಡಿಕೊಳ್ಳಿ. ನೀರಿನ ಮೂಲಕ ಅಭಿಷೇಕವನ್ನು ಪ್ರಾರಂಭಿಸಿ, ನಂತರ ಕಬ್ಬಿನ ರಸ, ಜೇನುತುಪ್ಪ, ಮೊಸರು, ಹಾಲು, ಪಂಚಾಮೃತ ಮತ್ತು ಇನ್ನಿತರ ದ್ರವದೊಂದಿಗೆ ಭಕ್ತಿಯಿಂದ ಶಿವಲಿಂಗದ ಅಭಿಷೇಕ ಮಾಡಿ. ಶಿವನಿಗೆ ಅಭಿಷೇಕ ಮಾಡುವಾಗ ಮಹಾಮೃತ್ಯುಂಜಯ ಮಂತ್ರ, ಶಿವ ತಾಂಡವ ಸ್ತೋತ್ರದಂತಹ ಕೆಲವು ಮಂತ್ರಗಳನ್ನು ಪಠಿಸುವುದನ್ನು ಮರೆಯಬೇಡಿ. ಏಕೆಂದರೆ ಈ ಪ್ರಕ್ರಿಯೆಯಲ್ಲಿ ಶಿವ ಮಂತ್ರಗಳನ್ನು ಪಠಿಸುವುದು ತುಂಬಾ ಮಂಗಳಕರವಾಗಿದೆ. ಬಳಿಕ ಶಿವನನ್ನು ಮೆಚ್ಚಿಸಲು ಅವನ ಪ್ರೀಯ ವಸ್ತುಗಳನ್ನು ಮತ್ತು ಕೆಲವು ನೈವೇದ್ಯಗಳನ್ನು ಅರ್ಪಿಸಿ. ಬಳಿಕ ಕುಟುಂಬದೊಂದಿಗೆ ಶಿವನ ಆರತಿ ಮಾಡಿ. ಶಿವನಿಗೆ ಅಭಿಷೇಕದ ಮಾಡಿದ ನೀರನ್ನು ಮನೆಯ ಸುತ್ತಮುತ್ತಲೂ ಸಿಂಪಡಿಸಿ, ಬಳಿಕ ಈ ನೀರನ್ನು ಎಲ್ಲರಿಗೂ ಕುಡಿಯಲು ನೀಡಿ.

ಇದನ್ನೂ ಓದಿ: ಸಂಪತ್ತು, ಸಮೃದ್ಧಿ ದುಪ್ಪಟ್ಟಾಗಬೇಕಾ? ಏಕಾದಶಿಯ ದಿನ ಹೀಗೆ ಮಾಡಿ

ರುದ್ರಾಭಿಷೇಕದ ಧಾರ್ಮಿಕ ಮಹತ್ವವೇನು?

ಜಾತಕದಲ್ಲಿರುವ ಸರ್ಪ ದೋಷ ನಿವಾರಣೆಗೆ ರುದ್ರಾಭಿಷೇಕ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಶಿವನ ಅನುಗ್ರಹದಿಂದ, ಗ್ರಹಗಳ ದೋಷಗಳು ಸಹ ನಿವಾರಣೆಯಾಗುತ್ತದೆ. ಜೊತೆಗೆ ರುದ್ರಾಭಿಷೇಕ ಮಾಡುವುದರಿಂದ ಮನೆಯಲ್ಲಿ ಸಂತೋಷ, ಶಾಂತಿ, ಸಂಪತ್ತು, ಸಮೃದ್ಧಿ ಎಲ್ಲವೂ ಪ್ರಾಪ್ತವಾಗುತ್ತದೆ.

  • ಸಂಪ್ರದಾಯದ ಪ್ರಕಾರ, ನೀವು ಹೊಸ ಮನೆ ಅಥವಾ ಹೊಸ ಕಾರನ್ನು ಖರೀದಿಸಲು ಬಯಸಿದರೆ, ಮೊಸರಿನೊಂದಿಗೆ ರುದ್ರಾಭಿಷೇಕ ಮಾಡಿ.
  • ಹಣದ ಕೊರತೆ ನೀಗಿಸಲು ಕಬ್ಬಿನ ರಸದಿಂದ ರುದ್ರಾಭಿಷೇಕ ಮಾಡಬೇಕು ಮತ್ತು ಸಂಪತ್ತನ್ನು ಹೆಚ್ಚಿಸಲು ಜೇನುತುಪ್ಪ ಮತ್ತು ತುಪ್ಪದಿಂದ ರುದ್ರಾಭಿಷೇಕ ಮಾಡಬೇಕು ಎಂದು ನಂಬಲಾಗಿದೆ.
  • ಗ್ರಹ ದೋಷ ಅಥವಾ ಮನೆಯಲ್ಲಿನ ತೊಂದರೆಗಳನ್ನು ನಿವಾರಿಸಲು ಮೊಸರಿನೊಂದಿಗೆ ರುದ್ರಾಭಿಷೇಕ ಮಾಡಬೇಕು.
  • ಸಂತೋಷ ಮತ್ತು ಶಾಂತಿಗಾಗಿ ಹಾಲಿನಿಂದ ರುದ್ರಾಭಿಷೇಕ ಮಾಡಬೇಕು.
  • ಮಕ್ಕಳಾಗದವರು ಹಸುವಿನ ಹಾಲು ಅಥವಾ ನೀರಿನೊಂದಿಗೆ ಸಕ್ಕರೆಯನ್ನು ಬೆರೆಸಿ ರುದ್ರಾಭಿಷೇಕ ಮಾಡಬೇಕು.
  • ಶಿವನಿಗೆ ಸಾಸಿವೆ ಎಣ್ಣೆಯಿಂದ ರುದ್ರಾಭಿಷೇಕ ಮಾಡುವುದರಿಂದ ಶನಿ ದೇವರ ದುಷ್ಪರಿಣಾಮಗಳು ಸಹ ನಿವಾರಣೆಯಾಗುತ್ತವೆ ಎಂದು ನಂಬಲಾಗಿದೆ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ