Navratri 2022: ನವರಾತ್ರಿಯಲ್ಲಿ ಈ 9 ಬಣ್ಣದ ಬಟ್ಟೆಗಳನ್ನು ಧರಿಸಿ, ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗಿ

ಇಂದಿನಿಂದ ಅಂದರೆ ಸೆಪ್ಟೆಂಬರ್ 26ರಿಂದ ನವರಾತ್ರಿ ಆರಂಭವಾಗಿದೆ. ಈ ಸಮಯದಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಯಾವ ದಿನದಂದು ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿ ದುರ್ಗಾ ಮಾತೆಯನ್ನು ಮೆಚ್ಚಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

Navratri 2022: ನವರಾತ್ರಿಯಲ್ಲಿ ಈ 9 ಬಣ್ಣದ ಬಟ್ಟೆಗಳನ್ನು ಧರಿಸಿ, ದುರ್ಗೆಯ ಅನುಗ್ರಹಕ್ಕೆ ಪಾತ್ರರಾಗಿ
Navratri
TV9kannada Web Team

| Edited By: Nayana Rajeev

Sep 26, 2022 | 11:01 AM

ಇಂದಿನಿಂದ ಅಂದರೆ ಸೆಪ್ಟೆಂಬರ್ 26ರಿಂದ ನವರಾತ್ರಿ ಆರಂಭವಾಗಿದೆ. ಈ ಸಮಯದಲ್ಲಿ ದುರ್ಗಾ ದೇವಿಯ 9 ರೂಪಗಳನ್ನು ಪೂಜಿಸಲಾಗುತ್ತದೆ. ಯಾವ ದಿನದಂದು ನೀವು ಯಾವ ಬಣ್ಣದ ಬಟ್ಟೆಗಳನ್ನು ಧರಿಸಿ ದುರ್ಗಾ ಮಾತೆಯನ್ನು ಮೆಚ್ಚಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ.

ಈ ಸಮಯದಲ್ಲಿ ಸಂಪೂರ್ಣ 9 ದಿನ ಉಪವಾಸಗಳನ್ನು ಕೈಗೊಳ್ಳುತ್ತಾರೆ. ನವರಾತ್ರಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ.

9 ದೇವತೆಗಳು ತಮ್ಮದೇ ಆದ ನಿರ್ದಿಷ್ಟ ಬಣ್ಣವನ್ನು ಇಷ್ಟಪಡುತ್ತಾರೆ ಎಂದು ನಂಬಲಾಗಿದೆ. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸುವುದರಿಂದ ದೇವಿಯು ಪ್ರಸನ್ನಳಾಗುತ್ತಾಳೆ. ಪ್ರತಿದಿನ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

ಮೊದಲನೇ ದಿನ ನವರಾತ್ರಿಯ ಮೊದಲ ದಿನ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ. ಈ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ. ಶೈಲಪುತ್ರಿ ದೇವಿಗೆ ಹಳದಿ ಬಣ್ಣ ಎಂದರೆ ತುಂಬಾ ಇಷ್ಟ. ಇದನ್ನು ಧರಿಸಿ ಪೂಜಿಸುವುದರಿಂದ ಶುಭವಾಗುತ್ತದೆ.

ಎರಡನೇ ದಿನ ಎರಡನೇ ದಿನ ಹಸಿರು ಬಟ್ಟೆ ಧರಿಸಿ. ಈ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ಬಣ್ಣವನ್ನು ಸಮೃದ್ಧಿ ಮತ್ತು ಪ್ರಗತಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ದೇವಿಯನ್ನು ಮೆಚ್ಚಿಸಲು ಈ ದಿನ ನೀವು ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಬಹುದು.

ದಿನ 3 ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಸಲಾಗುತ್ತದೆ. ದಟ್ಟ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸಿ. ಈ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸುವುದರಿಂದ ದೇವಿಯ ಅನುಗ್ರಹ ದೊರೆಯುತ್ತದೆ.

ನಾಲ್ಕನೇ ದಿನ ನವರಾತ್ರಿಯ ನಾಲ್ಕನೇ ದಿನದಂದು ಕೂಷ್ಮಾಂಡಾ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಭಕ್ತರು ಕಿತ್ತಳೆ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸಬೇಕು. ಇದು ದೇವಿಯನ್ನು ಮೆಚ್ಚಿಸುತ್ತದೆ.

ಐದನೇ ದಿನ ನವರಾತ್ರಿಯ ಐದನೇ ದಿನದಂದು ಸ್ಕಂದಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿ. ಈ ಬಣ್ಣವು ಶಾಂತಿಯ ಸಂಕೇತವಾಗಿದೆ. ಮಾತೆಗೆ ಬಿಳಿ ಬಣ್ಣ ಎಂದರೆ ತುಂಬಾ ಇಷ್ಟ.

ಆರನೇ ದಿನ ನವರಾತ್ರಿಯ ಆರನೇ ದಿನದಂದು ಮಾ ಕಾತ್ಯಾಯನಿಯನ್ನು ಪೂಜಿಸಲಾಗುತ್ತದೆ. ದೇವಿಗೆ ಕೆಂಪು ಬಣ್ಣ ತುಂಬಾ ಇಷ್ಟ. ಈ ಬಣ್ಣವು ಅದೃಷ್ಟ, ಉತ್ಸಾಹ, ಧೈರ್ಯ ಮತ್ತು ಹೊಸ ಜೀವನದ ಸಂಕೇತವಾಗಿದೆ.

ಏಳನೇ ದಿನ ನವರಾತ್ರಿಯ ಏಳನೇ ದಿನದಂದು ಮಾ ಕಲರಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ಪೂಜೆಯಲ್ಲಿ ನೀಲಿ ಬಣ್ಣದ ಬಟ್ಟೆಗಳನ್ನು ಧರಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ಎಂಟನೆಯ ದಿನ ನವರಾತ್ರಿಯ ಎಂಟನೇ ದಿನದಂದು ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಈ ದಿನ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಪೂಜಿಸಬೇಕು. ದೇವಿಗೆ ಗುಲಾಬಿ ಬಣ್ಣ ತುಂಬಾ ಇಷ್ಟ.

ಒಂಬತ್ತನೇ ದಿನ ನವರಾತ್ರಿಯ 9ನೇ ದಿನದಂದು ಮಾ ಸಿದ್ಧಿದಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ನೇರಳೆ ಬಣ್ಣದ ಬಟ್ಟೆಗಳನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ದೇವಿಯ ಅನುಗ್ರಹ ದೊರೆಯುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada