ಮೈಸೂರಿನಲ್ಲಿ ಇಂದು ಪಾರಂಪರಿಕ ಟಾಂಗಾ ಮೆರವಣಿಗೆ: ರೇಷ್ಮೆ ಸೀರೆ, ಮೈಸೂರು ಪೇಟಾ ತೊಟ್ಟು ಕಂಗೋಳಿಸಿದ ನವ ಜೋಡಿಗಳು

ಟಾಂಗಾ ಸವಾರಿಯಲ್ಲಿ 50 ದಂಪತಿಗಳು ಭಾಗಿಯಾಗಿದ್ದರು. ರೇಷ್ಮೆ ಸೀರೆ ತೊಟ್ಟ ಮಹಿಳೆಯರು, ಮೈಸೂರು ಪೇಟಾ ತೊಟ್ಟು ರೇಷ್ಮೆ ಶಲ್ಯ ಪಂಚೇ ಶರ್ಟ್ ಧರಸಿ ದಂಪತಿಗಳು ಕಂಗೋಳಿಸಿದರು.

ಮೈಸೂರಿನಲ್ಲಿ ಇಂದು ಪಾರಂಪರಿಕ ಟಾಂಗಾ ಮೆರವಣಿಗೆ: ರೇಷ್ಮೆ ಸೀರೆ, ಮೈಸೂರು ಪೇಟಾ ತೊಟ್ಟು ಕಂಗೋಳಿಸಿದ ನವ ಜೋಡಿಗಳು
ಮೈಸೂರಿನಲ್ಲಿ ಪಾರಂಪರಿಕ ಟಾಂಗಾ ಮೆರವಣಿಗೆ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 30, 2022 | 10:29 AM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2022 ಹಿನ್ನೆಲೆ ಇಂದು ದಸರಾ ಟಾಂಗಾ ಸವಾರಿಗೆ ಚಾಲನೆ ನೀಡಲಾಯಿತು. ದಂಪತಿಗಳಿಗೆ ಬಾಗಿನ ಕೊಟ್ಟು ಪುರಭವನದಿಂದ ಟಾಂಗಾ ಸವಾರಿ ಆರಂಭವಾಯಿತು. ಟಾಂಗಾ ಸವಾರಿಯಲ್ಲಿ 50 ದಂಪತಿಗಳು ಭಾಗಿಯಾಗಿದ್ದರು. ರೇಷ್ಮೆ ಸೀರೆ ತೊಟ್ಟ ಮಹಿಳೆಯರು, ಮೈಸೂರು ಪೇಟಾ ತೊಟ್ಟು ರೇಷ್ಮೆ ಶಲ್ಯ ಪಂಚೇ ಶರ್ಟ್ ಧರಸಿ ದಂಪತಿಗಳು ಕಂಗೋಳಿಸಿದರು. ಈ ಮೂಲಕ ಮೈಸೂರು ದಸರಾ ಗತವೈಭವವನ್ನ ಪುರುತತ್ವ ಇಲಾಖೆ ಮರುಕಳಿಸಿದೆ. 20 ದಿನ ಮದುವೆ ಆಗಿ ಟಾಂಗಾ ಸವಾರಿಗೆ ನವ ಜೋಡಿಗಳು ಆಗಮಿಸಿದ್ದರು. ಅತ್ತೆ ರಿಜಿಸ್ಟರ್ ಮಾಡಿಸಿ ಸರ್ಪೈಸ್ ಕೊಟ್ಟಿದ್ದಾರೆ, ಹಾಗಾಗಿ ಅವರಿಗೆ ಟಾಂಗಾ ಸವಾರಿ ಗಿಫ್ಟ್ ಎಂದು ಹುಡುಗ ಹೇಳಿದ್ದಾರೆ.

ಮೈಸೂರಿನಲ್ಲಿ ಗ್ರಾಮೀಣ ದಸರಾ

ನಿನ್ನೆ ಗ್ರಾಮೀಣ ದಸರಾಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್​ ಚಾಲನೆ ನೀಡಿದರು. ಸುಮಾರು 2 ಕಿಲೋ ಮೀಟರ್ ಅದ್ಧೂರಿ ಮೆರವಣಿಗೆ ನಡೆಯಿತು. ಸರ್ಕಾರದ ಯೋಜನೆಗಳ ಸ್ತಬ್ಧಚಿತ್ರ, ಸಾಂಸ್ಕೃತಿಕ ಕಲಾ ತಂಡಗಳು ಭಾಗಿಯಾಗಿದ್ದವು. ಬೆಳಗ್ಗೆ 10 ಗಂಟೆಗೆ ಜಯಪುರದಲ್ಲಿ ಕಾರ್ಯಕ್ರಮ ಜರುಗಿತು. ಜೊತೆಗೆ ಬೃಹತ್‌ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಉಚಿತ ಜಾನುವಾರು ತಪಾಸಣಾ ಶಿಬಿರ ಆಯೋಜನೆ ಮಾಡಲಾಗಿತ್ತು. ಸಂಸದ ಪ್ರತಾಪ್‌ ಸಿಂಹ, ಶಾಸಕ ಜಿ. ಟಿ ದೇವೇಗೌಡ ಸೇರಿ ಹಲವರು ಭಾಗಿಯಾಗಿದ್ದರು.

‘ದಸರಾ ದರ್ಶನ’ KSRTC ಬಸ್​ಗಳಿಗೆ ಚಾಲನೆ

‘ದಸರಾ ದರ್ಶನ’ KSRTC ಬಸ್​ಗಳಿಗೆ ಬಿಜೆಪಿ ಶಾಸಕ ಎಸ್​.ಎ.ರಾಮದಾಸ್​ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಚಾಲನೆ ನೀಡಿದರು. 3 ದಿನ ದಸರಾ ದರ್ಶನಕ್ಕೆ ಒಟ್ಟು 81 ವಿಶೇಷ ಬಸ್​ಗಳ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮೈಸೂರಿನ 1 ತಾಲೂಕಿಗೆ ಮೂರು ಬಸ್​​ಗಳ ನಿಯೋಜನೆ ಮಾಡಿದ್ದು, 3 ದಿನಗಳಲ್ಲಿ 4,455 ಜನರಿಗೆ ದಸರಾ ತೋರಿಸುವ ನಿರ್ಧರಿಸಲಾಗಿದೆ. 9.30ಕ್ಕೆ ಕೆ.ಎಸ್.ಆರ್.ಟಿ.ಸಿ ಚಾಲನೆ  ಕಾರ್ಯಕ್ರಮಕ್ಕೆ ಸಮಯ ನಿಗದಿಯಾಗಿತ್ತು. ಆದರೆ ಉಸ್ತುವಾರಿ ಸಚಿವರಿಗಾಗಿ ಕಾದು ಕಾದು ಶಾಸಕ ಹಾಗೂ ಅಧಿಕಾರಿಗಳು ಸುಸ್ತಾದರು. ವಿಶ್ವ ವಿಖ್ಯಾತ ದಸರಾ ನೋಡಲು ಜಿಲ್ಲಾಡಳಿತ ವಿಶೇಷ ಬಸ್​ಗಳ ವ್ಯವಸ್ಥೆ ಮಾಡಿದೆ. ಸ್ಥಳೀಯ ಶಾಸಕ ರಾಮದಾಸ್ ಬಂದು ಒಂದು ಗಂಟೆಯಾದರು ಸಚಿವ ಸ್ಥಳಕ್ಕೆ ಬಂದಿರಲಿಲ್ಲ.

ಬೆಟ್ಟದ ಹೂವು ಸಿನಿಮಾ ಉದ್ಘಾಟನೆ ಮಾಡಿದ ಅಶ್ವಿನಿ ಪುನೀತ್ ರಾಜ್ಕುಮಾರ್

ಬೆಟ್ಟದ ಹೂವು ಸಿನಿಮಾ ಉದ್ಘಾಟನೆ ಮಾಡಿದ ಮೂಲಕ ದಸರಾ ಚಲನ ಚಿತ್ರೋತ್ಸವಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ ಉದ್ಘಾಟನೆ ಮಾಡಿದರು. ಶಕ್ತಿಧಾಮ ಮಕ್ಕಳು ಕೂಡ ದಸರಾ ಚಲನ ಚಿತ್ರೋತ್ಸವದಲ್ಲಿ ಭಾಗವಹಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬರಲಿಲ್ಲ. ಬದಲಾಗಿ ಕಾಲೇಜ್ ಸ್ಟುಡೇಂಟ್ಸ್ ಜೊತೆ ಅಶ್ವಿನಿ ಸಿನಿಮಾ ನೋಡಿದರು. 5 ನಿಮಿಷ ಸಿನಿಮಾ ನೋಡಿ ಅಶ್ವಿನಿ ಹೊರಟರು. ಇಂದು ಸಂಜೆ 6.30ಕ್ಕೆ ಅಪ್ಪು ನಮನ ಹೆಸರಿನ ಕಾರ್ಯಕ್ರಮದೊಂದಿಗೆ ಯುವ ದಸರಾ ಉದ್ಘಾಟನೆಯಾಗಲಿದ್ದು, ಡಾ. ಪುನೀತ್ ರಾಜ್‍ಕುಮಾರ್ ಪತ್ನಿ ಅಶ್ವಿನಿ ಉದ್ಘಾಟನೆ ಮಾಡಲಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕರಾದ ಕುನಾಲ್ ಗಾಂಜಾವಾಲ, ವಿಜಯಪ್ರಕಾಶ್ ಗಾಯನವಿರಲಿದೆ. ಅಪ್ಪು ಸಿನಿಮಾದ ಹಾಡುಗಳಿಗೆ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನೃತ್ಯ ಮಾಡಲಿದ್ದಾರೆ. ಈ ಬಾರಿಯ ಯುವ ದಸರಾ ಡಾ. ಪುನೀತ್ ರಾಜಕುಮಾರಗೆ ಅರ್ಪಣೆ ಆಗಲಿದೆ.

ಮತ್ತಷ್ಟು ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ