ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯನ್ನು ಪೂಜಿಸುವುದೇಕೆ? ವೃಷರುಧಳ ಸ್ಮರಣೆಯಿಂದ ಏನು ಫಲ?
ಯೋಗದಲ್ಲಿ ಮೂಲಾಧಾರ ಚಕ್ರವು ಮೂಲವಾಗಿರುವುದು. ದೇವಿ ಶೈಲಪುತ್ರಿಯು ಈ ಚಕ್ರದ ದೇವತೆ. ಈ ಚಕ್ರವು ಸ್ಥಿರತೆ ಮತ್ತು ಶಕ್ತಿಯ ಪ್ರತೀಕವಾಗಿದೆ. ಈ ಚಕ್ರವು ಜಾಗೃತಗೊಂಡಾಗ ಆ ವ್ಯಕ್ತಿಯು ಆಧ್ಯಾತ್ಮಿಕ ಪ್ರಯಾಣಕ್ಕೆ ಹೋಗುವನು.
ನವರಾತ್ರಿ(Navratri) ವೇಳೆ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುವುದು ಎಂದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ. ಒಂಭತ್ತು ದಿನದಲ್ಲಿ ದುರ್ಗೆಯ ವಿವಿಧ ರೂಪಗಳಲ್ಲಿ ಬಂದು ರಾಕ್ಷಸರ ಸಂಹಾರ ಮಾಡಿದ್ದಾಳೆ ಎಂದು ಪುರಾಣಗಳು ಹೇಳುತ್ತವೆ.
ಶೈಲಪುತ್ರಿಯೆಂದರೆ ಪರ್ವತರಾಜನ ಮಗಳು. ಶೈಲ ಅಂದರೆ ಪರ್ವತ ಮತ್ತು ಪುತ್ರಿ ಎಂದರೆ ಮಗಳು ಎಂದರ್ಥ. ಶೈಲಪುತ್ರಿಯನ್ನು ತಾಯಿ ಪಾರ್ವತಿಯೆಂದೂ ಕರೆಯಲಾಗುವುದು. ಸೆಪ್ಟೆಂಬರ್ 26 ರಂದು ನವರಾತ್ರಿಯ ಮೊದಲ ದಿನ. ಈ ದಿನ ಶೈಲಪುತ್ರಿ ಪೂಜೆ ಹಾಗೂ ಘಟಸ್ಥಾಪನವು ನಡೆಯುವುದು.
ಶೈಲಪುತ್ರಿಯನ್ನು ಸತಿ ದೇವಿಯ ಪುನರ್ಜನ್ಮವೆಂದು ಕರೆಯಲಾಗುತ್ತದೆ. ಸತಿ ದೇವಿಯು ತನ್ನ ತಂದೆ ಯಜ್ಞ ಮಾಡುತ್ತಿದ್ದ ವೇಳೆ ಅಗ್ನಿಕುಂಡಕ್ಕೆ ಜಿಗಿದು ಪ್ರಾಣಾರ್ಪಣೆಗೈದಿದ್ದಳು. ತನ್ನ ಪತಿ ಶಿವನನ್ನು ತಂದೆ ಅವಮಾನಿಸಿದ ಕಾರಣಕ್ಕಾಗಿ ಸತಿ ಹೀಗೆ ಮಾಡಿದಳು. ಶಿವನನ್ನು ಮರಳಿ ಪಡೆಯಲು ಅವಳು ಪುನರ್ಜನ್ಮ ಪಡೆದುಕೊಂಡಳು. ಆದರೆ ಸತಿ ಸಾವಿನ ಬಳಿಕ ಶಿವನು ದೀರ್ಘವಾದ ಧ್ಯಾನದಲ್ಲಿ ಮುಳುಗಿಹೋದ. ದೇವಿ ಶೈಲಪುತ್ರಿಯು ಕಾಡಿಗೆ ಹೋಗಿ ತುಂಬಾ ಕಠಿಣ ತಪಸ್ಸಿನಲ್ಲಿ 16 ವರ್ಷ ಕಳೆದಳು. ಇದರ ಬಳಿಕವಷ್ಟೇ ಆಕೆ ತನ್ನ ಪತಿ ಶಿವನನ್ನು ಮರಳಿ ಪಡೆದಳು. ಇದನ್ನೂ ಓದಿ: ನವರಾತ್ರಿಯ ಬಗ್ಗೆ ಧರ್ಮಶಾಸ್ತ್ರವು ಏನು ಹೇಳುತ್ತದೆ ? ನವರಾತ್ರಿ ಆಚರಣೆ ಹುಟ್ಟಿಕೊಂಡದ್ದು ಹೇಗೆ?
ದೇವಿ ಶೈಲಪುತ್ರಿಯನ್ನು ಯಾವಾಗಲೂ ಆದಿಶಕ್ತಿಯೆಂದು ಗುರುತಿಸಲಾಗಿದೆ. ಆಕೆ ಗೂಳಿ ಮೇಲೆ ಸವಾರಿ ಮಾಡುತ್ತಿದ್ದ ಕಾರಣ ಆಕೆಯನ್ನು ವೃಷರುಧ ಎಂದು ಕರೆಯಲಾಗುತ್ತದೆ. ಆಕೆಗೆ ಎರಡು ಕೈಗಳಿದ್ದು, ಒಂದರಲ್ಲಿ ತ್ರಿಶೂಲ ಮತ್ತೊಂದರಲ್ಲಿ ಕಮಲದ ಹೂವಿದೆ. ಅರ್ಧಚಂದ್ರಾಕೃತಿಯು ಆಕೆಯ ಹಣೆಯಲ್ಲಿದೆ. ಆಕೆಯನ್ನು ಯಾವಾಗಲೂ ಬಿಳಿ ಬಟ್ಟೆಯಲ್ಲಿ ತೋರಿಸಲಾಗುತ್ತದೆ.
ಯೋಗದಲ್ಲಿ ಮೂಲಾಧಾರ ಚಕ್ರವು ಮೂಲವಾಗಿರುವುದು. ದೇವಿ ಶೈಲಪುತ್ರಿಯು ಈ ಚಕ್ರದ ದೇವತೆ. ಈ ಚಕ್ರವು ಸ್ಥಿರತೆ ಮತ್ತು ಶಕ್ತಿಯ ಪ್ರತೀಕವಾಗಿದೆ. ಈ ಚಕ್ರವು ಜಾಗೃತಗೊಂಡಾಗ ಆ ವ್ಯಕ್ತಿಯು ಆಧ್ಯಾತ್ಮಿಕ ಪ್ರಯಾಣಕ್ಕೆ ಹೋಗುವನು. ನಿಮಗೆ ಜೀವನದಲ್ಲಿ ಶಕ್ತಿ ಹಾಗೂ ಸ್ಥಿರತೆ ಬೇಕೆಂದರೆ ನವರಾತ್ರಿಯ ಮೊದಲ ದಿನ ಶೈಲಪುತ್ರಿ ದೇವಿಯ ಪೂಜಿಸಿ.
ಎಲ್ಲಾ ದೇವದೇವತೆಗಳ ಅಹಂ ಹಾಗೂ ಪ್ರತಿಷ್ಠೆಯನ್ನು ಶೈಲಪುತ್ರಿ ದೇವಿಯು ಯಾವ ರೀತಿ ಧ್ವಂಸ ಮಾಡಿದಳು ಎನ್ನುವ ಬಗ್ಗೆ ಉಪನಿಷತ್ ನಲ್ಲಿ ಉಲ್ಲೇಖವಿದೆ. ಎಲ್ಲಾ ದೇವದೇವತೆಗಳು ವಿನಮ್ರ ಹೃದಯದಿಂದ ಆಕೆಯನ್ನು ನಮಿಸಿದರು ಎಂದು ಹೇಳಲಾಗುತ್ತದೆ. ದೇವಿ ಶೈಲಪುತ್ರಿಯು ಅಂತಿಮ ಶಕ್ತಿ ಮತ್ತು ಪ್ರತಿಯೊಂದರ ಹಿಂದೆಯೂ ಆಕೆ ಇದ್ದಾಳೆ ಎಂದು ಅವರೆಲ್ಲರೂ ಹೇಳಿದರು. ತ್ರಿಮೂತ್ರಿಗಳಾದ ಬ್ರಹ್ಮ ವಿಷ್ಣು ಮತ್ತು ಶಿವ ಕೂಡ ತಮ್ಮ ಶಕ್ತಿಗಾಗಿ ಶೈಲಪುತ್ರಿಯನ್ನು ಅವಲಂಬಿಸಿದ್ದಾರೆ.
ವೇ!!ಶ್ರೀ!! ಕುಮಾರಸ್ವಾಮಿ, ಶ್ರೀ ಜ್ಯೋತಿಷ್ಯ ಸಲಹಾ ಕೇಂದ್ರ ಬೆಂಗಳೂರು
ನವರಾತ್ರಿ ಹಬ್ಬಕ್ಕೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 8:35 am, Mon, 26 September 22