
ಸಾಮಾನ್ಯವಾಗಿ ಒಬ್ಬರ ಮುಖ ಅಥವಾ ಹಸ್ತದ ರೇಖೆಗಳನ್ನು ನೋಡಿ ಅವರ ಗುಣಸ್ವಭಾವವನ್ನು ಅಳೆಯುತ್ತೇವೆ. ಆದರೆ, ಸಾಮುದ್ರಿಕ ಶಾಸ್ತ್ರದ ಪ್ರಕಾರ, ಪಾದಗಳು ಮತ್ತು ಬೆರಳುಗಳ ಆಕಾರವೂ ಕೂಡ ಜೀವನದ ಗುಪ್ತ ರಹಸ್ಯಗಳನ್ನು ಬಿಚ್ಚಿಡುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ನಿಮ್ಮ ಪಾದದ ಬೆರಳುಗಳು ನಿಮ್ಮ ಪ್ರೇಮ ಜೀವನ, ಸ್ವಭಾವ ಮತ್ತು ಯಶಸ್ಸಿನ ಬಗ್ಗೆ ಏನು ಹೇಳುತ್ತವೆ? ಇಲ್ಲಿದೆ ಸಂಪೂರ್ಣ ಮಾಹಿತಿ.
ನಿಮ್ಮ ಹೆಬ್ಬೆರಳು ಮತ್ತು ಅದರ ಪಕ್ಕದ ತೋರುಬೆರಳು ಪರಸ್ಪರ ಅಂಟಿಕೊಂಡಿದ್ದರೆ, ನೀವು ತುಂಬಾ ಬುದ್ಧಿವಂತರು ಮತ್ತು ಭಾವಜೀವಿಗಳು ಎಂದು ಅರ್ಥ. ಇವರು ಸಂಬಂಧಗಳಿಗೆ ಮೊದಲ ಆದ್ಯತೆ ನೀಡುತ್ತಾರೆ. ಇವರಿಗೆ ಕಲಹ ಎಂದರೆ ಇಷ್ಟವಿಲ್ಲ. ಕುಟುಂಬದಲ್ಲಿ ಶಾಂತಿ ನೆಲೆಸಲು ಎಂತಹ ತ್ಯಾಗಕ್ಕೂ ಇವರು ಸದಾ ಸಿದ್ಧ.
ಹೆಬ್ಬೆರಳು ಮತ್ತು ತೋರುಬೆರಳಿನ ನಡುವೆ ಸ್ಪಷ್ಟವಾದ ಜಾಗವಿದ್ದರೆ, ನೀವು ಮುಕ್ತ ಆಲೋಚನೆಯುಳ್ಳವರು. ಯಾರ ಕೆಳಗೂ ಕೆಲಸ ಮಾಡಲು ಇವರು ಇಷ್ಟಪಡುವುದಿಲ್ಲ. ತನ್ನದೇ ಆದ ಸ್ವಂತ ಗುರುತನ್ನು ಹೊಂದಲು ಬಯಸುತ್ತಾರೆ. ಪ್ರೇಮ ಜೀವನದಲ್ಲೂ ಇವರು ಸ್ವಲ್ಪ ‘ಸ್ಪೇಸ್’ ನಿರೀಕ್ಷಿಸುತ್ತಾರೆ. ಈ ಸ್ವತಂತ್ರ ಪ್ರವೃತ್ತಿ ಕೆಲವೊಮ್ಮೆ ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಕ್ಕೆ ಕಾರಣವಾಗಬಹುದು.
ಅನೇಕರಿಗೆ ಹೆಬ್ಬೆರಳಿಗಿಂತ ಅದರ ಪಕ್ಕದ ತೋರುಬೆರಳು ಉದ್ದವಾಗಿರುತ್ತದೆ. ಇದು ನಾಯಕತ್ವದ (Leadership) ಸಂಕೇತ. ಕಚೇರಿಯಲ್ಲಾಗಲಿ ಅಥವಾ ಮನೆಯಲ್ಲಾಗಲಿ, ಇವರು ಮುಂಚೂಣಿಯಲ್ಲಿ ನಿಂತು ನಿರ್ಧಾರ ತೆಗೆದುಕೊಳ್ಳುತ್ತಾರೆ. ಇವರ ಮಾತುಗಳು ಮತ್ತು ನಿರ್ಧಾರಗಳು ಇತರರ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತವೆ.
ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?
ಹೆಬ್ಬೆರಳಿಗಿಂತ ತೋರುಬೆರಳು ಚಿಕ್ಕದಾಗಿದ್ದರೆ, ನೀವು ಅತ್ಯಂತ ಶಾಂತ ಮತ್ತು ಸಹನಾಶೀಲ ವ್ಯಕ್ತಿತ್ವದವರು. ಇವರು ಇತರರ ಭಾವನೆಗಳಿಗೆ ಹೆಚ್ಚಿನ ಗೌರವ ನೀಡುತ್ತಾರೆ. ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಸಂಬಂಧಗಳನ್ನು ಸಮತೋಲನಗೊಳಿಸುವ ಅದ್ಭುತ ಕಲೆ ಇವರಿಗೆ ಸಿದ್ಧಿಸಿರುತ್ತದೆ.
ಹೆಬ್ಬೆರಳಿನ ರಚನೆಯು ನಿಮ್ಮ ಜೀವನದ ಸುಖ-ಕಷ್ಟಗಳನ್ನು ಸೂಚಿಸುತ್ತದೆ:
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:12 am, Wed, 15 April 26