Mysore Dasara 2022: ರಾಷ್ಟ್ರಪತಿಗಳು ಹಾಗೂ ಇತರ ಗಣ್ಯರಿಗೆ ಉಡುಗೊರೆಯಾಗಿ ನೀಡಲಾಗುವ ಬೆಳ್ಳಿಯ ಆನೆಗಳು ಇವೇ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Sep 26, 2022 | 11:26 AM

ದಸರಾ ಉತ್ಸವವನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಗಮಿಸಿದ್ದು ಅವರಿಗೆ ಮತ್ತು ಇತರ ಕೆಲ ಗಣ್ಯರಿಗೆ ಅಪ್ಪಟ ಬೆಳ್ಳಿಯಲ್ಲಿ ಕೆತ್ತಿರುವ ಈ ಆನೆಗಳನ್ನು ಉಡುಗೊರೆಯಾಗಿ ನೀಡಲಾಗುವುದು.

ಮೈಸೂರು: ಸುಂದರ ಕೆತ್ತನೆಯ ಬೆಳ್ಳಿ ಆನೆಗಳನ್ನು  (elephantಸ) ನೋಡಿ ಮಾರಾಯ್ರೇ. ಇವುಗಳ ಮೇಲೆ ಅಂಬಾರಿ ಕಾಣುವುದಿಲ್ಲವಾದರೂ ನೋಡಿದವರಿಗೆ ಮೈಸೂರಿನ ವಿಶ್ವವಿಖ್ಯಾತ ಜಂಬೂ ಸವಾರಿಯನ್ನು ಜ್ಞಾಪಿಸುತ್ತವೆ. ದಸರಾ ಉತ್ಸವವನ್ನು ಉದ್ಘಾಟಿಸಲು ರಾಷ್ಟ್ರಪತಿ ದ್ರೌಪದಿ ಮುರ್ಮು (President Droupadi Murmu) ಅವರು ಆಗಮಿಸಿದ್ದು ಅವರಿಗೆ ಮತ್ತು ಇತರ ಕೆಲ ಗಣ್ಯರಿಗೆ ಅಪ್ಪಟ ಬೆಳ್ಳಿಯಲ್ಲಿ ಕೆತ್ತಿರುವ ಈ ಆನೆಗಳನ್ನು ಉಡುಗೊರೆಯಾಗಿ (gift) ನೀಡಲಾಗುವುದು.