Kannada News Spiritual March Festival List 2026: List of Hindu Fasts And Festivals Celebrations
March Festival List 2026: ಮಾರ್ಚ್ ತಿಂಗಳಲ್ಲಿ ಆಚರಿಸುವ ಹಬ್ಬಗಳಾವುವು? ಇಲ್ಲಿದೆ ಮಾಹಿತಿ
ಹಬ್ಬ ಹರಿದಿನಗಳೆಂದರೆ ಸಂಭ್ರಮವೋ ಸಂಭ್ರಮ. ಹಿಂದೂ ಧರ್ಮದಲ್ಲಿ ವರ್ಷದ ಪ್ರತಿ ದಿನವು ಒಂದೊಂದು ವಿಶೇಷತೆಯನ್ನು ಹೊಂದಿದೆ. ಹೀಗಾಗಿ ವರ್ಷ ಪೂರ್ತೀ ವ್ರತಾಚರಣೆ ಅಥವಾ ಹಬ್ಬಗಳಿಗೇನು ಕೊರತೆಯಿಲ್ಲ. ಈ ವರ್ಷದ ಮೂರನೇ ತಿಂಗಳಾದ ಮಾರ್ಚ್‌ನಲ್ಲಿ ಸಾಕಷ್ಟು ಹಬ್ಬಗಳು ಹಾಗೂ ಆಚರಣೆಗಳಿವೆ. ಈ ಕುರಿತಾದ ಮಾಹಿತಿ ಇಲ್ಲಿದೆ.
ಹಿಂದೂ ಧರ್ಮದಲ್ಲಿ (Hindu Religion) ವರ್ಷವಿಡೀ ಹತ್ತು ಹಲವು ಧಾರ್ಮಿಕ ಆಚರಣೆ, ಹಬ್ಬಗಳು ವ್ರತಾಚರಣೆಗಳಿವೆ. ಈ ವರ್ಷದ ಮೊದಲೆರಡು ತಿಂಗಳು ಮುಗಿದಿದ್ದು, ಮೂರನೇ ತಿಂಗಳಾದ ಮಾರ್ಚ್‌ಗೆ ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿವೆ. ಈ ತಿಂಗಳಲ್ಲಿ ಹಲವಾರು ಹಬ್ಬಗಳನ್ನು(festivals) ಆಚರಿಸಲಾಗುತ್ತದೆ. ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಕುರಿತಾದ ಸಂಪೂರ್ಣ ಮಾಹಿತಿ ಈ ಕೆಳಗಿದೆ.
ಮಾರ್ಚ್ ತಿಂಗಳಲ್ಲಿ ಆಚರಿಸಲಾಗುವ ಹಬ್ಬಗಳ ಪಟ್ಟಿ ಇಲ್ಲಿದೆ
ಮಾರ್ಚ್ 01- ಪ್ರದೋಷ
ಮಾರ್ಚ್ 02 – ಹೋಲಿಕಾ ಕಾಮದಹನ
ಮಾರ್ಚ್ 03 – ಹೋಳಿ ಹುಣ್ಣಿಮೆ
ಮಾರ್ಚ್ 04 – ಫಾಲ್ಗುನ ಕೃಷ್ಣ ಪಕ್ಷ
ಮಾರ್ಚ್ 06 – ಸಂಕಷ್ಟರ ಚತುರ್ಥಿ
ಮಾರ್ಚ್ 06 – ಶ್ರೀವಾದಿರಾಜರ ಆರಾಧನೆ
ಮಾರ್ಚ್ 07 – ಶ್ರೀವ್ಯಾಸರಾಯರ ಆರಾಧನೆ
ಮಾರ್ಚ್ 08 – ರಂಗ ಪಂಚಮಿ
ಮಾರ್ಚ್ 10 – ಶಬರಿ ಜಯಂತಿ
ಮಾರ್ಚ್ 11 – ಶಹರತ್ – ಇ – ಹಜರತ್ ಆಲಿ
ಮಾರ್ಚ್ 14 – ಮೀನ ಸಂಕ್ರಮಣ
ಮಾರ್ಚ್ 15 – ಸರ್ವೈಕಾದಶಿ ಪಾಪವಿಮೋಚನಿ
ಮಾರ್ಚ್ 16 – ಪ್ರದೋಷ
ಮಾರ್ಚ್ 17 – ಮಾಸ ಶಿವರಾತ್ರಿ
ಮಾರ್ಚ್ 18 – ಮಹಾ ನಕ್ಷತ್ರ ಉತ್ತರಭಾದ್ರಾ
ಮಾರ್ಚ್ 19 – ಚಾಂದ್ರಯುಗಾದಿ
ಮಾರ್ಚ್ 20 – ಚೈತ್ರ ಶುಕ್ಲ ಪಕ್ಷ
ಮಾರ್ಚ್ 21- ರಂಜನ್ ಈದ್ ಉಲ್ ಫಿತರ್ಮಾ
ರ್ಚ್ 21- ಮತ್ಸ್ಯ ಜಯಂತಿ
ಮಾರ್ಚ್ 23 – ಹಯವ್ರತಂ
ಮಾರ್ಚ್ 24 – ಸ್ಕಂದ ಷಷ್ಠಿ
ಮಾರ್ಚ್ 26 – ಶ್ರೀರಾಮ ನವಮಿ
ಮಾರ್ಚ್ 29 – ಸರ್ವೈಕಾದಶಿ ಕಾಮದಾ
ಮಾರ್ಚ್ 30 – ಪ್ರದೋಷ
ಮಾರ್ಚ್ 30 – ಅನಂಗ ತ್ರಯೋದಶಿ
ಮಾರ್ಚ್ 31 – ದಮನಕ ಚತುರ್ದಶಿ
ಮಾರ್ಚ್ 31 – ಮಹಾವೀರ ಜಯಂತಿ
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Fri, 27 February 26
Sainandha P
ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ