Mysore Dasara 2022: ಮೈಸೂರು ದಸರಾ ಉದ್ಘಾಟನೆಯಲ್ಲಿ ರಾಷ್ಟ್ರಪತಿ ಭಾಗಿ; ಮೊದಲ ದಿನದ ಆಹ್ವಾನ ಪತ್ರಿಕೆ ಇಂಗ್ಲಿಷ್​ನಲ್ಲಿ ಮುದ್ರಣ: ಸಚಿವ ಎಸ್.ಟಿ ಸೋಮಶೇಖರ್

ವಿಶ್ವ ವಿಖ್ಯಾತ ಮೈಸೂರು ದಸರಾ 2022ರ ಉದ್ಘಾಟನೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಗಿಯಾಗುವುದರಿಂದ ಮೊದಲ ದಿನದ ಆಹ್ವಾನ ಪತ್ರಿಕೆ ಇಂಗ್ಲಿಷ್​ನಲ್ಲಿ ಮುದ್ರಣವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.

Mysore Dasara 2022: ಮೈಸೂರು ದಸರಾ ಉದ್ಘಾಟನೆಯಲ್ಲಿ ರಾಷ್ಟ್ರಪತಿ ಭಾಗಿ; ಮೊದಲ ದಿನದ ಆಹ್ವಾನ ಪತ್ರಿಕೆ ಇಂಗ್ಲಿಷ್​ನಲ್ಲಿ ಮುದ್ರಣ: ಸಚಿವ ಎಸ್.ಟಿ ಸೋಮಶೇಖರ್
ಸಚಿವ ಎಸ್​ಟಿ ಸೋಮಶೇಖರ್
TV9kannada Web Team

| Edited By: Vivek Biradar

Sep 17, 2022 | 8:42 PM

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ 2022ರ (Mysore Dasara 2022) ಉದ್ಘಾಟನೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು (Draupadi Murmu) ಭಾಗಿಯಾಗುವುದರಿಂದ ಮೊದಲ ದಿನದ ಆಹ್ವಾನ ಪತ್ರಿಕೆ ಇಂಗ್ಲಿಷ್​ನಲ್ಲಿ ಮುದ್ರಣವಾಗುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ (ST Somshekar)  ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು ರೈತ ಹಾಗೂ ಗ್ರಾಮೀಣಾ ದಸರಾ 23ಕ್ಕೆ ಆರಂಭಗೊಂಡು‌ 25 ಕ್ಕೆ ಅಂತ್ಯವಾಗಲಿದೆ. ಇದನ್ನು ಕೃಷಿ ಸಚಿವ ಬಿ.ಸಿ ಪಾಟೀಲ್ (BC Patil) ಉದ್ಘಾಟನೆ ಮಾಡಲಿದ್ದಾರೆ ಎಂದು ಹೇಳಿದರು.

8 ದಿನಗಳ ಕಾಲ ಅರಮನೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತದೆ. 26 ರಿಂದ 7 ದಿನಗಳ ಯೋಗ ದಸರಾ ನಡೆಯಲಿದೆ. 10 ದಿನಗಳ ಆಹಾರ ಮೇಳ ನಡೆಯಲಿದೆ. 27 ರಿಂದ 7 ದಿನಗಳ ಕಾಲ ಯುವ ದಸರಾ ನಡೆಯಲಿದ್ದು, ಒಂದು ದಿನ ಅಪ್ಪು ಹಾಡಿಗೆ ಮೀಸಲಿಡಲಾಗಿದೆ ಎಂದು ತಿಳಿಸಿದರು.

ಎಲ್ಲರ ಒತ್ತಾಯದ ಮೇರೆಗೆ ಅಪ್ಪು ನೆನಪಿಗಾಗಿ ಅಪ್ಪು ಹಾಡಿನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಯುವ ದಸರಾ ಉದ್ಘಾಟಕರು ಸೇರಿದಂತೆ, ಕಾರ್ಯಕ್ರಮದ ರೂಪು ರೇಷದ ಅಂತಿಮ ಪಟ್ಟಿ ಸೋಮವಾರ ಸಿದ್ದವಾಗಲಿದೆ. ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಭಾಗಿಯಾಗಿ, ಬೆಟ್ಟದ ಹೂ ಚಿತ್ರವನ್ನು ಶಕ್ತಿಧಾಮದ ಮಕ್ಕಳೊಂದಿಗೆ ನೋಡಲಿದ್ದಾರೆ ಎಂದು ತಿಳಿಸಿದ್ದಾರೆ.

ರಾಷ್ಟ್ರಪತಿಗಳು ದಸರಾ ಉದ್ಘಾಟನೆಗೆ ಬರುತ್ತಿರುವ ಹಿನ್ನೆಲೆ ವೇದಿಕೆ ಮೇಲೆ ಯಾರು ಇರಬೇಕೆಂದು ಜಿಲ್ಲಾಧಿಕಾರಿಗಳು ನಿರ್ಧರಿಸುತ್ತಾರೆ. ಈಗಾಗಲೇ ಸ್ಥಳೀಯ ಶಾಸಕರಿಗೆ, ಸಚಿವರಿಗೆ ಅವಕಾಶ ಕೊಡಬೇಕೆಂದು ರಾಷ್ಟ್ರಪತಿ ಕಛೇರಿಗೆ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಈ ಹಿಂದೆ 43 ಜನರು ವೇದಿಕೆಯಲ್ಲಿರುತ್ತಿದ್ದರು. ಈ ಬಾರಿ ಕೇವಲ 10 ಜನರಿಗೆ ಮಾತ್ರ ವೇದಿಕೆ ಮೇಲೆ ಅವಕಾಶ ನೀಡಲಾಗುತ್ತದೆ. ಗೋಲ್ಡ್ ಕಾರ್ಡ್ ನೀಡಬೇಕೆಂದು ಒತ್ತಾಯ ಬಂದಿದೆ. ಅರಮನೆಯಲ್ಲಿ ದಸರಾ ವೀಕ್ಷಣೆಗೆ ಹಾಗೂ ಪಂಚಿನ ಕವಾಯತು ಮೈದಾನಕ್ಕೆ ಪಾಸ್ ವ್ಯವಸ್ಥೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಎಷ್ಟು ಪಾಸ್ ಕೊಡಬೇಕು ಎಂಬುದು ತೀರ್ಮಾನಿಸಲಾಗುವುದು. ದಸರಾ ಉದ್ಘಾಟನೆ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಇರುತ್ತದೆ ಎಂದು ಮಾಹಿತಿ ನೀಡಿದರು.

ಎರಡು ಸಾವಿರ ಜನರಿಗೆ ಅವಕಾಶ ಕೊಡುವ ಸಾಧ್ಯತೆ ಇದೆ. ಈ‌ ಬಾರಿ ಪಾಸ್​ನಲ್ಲಿ ಗೊಂದಲ ಆಗುವುದಿಲ್ಲಾ. ಎಂಎಲ್ಎ, ಎಂ.ಪಿ, ಸಂಸದರು ಪಾಲಿಕೆ ಸದಸ್ಯರಿಗೆ ಎಷ್ಟು ಪಾಸ್ ಕೊಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ. ಅವರು ಕೇಳಿದಷ್ಟು ಪಾಸ್ ಕೊಡುವುದಿಲ್ಲ. ನನ್ನ ಕ್ಷೇತ್ರದ ಜನರಿಗೆ ಪಾಸ್ ಕೊಡುವುದಿಲ್ಲ. ನಾನು ಈಗಾಗಲೇ ಕ್ಷೇತ್ರದ ಜನರಿಗೆ ದಸರಾ ಜಂಬೂಸವಾರಿ ಹಾಗೂ ಪಂಚಿನ ಕವಾಯತು ಕಾರ್ಯಕ್ರಮ ಪಾಸ್ ಕೇಳಬೇಡಿ ಎಂದಿದ್ದೇನೆ. ಹಿಂದೆ ಏನೆಲ್ಲಾ ಗೊಂದಲಗಳಾಗಿದೆ ನನಗೆ ತಿಳಿದಿದೆ ಎಂದು ಮಾತನಾಡಿದರು.

ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada