Navratri 2023: ದುರ್ಗಾಷ್ಟಮಿಯಂದು ಮಹಾಗೌರಿಯನ್ನು ಪೂಜಿಸುವುದರಿಂದ ಯಾವೆಲ್ಲಾ ಫಲ ಪ್ರಾಪ್ತಿಯಾಗುತ್ತದೆ?

ಮಹಾಗೌರಿ ದೇವಿಯು ಪಾರ್ವತಿ ದೇವಿಯ ರೂಪವಾಗಿದ್ದು, ಈಕೆಯನ್ನು ಗಣೇಶನ ತಾಯಿ ಎಂದೂ ಕರೆಯುತ್ತಾರೆ. ಮಹಾಗೌರಿ ದೇವಿಯು ದುರ್ಗಾ ದೇವಿಯ ಎಂಟನೆಯ ಶಕ್ತಿ. ಆಕೆಯು ಸ್ವಭಾವತಃ ತುಂಬಾನೇ ಸೌಮ್ಯ. ಆಕೆ ರೂಪದಲ್ಲೂ ಅತ್ಯಂತ ಸರಳವಾಗಿದ್ದಾಳೆ. ಹಾಗಾಗಿ ತಾಯಿಯ ಈ ರೂಪವನ್ನು ಅನ್ನಪೂರ್ಣ, ಪ್ರದಾಯಿನಿ, ಐಶ್ವರ್ಯ ಮತ್ತು ಚೈತನ್ಯಮಯ ಎಂದೂ ಕರೆಯುತ್ತಾರೆ.

Navratri 2023: ದುರ್ಗಾಷ್ಟಮಿಯಂದು ಮಹಾಗೌರಿಯನ್ನು ಪೂಜಿಸುವುದರಿಂದ ಯಾವೆಲ್ಲಾ ಫಲ ಪ್ರಾಪ್ತಿಯಾಗುತ್ತದೆ?
ಸಾಂದರ್ಭಿಕ ಚಿತ್ರ
Edited By:

Updated on: Oct 22, 2023 | 6:00 AM

ನವರಾತ್ರಿಯ ಎಂಟನೇ ದಿನದಂದು ಮಹಾಗೌರಿ ದೇವಿಯನ್ನು ಪೂಜಿಸಲಾಗುತ್ತದೆ. ಮಹಾಗೌರಿ ದೇವಿಯು ಪಾರ್ವತಿ ದೇವಿಯ ರೂಪವಾಗಿದ್ದು, ಈಕೆಯನ್ನು ಗಣೇಶನ ತಾಯಿ ಎಂದೂ ಕರೆಯುತ್ತಾರೆ. ಮಹಾಗೌರಿ ದೇವಿಯು ದುರ್ಗಾ ದೇವಿಯ ಎಂಟನೆಯ ಶಕ್ತಿ. ಆಕೆಯು ಸ್ವಭಾವತಃ ತುಂಬಾನೇ ಸೌಮ್ಯ. ಆಕೆ ರೂಪದಲ್ಲೂ ಅತ್ಯಂತ ಸರಳವಾಗಿದ್ದಾಳೆ. ಹಾಗಾಗಿ ತಾಯಿಯ ಈ ರೂಪವನ್ನು ಅನ್ನಪೂರ್ಣ, ಐಶ್ವರ್ಯ, ಪ್ರದಾಯಿನಿ ಮತ್ತು ಚೈತನ್ಯಮಯ ಎಂದೂ ಕರೆಯುತ್ತಾರೆ. ಮಹಾಗೌರಿಯ ವಾಹನ ಗೂಳಿ. ದೇವಿಯ ಮೇಲಿನ ಬಲಗೈಯಲ್ಲಿ ಅಭಯ ಮುದ್ರೆ ಮತ್ತು ಕೆಳಗಿನ ಕೈಯಲ್ಲಿ ತ್ರಿಶೂಲವಿದೆ. ಮೇಲಿನ ಎಡಗೈ ಡಮರು ಮತ್ತು ಕೆಳಗಿನ ಕೈಯಲ್ಲಿ ವರ ಮುದ್ರೆಯನ್ನು ಹಿಡಿದಿರುತ್ತಾಳೆ ಎಂದು ಆಕೆಯನ್ನು ವರ್ಣಿಸಲಾಗುತ್ತದೆ.

ಈ ದಿನದ ಹಿನ್ನೆಲೆಯೇನು?

ನವರಾತ್ರಿಯ ಸಂದರ್ಭದಲ್ಲಿ ಮಹಾಗೌರಿ ದೇವಿಯನ್ನು ಎಂಟನೇ ದಿನದಂದು ಅಂದರೆ ಮಹಾ ಅಷ್ಟಮಿ ಅಥವಾ ದುರ್ಗಾಷ್ಟಮಿಯಂದು ಪೂಜಿಸಲಾಗುತ್ತದೆ. ಈಕೆ ಗೂಳಿ ಮೇಲೆ ಕುಳಿತು ಕೈಯಲ್ಲಿ ತ್ರಿಶೂಲದೊಂದಿಗೆ ಢಮರುವನ್ನು ಹಿಡಿಕೊಂಡಿರುತ್ತಾಳೆ. ತಾಯಿ ದುರ್ಗೆಯು ಭೂಮಿಯ ಮೇಲೆ ಜನ್ಮವನ್ನು ಪಡೆದು, ಮರಳಿ ದೇವಲೋಕಕ್ಕೆ ಹೋಗಿ ಶಿವನನ್ನು ಮದುವೆಯಾಗಲು ಬಯಸುತ್ತಾಳೆ. ನಾರದರ ಸಲಹೆಯಂತೆ ಶಿವನನ್ನು ಒಲಿಸಿಕೊಳ್ಳಲು ತಪಸ್ಸು ಮಾಡುತ್ತಾಳೆ. ಆಕೆ ಸಂಪೂರ್ಣವಾಗಿ ತಪಸ್ಸಿನಲ್ಲಿ ಮಗ್ನವಾಗಿ ಆಹಾರ, ನೀರನ್ನು ತ್ಯಜಿಸಿರುವ ಸಮಯದಲ್ಲಿ ಆಕೆಯ ದೇಹದಲ್ಲಿ ಧೂಳು, ಕೊಳೆ ತುಂಬಿಕೊಳ್ಳುತ್ತದೆ. ಬಿಸಿಲಿನಿಂದಾಗಿ ಆಕೆಯ ದೇಹವು ಸಂಪೂರ್ಣವಾಗಿ ಕಪ್ಪಾಗುತ್ತದೆ. ಸಾವಿರಾರು ವರ್ಷಗಳ ತಪಸ್ಸಿನ ನಂತರ ಶಿವನು ಆಕೆಯಿಂದ ಪ್ರಭಾವಿತನಾಗಿ ಆಕೆಯ ದೇಹವನ್ನು ಹೊಳೆಯುವಂತೆ ಮಾಡಲು ಗಂಗೆಯನ್ನು ಹರಿಯಲು ಬಿಡುತ್ತಾನೆ ಎಂಬ ಪ್ರತೀತಿ ಇದೆ. ತಾಯಿಯ ಈ ರೂಪವು ಮಹಿಮೆಯಾಯಿತು. ಅದರ ನಂತರ ತಾಯಿ ಪಾರ್ವತಿಯ ಈ ರೂಪವನ್ನು ಮಹಾಗೌರಿ ಎಂದು ಕರೆಯಲಾಯಿತು. ಈ ಬಗ್ಗೆ ಇನ್ನೊಂದು ದಂತ ಕಥೆಯಿದ್ದು ಕಾಳರಾತ್ರಿಯ ರೂಪದಲ್ಲಿ ಎಲ್ಲಾ ರಾಕ್ಷಸರನ್ನು ಕೊಂದ ನಂತರ ದೇವಿಯು, ಕಠಿಣ ತಪಸ್ಸು ಮಾಡಿ ಬ್ರಹ್ಮನಿಗೆ ಅರ್ಘ್ಯವನ್ನು ಅರ್ಪಿಸಿದಳು. ಬಳಿಕ ಅವಳ ತಪಸ್ಸಿಗೆ ಮೆಚ್ಚಿದ ಬ್ರಹ್ಮ ದೇವ, ಪಾರ್ವತಿಗೆ ಒಂದು ಸಲಹೆ ನೀಡುತ್ತಾನೆ. ಬಳಿಕ ಅವನ ಅಣತಿಯಂತೆ ಮಾತೆಯು, ಮಾನಸ ಸರೋವರದಲ್ಲಿ ಸ್ನಾನ ಮಾಡಿದಳು. ಈ ನದಿಯಲ್ಲಿ ಸ್ನಾನ ಮಾಡಿದ ನಂತರ ತಾಯಿಯ ರೂಪವು ಪ್ರಕಾಶಮಾನವಾಯಿತು. ಅದಕ್ಕಾಗಿಯೇ ಈ ತಾಯಿಯ ರೂಪವನ್ನು ಮಹಾಗೌರಿ ಎಂದು ಕರೆಯಲಾಯಿತು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಶೃಂಗೇರಿಯ ಶಾರದಾ ಪೀಠಕ್ಕೆ ಭಕ್ತರು ಸಲ್ಲಿಸಬೇಕಾದ ಪೂಜೆ ಮತ್ತು ಅದರ ಫಲಾಫಲಗಳೇನು?

ಪೂಜಾ ಮಹತ್ವವೇನು?

ಮಹಾಗೌರಿಯನ್ನು ಪೂಜಿಸುವುದರಿಂದ ವಿಶೇಷ ಲಾಭಗಳು ದೊರೆಯುತ್ತವೆ. ಮಹಾಗೌರಿಯ ಆಚರಣೆಯಿಂದ ಎಲ್ಲಾ ರೀತಿಯ ವಿವಾದ ಮತ್ತು ಮನೆಯ ತೊಂದರೆಗಳು ದೂರವಾಗುತ್ತವೆ. ಜೊತೆಗೆ ಒಬ್ಬ ವ್ಯಕ್ತಿಯ ವೈವಾಹಿಕ ಜೀವನದಲ್ಲಿ ವಿವಾದಗಳು ಇದ್ದಲ್ಲಿ, ಅಥವಾ ವಿವಾಹ ಆಗದೆಯೇ ಇದ್ದಲ್ಲಿ ಮಹಾಗೌರಿಯನ್ನು ನೆನೆಯುವುದರಿಂದ ಎಲ್ಲಾ ಸಂಕಷ್ಟಗಳು ದೂರವಾಗುತ್ತದೆ.

​ಮಹಾಗೌರಿಯ ಆಶೀರ್ವಾದ ಪಡೆಯಲು ಯಾವ ಮಂತ್ರವನ್ನು ಜಪಿಸಬೇಕು?

-ಸರ್ವಮಂಗಳ ಮಾಂಗಲ್ಯೇ ಶಿವೇ ಸರ್ವಾರ್ಥ ಸಾಧಿಕೇ
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ

-ಓಂ ದೇವಿ ಮಹಾಗೌರಿಯೇ ನಮಃ

-ಯಾ ದೇವಿ ಸರ್ವಭೂತೇಶು ಮಹಾಗೌರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ

-ಓ ದೇವಿ ಮಹಾಗೌರಿಯೇ ನಮಃ

-ಶ್ವೇತ ವೃಷೆಸಮೃದ್ಧ ಶ್ವೇವೇತಾಂಬರ್ಧಾರ ಶುಚೇಹ ಮಹಾಗೌರಿ
ಶುಭಂ ದಾದ್ಯನ್ಮಹದೇವ ಪ್ರಮೋದಃ

– ಓಂ ಹ್ರೀಂ ಶ್ರೀಂ ಕ್ಲೀಮ್ ಪಾರ್ವತಿ ದೇವಿ ಮಾಮಾ ಸರ್ವ ಕಾರ್ಯ ಸಿದ್ಧಿಕಾರಿ ಸಿದ್ಧಿ ಕುರು ಕುರು ಸ್ವಾಹಾ

– ಮಾತಾ ಚಾ ಪಾರ್ವತಿ ಪಿತಾ ದೇವೋ ಮಹೇಶ್ವರಃ
ಬಾಂಧವ ಶಿವಭಕ್ತ, ಸ್ವದೇಶೋ ಭುವಂತ್ರಾಯಂ

– ಓಂ ಹ್ರೀಂ ಯೋಗಿನಿ ಯೋಗಿನಿ ಯೋಗೇಶ್ವರಿ ಯೋಗ ಭಯಂಕರಿ

ಸಕಲ ಸ್ಥಾವರ ಜಂಗಮಸ್ಯ ಮುಖ ಹೃದಯಂ ಮಮವಶಂ ಆಕರ್ಷಯ ಆಕರ್ಷಯ ಸ್ವಾಹ ( ವಿವಾಹ ಆಗದಿರುವವರು ಈ ಮಂತ್ರ ಪಠಿಸುವುದರಿಂದ ಕಂಕಣ ಭಾಗ್ಯ ಕೂಡಿಬರುತ್ತದೆ)

ಮತ್ತಷ್ಟು ಆಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: