ಪ್ರಸಾದ ತಯಾರಿಸುವಾಗ ಅದರಲ್ಲಿ ಕೂದಲು ಬಿದ್ದರೆ ಏನು ಮಾಡಬೇಕು? ಪ್ರೇಮಾನಂದ ಮಹಾರಾಜ್ ಹೇಳುವುದೇನು?
ವೃಂದಾವನದ ಆಧ್ಯಾತ್ಮಿಕ ಗುರು ಪ್ರೇಮಾನಂದ ಜೀ ಮಹಾರಾಜರು, ಪ್ರಸಾದ ತಯಾರಿಕೆಯಲ್ಲಿನ ಶುಚಿತ್ವದ ಮಹತ್ವವನ್ನು ವಿವರಿಸಿದ್ದಾರೆ. ಪ್ರಸಾದಕ್ಕೆ ಕೂದಲು ಅಥವಾ ಕೀಟ ಬಿದ್ದರೆ ಅದನ್ನು ಮತ್ತೆ ತಯಾರಿಸಬೇಕು. ನೈವೇದ್ಯ ಮಾಡುವಾಗ ಕೂದಲು, ಕೀಟಗಳು ಬೀಳದಂತೆ ಎಚ್ಚರವಹಿಸಿ. ಆಹಾರ ತಯಾರಿಸುವಾಗ ಅತಿಯಾಗಿ ಮಾತನಾಡುವುದನ್ನು ತಪ್ಪಿಸಿ ಶುದ್ಧತೆ ಕಾಪಾಡಿ ಎಂದು ಅವರು ಭಕ್ತರಿಗೆ ಸಲಹೆ ನೀಡಿದ್ದಾರೆ.

ವೃಂದಾವನದ ಆಧ್ಯಾತ್ಮಿಕ ಗುರು ಪ್ರೇಮಾನಂದ ಜೀ ಮಹಾರಾಜರನ್ನು ನೋಡಲು ಪ್ರತಿದಿನ ಸಾಕಷ್ಟು ಜನರು ಅವರ ಆಶ್ರಮಕ್ಕೆ ಭೇಟಿ ನೀಡುತ್ತಾರೆ. ಇಲ್ಲಿಗೆ ಭೇಟಿ ನೀಡುವುದರಿಂದ ತಮ್ಮ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಮನಸ್ಸಿನಲ್ಲಿನ ಗೊಂದಲ, ಸಮಸ್ಯೆಗಳು, ದೇವರ ಕೃಪೆಗೆ ಹೇಗೆ ಪಾತ್ರರಾಗುವುದು ಹೀಗೆ ಹಲವು ಪ್ರಶ್ನೆಗಳಿಗೆ ಪ್ರೇಮಾನಂದರು ಬಹಳ ಸುಲಭವಾಗಿ ಉತ್ತರಿಸುತ್ತಾರೆ.
ಅದರಂತೆ ಇದೀಗ ಭಕ್ತರೊಬ್ಬರು ಪ್ರಸಾದ ತಯಾರಿಕೆಯ ವೇಳೆ ಅದಕ್ಕೆ ಕೂದಲು ಬಿದ್ದರೆ ಏನು ಮಾಡಬೇಕು ಎಂಬ ಪ್ರಶ್ನೆಯನ್ನು ಕೇಳಿದ್ದು, ಇದಕ್ಕೆ ಪ್ರೇಮಾನಂದರು ಉತ್ತರವನ್ನು ನೀಡಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
‘ದೇವರಿಗೆ ಪ್ರಸಾದ ತಯಾರಿಸುವಾಗ, ತಪ್ಪಾಗಿ ಕೂದಲು ಅಥವಾ ಕೀಟ ಅದರೊಳಗೆ ಬಿದ್ದರೆ, ಪ್ರಸಾದವನ್ನು ಮತ್ತೆ ತಯಾರಿಸಬೇಕಾಗುತ್ತದೆ. ಪ್ರತಿ ಸಲ ನೀವು ನೈವೇದ್ಯಗಳನ್ನು ತಯಾರಿಸುವಾಗ ಜಾಗರೂಕರಾಗಿರಬೇಕು. ಆಹಾರ ತಯಾರಿಸುವಾಗ, ನಿಮ್ಮ ಕೂದಲನ್ನು ಬಟ್ಟೆಯಿಂದ ಕಟ್ಟಿಕೊಳ್ಳಿ. ಅಲ್ಲದೆ, ಕೂದಲು ಅಥವಾ ಇತರ ಕೀಟಗಳು ಅಥವಾ ಸೊಳ್ಳೆಗಳು ಆಹಾರದೊಳಗೆ ಬೀಳದಂತೆ ಎಚ್ಚರವಹಿಸಿ ಎಂದು ಗುರು ಪ್ರೇಮಾನಂದರು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ನವರಾತ್ರಿಯ ಸಮಯದಲ್ಲಿ ದುರ್ಗಾ ದೇವಿಗೆ ಎಂದಿಗೂ ಈ ಹಣ್ಣುಗಳನ್ನು ಅರ್ಪಿಸಬೇಡಿ
ಇದಲ್ಲದೇ ಆಹಾರವನ್ನು ತಯಾರಿಸುವಾಗ ಅತಿಯಾಗಿ ಮಾತನಾಡುವುದನ್ನು ತಪ್ಪಿಸಿ, ಏಕೆಂದರೆ ಇದು ಆಹಾರದೊಳಗೆ ಲಾಲಾರಸ ಬೀಳಲು ಕಾರಣವಾಗಬಹುದು. ದೇವರಿಗೆ ಆಹಾರವನ್ನು ಅರ್ಪಿಸುವಾಗ ಈ ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಎಂದು ಹೇಳಿದ್ದಾರೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:40 pm, Sun, 28 September 25




