Raksha Bandhan 2026: ರಕ್ಷಾ ಬಂಧನ ಆ. 27 ಅಥವಾ 28? ಸರಿಯಾದ ದಿನಾಂಕ, ಶುಭ ಮುಹೂರ್ತ ಮತ್ತು ಚಂದ್ರಗ್ರಹಣದ ವಿವರ ಇಲ್ಲಿದೆ

ಈ ಬಾರಿ ರಕ್ಷಾ ಬಂಧನ ಆಗಸ್ಟ್ 27ಕ್ಕೋ ಅಥವಾ 28ಕ್ಕೋ? ಎಂಬ ಗೊಂದಲ ಸಾಕಷ್ಟು ಜನರಲ್ಲಿದೆ. ಇದಲ್ಲದೇ ಹಬ್ಬದಂದೇ ಚಂದ್ರಗ್ರಹಣದ ಸಂಭವಿಸುತ್ತಿರುವುದರಿಂದ ರಾಖಿ ಕಟ್ಟಬಹುದೇ , ಕಟ್ಟಬಹುದಾದರೆ ಸೂಕ್ತ ಸಮಯ ಯಾವುದು? ಎಂಬ ಪ್ರಶ್ನೆ ಹುಟ್ಟುವುದು ಸಹಜ. ಈ ಎಲ್ಲಾ ಗೊಂದಲಗಳಿದೆ ಉತ್ತರವನ್ನು ಇಲ್ಲಿ ತಿಳಿದುಕೊಳ್ಳಿ. ಪಂಚಾಂಗದ ಪೂರ್ಣ ವಿವರ ಇಲ್ಲಿದೆ.

Raksha Bandhan 2026: ರಕ್ಷಾ ಬಂಧನ ಆ. 27 ಅಥವಾ 28? ಸರಿಯಾದ ದಿನಾಂಕ, ಶುಭ ಮುಹೂರ್ತ ಮತ್ತು ಚಂದ್ರಗ್ರಹಣದ ವಿವರ ಇಲ್ಲಿದೆ
ರಕ್ಷಾ ಬಂಧನ
Image Credit source: Getty Images

Updated on: Aug 19, 2026 | 10:36 AM

ರಕ್ಷಾ ಬಂಧನವು ಸಹೋದರ-ಸಹೋದರಿಯರ ನಡುವಿನ ಅಪಾರ ಪ್ರೀತಿ, ವಾತ್ಸಲ್ಯ ಮತ್ತು ಸೋದರತ್ವದ ಪವಿತ್ರ ಸಂಕೇತವಾಗಿದೆ. ಈ ಸುದಿನದಂದು ಸಹೋದರಿಯರು ತಮ್ಮ ಸಹೋದರನಿಗೆ ಪ್ರೀತಿಯಿಂದ ರಾಖಿ ಕಟ್ಟಿ, ಅವರ ಸುಖ, ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸುತ್ತಾರೆ. ಅದಕ್ಕೆ ಪ್ರತಿಯಾಗಿ ಸಹೋದರರು ತಮ್ಮ ಸಹೋದರಿಯರನ್ನು ಪ್ರತಿಯೊಂದು ಕಷ್ಟದಲ್ಲೂ ಕಾಯುವುದಾಗಿ ಮತ್ತು ಅವರ ಬೆನ್ನಲುಬಾಗಿ ನಿಲ್ಲುವುದಾಗಿ ಭರವಸೆ ನೀಡುತ್ತಾರೆ.

ಪ್ರತಿ ವರ್ಷ ಶ್ರಾವಣ ಮಾಸದ ಪೂರ್ಣಿಮಾ ತಿಥಿಯಂದು ಆಚರಿಸಲಾಗುವ ಈ ಪವಿತ್ರ ಹಬ್ಬದ ದಿನಾಂಕದ ಕುರಿತು 2026 ರಲ್ಲಿ ಸಣ್ಣ ಗೊಂದಲ ಏರ್ಪಟ್ಟಿದ್ದು, ಆಗಸ್ಟ್ 27 ಮತ್ತು ಆಗಸ್ಟ್ 28 ಎರಡೂ ದಿನಾಂಕಗಳು ಉಲ್ಲೇಖವಾಗುತ್ತಿವೆ. ಈ ಕುರಿತಾದ ಸ್ಪಷ್ಟ ಮಾಹಿತಿ ಮತ್ತು ಮುಹೂರ್ತದ ವಿವರ ಇಲ್ಲಿದೆ.

ರಕ್ಷಾ ಬಂಧನ ಆಗಸ್ಟ್ 27 ಅಥವಾ 28?

ಹಿಂದೂ ಪಂಚಾಂಗದ ಪ್ರಕಾರ, ಶ್ರಾವಣ ಮಾಸದ ಶುಕ್ಲ ಪಕ್ಷದ ಪೂರ್ಣಿಮಾ ತಿಥಿಯು ಆಗಸ್ಟ್ 27 ರಂದು ಬೆಳಿಗ್ಗೆ 9:08 ಕ್ಕೆ ಪ್ರಾರಂಭವಾಗಿ, ಆಗಸ್ಟ್ 28 ರಂದು ಬೆಳಿಗ್ಗೆ 9:48 ಕ್ಕೆ ಕೊನೆಗೊಳ್ಳುತ್ತದೆ. ಉದಯ ತಿಥಿಯನ್ನು (ಸೂರ್ಯೋದಯದ ಸಮಯದ ತಿಥಿ) ಪ್ರಮುಖವಾಗಿ ಪರಿಗಣಿಸುವುದರಿಂದ, ಜ್ಯೋತಿಷಿಗಳು ಮತ್ತು ಪುರೋಹಿತರು ಆಗಸ್ಟ್ 28 ರಂದು ರಕ್ಷಾ ಬಂಧನವನ್ನು ಆಚರಿಸುವುದು ಶಾಸ್ತ್ರಸಮ್ಮತ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಅಷ್ಟಲಕ್ಷ್ಮಿ ರಾಜಯೋಗ; ಈ 4 ರಾಶಿಗೆ ಒಲಿಯಲಿದೆ ಅಪಾರ ಧನಸಂಪತ್ತು!

ರಾಖಿ ಕಟ್ಟಲು ಶುಭ ಮುಹೂರ್ತ:

ಆಗಸ್ಟ್ 28 ರಂದು ರಾಖಿ ಕಟ್ಟಲು ಪಂಚಾಂಗದ ಪ್ರಕಾರ ಅತ್ಯುತ್ತಮ ಮುಹೂರ್ತಗಳ ವಿವರ ಇಲ್ಲಿದೆ:

  • ಬೆಳಗಿನ ಪ್ರಮುಖ ಮುಹೂರ್ತ: ಬೆಳಿಗ್ಗೆ 6:23 ರಿಂದ ಬೆಳಿಗ್ಗೆ 9:48 ರವರೆಗೆ.
  • ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:14 ರಿಂದ ಮಧ್ಯಾಹ್ನ 1:05 ರವರೆಗೆ.

ರಕ್ಷಾ ಬಂಧನದಂದು ಚಂದ್ರಗ್ರಹಣ:

ಈ ವರ್ಷದ ಎರಡನೇ ಚಂದ್ರಗ್ರಹಣವು ರಕ್ಷಾ ಬಂಧನದ ದಿನವೇ ಅಂದರೆ ಆಗಸ್ಟ್ 28 ರಂದು ಸಂಭವಿಸಲಿದೆ. ಈ ಗ್ರಹಣವು ಕನ್ಯಾರಾಶಿಯಲ್ಲಿ ಸಂಭವಿಸಲಿದ್ದು, ಭಾರತೀಯ ಕಾಲಮಾನದ ಪ್ರಕಾರ ಬೆಳಿಗ್ಗೆ 8:04 ರಿಂದ ಬೆಳಿಗ್ಗೆ 11:22 ರವರೆಗೆ ಇರಲಿದೆ. ಆದಾಗ್ಯೂ, ಈ ಚಂದ್ರಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. ಧಾರ್ಮಿಕ ನಿಯಮಗಳ ಪ್ರಕಾರ, ಭಾರತದಲ್ಲಿ ಕಾಣಿಸದ ಗ್ರಹಣದ ಸೂತಕ ಅವಧಿ ಅಥವಾ ನಿಯಮಗಳು ಇಲ್ಲಿ ಅನ್ವಯಿಸುವುದಿಲ್ಲ. ಆದ್ದರಿಂದ, ಸಹೋದರಿಯರು ಯಾವುದೇ ಆತಂಕವಿಲ್ಲದೆ ಶುಭ ಮುಹೂರ್ತದಲ್ಲಿ ತಮ್ಮ ಸಹೋದರರಿಗೆ ರಾಖಿ ಕಟ್ಟಬಹುದು.

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Loading...
Unable to load recommendations.
Follow Us