AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗ್ರಹಗಳ ಮೂಲಕ ಮನುಷ್ಯನ ಆಯುಷ್ಯವನ್ನು ಕಂಡುಕೊಳ್ಳಬಹುದ!

ಜ್ಯೋತಿಷ್ಯವು ಕೇವಲ ಪಾಪ, ಪುಣ್ಯ, ಭೂತ, ಭವಿಷ್ಯವನ್ನು ಮಾತ್ರ ಹೇಳುವುದಿಲ್ಲ. ಆದರ ಜೊತೆ ಜೊತೆಗೆ ಮನುಷ್ಯನ ಜೀವಿತಾವಧಿಯನ್ನೂ ಗ್ರಹಗಳ ಮೂಲಕ ತಿಳಿಯಲು ಸಾಧ್ಯವಾಗುವುದು. ಅದು ಹೇಗೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಗ್ರಹಗಳ ಮೂಲಕ ಮನುಷ್ಯನ ಆಯುಷ್ಯವನ್ನು ಕಂಡುಕೊಳ್ಳಬಹುದ!
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 23, 2023 | 1:08 PM

ಜ್ಯೋತಿಷ್ಯವು ಕೇವಲ ಪಾಪ, ಪುಣ್ಯ, ಭೂತ, ಭವಿಷ್ಯವನ್ನು ಮಾತ್ರ ಹೇಳುವುದಿಲ್ಲ. ಆದರ ಜೊತೆ ಜೊತೆಗೆ ಮನುಷ್ಯನ ಜೀವಿತಾವಧಿಯನ್ನೂ ಗ್ರಹಗಳ ಮೂಲಕ ತಿಳಿಯಲು ಸಾಧ್ಯವಾಗುವುದು. ಒಟ್ಟೂ ಗ್ರಹಗಳ ಆಯುಸ್ಸನ್ನು ಪರಮಾಯುಸ್ಸು ಎಂಬುದಾಗಿ ಕರೆದಿದ್ದಾರೆ. ಒಂದೊಂದು ಗ್ರಹಗಳಿಗೆ ಒಂದಿಷ್ಟು ಆಯುಸ್ಸು ಎಂದು ತೀರ್ಮಾನ ಮಾಡಿದ್ದಾರೆ ಪ್ರಾಚೀನರು. ಸೂರ್ಯನಿಗೆ ಹತ್ತೊಂಭತ್ತು ವರ್ಷ, ಚಂದ್ರನಿಗೆ ಇಪ್ಪತ್ತೈದು ವರ್ಷ, ಕುಜನಿಗೆ ಹದಿನೈದು ವರ್ಷ, ಬುಧನಿಗೆ ಹನ್ನೆರಡು ವರ್ಷ, ಗುರುವಿಗೆ ಹದಿನೈದು ವರ್ಷ, ಶುಕ್ರನಿಗೆ ಇಪ್ಪತ್ತೊಂದು ವರ್ಷ ಮತ್ತು ಶನಿಗೆ ಇಪ್ಪತ್ತು ವರ್ಷ ಎಂಬುದಾಗಿ ಸಮಯವನ್ನು ನಿರ್ಣಯಿಸಿದ್ದಾರೆ. ಒಟ್ಟೂ ಆಯುಸ್ಸು ಒಂದು ನೂರಾ ಇಪ್ಪತ್ತೇಳು ಆಗುವುದು. ಮನುಷ್ಯನ ಪೂರ್ಣಾಯುಸ್ಸೂ ಕೂಡ ಇಷ್ಟೇ ಆಗಿರುತ್ತದೆ.

ಇನ್ನು ಆಯುಸ್ಸು ಯಾರಿಗೆ ಎಷ್ಟುವ ಎನ್ನುವ ತಿಳಿದುಕೊಳ್ಳುವ ಕ್ರಮ ಬೇರೆ. ಗ್ರಹಗಳು ಉಚ್ಚಸ್ಥಾನದಲ್ಲಿದ್ದಾಗ ಅವರ ಪೂರ್ಣವಾದ ಆಯುಸ್ಸನ್ನು ಪಡೆಯಲು ಸಾಧ್ಯವಾಗುವುದು. ಗ್ರಹಗಳ ಉಚ್ಚಸ್ಥಾನವು ಹೀಗಿದೆ. ರವಿಯು ಮೇಷದ ಹತ್ತನೇ ಭಾಗದಲ್ಲಿ ಉಚ್ಚ, ಚಂದ್ರನು ವೃಷಭದ ಮೂರನೇ ಅಂಶದಲ್ಲಿ, ಕುಜನು ಮಕರದ ಇಪ್ಪತ್ತೆಂಟನೇ ಅಂಶದಲ್ಲಿ, ಬುಧನು ಕನ್ಯಾರಾಶಿಯ ಹದಿನೈದನೇ ಅಂಶದಲ್ಲಿ, ಗುರುವು ಕರ್ಕಾಟಕ ರಾಶಿಯ ಐದನೇ ಅಂಶದಲ್ಲಿ, ಶುಕ್ರನು ಮೀನ ರಾಶಿಯ ಇಪ್ಪತ್ತೇಳನೇ ಅಂಶದಲ್ಲಿ, ಶನಿಯು ತುಲಾ ರಾಶಿಯ ಇಪ್ಪತ್ತನೇ ಅಂಶದಲ್ಲಿ ಉಚ್ಚಸ್ಥಾನದಲ್ಲಿದ್ದು ಪೂರ್ಣ ಆಯುಸ್ಸನ್ನು ಕೊಡುವರು.

ಇದನ್ನೂ ಓದಿ:  ದಿನಾಂಕ, ಸಮಯ, ಶುಭ ಮುಹೂರ್ತ, ಪೂಜಾ ವಿಧಿಗಳು ಮತ್ತು ಮಹತ್ವದ ಬಗ್ಗೆ ಸಂಪೂರ್ಣ ಮಾಹಿತಿ

ಇದೇ ಗ್ರಹರು ನೀಚಸ್ಥಾನಕ್ಕೆ ಬಂದಾಗ ಅರ್ಧ ಆಯುಸ್ಸನ್ನು ಕೊಡುವರು. ಗ್ರಹಗಳ ನೀಚಸ್ಥಾನವು – ರವಿ ತುಲಾದ ಹತ್ತನೇ ಅಂಶ, ಚಂದ್ರನು ವೃಶ್ಚಿಕ ರಾಶಿಯಲ್ಲಿ ಮೂರನೇ ಅಂಶ, ಕುಜನು ಕರ್ಕಾಟಕ ರಾಶಿಯಲ್ಲಿ ಇಪ್ಪತ್ತೆಂಟನೇ ಅಂಶದಲ್ಲಿ, ಬುಧನು ಮೀನರಾಶಿಯ ಹದಿನೈದನೇ ಅಂಶದಲ್ಲಿ, ಗುರುವು ಮಕರರಾಶಿಯ ಐದನೇ ಅಂಶದಲ್ಲಿ, ಶುಕ್ರನು ಕನ್ಯಾ ರಾಶಿಯ ಇಪ್ಪತ್ತೇಳನೇ ಅಂಶದಲ್ಲಿ, ಶನಿಯು ಮೇಷರಾಶಿಯ ಇಪ್ಪತ್ತನೇ ಅಂಶದಲ್ಲಿ ನೀಚರಾಗಿರುವ ಕಾರಣ ತಮ್ಮ ಪೂರ್ಣ ಆಯುಸ್ಸಿನ ಅರ್ಧಾಯುಷ್ಯವನ್ನು ಮಾತ್ರ ಕೊಡುವರು. ಇವೆರಡರ ಮಧ್ಯದಲ್ಲಿ ಇದ್ದರೆ, ಗಣಿತ ಮೂಲಕ ಗ್ರಹಸ್ಥಿತ ಅಂಶದಿಂದ ಉಚ್ಚಸ್ಥಾನವನ್ನು ಅಥವ ನೀಚಸ್ಥಾನವನ್ನು ಕಳೆದು ಆಯುಷ್ಯವನ್ನು ತಿಳಿಯಬೇಕಾಗುತ್ತದೆ.

ಹೀಗೆ ಮನುಷ್ಯ ಆಯುಸ್ಸನ್ನು ಗ್ರಹಗಳ ಮೂಲಕವಾಗಿ ತಿಳಿದು ಅನಂತರ ಅವರ ಶುಭಾಶುಭ ಆಂಶಗಳನ್ನು ತಿಳಿಸಬೇಕು ಎನ್ನುತ್ತದೆ ಶಾಸ್ತ್ರ.

ಲೋಹಿತಶರ್ಮಾ, ಇಡುವಾಣಿ

ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಕೊಪ್ಪಳದ 96 ವರ್ಷದ ಭೀಮವ್ವ ಶಿಳ್ಳೆಕ್ಯಾತರ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಸ್ಪಿನ್ ಲೆಜೆಂಡ್ ಆರ್​. ಅಶ್ವಿನ್​ಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
ಕಪ್ಪು ಬಾವುಟ ಪ್ರದರ್ಶಿಶಿದ ಮಹಿಳೆಯರ ವಿರುದ್ಧ ಕೇಸ್ ದಾಖಲಾಗಿದೆ: ಐಜಿಪಿ
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
Pahalgam Attack: ಪ್ರವಾಸಿಗರೊಬ್ಬರ ಕ್ಯಾಮರಾದಲ್ಲಿ ದಾಳಿ ಭೀಕರ ದೃಶ್ಯ!
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಸಿಎಂ ವರ್ತನೆಯಿಂದ ಅಧಿಕಾರಿ ಮಾನಸಿಕ ಕ್ಷೋಭೆಗೊಳಗಾಗಿರುತ್ತಾರೆ: ಶೆಟ್ಟರ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ