Mysore Dasara 2022: ಮೈಸೂರು ತಲುಪಿದ ಎರಡನೇ ತಂಡದ ಆನೆಗಳು, ಸರಳ ಸ್ವಾಗತ

ಶ್ರೀರಾಮ, ವಿಜಯ, ಸುರ್ಗಿವ, ಪಾರ್ಥಸಾರಥಿ ಸೇರಿ ಗೋಪಿ ನೇತೃತ್ವದಲ್ಲಿ 5 ಆನೆಗಳು ತಾಲೀಮು ನಡೆಸಲಿವೆ. ಶ್ರೀರಾಮ, ಸುರ್ಗೀವ, ಪಾರ್ಥಸಾರಥಿ ಹೊಸ ಆನೆಗಳಾಗಿದ್ದು, ಇಡೀ ದಸರೆಯಲ್ಲಿ ಪಾರ್ಥಸಾರಥಿ ಅತ್ಯಂತ ಚಿಕ್ಕ ವಯಸ್ಸಿನ ಆನೆಯಾಗಿದೆ.

Mysore Dasara 2022: ಮೈಸೂರು ತಲುಪಿದ ಎರಡನೇ ತಂಡದ ಆನೆಗಳು, ಸರಳ ಸ್ವಾಗತ
ಮೈಸೂರು ತಲುಪಿದ ಎರಡನೇ ತಂಡದ ಆನೆಗಳು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Sep 08, 2022 | 12:33 PM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ 2022 ಭಾಗವಹಿಸಲು ನೆನ್ನೆ(ಬುಧವಾರ) ಗಜಪಡೆಯ ಎರಡನೇ ತಂಡ ಅರಮನೆಗೆ ಆಗಮಿಸಿದ್ದು, ಸರಳವಾಗಿ ಸ್ವಾಗತವನ್ನು ಕೋರಲಾಗಿದೆ. ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆ ಗಜಪಡೆ ಸ್ವಾಗತ ಕಾರ್ಯಕ್ರಮ ರದ್ದಾಗಿತ್ತು. ಮೈಸೂರು ತಲುಪಿದ ಎರಡನೇ ತಂಡದ ಆನೆಗಳಿಗೆ ಅರಮನೆ ಆವರಣದಲ್ಲಿ ತಾಲೀಮು ನಡೆಸಲು ಅವಕಾಶ ಮಾಡಲಾಗೊದೆ. ಮೊದಲ ತಂಡದ ಆನೆಗಳಿಗೆ ಬನ್ನಿಮಂಟಪದವರೆಗೂ ತಾಲೀಮು ಮಾಡಿದ್ದು, ಸೋಮವಾರದಿಂದ ಅರಮನೆ ಹೊರಗೆ ಶ್ರೀರಾಮ, ವಿಜಯ, ಸುರ್ಗಿವ, ಪಾರ್ಥಸಾರಥಿ ಸೇರಿ ಗೋಪಿ ನೇತೃತ್ವದಲ್ಲಿ 5 ಆನೆಗಳು ತಾಲೀಮು ನಡೆಸಲಿವೆ. ಶ್ರೀರಾಮ, ಸುರ್ಗೀವ, ಪಾರ್ಥಸಾರಥಿ ಹೊಸ ಆನೆಗಳಾಗಿದ್ದು, ಇಡೀ ದಸರೆಯಲ್ಲಿ ಪಾರ್ಥಸಾರಥಿ ಅತ್ಯಂತ ಚಿಕ್ಕ ವಯಸ್ಸಿನ ಆನೆಯಾಗಿದೆ.

ಬಂಡೀಪುರ ಅರಣ್ಯ ವ್ಯಾಪ್ತಿಯ ರಾಮಾಪುರ ಆನೆ ಶಿಬಿರದಿಂದ ಚಿಕ್ಕ ವಯಸ್ಸಿನ ಪಾರ್ಥಸಾರಥಿ ಆನೆಯನ್ನು ಕರೆತರಲಾಗಿದ್ದು, ಕೊಡಗಿನ ನಾಗರಹೊಳೆ ರಾಷ್ಟ್ರೀಯ ವ್ಯಾಪ್ತಿಯ ದುಬಾರೆ ಆನೆ ಶಿಬಿರದಿಂದ ಗೋಪಿ, ಶ್ರೀರಾಮ, ವಿಜಯ, ಸುರ್ಗಿವ ಗಜಪಡೆ ಸೇರಿವೆ.

ಕಳೆದ ತಿಂಗಳು ಅಂದರೆ ಆ.7ರಂದು ಉಮೇಶ್ ಕತ್ತಿ ಹೊಸಹಳ್ಳಿಯಲ್ಲಿ ಗಜಪಡೆಗೆ ಪೂಜೆ ಸಲ್ಲಿಸಿ ದಸರಾ ಪಯಣ ಚಾಲನೆ ನೀಡಿದ್ದರು. ಅಭಿಮನ್ಯು ನೇತೃತ್ವದಲ್ಲಿ ಮೊದಲ ತಂಡದ 9 ಆನೆಗಳು ವಿವಿಧ ಹಂತದ ತಾಲೀಮಿನಲ್ಲಿ ಯಶಸ್ವಿಯಾಗಿವೆ. ಹೊಸ ಆನಗಳು ಮೊದಲ ತಂಡದೊಂದಿಗೆ ಬೆರೆಯಬೇಕಿದ್ದು, ಗೋಪಿ ಹಾಗೂ ವಿಜಯಾ ಆನೆ ದಸರಾದಲ್ಲಿ ಭಾಗವಹಿಸಿರುವ ಅನುಭವವಿದ್ದು, ಇತರೆ 14 ಆನೆಗಳೂ ಎಂದಿನಂತೆ ತಾಲೀಮು ನಡೆಸಲಿವೆ.

ಸದ್ಯ ಎರಡನೇ ತಂಡದಲ್ಲಿರುವ 5 ಆನೆಗಳಲ್ಲಿ ಶ್ರೀರಾಮ, ಸುಗ್ರೀವ ಹಾಗೂ ಪಾರ್ಥಸಾರಥಿ ಇದು ಮೊದಲ ದಸರಾ ಆಗಿದೆ. 2ನೇ ತಂಡದ ಗಜಪಡೆಯ ಆನೆಗಳು ಸೇರಿದಂತೆ ಒಟ್ಟು 14 ಆನೆಗಳ ತೂಕ ಪರೀಕ್ಷೆವನ್ನು ಸೆ.9 ಅಥವಾ 10ರಂದು ಮಾಡಲಾಗುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್