AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mauni Amavasya 2025: ಇಂದು ಮೌನಿ ಅಮವಾಸ್ಯೆ; ಸಂಜೆ ಈ ಒಂದು ಕೆಲಸ ಮಾಡಲು ಮರೆಯದಿರಿ

ಮೌನಿ ಅಮಾವಾಸ್ಯೆಯು ಅತ್ಯಂತ ಪವಿತ್ರ ದಿನವಾಗಿದ್ದು, ಸ್ನಾನ ಮತ್ತು ದಾನದ ಜೊತೆಗೆ, ಸೂರ್ಯಾಸ್ತದ ನಂತರ ಪೂರ್ವಜರಿಗೆ ದೀಪ ಹಚ್ಚುವುದು ಮುಖ್ಯ. ದಕ್ಷಿಣ ದಿಕ್ಕಿನಲ್ಲಿ ಸಾಸಿವೆ ಅಥವಾ ಎಳ್ಳೆಣ್ಣೆಯಿಂದ ಬೆಳಗಿಸಿದ ಮಣ್ಣಿನ ದೀಪವು ಪೂರ್ವಜರ ಆಶೀರ್ವಾದವನ್ನು ತರುತ್ತದೆ ಎಂದು ನಂಬಲಾಗಿದೆ. ಪ್ರದೋಷ ಕಾಲದಲ್ಲಿ ದೀಪ ಬೆಳಗಿಸುವುದು ಮಂಗಳಕರ. ಈ ವರ್ಷ ಮಹಾ ಕುಂಭದ ಅಮೃತ ಸ್ನಾನದೊಂದಿಗೆ ಈ ದಿನದ ಮಹತ್ವ ಇನ್ನಷ್ಟು ಹೆಚ್ಚಾಗಿದೆ.

Mauni Amavasya 2025: ಇಂದು ಮೌನಿ ಅಮವಾಸ್ಯೆ; ಸಂಜೆ ಈ ಒಂದು ಕೆಲಸ ಮಾಡಲು ಮರೆಯದಿರಿ
Mauni Amavasya
ಅಕ್ಷತಾ ವರ್ಕಾಡಿ
|

Updated on:Jan 29, 2025 | 9:52 AM

Share

ಮೌನಿ ಅಮಾವಾಸ್ಯೆಯ ದಿನ, ಸ್ನಾನವು ದಾನದಷ್ಟೇ ಮುಖ್ಯವಾಗಿದೆ. ಅದೇ ರೀತಿ ಅಮವಾಸ್ಯೆಯ ಸಂಜೆಗೂ ವಿಶೇಷ ಮಹತ್ವವಿದೆ. ಈ ವರ್ಷ ಮೌನಿ ಅಮವಾಸ್ಯೆಯಂದು ಮಹಾ ಕುಂಭದ ಎರಡನೇ ಅಮೃತ ಸ್ನಾನ ನಡೆಯಲಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ದಿನದ ಮಹತ್ವವು ಇನ್ನಷ್ಟು ಹೆಚ್ಚಾಗುತ್ತದೆ. ಇದಲ್ಲದೆ, ಈ ದಿನದಂದು ಪೂರ್ವಜರಿಗೆ ದೀಪ ಹಚ್ಚುವುದರಿಂದ ನೀವು ಶುಭ ಫಲಿತಾಂಶಗಳನ್ನು ಪಡೆಯುತ್ತೀರಿ ಎಂದು ನಂಬಲಾಗಿದೆ.

ಮೌನಿ ಅಮಾವಾಸ್ಯೆಯಂದು ಪೂರ್ವಜರ ಆಶೀರ್ವಾದ ಪಡೆಯಲು, ಸೂರ್ಯಾಸ್ತದ ನಂತರ ಮಣ್ಣಿನ ದೀಪಕ್ಕೆ ಸಾಸಿವೆ ಅಥವಾ ಎಳ್ಳೆಣ್ಣೆ ಸೇರಿಸಿ ದೀಪ ಹಚ್ಚಿ. ಮನೆಯ ಹೊರಗೆ ದೀಪವನ್ನು ದಕ್ಷಿಣ ದಿಕ್ಕಿನಲ್ಲಿ ಇಡಿ. ಇಡೀ ರಾತ್ರಿ ದೀಪ ಉರಿಯಲಿ. ಇದಲ್ಲದೆ ಮನೆಯಲ್ಲಿ ಪೂರ್ವಜರ ಚಿತ್ರವಿದ್ದರೆ ಅದರ ಮುಂದೆಯೂ ದೀಪವನ್ನು ಹಚ್ಚಬಹುದು.ಈ ದಿನ ಪ್ರದೋಷ ಕಾಲವು ಸಂಜೆ 5.58 ರವರೆಗೆ ಇರುತ್ತದೆ. ಈ ಸಮಯದಲ್ಲಿ ಪೂರ್ವಜರಿಗೆ ದೀಪವನ್ನು ಹಚ್ಚುವುದು ಮಂಗಳಕರ ಎಂದು ಪರಿಗಣಿಸಲಾಗಿದೆ.

ಇದನ್ನೂ ಓದಿ: ಇಂದು ಮೌನಿ ಅಮವಾಸ್ಯೆ; ತಪ್ಪಿಯೂ ಈ ಸಮಯದಲ್ಲಿ ಸ್ನಾನ,ದಾನ ಮಾಡಬೇಡಿ

ಮೌನಿ ಅಮಾವಾಸ್ಯೆಯಂದು, ಪೂರ್ವಜರಿಗೆ ದಕ್ಷಿಣ ದಿಕ್ಕಿನಲ್ಲಿ ದೀಪವನ್ನು ಬೆಳಗಿಸಬೇಕು, ಏಕೆಂದರೆ ಅದು ಪೂರ್ವಜರ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಈ ದಿಕ್ಕಿನಲ್ಲಿ ದೀಪವನ್ನು ಹಚ್ಚುವುದರಿಂದ ಪೂರ್ವಜರು ಸಂತುಷ್ಟರಾಗುತ್ತಾರೆ ಎಂದು ಹೇಳಲಾಗುತ್ತದೆ.

ಮತ್ತಷ್ಟು ಆಧ್ಯಾತ್ಮ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:34 am, Wed, 29 January 25