Navratri: ನವರಾತ್ರಿಯಲ್ಲಿ ಪ್ರತೀದಿನ ಈ ಒಂದು ಕಾರ್ಯ ಮಾಡದಿದ್ದರೆ ಪರ್ವಕಾಲದಲ್ಲಿ ಮಾಡಿದ ಪೂಜಾಫಲ ನಿಷ್ಫಲವಾಗುವುದು. ಅದೇನು ಮತ್ತು ಹೇಗೆ ?

Navratri Specialಒಂಭತ್ತು ದಿನ ಬೇರೆ ಬೇರೆ ಮಂತ್ರಗಳಿಂದ ಅರ್ಘ್ಯ ಪ್ರದಾನ ಮಾಡಬೆಕು. ಇದು ಅತ್ಯಂತ ದುರ್ಲಭವಾದ ಸಂಗ್ರಹ. ಈ ಅರ್ಘ್ಯಪ್ರದಾನ ಮಾಡುವುದರಿಂದ ಅತ್ಯಂತ ಶುಭವಾಗುವುದು.

Navratri: ನವರಾತ್ರಿಯಲ್ಲಿ ಪ್ರತೀದಿನ ಈ ಒಂದು ಕಾರ್ಯ ಮಾಡದಿದ್ದರೆ ಪರ್ವಕಾಲದಲ್ಲಿ ಮಾಡಿದ ಪೂಜಾಫಲ ನಿಷ್ಫಲವಾಗುವುದು. ಅದೇನು ಮತ್ತು ಹೇಗೆ ?
Navratri
TV9kannada Web Team

| Edited By: ಅಕ್ಷಯ್​ ಕುಮಾರ್​​

Sep 26, 2022 | 11:05 AM

ಮನುಷ್ಯ ಅತ್ಯಂತ ಶ್ರದ್ಧೆಯಿಂದ ನವರಾತ್ರೆಯಲ್ಲಿ ಉಪವಾಸ, ವ್ರತ, ಪೂಜೆ, ಪಾರಾಯಣ, ಅರ್ಚನೆ ಇತ್ಯಾದಿ ಹಲವು ವಿಧದಲ್ಲಿ ಶ್ರೀದೇವಿಯ ಸೇವೆಯನ್ನು ಮಾಡಬಹುದು. ಆದರೆ ಈ ಒಂದು ಕಾರ್ಯವನ್ನು ಪ್ರತೀದಿನ ಆರತಿಯ ನಂತರ ಮಾಡಲೇ ಬೇಕು ಇಲ್ಲದಿದ್ದರೆ ಮಾಡಿದ ಕಾರ್ಯವು ನಿಷ್ಫಲವಾಗುವುದು.ಅದು ಯಾವುದೆಂದರೆ ಅರ್ಘ್ಯಪ್ರಧಾನವೆಂಬ ಸಮರ್ಪಣಾ ಕಾರ್ಯ. ಅದರ ಸ್ವರೂಪ ಇಂತಿದೆ –

ಮೊದಲ ದಿನ 

ಮಹಾವಿದ್ಯೇ ಮಹಾಮಾಯೇ ಯೋಗನಿದ್ರೇ ಶಿವಪ್ರಿಯೇ |

ಇದಮರ್ಘ್ಯಂ ಪ್ರದಾಸ್ಯಾಮಿ ಮಹಾಕಾಳಿ ನಮೋಸ್ತುತೇ ||

ಓಂ ಯೋಗನಿದ್ರಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಎರಡನೇಯ ದಿನ 

ದೇವಜಾತಾ ಮಹಾಧೇನುರ್ಭಾರತೀ ವಾಕ್ಸರಸ್ವತೀ |

ವಿಷ್ಣುಪ್ರೀತಿಕರೀಮಾತರ್ದತ್ತಮರ್ಘಂ ಗೃಹಾಣ ಮೇ ||

ಓಂ ದೇವಾತಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಮೂರನೇಯ ದಿನ 

ತ್ರೈಲೋಕ್ಯಸುಂದರೀ ದೇವಿ ಮಹಿಷಾಸುರನಾಶಿನೀ |

ಗೃಹಾಣಾರ್ಘ್ಯಂ ಮಯಾ ದತ್ತಂ ಸರ್ವೇಶ್ವರಿ ನಮೋಸ್ತುತೇ ||

ಓಂ ಮಹಿಷಾಸುರಮರ್ದಿನ್ಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ನಾಲ್ಕನೇಯ ದಿನ 

ಶೈಲಜಾಯೈ ನಮಸ್ತುಭ್ಯಂ ತ್ರಿದಶೈರಭಿ ಪೂಜಿತೇ |

ಹಿಮಾಚಲ ಕೃತಾವಾಸೇ ದತ್ತಮರ್ಘ್ಯಂ ಗೃಹಾಣ ಮೇ ||

ಓಂ ಶೈಲಜಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಐದನೇಯ ದಿನ 

ಧೂಮ್ರಾಹಾಯೈ ನಮಸ್ತುಭ್ಯಂ ದೇವನಾಂ ಸುಖದೇ ಶಿವೇ |

ರಾಕ್ಷಸಘ್ನೇ ಶುಭೇ ದೇವಿ ಕಾಳಿಕೇ ತೇ ನಮೋ ನಮಃ ||

ಓಂ ಧೂರ್ಮಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಆರನೇಯ ದಿನ 

ದೇವನಾಂ ದುಃಖದೌ ದೈತ್ಯೌ ಚಂಡಮುಂಡೌ ಮಹಾಬಲೌ |

ತೌ ನಾಶಯಿತ್ವಾ ದೇವಾನಾಂ ಸುಖದೇ ತೇ ನಮೋ ನಮಃ ||

ಓಂ ಚಂಡಮುಂಡಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ .

ಏಳನೇಯ ದಿನ 

ರಕ್ತಬೀಜವಧೇ ದೇವಿ ಮಹಾಕಾಳಿ ನಮೋಸ್ತುತೇ |

ಗೃಹಾಣಾರ್ಘ್ಯಂ ಮಯಾದತ್ತಂ ಶಾಂಭವ್ಯೈ ತೇ ನಮೋ ನಮಃ ||

ಓಂ ರಕ್ತಬೀಜಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಎಂಟನೇಯ ದಿನ 

ತ್ರಿಲೋಕಜಯಿನಂ ವೀರಂ ನಿಶುಂಭಂ ದೇವವೈರಿಣಂ |

ನಾಶಯಿತ್ವಾ ಮಹಾದೇವಿ ಏಕವೀರೇ ನಮೋಸ್ತುತೇ ||

ಓಂ ನಿಶುಂಭಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಒಂಭತ್ತನೇಯ ದಿನ 

ಮಹಾವೀರಂ ಮಹಾಕಾಯಂ ದೇವನಾಮಂತಕಂ ರಿಪುಮ್ |

ಶುಂಭಂ ಮಹಾಬಲಂ ಹತ್ವಾ ಲೋಕಾನಾಂ ಸುಖದೇ ನಮಃ ||

ಓಂ ಶುಂಭಹಾಯೈ ನಮಃ ಅರ್ಘ್ಯಂ ಸಮರ್ಪಯಾಮಿ.

ಈ ರೀತಿಯಾಗಿ ಒಂಭತ್ತು ದಿನ ಬೇರೆ ಬೇರೆ ಮಂತ್ರಗಳಿಂದ ಅರ್ಘ್ಯ ಪ್ರದಾನ ಮಾಡಬೆಕು. ಇದು ಅತ್ಯಂತ ದುರ್ಲಭವಾದ ಸಂಗ್ರಹ. ಈ ಅರ್ಘ್ಯಪ್ರದಾನ ಮಾಡುವುದರಿಂದ ಅತ್ಯಂತ ಶುಭವಾಗುವುದು.

ಡಾ.ಕೇಶವಕಿರಣ ಬಿ

ಧಾರ್ಮಿಕಚಿಂತಕರು ಮತ್ತು ಸಲಹೆಗಾರರು

kkmanasvi@gamail.com

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada