ದೆಹಲಿಯಲ್ಲಿ ಅ. 24ರವರೆಗೆ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ; ಉತ್ಸವಕ್ಕೆ ಬರುಣ್ ದಾಸ್ ಚಾಲನೆ
TV9 Festival of India: ದೆಹಲಿಯ ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಉತ್ಸವ ನಡೆಯುತ್ತಿದ್ದು, ಇಂದು ಈ ಸಮಾರಂಭದ ಎರಡನೇ ದಿನ. ಈ ಉತ್ಸವಕ್ಕೆ ಪ್ರವೇಶ ಉಚಿತವಾಗಿದ್ದು, ಅಕ್ಟೋಬರ್ 24ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಯಾರು ಬೇಕಾದರೂ ಭೇಟಿ ನೀಡಬಹುದು.
ನವದೆಹಲಿ: ಟಿವಿ9 ನೆಟ್‌ವರ್ಕ್ ಇನ್ನೂ 4 ದಿನಗಳ ಕಾಲ ‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ (TV9 Festival of India) ಕಾರ್ಯಕ್ರಮವನ್ನು ಆಯೋಜಿಸಿದೆ. ಈ ಉತ್ಸವವನ್ನು ದೆಹಲಿಯ ಮೇಜರ್ ಧ್ಯಾನ್ ಚಂದ್ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್ 20ರಿಂದ ಈ ಉತ್ಸವ ಆರಂಭವಾಗಿದ್ದು, ಅಕ್ಟೋಬರ್ 24ರ ವಿಜಯದಶಮಿಯವರೆಗೆ ಮುಂದುವರಿಯುತ್ತದೆ. ಈ ಕಾರ್ಯಕ್ರಮವನ್ನು ಟಿವಿ9 ಭಾರತ್ವರ್ಷ ಎಂಡಿ ಬರುಣ್ ದಾಸ್ (Barun Das) ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಭಾರತ ಮತ್ತು ವಿದೇಶಗಳ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ದುರ್ಗಾದೇವಿಗೆ ಪೂಜೆ (Durga Puja) ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಟಿವಿ 9 ಭಾರತವರ್ಷದ ಎಂಡಿ ಬರುಣ್ ದಾಸ್ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಅವರು, ‘ಮೊಟ್ಟಮೊದಲ ಬಾರಿಗೆ ಕೊಲ್ಕತ್ತಾದ ದುರ್ಗಾ ಪೂಜೆಯನ್ನು ದೆಹಲಿಗೆ ತರಲು ಪ್ರಯತ್ನಿಸಿದ್ದೇವೆ’ ಎಂದು ಹೇಳಿದರು. ಈ ವೇಳೆ ಟಿವಿ9 ಗ್ರೂಪ್‌ನ ಹೋಲ್ ಟೈಮ್ ಡೈರೆಕ್ಟರ್ ಹೇಮಂತ್ ಶರ್ಮಾ ಕೂಡ ಉಪಸ್ಥಿತರಿದ್ದರು.
ದೆಹಲಿಯ ಮೇಜರ್ ಧ್ಯಾನಚಂದ್ ಸ್ಟೇಡಿಯಂನಲ್ಲಿ ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಉತ್ಸವ ನಡೆಯುತ್ತಿದ್ದು, ಈ ಸ್ಟೇಡಿಯಂ ಅನ್ನು ವರ್ಣರಂಜಿತವಾಗಿ ಅಲಂಕರಿಸಲಾಗಿದೆ. ಇಂದು ಈ ಸಮಾರಂಭದ ಎರಡನೇ ದಿನ. ಅಕ್ಟೋಬರ್ 24ರವರೆಗೆ ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು. ಈ ಉತ್ಸವಕ್ಕೆ ಪ್ರವೇಶವು ಸಂಪೂರ್ಣವಾಗಿ ಉಚಿತವಾಗಿದೆ. ಈ ಉತ್ಸವದಲ್ಲಿ ನೇರವಾಗಿ ಪಾಲ್ಗೊಳ್ಳಲು ಆಗದವರು ಮನೆ ಅಥವಾ ಕಚೇರಿಯಲ್ಲಿ ಕುಳಿತು ಫೆಸ್ಟಿವಲ್ ಆಫ್ ಇಂಡಿಯಾ ವೀಕ್ಷಿಸಲು ಡಿಜಿಟಲ್ ಲಿಂಕ್‌ಗಳನ್ನು ಸಹ ಒದಗಿಸಲಾಗಿದೆ.
ಮೊದಲ ದಿನದ ಈ ಅದ್ಧೂರಿ ಕಾರ್ಯಕ್ರಮದಲ್ಲಿ ಹಲವು ಹೆಸರಾಂತ ವ್ಯಕ್ತಿಗಳು ಭಾಗವಹಿಸಿದ್ದರು. ಮೊದಲ ದಿನ ಕೇಂದ್ರ ಸಚಿವ ಮಹೇಂದ್ರನಾಥ ಪಾಂಡೆ, ಬಿಜೆಪಿ ಸಂಸದ ಹಾಗೂ ಭೋಜ್‌ಪುರಿ ಕಲಾವಿದ ಮನೋಜ್ ತಿವಾರಿ, ದೆಹಲಿ ಸಚಿವ ಅತಿಶಿ ಸೇರಿದಂತೆ ಹಲವು ಹಿರಿಯ ನಾಯಕರು ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ಅವಧಿಯಲ್ಲಿ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾದ ವರ್ಣರಂಜಿತ ಕಾರ್ಯಕ್ರಮಗಳ ನೇರ ವೀಕ್ಷಣೆಯನ್ನು ವೀಕ್ಷಿಸಲು, ನೀವು ಇಲ್ಲಿ ನೀಡಲಾದ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಲ್ಲಿಯ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ ಕಾರ್ಯಕ್ರಮಕ್ಕೆ ಯಾರು ಬೇಕಾದರೂ ಹೋಗಬಹುದು. ದೆಹಲಿ-ಎನ್‌ಸಿಆರ್‌ನಲ್ಲಿ ವಾಸಿಸುವ ಎಲ್ಲಾ ಜನರು ಪೂರ್ಣ ಉತ್ಸಾಹದಿಂದ ಇದರಲ್ಲಿ ಭಾಗವಹಿಸುತ್ತಿದ್ದಾರೆ. ಈ ಉತ್ಸವದಲ್ಲಿ ದಿನವಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು, ವಿವಿಧ ಖಾದ್ಯಗಳನ್ನು ಸವಿಯಲು ಮತ್ತು ಶಾಪಿಂಗ್ ಮಾಡಲು ವಿಶೇಷ ಅವಕಾಶವಿದೆ. ಜನರು ಇಲ್ಲಿ ಲೈವ್ ಸಂಗೀತವನ್ನೂ ಆನಂದಿಸಬಹುದಾಗಿದೆ.
ಇದನ್ನೂ ಓದಿ: Gaganyaan mission test Live: ಗಗನಯಾನ ಯೋಜನೆಯ ಪರೀಕ್ಷಾರ್ಥ ಹಾರಾಟ ಲೈವ್ ಟಿವಿ9 ಡಿಜಿಟಲ್ನಲ್ಲಿ ನೋಡಿ
‘ಟಿವಿ9 ಫೆಸ್ಟಿವಲ್ ಆಫ್ ಇಂಡಿಯಾ’ ಭಾರತದ ಬಹುಮುಖಿ ಸಂಸ್ಕೃತಿಯ ಹಬ್ಬವಾಗಿದ್ದು, ಇಲ್ಲಿ ದೇಶದ ಅತ್ಯುತ್ತಮ ಕಲೆ, ಸಂಗೀತ, ಆಹಾರ ಮತ್ತು ಫ್ಯಾಷನ್ ಅನ್ನು ಪ್ರದರ್ಶಿಸಲಾಗುತ್ತದೆ. ಈ ವರ್ಷ ಈ ಉತ್ಸವವು ಭಾರತದ ವೈಭವಯುತ ಪರಂಪರೆ ಮತ್ತು ಜಾಗತಿಕ ಸಂಪರ್ಕಗಳ ಬಗ್ಗೆ ಮಾಹಿತಿ ಪಸರಿಸಲು ವೈವಿಧ್ಯಮಯ ಹಿನ್ನೆಲೆಯ ಜನರನ್ನು, ಕಲಾವಿದರನ್ನು ಒಟ್ಟುಗೂಡಿಸುತ್ತಿದೆ.
ಶಾಪಿಂಗ್ ಪ್ರಿಯರಿಗೆ ಹಲವು ಆಯ್ಕೆ:
ಈ ಉತ್ಸವದಲ್ಲಿ 200ಕ್ಕೂ ಹೆಚ್ಚು ಶಾಪಿಂಗ್ ಮಳಿಗೆಗಳನ್ನು ತೆರೆಯಲಾಗಿದೆ. ಅತ್ಯಾಧುನಿಕ ಗೃಹೋಪಯೋಗಿ ಉಪಕರಣಗಳಿಂದ ಹಿಡಿದು ಇತ್ತೀಚಿನ ಟೆಕ್ ಗ್ಯಾಜೆಟ್‌ಗಳು, ಫ್ಯಾಷನ್ ಉಡುಪುಗಳು, ಇತ್ತೀಚಿನ ಪೀಠೋಪಕರಣಗಳು ಇತ್ಯಾದಿಗಳವರೆಗೆ ನೀವು ಇಲ್ಲಿ ಎಲ್ಲವನ್ನೂ ಖರೀದಿಸಬಹುದಾಗಿದೆ. ಹಾಗೇ, ದೆಹಲಿಯಲ್ಲಿ ಕುಳಿತು ವಿದೇಶ ಪ್ರವಾಸದ ಅನುಭವವನ್ನು ಸವಿಯುವಂಥ ವ್ಯವಸ್ಥೆಗಳನ್ನು ಉತ್ಸವದಲ್ಲಿ ಮಾಡಲಾಗಿದೆ. ಇದಕ್ಕಾಗಿ ಇರಾನ್, ಅಫ್ಘಾನಿಸ್ತಾನ, ಥೈಲ್ಯಾಂಡ್ ಸೇರಿದಂತೆ ಹಲವು ದೇಶಗಳ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.
ಸಂಗೀತಪ್ರಿಯರ ಕಿವಿಗೆ ಇಂಪು:
ನೀವು ಉತ್ಸವದಲ್ಲಿ ಶಾಪಿಂಗ್ ಜೊತೆಗೆ ಲೈವ್ ಸಂಗೀತವನ್ನು ಆನಂದಿಸಬಹುದು. ಈ ಉತ್ಸವದಲ್ಲಿ ಅನೇಕ ಲೈವ್ ಸಂಗೀತ ಕಾರ್ಯಕ್ರಮಗಳನ್ನು ಸಹ ಪ್ರಸ್ತುತಪಡಿಸಲಾಗುತ್ತಿದೆ. ಇದಲ್ಲದೇ ದೇಶದ ಮೂಲೆ ಮೂಲೆಯ ಕುಶಲಕರ್ಮಿಗಳು ತಯಾರಿಸಿದ ವಿವಿಧ ರೀತಿಯ ಉತ್ಪನ್ನಗಳ ಪ್ರದರ್ಶನವೂ ನಡೆಯಲಿದೆ. ಈ ಉತ್ಸವದಲ್ಲಿ ಅತಿ ಎತ್ತರದ ದುರ್ಗಾ ದೇವಿಯ ವಿಗ್ರಹವನ್ನು ಸ್ಥಾಪಿಸಲಾಗಿದ್ದು, ದೇವಿಯ ಪೂಜೆಯ ನೇರ ದರ್ಶನವನ್ನು ಸಹ ಪಡೆಯಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:18 pm, Sat, 21 October 23