AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು -ಸಿಎಂ ಬೊಮ್ಮಾಯಿ

CM Basavaraj Bommai Speech: ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಜನರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು -ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ ಬೊಮ್ಮಾಯಿ
TV9 Web
| Updated By: ಆಯೇಷಾ ಬಾನು|

Updated on: Sep 26, 2022 | 10:49 AM

Share

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ದ್ರೌಪದಿ ಮುರ್ಮು(Droupadi Murmu) ಅವರು ದಸರಾಗೆ ಚಾಲನೆ ನೀಡಿದ್ದಾರೆ. ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai) ಜನರಿಗೆ ದಸರಾ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಹಾಗೂ ರಾಷ್ಟ್ರಪತಿ ದಸರಾ ಉದ್ಘಾಟನೆಗೆ ಬಂದಿದ್ದು ಸಂತಸ ತಂದಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಸಿಎಂ ಬೊಮ್ಮಾಯಿ, ಗತವೈಭವ ನೆನಪಿಸಿಕೊಳ್ಳುವಂತೆ ಈ ಬಾರಿ ದಸರಾ ಮಹೋತ್ಸವ ಆಚರಿಸುತ್ತಿದ್ದೇವೆ. 10 ದಿನಗಳ ಕಾರ್ಯಕ್ರಮ ಒಂದು ನಾಡಹಬ್ಬ. ನಮ್ಮ ನಾಡಿನ ದುಡಿಯುವ ರೈತರು, ಕಾರ್ಮಿಕರು, ಸಾಮಾನ್ಯ ಜನರು ಮನೆಮನೆಗಳಲ್ಲಿ ನಾಡಹಬ್ಬ ಆಚರಿಸುತ್ತಿದ್ದೇವೆ. ತಾಯಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ನಾಡನ್ನು ಸಮೃದ್ಧಿಯಾಗಿಡಲು ನಾವು ಪ್ರಾರ್ಥಿಸುತ್ತೇವೆ. ದೇವಿ ನಮ್ಮ ಪ್ರಾರ್ಥನೆಗೆ ಓಗೊಟ್ಟು ನಮಗೆ ಆಶೀರ್ವಾದ, ಶಕ್ತಿ ಕೊಡುತ್ತಾಳೆ. ಇದು ನಮ್ಮ ಸೌಭಾಗ್ಯ. ಚಾಮುಂಡಿ ಬೆಟ್ಟದಲ್ಲಿ ಇವತ್ತು ಸ್ಥಾಪನೆಯಾಗಿರುವ ತಾಯಿಯ ಶಕ್ತಿಪೀಠವು ನಾಡಿಗೆ ಶಕ್ತಿ ಕೊಡುವ ಒಂದು ಸಂಚಲನವನ್ನು ಉಂಟು ಮಾಡಿದೆ. ಮೈಸೂರು ಮಹಾರಾಜರ ಕಾಲದಿಂದ ದೇವಿಯ ಪೂಜೆಯನ್ನು ಪ್ರಜಾಪ್ರಭುತ್ವ ಬಂದ ಮೇಲೆ ಮುಂದುವರಿಸಿಕೊಂಡು ಹೋಗಿದ್ದೇವೆ. ಗತಕಾಲದ ವೈಭವದ ಜೊತೆಗೆ ಇಂದಿನ ಪ್ರಸ್ತುತ ಕಾಲದ ಸಮಗ್ರ ಕನ್ನಡ ನಾಡಿನ ಶ್ರೇಯೋಭಿವೃದ್ಧಿಯೂ ಅಷ್ಟೇ ಮುಖ್ಯ. ಹತ್ತು ಹಲವು ನೈಸರ್ಗಿಕ ಸವಾಲುಗಳನ್ನು ಎದುರಿಸಿ ಜನಕಲ್ಯಾಣದ ಕಡೆಗೆ ದಾಪುಗಾಲು ಹಾಕುತ್ತಿದ್ದೇವೆ ಎಂದರು.

ನಾವು ಆಹ್ವಾನಿಸಿದ ತಕ್ಷಣ ರಾಷ್ಟ್ರಪತಿ ದ್ರೌಪದಿ ಮುರ್ಮು ಒಪ್ಪಿಕೊಂಡರು. ದೇಶದ ಶ್ರೇಯೋಭಿವೃದ್ಧಿಗೆ ಅವರು ಚಾಮುಂಡೇಶ್ವರಿಗೆ ನಮನ ಸಲ್ಲಿಸಿದರು. ಅವರಿಗೆ ದೈವಭಕ್ತಿಯಿದೆ. ದುಷ್ಟರ ಸಂಹಾರ-ಶಿಷ್ಟರ ಪಾಲನೆ ನಾಡಹಬ್ಬದ ಆಶಯ. ಇವತ್ತು ಮಹಿಶಾಸುರ ಇಲ್ಲ. ಆದರೆ ನಮ್ಮೊಳಗಿರುವ ದುರ್ಗುಣಗಳನ್ನು ದೂರ ಇಡಬೇಕು. ಒಳ್ಳೆಯ ವಿಚಾರಗಳಿಗೆ ಪುರಸ್ಕಾರ ಕೊಟ್ಟು ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡಬೇಕು. ಆ ಸಂಕಲ್ಪದೊಂದಿಗೆ ನಾವು ಮುಂದೆ ಹೆಜ್ಜೆ ಹಾಕುತ್ತಿದ್ದೇವೆ. ಇದನ್ನೂ ಓದಿ: Dasara 2022 Inauguration: ನಾಡಹಬ್ಬ ಮೈಸೂರು ದಸರಾಕ್ಕೆ ವಿಧ್ಯುಕ್ತ ಚಾಲನೆ, ಚಾಮುಂಡೇಶ್ವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಪುಷ್ಪಾರ್ಚನೆ

ತಾಯಿ ಚಾಮುಂಡೇಶ್ವರಿ ಇವತ್ತು ಹಂಸ ಏರಿದ್ದಾಳೆ. ಹಂಸವೆಂದರೆ ಶುದ್ಧ ಎಂದು ಅರ್ಥ. ಅದು ಅತ್ಯಂತ ದೊಡ್ಡ ಹಾಗೂ ತೂಕದ ಪಕ್ಷಿ. ಆದರೂ ಅತ್ಯಂತ ಎತ್ತರಕ್ಕೆ ಹಾರಬಲ್ಲದು. ಹಿಮಾಲಯ, ಮಾನಸ ಸರೋವರಗಳಲ್ಲಿ ಅದು ಸಂಚರಿಸುತ್ತದೆ. ವಿಚಾರಗಳಲ್ಲಿ ಶುದ್ಧತೆ, ತೂಕದ ನಡವಳಿಕೆ ಮತ್ತು ಎತ್ತರದ ಚಿಂತನೆಗಳಿದ್ದರೆ, ಭಾವನೆಗಳಿದ್ದರೆ, ಶುದ್ಧ ಮನಸ್ಸು ಇದ್ದರೆ ಮಾನಸ ಸರೋವರದ ಎತ್ತರ ಮುಟ್ಟಬಹುದು ಎಂಬುದನ್ನು ಇದು ಸೂಚಿಸುತ್ತದೆ.

ಕನ್ನಡ ನಾಡನ್ನು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ಎಲ್ಲ ರೀತಿಯಲ್ಲಿಯೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಂಕಲ್ಪ ಮಾಡಿದ್ದೇವೆ. ಈ ವರ್ಷ ಕೊವಿಡ್​ನಂಥ ಆತಂಕಗಳಿಂದ ನಾಡನ್ನು ದೂರ ಇರಿಸಿ, ನಾಡನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಆಶೀರ್ವಾದ ಮಾಡಲಿ ಎಂದು ಶಕ್ತಿ ದೇವತೆಯನ್ನು ಪ್ರಾರ್ಥಿಸುತ್ತೇನೆ. ರಾಷ್ಟ್ರಪತಿಗೆ ಸಮಸ್ತ ಕನ್ನಡ ನಾಡಿನ 6 ಕೋಟಿ ಜನರ ಪರವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಸಿಎಂ ಬೊಮ್ಮಾಯಿ ಭಾಷಣ ಮುಗಿಸಿದರು.

ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಜೆಪಿ ಸಂಸದರಿಗೆ ಖಾಲಿ ಡಬ್ಬಗಳಂತೆ ಸದ್ದು ಮಾಡೋದು ಮಾತ್ರ ಗೊತ್ತು: ಡಿಕೆಎಸ್
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಬಿಹಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವಿರುದ್ಧ ರಾಹುಲ್ ಜಾಥಾ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಧರ್ಮಸ್ಥಳ ಪ್ರಕರಣದ ಹಿಂದೆ ಮತಾಂತರ ಮಾಫಿಯಾ, ನಗರ ನಕ್ಸಲರು: ಸಿಟಿ ರವಿ ಆರೋಪ
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಕೊಪ್ಪಳದಲ್ಲಿ ಯೂರಿಯಾಗಾಗಿ ಒಂದು ಕಿಮೀ ವರೆಗೂ ಸರತಿ ಸಾಲಿನಲ್ಲಿ ನಿಂತ ರೈತರು‌
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
ಚುನಾವಣಾ ಆಯೋಗದಿಂದ ನೋಟಿಸ್, ಬಿಹಾರ ಡಿಸಿಎಂ ವಿಜಯ್ ಹೇಳಿದ್ದೇನು?
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
VIDEO: ಬರೋಬ್ಬರಿ 109 ಮೀಟರ್ ಸಿಕ್ಸ್​ ಸಿಡಿಸಿದ ಟಿಮ್ ಡೇವಿಡ್
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
Assembly Session Live: ವಿಧಾನಸಭೆ ಅಧಿವೇಶನ ನೇರಪ್ರಸಾರ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
ಭೀಮ ಹೆಸರಿಗೆ ತಕ್ಕಂತೆ ಗಜಪಡೆಯಲ್ಲಿ ಎಲ್ಲರಿಗಿಂತ ಹೆಚ್ಚು ತೂಕದ ಆನೆ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
‘ನನ್ನ ಅಮೂಲ್ಯ 8 ವರ್ಷ ವ್ಯರ್ಥವಾಗಿದೆ’; ಧ್ರುವ ಬಗ್ಗೆ ರಾಘವೇಂದ್ರ ಹೊಸ ಆರೋಪ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ
ಮೈಮೇಲೆಲ್ಲಾ ಕಚ್ಚಿದ ಗಾಯ, ಡೇ ಕೇರ್ನಲ್ಲಿರುವ ಮಗುವಿನ ಸ್ಥಿತಿ ಏನಾಗಿದೆ ನೋಡಿ